ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಜನಪ್ರಿಯ ಕಾರ್ಯಕ್ರಮ ಮನ್ ಕೀ ಬಾತ್ (Mann ki Baat) ಇದೀಗ 100ನೇ ಆವೃತ್ತಿಯತ್ತ ಸಾಗಿದೆ. ಈ ಹಿನ್ನೆಲೆ ಆಕಾಶವಾಣಿ (All India Radio) ವಿಶೇಷವಾಗಿ ಹಲವಾರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವೆ ಜಿಂಗಲ್ (Jingal) ಮತ್ತು ಲೋಗೋ (Logo) ತಯಾರಿಸಲು ಸಾರ್ವಜನಿಕರಿಗೆ ಆಹ್ವಾನ ನೀಡಿದೆ. ಈ ಕುರಿತಂತೆ ಆಲ್ ಇಂಡಿಯಾ ರೇಡಿಯೋ ಟ್ವೀಟ್ (All India Radio Tweet) ಮಾಡಿದ್ದು, ಏಪ್ರಿಲ್ ಕೊನೆಯ ಭಾನುವಾರ 100ನೇ (100 Episode) ಆವೃತ್ತಿ ನಡೆಯಲಿದ್ದು, ಇದಕ್ಕಾಗಿ ಸಾರ್ವಜನಿಕರು (Public) ಆಕರ್ಷಕ ಲೋಗೋ ಹಾಗೂ ಜಿಂಗಲ್ ತಯಾರಿಸಿ ನಗದು ಗೆಲ್ಲಬಹುದು ಎಂದು ತಿಳಿಸಿದೆ. ಲೋಗೋ ತಯಾರಿಸಿ ಆಯ್ಕೆಯಾದವರಿಗೆ 1 ಲಕ್ಷ ರೂಪಾಯಿ ಹಾಗೂ ಜಿಂಗಲ್ ತಯಾರಿಸಿ ಆಯ್ಕೆಯಾದವರಿಗೆ 11 ಸಾವಿರ ರೂಪಾಯಿ ಬಹುಮಾನ (Reward) ಘೋಷಿಸಲಾಗಿದೆ.
To mark the 100th episode of PM @narendramodi's #MannKiBaat, All India Radio is seeking a logo design.
The logo should have an attractive design depicting the ‘100th episode of Mann Ki Baat'.
Details: https://t.co/lHJgX7AH30@ianuragthakur @MIB_India @prasarbharati pic.twitter.com/1YX4842jkG
— ALL INDIA RADIO आकाशवाणी (@AkashvaniAIR) January 28, 2023
100ನೇ ಸಂಚಿಕೆಯತ್ತ ಮನ್ ಕೀ ಬಾತ್ ಸಂಚಿಕೆ
ಕಳೆದ ಬಾರಿ ಮನ್ ಕೀ ಬಾತ್ 100ನೇ ಸಂಚಿಕೆ ಕುರಿತಂತೆ ಮಾತನಾಡಿದ್ದ ಮೋದಿ ಅವರು, ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾವು ನಿಧಾನವಾಗಿ 'ಮನ್ ಕಿ ಬಾತ್' ನ 100ನೇ ಸಂಚಿಕೆಯ ಅಭೂತಪೂರ್ವ ಮೈಲಿಗಲ್ಲಿನತ್ತ ಸಾಗುತ್ತಿದ್ದೇವೆ. ನನಗೆ ಅನೇಕ ದೇಶವಾಸಿಗಳಿಂದ ಪತ್ರಗಳು ಬಂದಿವೆ, ಅದರಲ್ಲಿ 100 ನೇ ಸಂಚಿಕೆಯ ಬಗ್ಗೆ ಬಹಳ ಜಿಜ್ಞಾಸೆಯನ್ನು ವ್ಯಕ್ತಪಡಿಸಿದ್ದಾರೆ. 100 ನೇ ಸಂಚಿಕೆಯಲ್ಲಿ ನಾನು ಏನು ಮಾತನಾಡಬೇಕು ಮತ್ತು ಅದನ್ನು ಹೇಗೆ ವಿಶೇಷವಾಗಿಸಬೇಕು ಎಂಬುದಕ್ಕೆ ನಿಮ್ಮ ಸಲಹೆಗಳನ್ನು ನೀವು ನನಗೆ ಕಳುಹಿಸಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದರು.
ಕಳೆದ ಬಾರಿ ಕೊರೊನಾ ಬಗ್ಗೆ ಎಚ್ಚರಿಕೆ ನೀಡಿದ್ದ ಮೋದಿ
ಇದೇ ವೇಳೆ ಕೊರೊನಾ ಬಗ್ಗೆ ರಾಷ್ಟ್ರದ ಜನತೆಗೆ ಎಚ್ಚರಿಕೆ ನೀಡಿದ್ದರು. ಅನೇಕ ಮಂದಿ ರಜೆಯ ಮೂಡ್ನಲ್ಲಿದ್ದಾರೆ. ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಆದರೆ ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ ನೀವು ಸಹ ಪ್ರಪಂಚದಲ್ಲಿ ಕೊರೊನಾ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೀರಾ, ಹೀಗಾಗಿ ಮುಂಜಾಗ್ರತೆ ವಹಿಸಬೇಕಾಗಿದೆ. ಮಾಸ್ಕ್ ಮತ್ತು ಕೈ ತೊಳೆಯುವಂತಹ ಮುನ್ನೆಚ್ಚರಿಕೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ನಾವು ಜಾಗರೂಕರಾಗಿದ್ದರೆ, ನಾವು ಎಲ್ಲರೂ ಸುರಕ್ಷಿತರಾಗಿರುತ್ತಾರೆ ಮತ್ತು ನಮ್ಮ ಸಂತೋಷಕ್ಕೂ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ತಿಳಿಸಿದ್ದರು.
ಕರ್ನಾಟಕ ದಂಪತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಮೋದಿ
ನಂತರ ಅಡಿಕೆ ನಾರಿನಿಂದ ಉತ್ಪನ್ನಗಳನ್ನು ತಯಾರಿಸುತ್ತಿರುವ ಕರ್ನಾಟಕದ ದಂಪತಿ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ನೇಹಿತರೇ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶ್ರೀಮನ್ ಸುರೇಶ್ ಮತ್ತು ಅವರ ಪತ್ನಿ ಶ್ರೀಮತಿ ಮೈಥಿಲಿ ಎಂಬ ದಂಪತಿಯೊಬ್ಬರು ಅಡಿಕೆ ನಾರಿನಿಂದ ಮಾಡಿದ ಅನೇಕ ವಿಶಿಷ್ಟ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ.
ಇದನ್ನೂ ಓದಿ: Mann Ki Baat: ಮೋದಿ ಮನ್ ಕೀ ಬಾತ್ ಕೇಳಿ ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದ ಶಿಕ್ಷಕರು!
ಅಡಿಕೆ ನಾರಿನಿಂದ ತಯಾರಿಸಿದ್ದ ಉತ್ಪನ್ನಕ್ಕೆ ಲಂಡನ್, ಯೂರೋಪ್ನಲ್ಲಿ ಬೇಡಿಕೆ
ಅನೇಕ ಅಲಂಕಾರಿಕ ವಸ್ತುಗಳನ್ನು ಇವರು ತಯಾರಿಸುತ್ತಿದ್ದಾರೆ. ವೀಳ್ಯದೆಲೆ ನಾರಿನಿಂದ ಟ್ರೇಗಳು, ತಟ್ಟೆಗಳು ಮತ್ತು ಕೈಚೀಲಗಳು ಈ ನಾರಿನಿಂದ ಚಪ್ಪಲಿಗಳನ್ನು ಸಹ ಮಾಡಿದ್ದು, ಇವು ಬಹಳ ಇಷ್ಟವಾಗುವಂತಿದೆ. ಇಂದು ಈ ದಂಪತಿ ತಯಾರಿಸಿದ ಉತ್ಪನ್ನಗಳನ್ನು ಲಂಡನ್ ಮತ್ತು ಯುರೋಪಿನ ಇತರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಶ್ಲಾಘಿನೆ ವ್ಯಕ್ತಪಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ