• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Crime News: ಇನ್​ಸ್ಟಾಗ್ರಾಮ್​ ಸ್ನೇಹಿತನಿಂದ 16ರ ಬಾಲಕಿ ಮೇಲೆ ಅತ್ಯಾಚಾರ, ಸಂತ್ರಸ್ತೆ ತಾಯಿಗೆ ನಗ್ನ ಚಿತ್ರ ಕಳುಹಿಸಿದ ಆರೋಪಿ

Crime News: ಇನ್​ಸ್ಟಾಗ್ರಾಮ್​ ಸ್ನೇಹಿತನಿಂದ 16ರ ಬಾಲಕಿ ಮೇಲೆ ಅತ್ಯಾಚಾರ, ಸಂತ್ರಸ್ತೆ ತಾಯಿಗೆ ನಗ್ನ ಚಿತ್ರ ಕಳುಹಿಸಿದ ಆರೋಪಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಮ್‌ ಮೂಲಕ ಬಾಲಕಿ ಜೊತೆಗೆ ಸ್ನೇಹ ಬೆಳಸಿದ್ದಾನೆ. ಹೀಗೆ ಬಾಲಕಿ ಜೊತೆ ಸಲುಗೆ ಬೆಳಸಿಕೊಂಡಿದ್ದ ಆರೋಪಿ ಬಾಲಕಿಯನ್ನು ಪುಸಲಾಯಿಸಿ ಬೆತ್ತಲೆ ವಿಡಿಯೊ ಕರೆಗಳನ್ನು ಸಹ ಮಾಡಿದ್ದಾನೆ. ಈ ವಿಡಿಯೋಗಳನ್ನು ರೆಕಾರ್ಡ್​ ಮಾಡಿಕೊಂಡಿದ್ದ ಆರೋಪಿ ಬಾಲಕಿಯನ್ನು ಬೆದರಿಸಿ ಹೋಟೆಲ್​ಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮುಂದೆ ಓದಿ ...
  • Share this:

    ಗುರುಗ್ರಾಮ:  16 ವರ್ಷದ 11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಆಕೆಯ ಇನ್​ಸ್ಟಾಗ್ರಾಮ್ (Instagram ) ಸ್ನೇಹಿತ ಹೋಟೆಲ್​ಗೆ (Hotel) ಕರೆದುಕೊಂಡು ಹೋಗಿ ಅತ್ಯಾಚಾರ  ಮಾಡಿದ್ದಲ್ಲದೆ, ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲಾತಾಣದಲ್ಲಿ ಹರಿಬಿಟ್ಟಿರುವ ಘಟನೆ ಗುರಗ್ರಾಮ್​ನಲ್ಲಿ ನಡೆದಿದೆ.  ಅಲ್ಲದೆ ರಾಜ್​ ದ್ವಿವೇದಿ ಎಂಬ ಯುವಕ ಬಾಲಕಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಲ್ಲದೆ, ಆ ಫೋಟೋಗಳನ್ನು ಸಂತ್ರಸ್ತ ಬಾಲಕಿಯ ತಾಯಿಗೆ ಕಳುಹಿಸಿದ್ದಾನೆ. ಆ ನಂತರ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಸಂತ್ರಸ್ತೆಯ ತಾಯಿ ಪೊಲೀಸ್ (Police)​ ಠಾಣೆಗೆ ದೂರು ನೀಡಿದ್ದಾರೆ.


    ಇನ್​ಸ್ಟಾಗ್ರಾಮ್ ಮೂಲಕ ಪರಿಚಯ


    ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಮ್‌ ಮೂಲಕ ಬಾಲಕಿ ಜೊತೆಗೆ ಸ್ನೇಹ ಬೆಳಸಿದ್ದಾನೆ. ಹೀಗೆ ಬಾಲಕಿ ಜೊತೆ ಸಲುಗೆ ಬೆಳಸಿಕೊಂಡಿದ್ದ ಆರೋಪಿ ಬಾಲಕಿಯನ್ನು ಪುಸಲಾಯಿಸಿ ಬೆತ್ತಲೆ ವಿಡಿಯೊ ಕರೆಗಳನ್ನು ಸಹ ಮಾಡಿದ್ದಾನೆ. ಈ ವಿಡಿಯೋಗಳನ್ನು ರೆಕಾರ್ಡ್​ ಮಾಡಿಕೊಂಡಿದ್ದ ಆರೋಪಿ ಬಾಲಕಿಯನ್ನು ಬೆದರಿಸಿ ಹೋಟೆಲ್​ಗೆ ಕರೆಸಿಕೊಂಡು ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.


    ಹೋಟೆಲ್​ಗೆ ಕರೆಸಿಕೊಂಡು ಅತ್ಯಾಚಾರ


    ಸ್ನೇಹ ಸಲುಗೆ ಬೆಳಸಿಕೊಂಡಿದ್ದ ಆರೋಪಿ ಬಾಲಕಿಯನ್ನು ಕಳೆದ ವಾರ ಹೋಟೆಲ್​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ತ ಬಾಲಕಿ ತಾಯಿ ಆರೋಪಿಸಿದ್ದಾರೆ. " ನನ್ನ ಮಗಳನ್ನು ಭೇಟಿಯಾಗಲು ಗುರುಗ್ರಾಮದ ಹೋಟೆಲ್‌ಗೆ ಕರೆದಿದ್ದ ವ್ಯಕ್ತಿ, ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ, ಅಲ್ಲದೆ ಆ ಸಮಯದಲ್ಲಿ ವಿಡಿಯೋಗಳನ್ನು ರೆಕಾರ್ಡ್​ ಮಾಡಿಕೊಂಡಿದ್ದಾನೆ " ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


    ಇದನ್ನೂ ಓದಿ: Bengaluru: ವಿಡಿಯೋ ಕಾಲ್​ನಲ್ಲಿ ಹೆಂಡ್ತಿ ಮುಖ ತೋರಿಸದ ಸಹೋದ್ಯೋಗಿಗೆ ಚಾಕುವಿನಿಂದ ಇರಿದವ ಅರೆಸ್ಟ್




    ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ


    " ಮಗಳ ಜೊತೆಗಿನ ಖಾಸಗಿ ವಿಡಿಯೋಗಳನ್ನು ರೆಕಾರ್ಡ್​ ಮಾಡಿಕೊಂಡಿದ್ದ ಆರೋಪಿ ಕಳೆದ ವಾರವೂ ತನ್ನ ಮಗಳನ್ನು ಮತ್ತೆ ಎರಡು ಮೂರು ಬಾರಿ ಹೋಟೆಲ್‌ಗೆ ಕರೆದಿದ್ದಾನೆ, ಬರದಿದ್ದರೆ ಬೆತ್ತಲೆ ವಿಡಿಯೊ ಮತ್ತು ಚಿತ್ರಗಳನ್ನು ಬಹಿರಂಗಪಡಿಸುವುದಾಗಿ ಬ್ಲಾಕ್​ಮೇಲ್ ಮಾಡಿದ್ದಾನೆ. ಆಕೆ ಹೋಗದ ಕಾರಣ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಮಗಳ ಅಶ್ಲೀಲ ಚಿತ್ರವನ್ನು ಪೋಸ್ಟ್ ಮಾಡಿದ್ದಲ್ಲದೆ, ನನಗೂ ಕಳುಹಿಸಿದ್ದಾನೆ. ನಾನು ಈ ಬಗ್ಗೆ ಮಗಳನ್ನು ವಿಚಾರಿಸಿದಾಗ, ನಡೆದ ಎಲ್ಲಾ ವಿಚಾರವನ್ನು ತಿಳಿಸಿದಳು " ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆಂದು ಪೊಲೀಸ್​ ಮೂಲಗಳು ತಿಳಿಸಿವೆ. "


    ಪೋಕ್ಸೋ ಪ್ರಕರಣ ದಾಖಲು


    ಸಂತ್ರಸ್ತೆ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ರಾಜ್ ದ್ವಿವೇದಿ ಎಂಬಾತನ ವಿರುದ್ಧ ದೂರಿನ ನಂತರ, ರಾಜ್ ದಿವೇದಿ ವಿರುದ್ಧ ಪೋಕ್ಸೋ ಕಾಯ್ದೆಯ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಮತ್ತು 12 (ಲೈಂಗಿಕ ಕಿರುಕುಳ), ಐಪಿಸಿಯ ಸೆಕ್ಷನ್ 506 (ಬೆದರಿಕೆ), ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ಎ ಅಡಿಯಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.


    " ಆರೋಪಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ , ಆರೋಪಿಯನ್ನು ಹಿಡಿಯಲು ನಾವು ದಾಳಿ ನಡೆಸುತ್ತಿದ್ದೇವೆ. ಅವನು ಕೂಡ ವಿದ್ಯಾರ್ಥಿ ಎಂದು ತಿಳಿದುಬಂದಿದೆ " ಎಂದು ಮಹಿಳಾ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಪೂನಂ ಸಿಂಗ್ ಮಾಹಿತಿ ನೀಡಿದ್ದಾರೆ.


    ಜಾಗೃತಿ ಮೂಡಿಸುವುದ ಅಗತ್ಯ


    ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ಯುವ ಪೀಳಿಗೆ ಹೆಚ್ಚು ಸಕ್ರಿಯರಾಗಿದ್ದಾರೆ. ಈ ವೇದಿಗಳು ಕೆಲವು ವಿಚಾರದಲ್ಲಿ ಸಕರಾತ್ಮಕವಾಗಿದೆಯಾದರೂ, ಕೆಲವೊಮ್ಮೆ ಇಂತಹ ದುರ್ಘಟನೆಗೆ ಸಾಕ್ಷಿಯಾಗುತ್ತಿದೆ. ಫೇಸ್​ಬುಕ್​, ಇನ್​ಸ್ಟಾಗ್ರಾಮ್, ಟ್ವಿಟರ್​ ಸೇರಿದಂತೆ ಹಲವು ಸಾಮಾಜಿಕ ಜಾಲಾತಾಣದಲ್ಲಿ ಹೊಸ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುವುದಕ್ಕೆ ಅವಕಾಶ ಇದೆ. ಇದನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಹದಿಹರೆಯದ ಅಥವಾ ಶಾಲಾ ಮಕ್ಕಳಿಗೆ ಮೊಬೈಲ್ ಕೊಡಿಸುವಾಗ ಸ್ವತಃ ಪೋಷಕರು ಅಥವಾ ಶಾಲೆಗಳಲ್ಲಿ ಶಿಕ್ಷಕರು ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮಕ್ಕಳಿಗೆ ತಿಳಿ ಹೇಳುವ ಅಗತ್ಯವಿದೆ.

    Published by:Rajesha B
    First published: