Cyber Crime: ಅವಳು ಬೇಕಾ, ಇವಳು ಬೇಕಾ? ಹೀಗಂತ ಫೋಟೋ ಜೊತೆ ರೇಟ್ ಹಾಕ್ತಿದ್ದ ವಿಕೃತ ಯುವಕ!

ಇಂಟರ್‌ನೆಟ್‌ನಲ್ಲಿ ಹುಡುಕಿ ಹಾಗೂ ತನಗೆ ಪರಿಚಿತರಾಗಿರುವ ಹುಡುಗಿಯರ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಗುಡ್ಡೆ ಹಾಕಿಕೊಂಡ. ಅವರ ಫೋಟೋ, ಹೆಸರು, ಕಾಂಟ್ಯಾಕ್ಟ್‌ ನಂಬರ್‌ಗಳನ್ನು ಹಾಕಿದ. ಅವರ ಫೋಟೋದ ಮುಂದೆ ಅವರ ರೇಟ್ ಎಷ್ಟಿದೆ ಅಂತ ರೇಟ್ ಟ್ಯಾಗ್ ಕೂಡ ಹಾಕಿದ್ದ ಈ ಪಾಪಿ!

ಆರೋಪಿ ಶುಭಂ

ಆರೋಪಿ ಶುಭಂ

  • Share this:
ಮುಂಬೈ: ಮಂಗನ (Monkey) ಕೈಯಲ್ಲಿ ಮಾಣಿಕ್ಯ (Ruby) ಕೊಡೋದು, ಮನುಷ್ಯನ ಕೈಯಲ್ಲಿ ಮೊಬೈಲ್ (Mobile) ಕೊಡೋದೂ ಎರಡೂ ಒಂದೆೇ. ಕೈಯಲ್ಲಿ ಮೊಬೈಲ್ ಹಿಡಿದುಕೊಂಡ ಮನುಷ್ಯ, ಮಂಗನಿಗಿಂತ ಕಡೆ ಎನ್ನುವಂತೆ ಆಡುತ್ತಾನೆ. ಕೆಲವೊಮ್ಮೆ ತಿಳಿಯದೆಯೇ ಅಪರಾಧ (Crime) ಮಾಡಿದ್ರೆ, ಬಹುತೇಕ ಸಮಯದಲ್ಲಿ ತಿಳಿದೂ, ತಿಳಿದೂ ತಪ್ಪು ಮಾಡ್ತಾನೆ. ಇಲ್ಲಾಗಿದ್ದೂ ಅದೇ ನೋಡಿ. ಈ ಹುಡುಗ ಜೀವನದಲ್ಲಿ ಏನಾದರೂ ಸಾಧನೆ (Achievement) ಮಾಡಬೇಕಾಗಿದ್ದವನು. ಸಾಧನೆ ಮಾಡಿದ್ರೆ ಈತನ ಬಗ್ಗೆ ಬೇರೆಯದ್ದೇ ಸುದ್ದಿ (News) ಬರೆಯಬಹುದಿತ್ತು. ಆದರೆ ಈತ ಮಾಡಿದ್ದು ಮಾತ್ರ ವಿಕೃತಿಯ ಕೆಲಸ. ಇದೀಗ ತಾನು ಮಾಡಿದ ತಪ್ಪಿಗೆ ಪೊಲೀಸರಿಂದ (Police) ಒದೆ ತಿಂದು, ಜೈಲು (Jail) ಸೇರಿದ್ದಾನೆ.

ಯಾರು ಗೊತ್ತಾ ಈ ವಿಕೃತ ಯುವಕ?

22 ವರ್ಷದ ಶುಭಂ ಗಾಡ್ಲಿಂಗೆ ಎಂಬಾತನೇ ಈ ವಿಕೃತ ಯುವಕ. ಪಕ್ಕದ ಮಹಾರಾಷ್ಟ್ರ ರಾಜ್ಯದ ಮುಂಬೈನ ವಾಡ್ಲಾ ಎಂಬ ಪ್ರದೇಶದ ನಿವಾಸಿ. ಚೆನ್ನಾಗಿ ಓದಿಕೊಂಡಿದ್ದ ಈತ, ಟೆಕ್ನಿಕಲ್ ವಿಚಾರಗಳನ್ನು ಚೆನ್ನಾಗಿಯೇ ತಿಳಿದುಕೊಂಡಿದ್ದ.  ಕಾಮರ್ಸ್ ವಿಷಯ ಓದಿದ್ದ ಶುಭಂನನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಫಾರಿನ್‌ಗೆ ಕಳಿಸಲು ಮನೆಯವರು ಯೋಚಿಸಿದ್ದರು. ಅಲ್ಲಿ ಓದಿ, ತನ್ನ ಜ್ಞಾನವನ್ನೆಲ್ಲ ಬಳಸಿಕೊಂಡು ಕೆಲಸಕ್ಕೆ ಸೇರಿದ್ದರೆ ಕೈತುಂಬಾ ಸಂಪಾದಿಸಬಹುದಿತ್ತು. ಆದರೆ ಶುಭಂ ಇಳಿದಿದ್ದೇ ಬೇರೆ ಕೆಲಸಕ್ಕೆ.

ಸೋಶಿಯಲ್ ಮೀಡಿಯಾಗಳಲ್ಲಿ ಫೇಕ್ ಅಕೌಂಟ್

ಸೋಶಿಯಲ್ ಮೀಡಿಯಾಗಳ ಬಗ್ಗೆ ಚೆನ್ನಾಗಿಯೇ ತಿಳಿದುಕೊಂಡಿದ್ದ ಶುಭಂ, ಸುಮ್ಮನಿರಲಾರದೇ ಕಿತಾಪತಿ ಶುರು ಹಚ್ಚಿಕೊಂಡ. ಆಗ ಹುಟ್ಟಿಕೊಂಡಿದ್ದೇ ಈ ಖತರ್ನಾಕ್ ಪ್ಲಾನ್. ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ, ತನ್ನ ವಿಕೃತ ಕೆಲಸ ಶುರು ಹಚ್ಚಿಕೊಂಡ.

ಇದನ್ನೂ ಓದಿ: Fraud Case: ಪರಿಚಿತನ ಸೋಗಲ್ಲಿ ಮೋಸ ಮಾಡಿದ ಖದೀಮ, ಹೋಟೆಲ್ ಹುಡುಗನ ಚಿನ್ನ, ಹಣ ಪಡೆದು ಎಸ್ಕೇಪ್

200 ಮಹಿಳೆಯರ ಫೋಟೋ ಜೊತೆಗೆ ರೇಟ್ ಟ್ಯಾಗ್!

ಇಂಟರ್‌ನೆಟ್‌ನಲ್ಲಿ ಹುಡುಕಿ ಹಾಗೂ ತನಗೆ ಪರಿಚಿತರಾಗಿರುವ ಹುಡುಗಿಯರ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಗುಡ್ಡೆ ಹಾಕಿಕೊಂಡ. ಅವರ ಫೋಟೋ, ಹೆಸರು, ಕಾಂಟ್ಯಾಕ್ಟ್‌ ನಂಬರ್‌ಗಳನ್ನು ಹಾಕಿದ. ಅವರ ಫೋಟೋದ ಮುಂದೆ ಅವರ ರೇಟ್ ಎಷ್ಟಿದೆ ಅಂತ ರೇಟ್ ಟ್ಯಾಗ್ ಕೂಡ ಹಾಕಿದ್ದ ಈ ಪಾಪಿ.

12 ವರ್ಷದ ಬಾಲಕಿಯರಿಂದ ಹಿಡಿದು 25 ವರ್ಷದ ಯುವತಿಯರ ಫೋಟೋ

ಈತ ಸುಮಾರು 200ಕ್ಕೂ ಹೆಚ್ಚು ಹುಡುಗಿಯರ ಫೋಟೋಗಳನ್ನು ಈ ರೀತಿ ಅಶ್ಲೀಲವಾಗಿ ಇಂಟರ್‌ನೆಟ್‌ನಲ್ಲಿ ಹಾಕಿದ್ದಾನೆ. ಇದ್ರಲ್ಲಿ 12 ವರ್ಷದ ಪುಟ್ಟ ಬಾಲಕಿಯರಿಂದ ಹಿಡಿದು, 25 ವರ್ಷದ ಯುವತಿಯರು ಇದ್ದರು ಎನ್ನಲಾಗಿದೆ. ಒಂದೆರಡಲ್ಲ, ಈತ ಬರೋಬ್ಬರಿ 5 ವರ್ಷಗಳ ಕಾಲ ಈ ರೀತಿ ವಿಕೃತ ಕೆಲಸ ಮಾಡುತ್ತಿದ್ದ. ಫೇಸ್ ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ಸೈಟ್‌ಗಳಲ್ಲಿ ಈ ರೀತಿ ವಿಕೃತ ಜಾಹೀರಾತು ಕೊಡುತ್ತಿದ್ದ.

ಸಂಬಂಧಿಕರಿಂದ ತಿಳಿದು ಸಂತ್ರಸ್ತೆಗೆ ಆಘಾತ

ಈತ ಈ ರೀತಿ ಫೋಟೋ ಹಾಕಿದ ಹುಡುಗಿಯರ ಪೈಕಿ, ಓರ್ವ ಯುವತಿಯ ಸಂಬಂಧಿಕರು ಫೋಟೋ ನೋಡಿದ್ದಾರೆ. ಬಳಿಕ ಆಕೆಗೆ ಕಾಲ್ ಮಾಡಿ, ಇದೇನು ಅಂತ ವಿಚಾರಿಸಿದ್ದಾರೆ. ಆಗಲೇ ಆ ಹುಡುಗಿಗೆ ನಡೆದ ವಿಚಾರ ಗೊತ್ತಾಗಿದೆ. ಬಳಿಕ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ಇದು ಶುಭಂನದ್ದೇ ಕೆಲಸ ಅಂತ ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: Fraud Case: ABG ಶಿಪ್​ಯಾರ್ಡ್​ನ ಕೆಲ ನಿರ್ದೇಶಕರಿಂದ ವಂಚನೆ, 28 ಬ್ಯಾಂಕ್​ಗಳಿಗೆ 22,842 ಕೋಟಿ ದೋಖಾ

ಸಂತ್ರಸ್ತೆ ಕುಟುಂಬಸ್ಥರಿಗೆ ಆರೋಪಿಗೆ ಥಳಿತ

ಇದೆಲ್ಲಾ ಕೆಲಸ ಶುಭಂನೇ ಮಾಡುತ್ತಾ ಇರೋದು ಅಂತ ಗೊತ್ತಾಗುತ್ತಿದ್ದಂತೆ ಸಂತ್ರಸ್ತೆ ಕುಟುಂಬಸ್ಥರು ಕೆಂಡಾಮಂಡಲರಾಗಿದ್ದಾರೆ. ಸೀದಾ ಶುಭಂ ಮನೆಗೆ ತೆರಳಿ, ಆತನಿಗೆ ಥಳಿಸಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಮಾಡಿದ ತಪ್ಪಿಗೆ ಆರೋಪಿ ಜೈಲು ಸೇರಿದ್ದು, ತನಿಖೆ ನಡೆಯುತ್ತಿದೆ.
Published by:Annappa Achari
First published: