• Home
 • »
 • News
 • »
 • national-international
 • »
 • London: ಟ್ಯೂಬ್ ನಿಲ್ದಾಣದಲ್ಲಿ ಬಣ್ಣದ ಹೂವು ಮಾರಿದ ಬ್ರಿಟನ್ ಪಿಎಂ ರಿಶಿ ಸುನಕ್: ದಂಗಾದ ಜನರು

London: ಟ್ಯೂಬ್ ನಿಲ್ದಾಣದಲ್ಲಿ ಬಣ್ಣದ ಹೂವು ಮಾರಿದ ಬ್ರಿಟನ್ ಪಿಎಂ ರಿಶಿ ಸುನಕ್: ದಂಗಾದ ಜನರು

ಟ್ಯೂಬ್ ನಿಲ್ದಾಣದಲ್ಲಿ ಬಣ್ಣದ ಹೂವು ಮಾರಿದ ಬ್ರಿಟನ್ ಪಿಎಂ ರಿಶಿ ಸುನಕ್

ಟ್ಯೂಬ್ ನಿಲ್ದಾಣದಲ್ಲಿ ಬಣ್ಣದ ಹೂವು ಮಾರಿದ ಬ್ರಿಟನ್ ಪಿಎಂ ರಿಶಿ ಸುನಕ್

ರಿಶಿ ಅವರೇ ಈ ರೀತಿ ಲಂಡನ್ನಿನ ಸಬ್ ವೇ ನಿಲ್ದಾಣವೊಂದರಲ್ಲಿ ಕೆಲ ಕಾಲ ಪ್ರತ್ಯಕ್ಷರಾಗಿ ಹೂವುಗಳನ್ನು ಮಾರಿದ್ದಾರೆ ಎಂದರೆ ನೀವು ನಂಬಲೇಬೇಕು.

 • Share this:

  ಬ್ರಿಟನ್: ಇದೇನಪ್ಪಾ....ಈಗಷ್ಟೇ ಯುಕೆಯ ನೂತನ ಪ್ರಧಾನಿಯಾಗಿ (Prime Minister Of UK) ಎಲ್ಲೆಡೆ ಗಮನಸೆಳೆದಿರುವ ಭಾರತೀಯ ಮೂಲದ ರಿಶಿ ಸುನಕ್ (Indian Origin Rishi Sunak) ಅವರಿಗೆ ಇದೆಂಥ ಗತಿ ಬಂತೆಂದು ಅಚ್ಚರಿಯಾಗುತ್ತಿದೆಯೇ? ಅಥವಾ ರಿಶಿ ಅವರಂತೆಯೇ ಕಾಣುವ ವ್ಯಕ್ತಿ ಈ ರೀತಿ ಪಾಪ್ಪಿ ಹೂವುಗಳನ್ನು ಮಾರುತ್ತಿದ್ದಾರೆಯೇ ಎಂಬ ಸಂದೇಹ ಮೂಡುತ್ತಿದೆಯೇ? ಆದರೆ ವಿಷಯ ಹಾಗಲ್ಲ ಬಿಡಿ, ವಾಸ್ತವದಲ್ಲಿ ರಿಶಿ ಅವರೇ ಈ ರೀತಿ ಲಂಡನ್ನಿನ ಸಬ್ ವೇ ನಿಲ್ದಾಣವೊಂದರಲ್ಲಿ (London Sub Way Station) ಕೆಲ ಕಾಲ ಪ್ರತ್ಯಕ್ಷರಾಗಿ ಹೂವುಗಳನ್ನು ಮಾರಿದ್ದಾರೆ ಎಂದರೆ ನೀವು ನಂಬಲೇಬೇಕು. ಹಾಗಾದರೆ, ಹೀಗೆ ಮಾಡಲು ಕಾರಣವೇನು ಎಂದು ತಿಳಿಯಲು ಮುಂದೆ ಓದಿ.


  ಈಗಾಗಲೇ ಗೊತ್ತಿರುವಂತೆ ಯುಕೆ ದೇಶವು ಆರ್ಥಿಕತೆಯ ತೀವ್ರ ಕುಸಿತವನ್ನು ಎದುರಿಸುತ್ತಿದೆ. ಅಲ್ಲದೆ, ದೇಶದಲ್ಲಿ ಹಣದುಬ್ಬರ ಏರಿಕೆಯಾಗಿದ್ದು ಜನರು ಪರದಾಡುವಂತಾಗಿದೆ. ಈಗ ತಾನೇ ಪ್ರಧಾನಿ ಹುದ್ದೆಯ ಜವಾಬ್ದಾರಿ ಹೊತ್ತಿರುವ ಸುನಕ್ ಅವರಿಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಆಡಳಿತವನ್ನು ಮತ್ತೆ ಸುಸ್ಥಿತಿಗೆ ಬರುವಂತಹ ಹಲವು ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಪಕ್ಷದಲ್ಲಿರುವ ಆಂತರಿಕ ಗೊಂದಲಗಳನ್ನೂ ಸಹ ನಿವಾರಿಸಬೇಕಿದೆ. ಅಷ್ಟಾದರೂ ಅವರು ನಿಧಿ ಸಂಗ್ರಹಣೆಯೊಂದರ ಕಾರ್ಯಕ್ಕೆ ತಮ್ಮನ್ನು ತಾವು ಕೆಲ ಹೊತ್ತು ಬಿಡುವು ಮಾಡಿಕೊಂಡು ಒಂದು ಕೆಲಸವನ್ನು ಮಾಡಿದ್ದಾರೆ ಎನ್ನಬಹುದು.


  ಇದನ್ನೂ ಓದಿ: Viral News: ಸ್ನಾನ ಮಾಡಿದ್ದಕ್ಕೆ ಸತ್ತ ವ್ಯಕ್ತಿ? 60 ವರ್ಷ ಕೊಳಕಾಗಿ ನೆಮ್ಮದಿಯಾಗೇ ಇದ್ದ, ಪಾಪ!


  ನಿಧಿ ಸಂಗ್ರಹಣೆ


  ರಾಯಲ್ ಬ್ರಿಟಿಷ್ ಸೈನ್ಯದಳವು ವಾರ್ಷಿಕ ಪಾಪ್ಪಿ ದಿನದ ಅಂಗವಾಗಿ ನಿಧಿ ಸಂಗ್ರಹಣೆಯ ಅಭಿಯಾನವೊಂದನ್ನು ನಡೆಸುತ್ತಿತ್ತು. ಈ ಮೂಲಕ ಕಾಗದದಿಂದ ಮಾಡಲಾದ ಪ್ರಕಾಶಮಾನವಾದ ಪಾಪ್ಪಿ ಹೂವುಗಳನ್ನು ಜನರಿಗೆ ಮಾರಾಟ ಮಾಡುವ ಮೂಲಕ ನಿಧಿ ಸಂಗ್ರಹಣೆಯ ಗುರಿಯನ್ನು ಹೊಂದಿತ್ತು. ಇದಕ್ಕೆ ತಮ್ಮ ಸಹಯೋಗ ನೀಡುವುದಕ್ಕೆಂದೇ ಪ್ರಧಾನಿ ರಿಶಿ ಸುನಕ್ ಅವರು ಬೆಳ್ಳಂಬೆಳಗ್ಗೆ ಸೈನ್ಯದ ಕೆಲ ಅಧಿಕಾರಿಗಳು, ಸೈನಿಕರು ಹಾಗೂ ಹಲವು ಸ್ವಯಂಸೇವಕರೊಂದಿಗೆ ಸೇರಿ ಈ ಹೂವುಗಳ ಮಾರಾಟಕ್ಕೆಂದು ಖುದ್ದು ಹಾಜರಿದ್ದರು.


  ಲಂಡನ್ನಿನ ಟ್ಯೂಬ್ ನಿಲ್ದಾಣವೊಂದರಲ್ಲಿ ಅವರು ಹೂವುಗಳ ಟ್ರೇ ಇಟ್ಟುಕೊಂಡು ಅದನ್ನು ಮಾರಲು ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಬಂದಾಗ ಅಲ್ಲಿ ನೆರೆದಿದ್ದ ಜನರಿಗೆಲ್ಲ ಅಚ್ಚರಿಯೋ ಅಚ್ಚರಿ ಆಗಿದ್ದು ನಿಜ. ಈ ಸಂದರ್ಭದಲ್ಲಿ ರಿಶಿ ಅವರು 5 ಪೌಂಡ್ ಗಳಿಗೆ ಒಂದು ಹೂವನ್ನು ಜನರಿಗೆ ಮಾರುವ ಮೂಲಕ ಬ್ರಿಟಿಷ್ ರಾಯಲ್ ಸೈನ್ಯದಳ ಹಣ ಸಂಗ್ರಹಿಸುವಲ್ಲಿ ತಮ್ಮ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಹಲವು ಜನ ಅವರೊಡನೆ ಬೆರೆತರು ಹಾಗೂ ಮಾತುಗಳನ್ನಾಡುವುದಲ್ಲದೆ ಸೆಲ್ಫೀಗಳನ್ನೂ ಸಹ ತೆಗೆದುಕೊಂಡರು ಎಂದು ಬಿಬಿಸಿ ಮಾಧ್ಯಮ ವರದಿ ಮಾಡಿದೆ.


  ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್


  ಈ ರೀತಿಯಾಗಿ ನೂತನ ಪ್ರಧಾನಿ ಸೈನ್ಯಕ್ಕಾಗಿ ತಮ್ಮ ಸಮಯ ಮಾಡಿಕೊಂಡು ಈ ರೀತಿಯ ಸಹಯೋಗ ನೀಡಿರುವ ಬಗ್ಗೆ ಹಲವು ಜನರು ಪಿಎಂ ಅವರನ್ನು ಭೇಟಿ ಮಾಡಿದ ತರುವಾಯ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಾವು ಪ್ರಧಾನಿ ಜೊತೆ ತೆಗೆಸಿಕೊಂಡ ಚಿತ್ರ ಪೋಸ್ಟ್ ಮಾಡುತ್ತ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.


  ಈ ಕುರಿತು ಲಂಡನ್ ಲೈವ್ ಎಂಬ ಖಾತೆಯು ರಿಶಿ ಅವರು ಜನರೊಂದಿಗೆ ಬೆರೆತು ಚಿತ್ರ ಕ್ಲಿಕ್ಕಿಸಿಕೊಂಡ ಹಲವು ಚಿತ್ರಗಳನ್ನು ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ಸಂದರ್ಭದಲ್ಲಿ ಅದು ಪೋಸ್ಟಿಗೆ ಸಂಬಂಧಿಸಿದಂತೆ ಈ ರೀತಿ ಬರೆದುಕೊಂಡಿದೆ, "ರಿಶಿ ಸುನಕ್ ಅವರು ವೆಸ್ಟ್ ಮಿನಿಸ್ಟರ್ ನಲ್ಲಿ ಪಾಪ್ಪಿ ಹೂವುಗಳನ್ನು ಮಾರುವುದರ ಮೂಲಕ ಅಲ್ಲಿ ಓಡಾಡುತ್ತಿದ್ದ ಜನರನ್ನು ಬೆರಗುಗೊಳಿಸಿದರು. ಅವರು ಹಲವು ಸೈನಿಕರು ಹಾಗೂ ಪಬ್ಲಿಕ್ ಸರ್ವಂಟ್ ಆಗಿರುವ ಸ್ಟಿಫನ್ ಲಿ ರೌಕ್ಸ್ ಅವರೊಂದಿಗೆ ಸೇರಿಕೊಂಡು ರಾಯಲ್ ಬ್ರಿಟಿಷ್ ಸೈನ್ಯದಳದ ವಾರ್ಷಿಕ #PoppyAppeal ದಿನದ ಅಂಗವಾಗಿ ನಿಧಿ ಸಂಗ್ರಹಣೆಯ ಕಾರ್ಯಕ್ಕೆ ತಮ್ಮ ಸಹಯೋಗ ನೀಡಲು ಗುರುವಾರ ಬೆಳಗ್ಗೆ 8 ಗಂಟೆಗೆ ನಿಲ್ದಾಣಕ್ಕೆ ಆಗಮಿಸಿದ್ದರು".


  ರಾಯಲ್ ಬ್ರಿಟಿಷ್ ಸೈನ್ಯದಳ


  ತದನಂತರ ನಿಧಿ ಸಂಗ್ರಹಣೆಯ ಜವಾಬ್ದಾರಿ ಹೊತ್ತುಕೊಂಡಿರುವ ಸೈನ್ಯದಳವು, ನೂತನ ಪ್ರಧಾನಿ ಅವರು ತಮ್ಮ ಬಿಡುವಿಲ್ಲದ ಸಮಯದಲ್ಲೂ ಈ ಹಣ ಸಂಗ್ರಹ ಅಭಿಯಾನಕ್ಕಾಗಿ ಅವಕಾಶ ಮಾಡಿಕೊಂಡು ಈ ಕಾರ್ಯದಲ್ಲಿ ಸಹಯೋಗ ನೀಡಿರುವುದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದೆ.


  ಮಿಶ್ರ ಪ್ರತಿಕ್ರಿಯೆ


  ಪ್ರಧಾನಿ ರಿಶಿ ಅವರ ಈ ಕಾರ್ಯವನ್ನು ಹಲವು ಜನರು ಕೊಂಡಾಡಿದ್ದರೆ ಇನ್ನೂ ಕೆಲವು ಜನರು ಪೂರಕವಾದ ರೀತಿಯಲ್ಲಿ ಸ್ಪಂದಿಸಿಲ್ಲ. ಒಟ್ಟಾರೆಯಾಗಿ ಇದಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ. ಪ್ರಧಾನಿ ಅವರಿಂದ ಐದು ಪೌಂಡಿಗೆ ಪಾಪ್ಪಿ ಹೂವನ್ನು ಖರೀದಿಸಿದ್ದ ಲೆವಿಸ್ ಎಂಬುವವರು ಮಾಧ್ಯಮದೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತ, "ಟೋರಿ ನಾಯಕ ಬಲು ವಿನಮ್ರವಾಗಿದ್ದು ಅವರನ್ನು ಸುಲಭವಾಗಿ ಸಂಪರ್ಕಿಸಬಹುದು" ಎಂದು ಹೇಳಿದ್ದಾರೆ.


  ಇದನ್ನೂ ಓದಿ: Oldest Doctor: ಗಿನ್ನಿಸ್ ದಾಖಲೆ ಬರೆದ ವಿಶ್ವದ ಅತ್ಯಂತ ಹಿರಿಯ ವೈದ್ಯ!


  ಇನ್ನೂ ಹಲವರು ಇದನ್ನು ಒಂದು ಅವಕಾಶವಾದಿತನಕ್ಕೆ ಹೋಲಿಸಿದ್ದು ನಿಜಕ್ಕೂ ಪ್ರಧಾನಿ ಅವರಿಗೆ ಇದಕ್ಕಿಂತಲೂ ಮುಖ್ಯವಾದ ಹಲವು ಕೆಲಸಗಳಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಂದಹಾಗೆ ಈ ಅಭಿಯಾನ ಕಾರ್ಯಕ್ರಮ ನಡೆಯುವಾಗ ಮಾಧ್ಯಮದವರನ್ನು ಆಮಂತ್ರಿಸಲಾಗಿರಲಿಲ್ಲ ಎಂಬುದು ವಿಶೇಷ.

  Published by:Precilla Olivia Dias
  First published: