Meat In Temple Compound: ದೇವಸ್ಥಾನದ ಆವರಣಕ್ಕೆ ಮಾಂಸವನ್ನು ಎಸೆದ ಕಿಡಿಗೇಡಿಗಳು; SP ಸಸ್ಪೆಂಡ್

ಪೊಲೀಸರು ಸ್ಥಳಕ್ಕೆ ಆಗಮಿಸಿ ದೇವಸ್ಥಾನದ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಿದರು. ಆದಾಗ್ಯೂ, ಘಟನೆಯ ಬಗ್ಗೆ ಪೊಲೀಸರು ಮೌನ ವಹಿಸಿದ್ದಾರೆ ಎಂದು ಆರೋಪಿಸಿ ಜನರ ಗುಂಪು ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಲಖನೌ: ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ (Kannauj district of Uttar Pradesh) ಕೆಲವು ಅಪರಿಚಿತ ದುಷ್ಕರ್ಮಿಗಳು ಗ್ರಾಮದ ದೇವಸ್ಥಾನದ ಕಾಂಪೌಂಡ್‌ ಒಳಗೆ ಮಾಂಸದ ತುಂಡುಗಳನ್ನು (Meat In Temple Compound) ಎಸೆದಿದ್ದಾರೆ. ಎರಡು ಸ್ಥಳಗಳಲ್ಲಿ ವಿಗ್ರಹಗಳನ್ನು ಅಪವಿತ್ರಗೊಳಿಸಿದ ಹಿನ್ನೆಲೆಯಲ್ಲಿ ಕೋಮು ಘರ್ಷಣೆಗಳು (Communal clashes) ನಡೆದಿದ್ದು, ಇದು ಹಿಂಸಾಚಾರಕ್ಕೆ ಕಾರಣವಾಯಿತು. ಈ ಘಟನೆಯಿಂದ ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಕಲ್ ಆಫೀಸರ್ ಶಿವ ಪ್ರತಾಪ್ ಸಿಂಗ್ ಮತ್ತು ಸ್ಟೇಷನ್ ಹೌಸ್ ಆಫೀಸರ್ ಹರಿ ಶ್ಯಾಮ್ ಸಿಂಗ್ ಸ್ಥಳಕ್ಕೆ ಆಗಮಿಸಿ ದೇವಸ್ಥಾನದ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಿದರು. ಆದಾಗ್ಯೂ, ಘಟನೆಯ ಬಗ್ಗೆ ಪೊಲೀಸರು ಮೌನ ವಹಿಸಿದ್ದಾರೆ ಎಂದು ಆರೋಪಿಸಿ ರಸ್ತೆಯಲ್ಲಿ ಜಮಾಯಿಸಿದ ಗುಂಪೊಂದು ತಾಲ್ಗ್ರಾಮ್-ಇಂದ್ರಗಢ್ ರಸ್ತೆಯನ್ನು ನಡೆದು ಪ್ರತಿಭಟನೆ ನಡೆಸಿತು.

ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

ಪೊಲೀಸರ ಪ್ರಕಾರ, ತಾಲ್ಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯ ರಸೂಲಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನದ ಅರ್ಚಕ ಜಗದೀಶ್ ಚಂದ್ರ ದೇವಸ್ಥಾನದೊಳಗೆ ಮಾಂಸದ ತುಂಡುಗಳನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೂರು ಗಂಟೆಗಳ ಕಾಲ ರಸ್ತೆ ತಡೆ ನಡೆಯಿತು. ಹಿಂಸಾಚಾರದಲ್ಲಿ ಸ್ಮಶಾನದ ಗೇಟ್‌ಗೂ ಹಾನಿಯಾಗಿದೆ. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ಪ್ರತಿಭಟನೆ ಹಿಂಪಡೆಯುತ್ತಿದ್ದಂತೆ ಎರಡು ಕಡೆ ವಿಗ್ರಹಗಳನ್ನು ಅಪವಿತ್ರಗೊಳಿಸಿರುವ ಮಾಹಿತಿ ಲಭ್ಯವಾಗಿದೆ.

ಗ್ರಾಮದಲ್ಲಿ ಪೊಲೀಸ್​ ಬಿಗಿ ಭದ್ರತೆ

ರೊಚ್ಚಿಗೆದ್ದ ಜನರ ಗುಂಪು ನಾಲ್ಕು ಅಂಗಡಿಗಳನ್ನು ಸುಟ್ಟುಹಾಕಿದೆ. ಸ್ಮಶಾನಕ್ಕೆ ಪ್ರವೇಶಿಸಿ ಅದರ ಗೇಟ್ ಅನ್ನು ಹಾನಿಗೊಳಿಸಿದರು. ಶನಿವಾರ ಸಂಜೆ ಇನ್‌ಸ್ಪೆಕ್ಟರ್ ಜನರಲ್ (ಕಾನ್ಪುರ್ ರೇಂಜ್), ಪ್ರಶಾಂತ್ ಕುಮಾರ್ ಮತ್ತು ಕಮಿಷನರ್ (ಕಾನ್ಪುರ ವಿಭಾಗ), ರಾಜ್ ಶೇಖರ್ ಕೂಡ ತಾಲ್ಗ್ರಾಮ್ ತಲುಪಿದರು. ಪೊಲೀಸ್ ಅಧಿಕಾರಿಗಳ ಪ್ರಕಾರ, ಅವರು ಘಟನೆಯ ಹಿಂದೆ ಇರುವವರನ್ನು ಗುರುತಿಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಇಡೀ ನಗರದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗಳಿಗೆ ಸಂಬಂಧಿಸಿದಂತೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಕೇಶ್ ಮಿಶ್ರಾ ತಿಳಿಸಿದ್ದಾರೆ. ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Delhi Rape: ಬಾಲಕಿಯನ್ನು ರೇಪ್ ಮಾಡಲು ಗಂಡನಿಗೆ ಹೆಂಡತಿಯ ಸಾಥ್; ಆ್ಯಸಿಡ್​ ಕುಡಿಸಿ ಕ್ರೌರ್ಯ!

ಪೊಲೀಸ್ ವರಿಷ್ಠಾಧಿಕಾರಿ ಅಮಾನತು

ಘಟನೆಯ ನಂತರ ಕನೌಜ್‌ನ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ಶ್ರೀವಾಸ್ತವ ಅವರನ್ನು ಅಮಾನತುಗೊಳಿಸಲಾಗಿದೆ. ಶ್ರೀವಾಸ್ತವ ಅವರನ್ನು ಕಾಯುವ ಪಟ್ಟಿಗೆ ಹಾಕಲಾಗಿದೆ. ಅವರ ಸ್ಥಾನಕ್ಕೆ ಅನುಪಮ್ ಸಿಂಗ್ ಆಯ್ಕೆಯಾಗಿದ್ದಾರೆ.

ಉತ್ತರ ಪ್ರದೇಶದ ಮತ್ತೊಂದು ಅಪರಾಧ ಸುದ್ದಿ

ಲಕ್ನೋದಲ್ಲಿ ಮಗಳನ್ನು ತಂದೆ ಕೊಂದ ಘಟನೆಯ ನಂತರ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ವರದಿಯಾಗಿದೆ. ದಂಪತಿಗಳಿಬ್ಬರು ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಅಪ್ರಾಪ್ತೆಯನ್ನು ವ್ಯಕ್ತಿ ರೇಪ್ (Rape) ಮಾಡಿದ್ದರೆ ಆತನ ಪತ್ನಿ ಅದರ ವಿಡಿಯೋ (Video) ಮಾಡಿದ್ದಾಳೆ. ಇಲ್ಲಿ ವ್ಯಕ್ತಿಯೊಬ್ಬ ಹದಿಹರೆಯದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಆತನ ಪತ್ನಿ ಕೃತ್ಯವನ್ನು ಚಿತ್ರೀಕರಿಸಿ ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ (Social media) ಅಪ್‌ಲೋಡ್ ಮಾಡಿದ್ದಾರೆ ಎಂದು ಪೊಲೀಸರು (Police) ಶುಕ್ರವಾರ ತಿಳಿಸಿದ್ದಾರೆ. ಬಾಲಕಿಯ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದ್ದು, ಪತಿ-ಪತ್ನಿ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಯನ್ನು ಗುರುವಾರ ಬಂಧಿಸಲಾಗಿದೆ. ಅತ್ಯಾಚಾರ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಐಟಿ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಫೈಜ್‌ಗಂಜ್ ಬೆಹ್ತಾ ಪೊಲೀಸ್ ಠಾಣೆ ಪ್ರಭಾರಿ ಚರಣ್ ಸಿಂಗ್ ರಾಣಾ ತಿಳಿಸಿದ್ದಾರೆ.
Published by:Kavya V
First published: