HOME » NEWS » National-international » COMEDIAN VADIVEL BALAJI DIES AT 45 IN CHENNAI MAK

Vadivel Balaji Dies: ತಮಿಳಿನ ಖ್ಯಾತ ಕಿರುತೆರೆ ಹಾಸ್ಯನಟ ವಡಿವೇಲ್ ಬಾಲಾಜಿ ಹಠಾತ್‌ ನಿಧನ!

ಲಾಕ್‌ಡೌನ್ ಸಮಯದಲ್ಲಿ ಹಾಸ್ಯನಟ ವಡಿವೇಲ್ ಬಾಲಾಜಿ ತೀವ್ರ ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದ್ದರು ಎಂದು ತಮಿಳುನಾಡಿನ ಮಾಧ್ಯಮಗಳು ವರದಿ ಮಾಡಿವೆ. ವಡಿವೇಲ್ ಬಾಲಾಜಿ ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ.

news18-kannada
Updated:September 10, 2020, 5:16 PM IST
Vadivel Balaji Dies: ತಮಿಳಿನ ಖ್ಯಾತ ಕಿರುತೆರೆ ಹಾಸ್ಯನಟ ವಡಿವೇಲ್ ಬಾಲಾಜಿ ಹಠಾತ್‌ ನಿಧನ!
ಹಾಸ್ಯನಟ ವಡಿವೇಲ್ ಬಾಲಾಜಿ.
  • Share this:
ತಮಿಳುನಾಡಿನ ದೂರದರ್ಶನಗಳಲ್ಲಿ ತಮ್ಮ ಹಾಸ್ಯ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಖ್ಯಾತ ಹಾಸ್ಯನಟ 45 ವರ್ಷದ ವಡಿವೇಲ್ ಬಾಲಾಜಿ ಇಂದು ಹಠಾತ್‌ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಹೃದಯ ಸ್ತಂಭನದಿಂದ ಬಳಲುತ್ತಿದ್ದ ವಡಿವೇಲ್ ಬಾಲಾಜಿಯನ್ನು ಇತ್ತೀಚೆಗೆ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ತಮಿಳಿನ ಸ್ಟಾರ್‌ ವಿಜಯ್ ಟಿವಿಯಲ್ಲಿ  ಪ್ರಸಾರವಾಗುತ್ತಿದ್ದ ಅಧು ಇಧು ಎಧು ಮತ್ತು ಕಲಕಪೋವದು ಯಾರೂ ಕಾರ್ಯಕ್ರಮದ ಮೂಲಕ ಮನೆಮಾತಾಗಿದ್ದ ವಡಿವೇಲ್ ಬಾಲಾಜಿ ಅವರ ಹಠಾತ್ ನಿಧನವು ತಮಿಳು ಚಲನಚಿತ್ರೋದ್ಯಮದಾದ್ಯಂತ ಆಘಾತವನ್ನುಂಟುಮಾಡಿದೆ ಮತ್ತು ಅನೇಕ ಪ್ರಸಿದ್ಧ ವ್ಯಕ್ತಿಗಳು ವಡಿವೇಲ್ ಸಾವಿಗೆ ಸಂತಾಪವನ್ನು ಸೂಚಿಸಿದ್ದಾರೆ. 

ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ವಡಿವೇಲ್ ಬಾಲಾಜಿ ಅವರಿಗೆ ವೆಂಟಿಲೇಟರ್ ಸಹಾಯದಿಂದ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅವರ ಕುಟುಂಬಕ್ಕೆ ಹಣಕಾಸು ನಿರ್ವಹಿಸಲು ಸಾಧ್ಯವಾಗದ ಕಾರಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಹಾಸ್ಯನಟ ಹೃದಯಾಘಾತದಿಂದ ಪಾರ್ಶ್ವವಾಯುವಿಗೆ ಒಳಗಾಗಿದ್ದರು ಮತ್ತು ಕಳೆದ 15 ದಿನಗಳಿಂದ ಚಿಕಿತ್ಸೆಯಲ್ಲಿದ್ದರು. ವರದಿಗಳ ಪ್ರಕಾರ, ಅವರ ಆರೋಗ್ಯ ಇಂದು ಸಂಪೂರ್ಣವಾಗಿ ಹದಗೆಟ್ಟಿದ್ದ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಹಾಸ್ಯನಟ ವಡಿವೇಲ್ ಬಾಲಾಜಿ ತೀವ್ರ ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದ್ದರು ಎಂದು ತಮಿಳುನಾಡಿನ ಮಾಧ್ಯಮಗಳು ವರದಿ ಮಾಡಿವೆ. ವಡಿವೇಲ್ ಬಾಲಾಜಿ ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ.

ಇದನ್ನೂ ಓದಿ : ಹಿಂದಿ ಹೇರಿಕೆ ಎಂಬುದು ಬ್ರಾಹ್ಮಣರ ಕೈಗೆ ಕುರಾನ್ ಕೊಟ್ಟಂತೆ; ಕೇಂದ್ರಕ್ಕೆ ಪತ್ರ ಬರೆದ ತಮಿಳುನಾಡಿನ IRS ಅಧಿಕಾರಿ

ಕಿರುತೆರೆಯಲ್ಲಿ ಖ್ಯಾತ ಹಾಸ್ಯನಟ ವಡಿವೇಲು ಅವರನ್ನು ಅನುಕರಿಸುವ ಮೂಲಕ ಖ್ಯಾತಿ ಗಳಿಸಿದ್ದ ಬಾಲಾಜಿಯನ್ನು ಎಲ್ಲರೂ ವಡಿವೇಲ್ ಬಾಲಾಜಿ ಎಂದೇ ಗುರುತಿಸಿದ್ದರು. ಹೀಗಾಗಿ ಇವರಿಗೆ ಚಲನಚಿತ್ರಗಳಲ್ಲೂ ನಡಿಸುವ ಅವಕಾಶಗಳು ಹುಡುಕಿ ಬಂದಿತ್ತು. ಈ ವೇಳೆ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದ್ದರು. ಒಂದು ಪ್ರದರ್ಶನದಲ್ಲಿ ಸ್ವತಃ ನಟ ವಡಿವೇಲು ಅವರು ಬಾಲಾಜಿಯ ಪ್ರತಿಭೆಗೆ ಮೆಚ್ಚುಗೆ ಸೂಚಿಸಿದ್ದರು.

ಕಳೆದ ವರ್ಷದ ಹಿಟ್ ಚಿತ್ರ ಕೋಲಮಾವು ಕೋಕಿಲಾದಲ್ಲಿ ವಾಡಿವೆಲ್ ಬಾಲಾಜಿ ಕೊನೆಯ ಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಧುರೈನಲ್ಲಿ ಜನಿಸಿದ ಈ ನಟ 1991 ರಲ್ಲಿ ಬಿಡುಗಡೆಯಾದ ಎನ್ ರಾಸಾವಿನ್ ಮನಸಿಲೆ ಎಂಬ ಚಿತ್ರದ ಮೂಲಕ ಬಾಲ ನಟನಾಗಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
Published by: MAshok Kumar
First published: September 10, 2020, 5:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories