news18-kannada Updated:November 21, 2020, 8:07 PM IST
ಭಾರತಿ ಸಿಂಗ್
ಮುಂಬೈ (ನ.21): ಜನಪ್ರಿಯ ಹಾಸ್ಯನಟಿಯಾಗಿ ಗುರುತಿಸಿಕೊಂಡಿರುವ ಭಾರತಿ ಸಿಂಗ್ನ್ನು ಎನ್ಸಿಬಿ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣ ಸಂಬಂಧ ಅವರನ್ನು ಬಂಧಿಸಲಾಗಿದೆ. ಭಾರತಿ ಮನೆಯಲ್ಲಿ ಡ್ರಗ್ಸ್ ದೊರೆತ ಆರೋಪದ ಮೇಲೆ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ಇನ್ನು ಭಾರತಿ ಸಿಂಗ್ ಗಂಡ ಹರ್ಷ ಲಿಂಬಾಚಿಯಾ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಡ್ರಗ್ಸ್ ಪ್ರಕರಣ ಸಂಬಂಧ ಎನ್ಸಿಬಿ ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸುಮಾರು 86.5 ಗ್ರಾಂನಷ್ಟು ಗಾಂಜಾ ದೊರೆತಿತ್ತು. ಅಲ್ಲದೇ ವಿಚಾರಣೆ ವೇಳೆ ಭಾರತಿ ಮತ್ತು ಆಕೆಯ ಗಂಡ ಹರ್ಷ ಡ್ರಗ್ಸ್ ಸೇವನೆ ಕುರಿತು ಒಪ್ಪಿಕೊಂಡಿದ್ದರು. ಎನ್ಸಿಬಿ ವಲಯದ ನಿರ್ದೇಶಕ ಸಮೀರ್ ವಾಂಖೆಡೆ ನೇತೃತ್ವದ ತಂಡ ಭಾರತಿ ಮನೆ ಮೇಲೆ ದಾಳಿ ನಡೆಸಿತ್ತು. ಡ್ರಗ್ ಪೆಡ್ಲರ್ ವಿಚಾರಣೆ ವೇಳೆ ಭಾರತಿ ಸಿಂಗ್ ಹೆಸರು ಹೊರಬಂದಿದೆ. ಈ ಹಿನ್ನಲೆ ಅಧಿಕಾರಿಗಳು ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದರು.
ಕಿರುತೆರೆಯಲ್ಲಿ ಖ್ಯಾತ ಹಾಸ್ಯ ನಟಿಯಾಗಿ ಭಾರತಿ ಸಿಂಗ್ ಹೆಸರು ಪಡೆದಿದ್ದಾರೆ. ಅನೇಕ ರಿಯಾಲಿಟಿ ಶೋಗಳ ನಿರೂಪಕಿಯಾಗಿಯೂ ಇವರು ಕಾಣಿಸಿಕೊಂಡಿದ್ದಾರೆ. ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ನ ಡ್ರಗ್ಸ್ ಜಾಲದ ಬಗ್ಗೆ ಎನ್ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣ ಸಂಬಂಧ ಸುಶಾಂತ್ ಗೆಳತಿ ರಿಯಾಳನ್ನು ಒಂದು ತಿಂಗಳ ಕಾಲ ಬಂಧಿಸಲಾಗಿತ್ತು. ಸದ್ಯ ಜಾಮೀನಿನ ಮೇಲೆ ರಿಯಾ ಹೊರ ಬಂದಿದ್ದಾರೆ. ಇನ್ನು ಈ ಪ್ರಕರಣದ ಚಾಟ್ ಲಿಸ್ಟ್ ಆಧಾರದ ಮೇಲೆ ನಟಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಅವರನ್ನು ಕೂಡ ಎನ್ಸಿಬಿ ವಿಚಾರಣೆ ನಡೆಸಿತ್ತು. ಇನ್ನು ಕಳೆದ ವಾರ ನಟ ಅರ್ಜುನ್ ರಾಮ್ಪಾಲ್ ಮನೆ ಮೇಲೆ ಕೂಡ ಅಧಿಕಾರಿಗಳು ದಾಳಿ ನಡೆಸಿದ್ದರು.
Published by:
Seema R
First published:
November 21, 2020, 8:03 PM IST