• Home
  • »
  • News
  • »
  • national-international
  • »
  • Kerala: ತಾಕತ್ತಿದ್ದರೆ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ರಾಜ್ಯಪಾಲರ ಸವಾಲು!

Kerala: ತಾಕತ್ತಿದ್ದರೆ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ರಾಜ್ಯಪಾಲರ ಸವಾಲು!

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹಾಗೂ ಕೇರಳ ಸಿಎಂ

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹಾಗೂ ಕೇರಳ ಸಿಎಂ

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಐಎಂ) ತನ್ನ ಎಡಪಕ್ಷಗಳ ಮಿತ್ರಪಕ್ಷಗಳೊಂದಿಗೆ ನವೆಂಬರ್ 15 ರಂದು ರಾಜಭವನದ ಮುಂದೆ ಪ್ರತಿಭಟನೆ ನಡೆಸಲಿದೆ. ಈ ಬಗ್ಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ರಾಜ್ಯ ಸರ್ಕಾರ ಮತ್ತು ಸಿಪಿಐಎಂ ನಾಯಕರ ನಡುವೆ ಮಾತಿನ ಸಮರ ಆರಂಭವಾಗಿದೆ. ಈ ಪ್ರತಿಭಟನೆಯನ್ನು 15ರಂದು ಇಡಬೇಡಿ, ನಾನು ರಾಜಭವನದಲ್ಲಿ ಇರುವ ದಿನದಂದು ಈ ಪ್ರದರ್ಶನವನ್ನು ಇರಿಸಿ ಎಂದು ವಿನಂತಿಸುತ್ತೇನೆ ಎಂದು ಖಾನ್ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಕೊಚ್ಚಿ(ನ.07): ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸಿಸ್ಟ್ (ಸಿಪಿಐಎಂ) ತನ್ನ ಎಡಪಕ್ಷಗಳ ಮಿತ್ರಪಕ್ಷಗಳೊಂದಿಗೆ ನವೆಂಬರ್ 15 ರಂದು ರಾಜಭವನದ ಮುಂದೆ ಪ್ರತಿಭಟನೆ ನಡೆಸಲಿದೆ. ಈ ಬಗ್ಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ರಾಜ್ಯ ಸರ್ಕಾರ ಮತ್ತು ಸಿಪಿಐಎಂ ನಾಯಕರ ನಡುವೆ ಮಾತಿನ ಸಮರ ಆರಂಭವಾಗಿದೆ. ಈ ವಿಚಾರವಾಗಿ ರಾಜ್ಯಪಾಲರು (Kerala Governor Arif Mohammad Khan) ಇದೀಗ ರಾಜ್ಯ ಸರ್ಕಾರಕ್ಕೆ (Kerala Govt) ಬಹಿರಂಗ ಸವಾಲು ಹಾಕಿದ್ದಾರೆ. ಅವರು ಧರಣಿಗೆ ಬರುತ್ತಾರೆ ಎಂದು ಕಾಯುತ್ತಿದ್ದೇನೆ ಎಂದಿದ್ದಾರೆ. ಅಲ್ಲದೇ ಈ ಪ್ರತಿಭಟನೆಯನ್ನು 15ರಂದು ಇಡಬೇಡಿ, ನಾನು ರಾಜಭವನದಲ್ಲಿ ಇರುವ ದಿನದಂದು ಪ್ರತಿಭಟಿಸಿ ಎಂದು ವಿನಂತಿಸುತ್ತೇನೆ ಎಂದಿದ್ದಾರೆ. ನಾನು ಅಲ್ಲಿಗೆ ಬರುತ್ತೇನೆ ನಿಮಗೆ ಧೈರ್ಯವಿದ್ದರೆ ನನ್ನೊಂದಿಗೆ ಸಾರ್ವಜನಿಕ ಚರ್ಚೆ ನಡೆಸಿ ಎಂದಿದ್ದಾರೆ.


ಇದನ್ನೂ ಓದಿ: ಸಾಲು ಸಾಲು ಸೋಲುಗಳ ನಂತರ ಸ್ಟಾರ್ಟ್​ಅಪ್​ನಲ್ಲಿ ಯಶಸ್ಸು, ಸಾರಾ ಟೌಕನ್‌ ಎಂಬ ಮಹಿಳೆಯ ಸಾಧನೆ ಕಥೆ


ಎಎನ್‌ಐ ಪ್ರಕಾರ, ರಾಜ್ಯಪಾಲರು ಉಪಕುಲಪತಿಗಳು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಉಪಕುಲಪತಿಗಳು ಕರ್ತವ್ಯ ನಿರ್ವಹಿಸದಂತೆ ತಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು. ನಾನು ಯಾರೆಂದು ತಿಳಿಯದ ಮಟ್ಟಕ್ಕೆ ಮುಖ್ಯಮಂತ್ರಿ ಹೋಗುತ್ತಿದ್ದಾರೆ. ಕಣ್ಣೂರಿನಲ್ಲಿ ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ವ್ಯಕ್ತಿಯನ್ನು ಹೇಗೆ ಬಿಡಿಸಲು ಯತ್ನಿಸಿದರು ಎಂಬುದು ನನಗೆ ಗೊತ್ತು ಎಂದಿದ್ದಾರೆ.


ರಾಜ್ಯಪಾಲರದ್ದು ಕೇವಲ ಚುನಾಯಿತ ಹುದ್ದೆಯಲ್ಲ


ರಾಜ್ಯಪಾಲರದ್ದು ಕೇವಲ ಚುನಾಯಿತ ಹುದ್ದೆಯಲ್ಲ ಎಂದು ಖಾನ್ ಹೇಳಿದ್ದಾರೆ. ನಾನು ಯಾವುದೇ ಔಚಿತ್ಯವನ್ನು ಉಲ್ಲಂಘಿಸಿದ ತಪ್ಪಿತಸ್ಥನಾಗಿದ್ದರೆ, ನೀವು ರಾಷ್ಟ್ರಪತಿ ಬಳಿ ಹೋಗಬಹುದು. ನಾನು ಯಾವುದೇ ಕಾನೂನನ್ನು ಉಲ್ಲಂಘಿಸಿದ ತಪ್ಪಿತಸ್ಥನಾಗಿದ್ದರೆ ನೀವು ನ್ಯಾಯಾಲಯಕ್ಕೆ ಹೋಗಬಹುದು. ನಾನು ಯಾವುದೇ ಚುನಾಯಿತ ಹುದ್ದೆಯಲ್ಲಿ ಕುಳಿತಿಲ್ಲ. ಜನರು ನನಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಕೇರಳದ ಎಲ್ಲಾ ಉದ್ಯೋಗಗಳು ಸಿಪಿಐಎಂ ಕಾರ್ಯಕರ್ತರಿಗೆ ಮೀಸಲಾಗಿದೆಯೇ? ವಿಶ್ವವಿದ್ಯಾನಿಲಯದ ಉದ್ಯೋಗಗಳು ತಿರುವನಂತಪುರಂನಲ್ಲಿ ಪ್ರಬಲ ವ್ಯಕ್ತಿಗಳಿಗೆ, ಅಧಿಕಾರದಲ್ಲಿರುವವರ ಸಂಬಂಧಿಕರಿಗೆ ಮೀಸಲಾಗಿದೆಯೇ?


ಇದನ್ನೂ ಓದಿ: ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಫ್ರೀ ಶವರ್, ಒಡೆದ ನಲ್ಲಿಯ ವಿಡಿಯೋ ಫುಲ್ ವೈರಲ್


ತಿರುವನಂತಪುರಂ ಮೇಯರ್ ಪತ್ರದ ಬಗ್ಗೆ ಕೇಳಿದಾಗ, ಕೇರಳದ ಯುವಕರು ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಹೋಗಬೇಕಾಗಿದೆ. ಇಲ್ಲಿನ ಯುವಕರು ಉದ್ಯೋಗ ಅರಸಿ ವಿದೇಶಕ್ಕೆ ಹೋಗುತ್ತಾರೆ. ಆದರೆ CPIM ನಾಯಕತ್ವದ ಸಂಬಂಧಿಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ತಾತ್ಕಾಲಿಕ ಉದ್ಯೋಗಗಳಿಂದ ಹಿಡಿದು ಖಾಯಂ ಉದ್ಯೋಗಗಳವರೆಗೆ ಸೇರಿಸಿಕೊಳ್ಳಲಾಗುತ್ತಿ.ದೆ ಎಂದಿದ್ದಾರೆ

Published by:Precilla Olivia Dias
First published: