ಸುಖೋಯ್ ಮತ್ತು ರಫೇಲ್ ಒಟ್ಟು ಸೇರಿಸಿದರೆ ಭಾರತದ ಎಲ್ಲಾ ಶತ್ರುಗಳನ್ನೂ ಸೋಲಿಸಬಹುದು: ಸೇನಾಧಿಕಾರಿ ಹೇಳಿಕೆ

“ಎಸ್​ಯು-30ಎಂಕೆಐ ಮತ್ತು ರಫೇಲ್ ಯುದ್ಧವಿಮಾನಗಳು ಒಟ್ಟಿಗೆ ಕಾರ್ಯನಿರ್ವಹಣೆಯಾಗತೊಡಗಿದರೆ ನಮ್ಮ ಎದುರಾಳಿಗಳ ವಿರುದ್ಧ ಪ್ರಬಲ ಅಸ್ತ್ರವಾಗಲಿದೆ” ಎಂದು ಸೇನಾಧಿಕಾರಿ ಹೇಳುತ್ತಾರೆ.

Vijayasarthy SN | news18
Updated:July 11, 2019, 11:03 PM IST
ಸುಖೋಯ್ ಮತ್ತು ರಫೇಲ್ ಒಟ್ಟು ಸೇರಿಸಿದರೆ ಭಾರತದ ಎಲ್ಲಾ ಶತ್ರುಗಳನ್ನೂ ಸೋಲಿಸಬಹುದು: ಸೇನಾಧಿಕಾರಿ ಹೇಳಿಕೆ
ರಫೇಲ್​ ಯುದ್ಧ ವಿಮಾನ
Vijayasarthy SN | news18
Updated: July 11, 2019, 11:03 PM IST
ನವದೆಹಲಿ(ಜುಲೈ 11): ರಷ್ಯಾ ನಿರ್ಮಿತ ಸುಖೋಯ್-30ಎಂಕೆಐ ಮತ್ತು ಪ್ರಾನ್ಸ್ ನಿರ್ಮಿತ ರಫೇಲ್ ಯುದ್ಧವಿಮಾನಗಳು ಒಟ್ಟುಗೂಡಿದರೆ ಭಾರತದ ಶತ್ರುಗಳೆಲ್ಲರನ್ನೂ ಸೋಲಿಸಬಹುದು ಎಂದು ಭಾರತೀಯ ವಾಯು ಸೇನೆಯ ಅಧಿಕಾರಿಯೊಬ್ಬರು ಹೇಳಿದ್ಧಾರೆ. ಭಾರತೀಯ ಶತ್ರುಗಳ ಪಾಲಿಗೆ ಇವೆರಡು ಡೆಡ್ಲಿ ಕಾಂಬಿನೇಶನ್ ಆಗಿದೆ. ಪಾಕಿಸ್ತಾನವೂ ಸೇರಿ ಭಾರತದ ಎದುರಾಳಿಗಳನ್ನ ಇವೆರಡನ್ನು ಬಳಸಿ ಸೋಲಿಸಬಹುದು ಎಂದು ವೈಸ್ ಏರ್ ಮಾರ್ಷಲ್ ಆರ್.ಕೆ.ಎಸ್. ಭದೂರಿಯಾ ಅಭಿಪ್ರಾಯಪಟ್ಟರು.

“ಎಸ್​ಯು-30ಎಂಕೆಐ ಮತ್ತು ರಫೇಲ್ ಯುದ್ಧವಿಮಾನಗಳು ಒಟ್ಟಿಗೆ ಕಾರ್ಯನಿರ್ವಹಣೆಯಾಗತೊಡಗಿದರೆ ನಮ್ಮ ಎದುರಾಳಿಗಳ ವಿರುದ್ಧ ಪ್ರಬಲ ಅಸ್ತ್ರವಾಗಲಿದೆ. ಪಾಕಿಸ್ತಾನವಾಗಲೀ ಅಥವಾ ಬೇರೆ ಯಾವ ಶಕ್ತಿಯಾಗಲೀ ಈ ಜೋಡಿ ಅಸ್ತ್ರಕ್ಕೆ ಕಕ್ಕಾಬಿಕ್ಕಿಯಾಗುವುದು ನಿಶ್ಚಿತ” ಎಂದು ಸೇನಾಧಿಕಾರಿ ಹೇಳಿದರು.

ಇದನ್ನೂ ಓದಿ: ಭಾರತದ ಆರ್ಥಿಕತೆ ತಾನಾಗೇ 5 ಟ್ರಿಲಿಯನ್ ಡಾಲರ್ ಆಗುತ್ತದೆ; ಪ್ರಧಾನಿ ಬೇಕಿಲ್ಲ: ಕೇಂದ್ರದ ಆರ್ಥಿಕ ಗುರಿ ಬಗ್ಗೆ ಚಿದಂಬರಂ ಲೇವಡಿ

ಬಾಲಾಕೋಟ್ ವಾಯುದಾಳಿ ನಂತರ ಭಾರತದ ಸರಹದ್ದಿನಲ್ಲಿ ಪಾಕಿಸ್ತಾನ ವೈಮಾನಿಕ ಚಕಮಕಿ ನಡೆಸಿತ್ತು. ಭಾರತದಲ್ಲಿ ಸುಖೋಯ್ ಮತ್ತು ರಫೇಲ್ ಕಾಂಬಿನೇಶನ್ ಆದ ನಂತರ ಪಾಕಿಸ್ತಾನ ಅಂಥ ದಾಳಿಯ ಧೈರ್ಯ ತೋರಿಸಬಲ್ಲುದಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆ ವೈಸ್ ಚೀಫ್ ಏರ್​ ಮಾರ್ಷನ್ ಭದೂರಿಯಾ ಅವರು, ಪಾಕಿಸ್ತಾನಕ್ಕೆ ಅಂಥ ಧೈರ್ಯ ಬರುವುದಿಲ್ಲ ಎಂದರು. ಒಂದು ವೇಳೆ ಅಂಥ ದಾಳಿ ನಡೆಸಿದ್ದೇ ಆದಲ್ಲಿ ಪಾಕಿಸ್ತಾನಕ್ಕೆ ಭಾರೀ ನಷ್ಟವಾಗುಗತ್ತದೆ. ಭಾರತೀಯ ವಾಯು ಸೇನೆಯ ಬಳಿ ಪಾಕಿಸ್ತಾನದಕ್ಕಿಂತ ದೊಡ್ಡದಾದ ಮತ್ತು ಉತ್ತಮವಾದ ಶಸ್ತ್ರಗಳಿವೆ ಎಂದು ಭದೂರಿಯಾ ತಿಳಿಸಿದರು.

ಪಾಕಿಸ್ತಾನದ ಬಳಿ ಚೀನಾ ಮತ್ತು ಅಮೆರಿಕ ನಿರ್ಮಿತ ಯುದ್ಧವಿಮಾನಗಳಿವೆ. ಅಮೆರಿಕದ ಎಫ್-16 ಯುದ್ಧವಿಮಾನ ಬಹಳ ಪ್ರಬಲವೆಂದು ಪರಿಗಣಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಮಧ್ಯೆಯ ವೈಮಾನಿಕ ಚಕಮಕಿಯ ವೇಳೆ ಮಿಗ್ ವಿಮಾನ ಚಲಾಯಿಸುತ್ತಿದ್ದ ಕ್ಯಾಪ್ಟನ್ ಅಭಿನಂದನ್ ಅವರು ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರೆನ್ನಲಾಗಿದೆ.

ಇದನ್ನೂ ಓದಿ: ದೇಶದಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿದೆ; ಲೋಕಸಭಾ ಸೋಲಿನ ಬಳಿಕ ಸಂಸತ್​ನಲ್ಲಿ ರಾಹುಲ್​ ಗಾಂಧಿ ಮೊದಲ ಭಾಷಣ

ಭಾರತೀಯ ವಾಯು ಸೇನಾ ಪಡೆಯಲ್ಲಿರುವ ಕೊರತೆ ಒಂದೊಂದೇ ನೀಗುತ್ತಾ ಬರುತ್ತಿದೆ. ಏರ್ ಫೋರ್ಸ್ ಸ್ಕ್ವಾಡ್ರಾನ್​ಗಳನ್ನ ನಿರಂತರವಾಗಿ ಭರ್ತಿ ಮಾಡುತ್ತಾ ಬರುತ್ತಿದೆ. ಚೀನಾ ಮತ್ತು ಪಾಕಿಸ್ತಾನವನ್ನು ಏಕಕಾಲದಲ್ಲಿ ಎದುರಿಸಲು ಭಾರತೀಯ ವಾಯುಪಡೆಗೆ 42 ಸ್ಕ್ವಾಡ್ರನ್​ಗಳ ಅಗತ್ಯವಿದೆ. ಸದ್ಯಕ್ಕೆ 31 ಸ್ಕ್ವಾಡ್ರನ್​ಗಳು ಮಾತ್ರ ಭರ್ತಿಯಾಗಿವೆ. ಇನ್ನುಳಿದವನ್ನು ಆದಷ್ಟೂ ಬೇಗ ತುಂಬಿಸಲು ಸೇನೆ ಪ್ರಯತ್ನಿಸುತ್ತಿದೆ.
Loading...

ರಷ್ಯಾದಿಂದ ಇನ್ನೂ 18 ಸುಖೋಯ್ ಎಸ್​ಯು-30 ಎಂಕೆಐ ಮಲ್ಟಿರೋಲ್ ಫೈಟರ್ಸ್ ಮತ್ತು 21 ಮಿಗ್-29 ಯುದ್ಧವಿಮಾನಗಳನ್ನ ತರಿಸಿಕೊಳ್ಳಲು ಯೋಜಿಸಿದೆ. ಈ ಯುದ್ಧವಿಮಾನಗಳು ಎರಡು ಸ್ಕ್ವಾಡ್ರನ್​ಗಳನ್ನು ತುಂಬಿಸುತ್ತವೆ.

(ಝೀ ನ್ಯೂಸ್ ವರದಿ)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:July 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...