ಮೇ 1 ರಂದು ಕಾಡಿನಲ್ಲಿ ಲಘು ವಿಮಾನ ಪತನಗೊಂಡಿತ್ತು ಆಗ ಇದರಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬ ಮಹಿಳೆ ಮತ್ತು ಪೈಲಟ್‌ಗಳು ಸಾವನ್ನಪ್ಪಿದರು. ಆದರೆ 4 ಜನ ಮಕ್ಕಳು ಬದುಕಿದ್ದಾರೆ ಎಂಬ ಭರವಸೆ ಇಟ್ಟುಕೊಂಡು ಅಲ್ಲಿನ ರಕ್ಷಣಾದಳ 40 ದಿನಗಳ ಕಾಲ ಸತತವಾಗಿ ಹುಡುಕಾಟ ನಡೆಸಿದೆ. ಕೊನೆಗೂ 40 ದಿನಗಳ ನಂತರ ಭಯಂಕರ ದಟ್ಟಾರಣ್ಯವಾದ ಅಮೆಜಾನ್ ಕಾಡಿನಲ್ಲಿ ಮಕ್ಕಳು ಜೀವಂತ ಪತ್ತೆ ಆಗಿದ್ದಾರೆ. ಇದು ನಿಜಕ್ಕೂ ಆಶ್ವರ್ಯವಲ್ಲವೇ? ಹಾಗಾದರೆ ಆ ಮಕ್ಕಳನ್ನು ಹುಡುಕಲು ಏನೆಲ್ಲಾ ಮಾಡಿದರು ಎಂದು ನಿಮಗೆ ಗೊತ್ತಾ? ಇಲ್ಲಿದೆ ರೋಚಕ ಸಂಗತಿ.
ಅವರ ಲಘು ವಿಮಾನ ಪತನಗೊಂಡಾಗ ಮಕ್ಕಳ ತಾಯಿ ಮತ್ತು ಇಬ್ಬರು ಪೈಲೇಟ್ ಸತ್ತಿರುವುದು ಮೊದಲೇ ತಿಳಿದು ಬಂದಿತ್ತು. ಆದರೂ ಮೊಮ್ಮಕ್ಕಳನ್ನು ಹುಡುಕುವುದಕ್ಕಾಗಿ ಕೇಳಿಕೊಂಡಿದ್ದರು. ಕಾಣೆಯಾದ ಮಕ್ಕಳು ಡಜನ್ಗಟ್ಟಲೆ ಸೈನಿಕರು ಮತ್ತು ಸ್ಥಳೀಯ ಜನರನ್ನು ಒಳಗೊಂಡ ಬೃಹತ್ ರಕ್ಷಣಾ ಕಾರ್ಯಾಚರಣೆಯ ತಂಡವೊಂದು ಹುಡುಕುತ್ತಾ ಹೋಯಿತು.
ಮಕ್ಕಳು ಹುಯಿಟೊಟೊ ಸ್ಥಳೀಯ ಗುಂಪಿಗೆ ಸೇರಿದವರಾಗಿದ್ದರು. 40 ದಿನಗಳಿಂದ ಕಾಣೆಯಾಗಿದ್ದ ಮಕ್ಕಳನ್ನು ಹುಡುಕುವಲ್ಲಿ ಈ ತಂಡ ವಿರಾಮವನ್ನೇ ತೆಗೆದುಕೊಂಡಿಲ್ಲ. ಕೊಲಂಬಿಯಾದ ರಕ್ಷಣಾ ಸಚಿವಾಲಯವು ಹಂಚಿಕೊಂಡ ವೀಡಿಯೊವು ನಿಜಕ್ಕೂ ರೋಚಕವಾಗಿದೆ. ಕಾಡಿನ ಎತ್ತರದ ಮರಗಳ ಮೇಲಿನ ಕತ್ತಲೆಯಲ್ಲಿ ಮಕ್ಕಳು ಅಷ್ಟು ದಿನ ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಂಡವು ಎಂಬುದೇ ನಿಜಕ್ಕೂ ಕೌತುಕ.
ಇದನ್ನೂ ಓದಿ: Marriage: ಹುಡುಗ ಟೆಕ್ಕಿಯಾಗಿರಬೇಕು, 30 ಲಕ್ಷ ಸ್ಯಾಲರಿ ಇರಬೇಕು! ಸರ್ವೆಯಲ್ಲಿ ತಮಿಳು ಹುಡುಗಿಯರ ಡಿಮ್ಯಾಂಡ್!
ಆ ಮಕ್ಕಳನ್ನು ರಾಷ್ಟ್ರದ ರಾಜಧಾನಿ ಬೊಗೋಟಾಕ್ಕೆ ಈಗ ವರ್ಗಾಯಿಸಲಾಗಿದೆ. ಅಷ್ಟೂ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಲಾಗಿದೆ. ಕ್ಕಳ ಅಜ್ಜಿ, ಫಾತಿಮಾ ವೇಲೆನ್ಸಿಯಾ ಈ ಕುರಿತು ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ತುಂಬಾ ಕೃತಜ್ಞನಾಗಿದ್ದೇನೆ ಮತ್ತು ತಾಯಿ ಭೂಮಿಗೆ ಸಹ ನಾನು ಚಿರರುಣಿಯಾಗಿದ್ದೇನೆ ಎಂದು ಹೇಳಿದ್ದಾರೆ. ನಾಲ್ವರು ಒಡಹುಟ್ಟಿದವರಲ್ಲಿ ಹಿರಿಯರು ತಮ್ಮ ತಾಯಿ ಕೆಲಸದಲ್ಲಿದ್ದಾಗ ಇತರ ಮೂವರನ್ನು ನೋಡಿಕೊಳ್ಳುತ್ತಿದ್ದರು ಆದ್ದರಿಂದಲೇ ಒಬ್ಬರ ಆರೈಕೆಯನ್ನು ಇನ್ನೊಬ್ಬರು ಮಾಡಿಕೊಂಡು ಬದುಕುಳಿದಿದ್ದಾರೆ ಎಂದು ಅಜ್ಜಿ ತಿಳಿಸಿದ್ದಾರೆ.
ಅವರ ಜೊತೆಯಲ್ಲಿತ್ತು 11 ತಿಂಗಳ ಹಸುಗೂಸು!
ಕಳೆದು ಹೋದ 4 ಮಕ್ಕಳಲ್ಲಿ ಒಂದು ಮಗು ಕೇವಲ 11 ತಿಂಗಳಿನದ್ದಾಗಿತ್ತು. 40 ದಿನಗಳವರೆಗೆ ಊಟ ಇಲ್ಲದೇ ಏನನ್ನು ತಿಂದು ಆ ಮಕ್ಕಳು ಬದುಕುಳಿದಿದ್ದಾವೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆದರೆ ಇದು ನಿಜಕ್ಕೂ ಪವಾಡ ಸದೃಶ. ಕಾಡಿನಲ್ಲಿ ಯಾವ ಪೊದೆಯಲ್ಲಿ ಹೇಗೆ ರಕ್ಷಣೆ ಪಡೆಯಬೇಕು ಯಾವ ಹಣ್ಣು ತಿನ್ನಬೇಕು ಎಂದು ಮಕ್ಕಳು ಅರಿತಿದ್ದರು ಎಂದು ಹೇಳಲಾಗಿದೆ.
ಸೆಸ್ನಾ 206 ವಿಮಾನವು ಅಪಘಾತಕ್ಕೀಡಾಗುವ ಮೊದಲು ಮಕ್ಕಳು ಮತ್ತು ಅವರ ತಾಯಿ ಪ್ರಯಾಣಿಸುತ್ತಿದ್ದರು. ಅಮೆಜಾನಾಸ್ ಪ್ರಾಂತ್ಯದ ಅರರಾಕುವಾರಾದಿಂದ ಸ್ಯಾನ್ ಜೋಸ್ ಡೆಲ್ ಗುವಿಯಾರ್‌ಗೆ ಹಾರುತ್ತಿದ್ದಾಗ, ಇಂಜಿನ್ ವೈಫಲ್ಯದಿಂದಾಗಿ ವಿಮಾನ ಪತನವಾಗಿದೆ. ಮೂವರು ವಯಸ್ಕರ ಶವಗಳನ್ನು ಸೈನ್ಯವು ಅಪಘಾತದ ಸ್ಥಳದಲ್ಲಿ ಪತ್ತೆ ಮಾಡಿತ್ತು. ಆದರೆ ಮಕ್ಕಳು ಮಾತ್ರ ತಪ್ಪಿಸಿಕೊಳ್ಳಲು ಕಾಡಿನಲ್ಲಿ ಅಲೆಯುತ್ತಾ ಹೋದರು. ಅವರು ಒಂದೇ ಜಾಗದಲ್ಲಿ ನಿಂತರೆ ಹುಡುಕಲು ಇನ್ನೂ ಸುಲಭವಾಗುತ್ತಿತ್ತು. ಆದರೆ ಮಕ್ಕಳು ಕಾಡಿನಲ್ಲಿ ಸಂಚರಿಸಲು ಆರಂಭಿಸಿಬಿಟ್ಟಿದ್ದರು.
ಕುಡಿಯುವ ಬಾಟಲಿ, ಒಂದು ಜೋಡಿ ಕತ್ತರಿ, ಹೇರ್ ಟೈ ಮತ್ತು ಅವರು ಸಣ್ಣ ಹೆಜ್ಜೆಗುರುತುಗಳನ್ನು ಸಹ ಗುರುತಿಸುತ್ತಾ ರಕ್ಷಣಾದಳ ತನ್ನ ಕಾರ್ಯವನ್ನು ನಿಲ್ಲಿಸಲಿಲ್ಲ. ತುಂಬಾ ಭರವಸೆಯಿಂದ ಮಕ್ಕಳು ಸಿಕ್ಕೇ ಸಿಗುತ್ತಾರೆ ಎಂಬ ಭರವಸೆಯಿಂದ ಸಂಚರಿಸಲು ಸುಳಿವುಗಳನ್ನು ಹಿಂಬಾಲಿಸಲು ಆರಂಭಿಸಿದರು. ಅವರು ಪತ್ತೆಯಾದ ನಂತರ, ಅವರ ಅಜ್ಜ ಫಿಡೆನ್ಸಿಯೊ ವೇಲೆನ್ಸಿಯಾ ಅವರು ಬೊಗೋಟಾದಿಂದ ಸರಿಸುಮಾರು 130 ಕಿಮೀದೂರದಲ್ಲಿರುವ ವಿಲ್ಲಾವಿಸೆನ್ಸಿಯೊದಲ್ಲಿ ತಮ್ಮ ಕುಟುಂಬಕ್ಕೆ ಮಕ್ಕಳನ್ನು ಕಳಿಸಿಕೊಡುವಂತೆ ಕೇಳಿಕೊಂಡಿದ್ದರು.
ಒಟ್ಟಿನಲ್ಲಿ 40 ದಿನಗಳ ಕಾಲ ಆ ದಟ್ಟ ಕಾಡಿನಲ್ಲಿ ಈ ಪುಟ್ಟ ಮಕ್ಕಳು ಬದುಕಿ ಉಳಿದದ್ದೇ ರೋಚಕ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ