ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಸೇರಿ ಇಬ್ಬರಿಗೆ ಸುಪ್ರೀಂ ಭಡ್ತಿ ನೀಡಲು ಕೊಲೀಜಿಯಂ ಶಿಫಾರಸು

ಹೈಕೋರ್ಟ್​ನ ನ್ಯಾ| ದಿನೇಶ್ ಮಹೇಶ್ವರಿ ಮತ್ತು ನ್ಯಾ| ಸಂಜೀವ್ ಖನ್ನಾ ಅವರನ್ನು ಸುಪ್ರೀಂಕೋರ್ಟ್​​ಗೆ ಭಡ್ತಿ ಕೊಡಲು ಕೊಲೀಜಿಯಂ ಶಿಫಾರಸು ಮಾಡಿದೆ.

Vijayasarthy SN | news18
Updated:January 11, 2019, 9:43 PM IST
ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಸೇರಿ ಇಬ್ಬರಿಗೆ ಸುಪ್ರೀಂ ಭಡ್ತಿ ನೀಡಲು ಕೊಲೀಜಿಯಂ ಶಿಫಾರಸು
ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ
Vijayasarthy SN | news18
Updated: January 11, 2019, 9:43 PM IST
ನವದೆಹಲಿ(ಜ. 11): ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಏರಿಸುವಂತೆ ಸುಪ್ರೀಂ ಕೋರ್ಟ್​ನ ಕೊಲೀಜಿಯಂ ಶಿಫಾರಸು ಮಾಡಿದೆ. ದಿನೇಶ್ ಮಹೇಶ್ವರಿ ಅವರು ಸದ್ಯಕ್ಕೆ ಕರ್ನಾಟಕದ ಹೈಕೋರ್ಟ್​​ನ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯಾ| ಸಂಜೀವ್ ಖನ್ನಾ ಅವರು ದೆಹಲಿ ಹೈಕೋರ್ಟ್​ನ ನ್ಯಾಯಾಧೀಶರಾಗಿದ್ದಾರೆ.

ಹೈಕೋರ್ಟ್ ನ್ಯಾಯಮೂರ್ತಿಗಳ ಸೀನಿಯಾರಿಟಿ ಪಟ್ಟಿಯಲ್ಲಿ ನ್ಯಾ| ದಿನೇಶ್ ಮಹೇಶ್ವರಿ ಅವರು 21ನೇ ಸ್ಥಾನದಲ್ಲಿದ್ದರೆ, ನ್ಯಾ| ಸಂಜೀವ್ ಖನ್ನಾ ಅವರು 33ನೇ ಸ್ಥಾನದಲ್ಲಿದ್ದಾರೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಸದ್ಯಕ್ಕೆ 5 ನ್ಯಾಯಮೂರ್ತಿಗಳ ಸ್ಥಾನ ಖಾಲಿ ಇವೆ. ಇದರಲ್ಲಿ ಇಬ್ಬರನ್ನು ತುಂಬಿಸಿಕೊಳ್ಳಲು ಕೊಲೀಜಿಯಂ ನಿರ್ಧರಿಸಿದೆ. ನ್ಯಾಯಮೂರ್ತಿಗಳ ನೇಮಕಾತಿ, ವರ್ಗಾವಣೆ, ಪ್ರಕರಣ ಹಂಚಿಕೆ ಇತ್ಯಾದಿ ವಿಚಾರಗಳನ್ನು ಈ ಕೊಲೀಜಿಯಂ ಚರ್ಚಿಸಿ ಶಿಫಾರಸು ಮಾಡುತ್ತದೆ. ಈಗಿನ ಕೊಲೀಜಿಯಮ್​ನಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎಸ್.ಎ. ಬೋಬ್ಡೆ, ಎನ್.ವಿ. ರಮಣ ಮತ್ತು ಅರುಣ್ ಮಿಶ್ರಾ ಅವರಿದ್ದಾರೆ. ಈ ಸಮಿತಿಯು ಜನವರಿ 5 ಮತ್ತು 6ರಂದು ಸಭೆ ಸೇರಿ ಇಬ್ಬರು ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್​ಗೆ ಭಡ್ತಿ ನೀಡುವ ನಿರ್ಧಾರಕ್ಕೆ ಬಂದಿದೆ.

ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿರುವ 60 ವರ್ಷದ ದಿನೇಶ್ ಮಹೇಶ್ವರಿ ಅವರು 2004ರಲ್ಲಿ ಮೊದಲ ಬಾರಿಗೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾದರು. ನಂತರ ಅಲಹಾಬಾದ್ ಹೈಕೋರ್ಟ್ ಜಡ್ಜ್ ಆಗಿ ವರ್ಗವಾದರು. ಕರ್ನಾಟಕದಲ್ಲಿ ಮುಖ್ಯನ್ಯಾಯಮೂರ್ತಿಯಾಗುವ ಮುನ್ನ ಮೇಘಾಲಯ ಹೈಕೋರ್ಟ್​ನಲ್ಲಿ ಅದೇ ಸ್ಥಾನವನ್ನು ನಿಭಾಯಿಸಿದ್ದರು.
First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...