Viral Video: ಒಬ್ಬ ಪ್ರೇಮಿಗಾಗಿ ಇಬ್ಬರು ಕಾಲೇಜ್ ಹುಡುಗಿಯರ ಫೈಟ್! ನಡು ರಸ್ತೆಯಲ್ಲೇ ನಡೀತು ಜಡೆ ಜಗಳ!

ಒಬ್ಬ ಪ್ರೇಮಿಗಾಗಿ ಇಬ್ಬರು ಹುಡುಗಿಯರು ಫೈಟ್ ಮಾಡಿದ್ದಾರೆ. ಅವರಿಬ್ಬರು ಒಬ್ಬನ್ನೇ ಪ್ರೀತಿಸುತ್ತಾ ಇದ್ದರು ಎನ್ನಲಾಗಿದೆ. ಹುಡುಗಿಯರು ಹೀಗೆ ಜಡೆ ಹಿಡಿದು ಹೊಡೆದಾಡುವ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ದೃಶ್ಯಗಳೀಗೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಮಿಳುನಾಡು: ಮನೆಯಲ್ಲಿ ತಂದೆ ತಾಯಿ (Father Mother) ನಮಗೆ ಎಷ್ಟೇ ಕಷ್ಟ ಇದ್ದರೂ, ಅದು ನಮ್ಮ ಮಕ್ಕಳಿಗೆ (Children) ಬರಬಾರದು ಅಂದುಕೊಂಡಿರುತ್ತಾರೆ. ತಾವು ಒಂದು ಹೊತ್ತು ಉಂಡರೂ, ತಮ್ಮ ಹೊಟ್ಟೆ ಬಟ್ಟೆ ಕಟ್ಟಿ, ಮಕ್ಕಳಿಗೆ ಬೇಕಾದದ್ದು ಕೊಡಿಸ್ತಾರೆ. ನಾವು ಕೂಲಿ ನಾಲಿ ಮಾಡಿದರೂ ಪರವಾಗಿಲ್ಲ, ನಮ್ಮ ಮಕ್ಕಳು ಚೆನ್ನಾಗಿ ಓದಲಿ, ದೊಡ್ಡ ದೊಡ್ಡ ಕಾಲೇಜ್‌ನಲ್ಲಿ (College) ಕಲಿಯಲಿ, ಒಳ್ಳೆ ಮಾರ್ಕ್ಸ್ (Marks) ತೆಗೆದು, ಒಳ್ಳೆ ನೌಕರಿ (Job) ಪಡೆಯಲಿ ಅಂತ ಕನಸು (Dreams) ಕಾಣುತ್ತಾರೆ. ಆದರೆ ಕೆಲವು ಮಕ್ಕಳು ಮನೆಯಲ್ಲಿನ ಕಷ್ಟವನ್ನೆಲ್ಲ ಮರೆತು ಶೋಕಿ ಮಾಡುತ್ತಾರೆ. ಅಪ್ಪ ಅಮ್ಮನ ಕನಸು ನುಚ್ಚು ನೂರು ಮಾಡುತ್ತಾರೆ. ಓದುವುದನ್ನು ಬಿಟ್ಟು, ಪ್ರೀತಿ ಪ್ರೇಮ (Love) ಅಂತ ತಲೆ ಕೆಡಿಸಿಕೊಳ್ತಾರೆ. ಅಂಕ ಪಡೆಯಲು ಆರೋಗ್ಯಕರ ಸ್ಪರ್ಧೆ (Healthy competition) ಮಾಡುವುದನ್ನು ಬಿಟ್ಟು, ಪ್ರೇಮಿಗಾಗಿ (Lover) ಕಿತ್ತಾಡುತ್ತಾರೆ. ಇಲ್ಲಿ ಆಗಿದ್ದೂ ಅದೇ, ಕಾಲೇಜ್‌ ವಿದ್ಯಾರ್ಥಿನಿಯರು (College Student) ಇಬ್ಬರು ನಡು ರಸ್ತೆಯಲ್ಲಿ (Midle Raod) ಜುಟ್ಟು ಹಿಡಿದು ಹೊಡೆದಾಡಿಕೊಂಡಿದ್ದಾರೆ. ಇದೀಗ ಈ ವಿದ್ಯಾರ್ಥಿನಿಯರ ಫೈಟ್ (Fight) ವೈರಲ್ (Viral) ಆಗಿದೆ.

ನಡು ರಸ್ತೆಯಲ್ಲೇ ಕಾಲೇಜು ವಿದ್ಯಾರ್ಥಿನಿಯರ ಜಡೆ ಜಗಳ

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಇಬ್ಬರು ಕಾಲೇಜ್ ವಿದ್ಯಾರ್ಥಿನಿಯರು ನಡು ಹೊಡೆದಾಡಿಕೊಂಡಿದ್ದಾರೆ. ಜಡೆ ಜಡೆ ಹಿಡಿದುಕೊಂಡು ಹೊಡೆದಾಡಿಕೊಂಡಿದ್ದಾರೆ. ಅಣ್ಣಾ ಬಸ್ ನಿಲ್ದಾಣದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

ಮಾತಿಗೆ ಮಾತು ಬೆಳೆದು ಬಿಗ್ ಫೈಟ್

ಇಬ್ಬರೂ ವಿದ್ಯಾರ್ಥಿನಿಯರೂ ನಗರದ ಪ್ರತಿಷ್ಠಿತ ಕಾಲೇಜ್‌ನಲ್ಲಿ ಓದುತ್ತಿದ್ದರು ಎನ್ನಲಾಗಿದೆ. ಒಂದೇ ಕಾಲೇಜ್‌ನಲ್ಲಿ ಜ್ಯೂನಿಯರ್, ಸೀನಿಯರ್  ವಿದ್ಯಾರ್ಥಿಗಳಾಗಿದ್ದರು ಎನ್ನಲಾಗುತ್ತಿದೆ. ಚೆನ್ನೈನ ಅಣ್ಣಾ ಬಸ್ ನಿಲ್ದಾಣಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜ್ ವಿದ್ಯಾರ್ಥಿಗಳು ಬರುತ್ತಾರೆ. ಅಂದೂ ಕೂಡ ಹೆಚ್ಚಿನ ವಿದ್ಯಾರ್ಥಿಗಳು ಅಲ್ಲಿ ನಿಂತು ಬಸ್‌ಗಾಗಿ ಕಾಯುತ್ತಿದ್ದರು. ಆಗ ಈ ಇಬ್ಬರು ವಿದ್ಯಾರ್ಥಿನಿಯರ ನಡುವೆ ಮಾತಿಗೆ ಮಾತು ಬೆಳೆದಿದೆ.

ಇದನ್ನೂ ಓದಿ: Viral News: ಸತ್ತ ಅಂತ ಸಮಾಧಿ ಮಾಡಿ ಬಂದರು, ಮರುದಿನ ಮನೆ ಬಾಗಿಲು ತೆರೆದರೆ ಅವನೇ ನಿಂತಿದ್ದ!

 ಒಬ್ಬನೇ ಪ್ರೇಮಿಗಾಗಿ ಇಬ್ಬರು ಹುಡುಗಿಯರ ಕಿತ್ತಾಟ

ಒಬ್ಬ ಪ್ರೇಮಿಗಾಗಿ ಇಬ್ಬರು ಹುಡುಗಿಯರು ಫೈಟ್ ಮಾಡಿದ್ದಾರೆ. ಅವರಿಬ್ಬರು ಒಬ್ಬನ್ನೇ ಪ್ರೀತಿಸುತ್ತಾ ಇದ್ದರು ಎನ್ನಲಾಗಿದೆ. ನನ್ನ ಹುಡುಗನ ಜೊತೆ ನೀನ್ಯಾಕೆ ಮಾತನಾಡುತ್ತೀಯಾ ಅಂತ ಒಬ್ಬಳು ಕೇಳಿದ್ದಾಳೆ. ಆತ ನನ್ನ ಲವರ್ ಅಂತ ಮತ್ತೊಬ್ಬಳು ಹೇಳಿದ್ದಾಳೆ. ಆಗ ಮಾತಿಗೆ ಮಾತು ಬೆಳೆದು ಇಬ್ಬರೂ ಕೈಕೈ ಮಿಲಾಯಿಸಿದ್ದಾರೆ.

ಜಗಳ ಬಿಡಿಸಿದ ವಿದ್ಯಾರ್ಥಿಗಳು

ವಿದ್ಯಾರ್ಥಿನಿಯರ ಜಗಳ ನೋಡಿ ಅಲ್ಲಿದ್ದವರೆಲ್ಲ ಶಾಕ್ ಆಗಿದ್ದಾರೆ. ಕೆಲ ವಿದ್ಯಾರ್ಥಿನಿಯರಂತೂ ಹೆದರಿ ಓಡಿ ಹೋಗಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ ಹುಡುಗನೊಬ್ಬ ಹರ ಸಾಹಸ ಮಾಡಿ ಅವರಿಬ್ಬರ ಜಗಳ ನಿಲ್ಲಿಸಿದ್ದಾನೆ.ವೈರಲ್ ಆಯ್ತು ಹುಡುಗಿಯರ ಫೈಟ್

ಹುಡುಗಿಯರು ಹೀಗೆ ಜಡೆ ಹಿಡಿದು ಹೊಡೆದಾಡುವ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಈ ದೃಶ್ಯಗಳೀಗೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: Crime News: ಮಾವನ ಮಗಳ ಹೃದಯ ಕದ್ದವ, ಪಕ್ಕದ ಮನೆ ಚಿನ್ನವನ್ನೂ ಕದ್ದಿದ್ದ! ಅರೆಸ್ಟ್ ಆಗಿದ್ದು ಹೇಗೆ 'ಚೋರ' ಚಿತ್ತ ಚೋರ?

ತನಿಖೆಗೆ ಆದೇಶಿಸಿದ ಕಾಲೇಜು ಆಡಳಿತ ಮಂಡಳಿ

ಇನ್ನು ಘಟನೆ ಸಂಬಂಧಿಸಿದಂತೆ ಯಾವೊಬ್ಬ ವಿದ್ಯಾರ್ಥಿಯೂ ಪೊಲೀಸರಿಗೆ ದೂರು ನೀಡಿಲ್ಲ ಎನ್ನಲಾಗಿದೆ. ಈ ಹುಡುಗಿಯರ ನಡು ಬೀದಿ ಫೈಟ್ ವಿಚಾರ ಕಾಲೇಜು ಆಡಳಿತ ಮಂಡಳಿಗೂ ತಲುಪಿದೆ. ಸದ್ಯ ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.
Published by:Annappa Achari
First published: