ಆಂಧ್ರಕ್ಕೆ ವಿಶೇಷ ಸ್ಥಾನಮಾನ: ಸಿಎಂ ಜಗನ್ ಮತ್ತು ನಾಯ್ಡು ನಡುವೆ ಮುಂದುವರಿದ ಹಗ್ಗಜಗ್ಗಾಟ

ಈಗಾಗಲೇ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಹೊಸದಾಗಿ ಚುನಾಯಿತರಾಗಿರುವ ಸಂಸತ್ ಸದಸ್ಯರ ಸಂಸದೀಯ ಪಕ್ಷದ ಸಭೆ ನಡೆದಿದೆ.

Ganesh Nachikethu | news18
Updated:June 18, 2019, 6:58 PM IST
ಆಂಧ್ರಕ್ಕೆ ವಿಶೇಷ ಸ್ಥಾನಮಾನ: ಸಿಎಂ ಜಗನ್ ಮತ್ತು ನಾಯ್ಡು ನಡುವೆ ಮುಂದುವರಿದ ಹಗ್ಗಜಗ್ಗಾಟ
ಸಿಎಂ ಚಂದ್ರಬಾಬು ನಾಯ್ಡು, ವೈಎಸ್​​​ ಜಗನ್​​ ಮೋಹನ್​ ರೆಡ್ಡಿ
Ganesh Nachikethu | news18
Updated: June 18, 2019, 6:58 PM IST
ನವದೆಹಲಿ(ಜೂನ್​​.18): ಆಂಧ್ರಪ್ರದೇಶಕ್ಕೆ ವಿಶೇಷ ಅನುದಾನ ತರಲೇಬೇಕೆಂದು ಸಿಎಂ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ವೈಎಸ್​ಆರ್​​ ಕಾಂಗ್ರೆಸ್​​ ಸರ್ಕಾರ ಪಟ್ಟು ಹಿಡಿದು ಕೆಲಸ ಮಾಡುತ್ತಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ನೀತಿ ಆಯೋಗ ಸಭೆಯಲ್ಲೂ, ಸಿಎಂ ಜಗನ್​​ ತೆಲುಗಿನವರಿಗೆ ಸ್ಪೆಷಲ್ ಕೆಟಗಿರಿ ನೀಡಲೇಬೇಕೆಂದು ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ಈ ಮಧ್ಯೆ ಎಂದಿನಂತೆಯೇ ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮತ್ತು ಸಿಎಂ ಜಗನ್​ ಮೋಹನ್​​ ರೆಡ್ಡಿ ನಡುವೆ ವಾಗ್ವಾದ ಮುಂದುವರಿದಿದೆ.

ಮುಖ್ಯಮಂತ್ರಿ ಜಗನ್​ ಮೋಹನ್​​ ರೆಡ್ಡಿ, ರಾಜ್ಯಕ್ಕೆ ವಿಶೇಷ ಅನುದಾನ ಸಿಗದೇ ಹೋಗಲು ಹಿಂದಿನ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರವೇ ಎಂದು ಆರೋಪಿಸಿದ್ದಾರೆ. ಹಾಗಾಗಿ ಇಂದು ವಿಧಾನಸಭೆಯಲ್ಲಿ ವೈಎಸ್​ಆರ್​​ ಕಾಂಗ್ರೆಸ್​​ ಮತ್ತು ತೆಲುಗು ದೇಶಂ ಪಕ್ಷದ ಶಾಸಕರ ನಡುವೇ ಭಾರೀ ಗದ್ದಲ ಸಂಭವಿಸಿದೆ. ಉಭಯ ಪಕ್ಷಗಳ ಶಾಸಕರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದರು.

ಕಳೆದ ಐದು ವರ್ಷಗಳಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಒಮ್ಮೆಯೂ ಆಂಧ್ರಕ್ಕೆ ವಿಶೇಷ ಅನುದಾನ ತರುವ ಪ್ರಯತ್ನ ಮಾಡಲಿಲ್ಲ. ಕೇಂದ್ರ ನೀತಿ ಆಯೋಗಕ್ಕೆ ಕನಿಷ್ಠ ಒಂದು ಪತ್ರ ಕೂಡ ಬರೆಯಲಿಲ್ಲ. ತಮ್ಮ ಆಡಳಿತಾವಧಿಯಲ್ಲಿ ರಾಜ್ಯದ ಸಂಪತ್ತು ಲೂಟಿಗೈದರೇ ಹೊರತು,  ಸ್ಪೆಷಲ್ ಕೆಟಗಿರಿ ಬಗ್ಗೆ ಚಕಾರವೆತ್ತಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ನೀತಿ ಆಯೋಗ ಸಭೆಗೆ ಸಿಎಂ ಜಗನ್​​: ಆಂಧ್ರದ ವಿಶೇಷ ಸ್ಥಾನಮಾನಕ್ಕಾಗಿ ಪಟ್ಟು

ಇನ್ನು ವಿಪಕ್ಷ ನಾಯಕರಾಗಿರುವ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಕೂಡ ಸಿಎಂ ಜಗನ್​​ ಮೋಹನ್​​ ರೆಡ್ಡಿ ಆರೋಪಕ್ಕೆ ತಿರುಗೇಟು ನೀಡಿದರು. "ನಾನು ವಿಶೇಷ ಅನುದಾನ ವಿಚಾರವಾಗಿ ದೆಹಲಿಗೆ 29 ಬಾರಿ ಹೋಗಿದ್ದೇನೆ. ಜನ ಕೂಡ ನಮ್ಮನ್ನು ನಂಬಿ 22 ಸಂಸದರನ್ನು ಗೆಲ್ಲಿಸಿದ್ದರು. ನೀವು ಕೂಡ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ ಮಾಡಬೇಕು. ಸರ್ಕಾರದ ನಿರ್ಧಾರಕ್ಕೆ ನಾವು ಯಾವಾಗಲೂ ಬದ್ಧ" ಎಂದು ವೈಎಸ್​ಆರ್​​ ಕಾಂಗ್ರೆಸ್​​ಗೆ ಕಿವಿಮಾತು ಹೇಳಿದರು.

ಈಗಾಗಲೇ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಹೊಸದಾಗಿ ಚುನಾಯಿತರಾಗಿರುವ ಸಂಸತ್ ಸದಸ್ಯರ ಸಂಸದೀಯ ಪಕ್ಷದ ಸಭೆ ನಡೆದಿದೆ. ಈ ಸಭೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಲೋಕಸಭೆಯ ಎಲ್ಲಾ 22 ಸಂಸದರು ಮತ್ತು ರಾಜ್ಯಸಭೆಯ 2 ಸಂಸದರು ಭಾಗವಹಿಸಿದ್ದರು.

ಇದನ್ನೂ ಓದಿ: ರೆಡ್ಡಿಯ ಪ್ರತೀಕಾರ, ಆಂಧ್ರದ ಶಾಪ, ಸೋನಿಯಾರ ನಿಂದನೆ: ಜಗನ್​​ ಮೋಹನ್​​​ ಬೆಳೆದ ಕಥೆ ರೋಚಕ

ಸಂಸತ್ ಅಧಿವೇಶನ ಆರಂಭವಾಗುತ್ತಿದೆ. ನಾವು ಯಾವ ವಿಚಾರಗಳ ಪ್ರಸ್ತಾಪ ಮಾಡಬೇಕು ಎಂಬುದರ ಸುತ್ತ ಸಭೆಯಲ್ಲಿ ಚರ್ಚಿಸಲಾಗಿದೆ. ಪ್ರಮುಖವಾಗಿ ರಾಜ್ಯ ವಿಭಜನೆ ಸಂದರ್ಭದಲ್ಲಿ ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುತ್ತೇವೆ ಎಂದಿದ್ದ ಕೇಂದ್ರದ ವಿರುದ್ಧ ಹೋರಾಟಕ್ಕೆ ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.
------------
First published:June 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...