16 ವರ್ಷದ ಬಾಲಕಿಗೆ 66 ವರ್ಷದವನಿಂದ ಲವ್ ಲೆಟರ್; ಪೊಲೀಸರ ಅತಿಥಿಯಾದ ಪೋಲಿ ತಾತ!

ತಮಿಳುನಾಡಿನ ಕೊಯಮತ್ತೂರಿನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಗೆ 66 ವರ್ಷದ ವೃದ್ಧ ಲವ್ ಲೆಟರ್ ನೀಡಿ, ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಆ ಲವ್ ಲೆಟರ್​ ಅನ್ನು ಆಕೆ ತನ್ನ ಅಪ್ಪ-ಅಮ್ಮನಿಗೆ ತೋರಿಸಿದ್ದಾಳೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಕೊಯಮತ್ತೂರು: ತನ್ನ ಮೊಮ್ಮಗಳ ವಯಸ್ಸಿನ ಹುಡುಗಿಗೆ ಲವ್ ಲೆಟರ್ ಕೊಟ್ಟಿರುವ ಪಕ್ಕದ ಮನೆಯ ತಾತ ಈಗ ಪೊಲೀಸರ ಅತಿಥಿಯಾಗಿದ್ದಾರೆ. ತಾತನ ವಯಸ್ಸಿನವರು ಎಂಬ ಸಲುಗೆಯಿಂದ ಆಗಾಗ ಮಾತನಾಡುತ್ತಿದ್ದ ಯುವತಿ ಕೈಯಲ್ಲಿ ಲೆಟರ್ ಕೊಟ್ಟ ಆ ವ್ಯಕ್ತಿ 'ಐ ಲೈಕ್ ಯೂ.. ನಿನಗೂ ನಾನು ಅಂದ್ರೆ ಇಷ್ಟಾನಾ?' ಎಂದು ಕೇಳಿದ್ದಾರೆ.

  ತಮಿಳುನಾಡಿನ ಕೊಯಮತ್ತೂರಿನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಗೆ 66 ವರ್ಷದ ವೃದ್ಧ ಲವ್ ಲೆಟರ್ ನೀಡಿದ್ದಾನೆ. ಆ ಲವ್ ಲೆಟರ್​ ಅನ್ನು ಆಕೆ ತನ್ನ ಅಪ್ಪ-ಅಮ್ಮನಿಗೆ ತೋರಿಸಿದ್ದಾಳೆ. 'ನೀನಂದ್ರೆ ನನಗಿಷ್ಟ. ನಿನಗೂ ನಾನಂದ್ರೆ ಇಷ್ಟಾನಾ?' ಎಂದು ಲವ್ ಲೆಟರ್​ನಲ್ಲಿ ಬರೆದಿದ್ದನ್ನು ಕಂಡು ಕೆಂಡಾಮಂಡಲರಾದ ಯುವತಿಯ ಅಪ್ಪ-ಅಮ್ಮ ಆ ಲೆಟರ್ ಅನ್ನು ಹಿಡಿದುಕೊಂಡು ಆತನ ಮನೆಗೆ ಹೋಗಿ ಗಲಾಟೆ ಮಾಡಿದ್ದಾರೆ. ಆ ವೃದ್ಧನ ಮನೆಯವರು ಕ್ಷಮೆ ಕೇಳಿ ಈ ವಿಷಯವನ್ನು ಮರೆತುಬಿಡುವಂತೆ ಕೇಳಿಕೊಂಡಿದ್ದಾರೆ. ಆದರೆ, ವಿಷಯ ಅಲ್ಲಿಗೇ ಮುಗಿಯಲಿಲ್ಲ.

  ಇದನ್ನೂ ಓದಿ: ದೃಶ್ಯ ಸಿನಿಮಾ ನೋಡಿ ಗಂಡನ ಹತ್ಯೆ; ಮೈಸೂರಿನಲ್ಲಿ ಹೆಂಡತಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

  ಆ ಬಾಲಕಿಯನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ಮತ್ತೆ ತನ್ನ ಪ್ರೀತಿಯನ್ನು ವೃದ್ಧ ಹೇಳಿಕೊಂಡಿದ್ದಾನೆ. ಇದರಿಂದ ಹುಡುಗಿ ಮನೆಯಿಂದ ಹೊರಗೆ ಬರಲು ಹೆದರಿ ಕೆಲವು ದಿನಗಳ ಕಾಲ ಮನೆಯೊಳಗೇ ಇದ್ದಳು. ಮಗಳಿಗೆ ಆತನಿಂದ ಇನ್ನೂ ಕಾಟ ತಪ್ಪಿಲ್ಲ ಎಂಬ ಕೋಪದಲ್ಲಿ ಆಕೆಯ ಅಪ್ಪ-ಅಮ್ಮ ಪೊಲೀಸರಿಗೆ ನೀಡಿ ದೂರು ಸಲ್ಲಿಸಿದ್ದಾರೆ. ಆ ದೂರಿನನ್ವಯ ವೃದ್ಧನನ್ನು ಬಂಧಿಸಲಾಗಿದೆ. 66 ವರ್ಷದ ಮೊಹಮ್ಮದ್ ಬಹೀರ್ ಬಾಷಾ ಎಂಬಾತನೇ ತನ್ನ ಪಕ್ಕದ ಮನೆಯ 16 ವರ್ಷದ ಬಾಲಕಿಗೆ ಲವ್ ಲೆಟರ್ ನೀಡಿದಾತ. ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
  Published by:Harshith AS
  First published: