First Flight: ಮೊದಲ ಬಾರಿ ವಿಮಾನ ಹತ್ತಿದ 15 ಅನಾಥ ಮಕ್ಕಳು..! ಅವರ ಖುಷಿ ಬೆಲೆಕಟ್ಟಲಾಗದ್ದು

ಈ ಪುಟ್ಟ ಮಕ್ಕಳಿಗಾಗಿ ವಿಮಾನದಲ್ಲಿ ಹಾರುವ ಅವಕಾಶ ಸಿಕ್ಕಿದೆ. ಮಕ್ಕಳು ಖುಷಿಯಾಗಿ ಸಿಕ್ಕಿದ ಅವಕಾಶವನ್ನು ಆನಂದಿಸಿದ್ದಾರೆ. ಮಕ್ಕಳೆಲ್ಲರೂ ತಮ್ಮ ಮೊದಲ ವಿಮಾನ ಯಾನವನ್ನು ಖುಷಿ ಖುಷಿಯಾಗಿ ಮಾಡಿದ್ದು ಆ ಸಮಯವನ್ನು ಸುಂದರವಾಗಿಸಿದ್ದಾರೆ.

ವಿಮಾನ

ವಿಮಾನ

  • Share this:
ದೊಡ್ಡವರಿರಲಿ, ಚಿಕ್ಕವರಿರಲಿ ಎಲ್ಲರಿಗೂ ಚಿಕ್ಕ ಪುಟ್ಟ ಆಸೆಗಳು ಇದ್ದೇ ಇರುತ್ತವೆ. ಕೆಲವೊಂದು ಸುಂದರ ಆಸೆಗಳು ಅಷ್ಟೇನೂ ದೊಡ್ಡದಾಗಿರುವುದಿಲ್ಲ. ಆದರೆ ಅವರ ಕೈಗೆಟುಕುವಂತಿರಲ್ಲ ಅಷ್ಟೆ. ಅನಾಥಾಶ್ರಮದ ಮಕ್ಕಳು ವಿಮಾನ ಏರಿ ಹಾರಿದ್ದು ಒಂದು ಸುಂದರ ಘಟನೆ. ನಿತ್ಯ ಬಾನಲ್ಲಿ ಚಿಕ್ಕ ಚುಕ್ಕಿಯಂತೆ ಹಾರಿ ಹೋಗುತ್ತಿದ್ದ ವಿಮಾನದಲ್ಲಿ ಖುಷಿ ಖುಷಿಯಾಗಿ ಪ್ರಯಾಣಿಸಿದ್ದಾರೆ ಕೊಯಮತ್ತೂರಿನ 15 ಜನ ಅನಾಥ ಮಕ್ಕಳು. ಆಕಾಶದಲ್ಲಿ(Sky) ಹಾರುವ ಲೋಹದ ಹಕ್ಕಿಯನ್ನು ದೂರದಿಂದ ನೋಡುವುದು ಬಿಟ್ಟು ಎಂದೂ ತಾವು ಅದರಲ್ಲಿ ಪ್ರಯಾಣಿಸಬಹುದೆಂದು ಆ ಮಕ್ಕಳು ಯೋಚಿಸಿಯೇ ಇರಲಿಲ್ಲ. ಆದರೆ ಅದೃಷ್ಟ (Luck) ಬೇರೆಯೇ ಇತ್ತು. ಈ ಪುಟ್ಟ ಮಕ್ಕಳಿಗಾಗಿ ವಿಮಾನದಲ್ಲಿ ಹಾರುವ ಅವಕಾಶ ಸಿಕ್ಕಿದೆ. ಮಕ್ಕಳು ಖುಷಿಯಾಗಿ ಸಿಕ್ಕಿದ ಅವಕಾಶವನ್ನು (Opportunity) ಆನಂದಿಸಿದ್ದಾರೆ. ಮಕ್ಕಳೆಲ್ಲರೂ ತಮ್ಮ ಮೊದಲ ವಿಮಾನ ಯಾನವನ್ನು ಖುಷಿ ಖುಷಿಯಾಗಿ ಮಾಡಿದ್ದು ಆ ಸಮಯವನ್ನು ಸುಂದರವಾಗಿಸಿದ್ದಾರೆ.

ಹದಿನಾರರ ಹರೆಯದ ವಿ ಸೋಬಿಯಾ ತಾನು ಒಮ್ಮೆಲೆ ಆಕಾಶದಲ್ಲಿ ರೆಕ್ಕೆ ಬಡಿಯದೆ ಹಾರಾಡುವುದನ್ನು ಮೋಹದಿಂದ ನೋಡುತ್ತಿದ್ದಳು. ದೊಡ್ಡ ಹಕ್ಕಿಯಂತಹ ವಿಮಾನವನ್ನು ಒಂದು ದಿನ ತಾನೂ ಹತ್ತಬಹುದೆಂದು ಎಂದೂ ಊಹಿಸಿರಲಿಲ್ಲ.

ಮೋಡಹಳ ನಡುವಿನಲ್ಲಿ ಪುಟ್ಟ ಮಕ್ಕಳು

ಅವರು ಶನಿವಾರದಂದು ಮೋಡದ ನಡುವಿನಲ್ಲಿದ್ದರು. ಅಂದುಕೊಂಡಿರದ ಘಟನೆ ಸಂಭವಿಸಿತು. ನಗರದ ಹೊರವಲಯದಲ್ಲಿರುವ ಕಿಣತಕಡವುನಲ್ಲಿರುವ ಅನಾಥ ಮಕ್ಕಳ ಆಶ್ರಯದಲ್ಲಿರುವ ಶರಣಾಲಯದ 15 ವಿದ್ಯಾರ್ಥಿಗಳಲ್ಲಿ ಒ್ಬಬರಾಗಿರುವ ಸೋಬಿಯಾ ಅವರು ನಗರದಿಂದ ಚೆನ್ನೈಗೆ ಹಾರಿದ್ದರು.

ಇದನ್ನೂ ಓದಿ: Viral Video: ಸಕ್ಕರೆ ಪ್ಯಾಕೆಟ್ ಹಿಡಿದು ಮ್ಯಾಜಿಕ್ ಮಾಡಿದ..! ನೆಟ್ಟಿಗರು ಕನ್ಫ್ಯೂಸ್

ಅವರೆಲ್ಲರಿಗೂ ಇದು ಮೊದಲ ಹಾರಾಟದ ಅನುಭವವಾಗಿತ್ತು. ಅವರ ಪ್ರಯಾಣದ ವೆಚ್ಚವನ್ನು ಭರಿಸಿದ್ದು ನಗರದ ಎನ್‌ಜಿಒಗಳ ಒಂದು ಕೂಟ. ವಿಮಾನವು ರನ್‌ವೇಯಿಂದ ಟೇಕಾಫ್ ಆಗುವಾಗ ನನಗೆ ಭಯವಾಯಿತು. ಆದರೆ ನಾನು ನಂತರ ಆರಾಮವಾಗಿದ್ದೆ ಎಂದಿದ್ದಾಳೆ ಸೋಬಿಯಾ.

ಮೊದಲ ಹಾರಾಟದ ಅನುಭವ ಎಂದಿಗೂ ಮರೆಯಲ್ಲ ಎಂದ ಮಕ್ಕಳು

ವಿಮಾನದಲ್ಲಿದ್ದ 12 ನೇ ತರಗತಿ ವಿದ್ಯಾರ್ಥಿ ಜೆ ಮಣಿಕಂಠನ್ ಅವರು ಮೊದಲ ವಿಮಾನದಲ್ಲಿ ಹಾರಿದ ಅನುಭವವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ನಂತರ, ಎನ್‌ಜಿಒ ಸದಸ್ಯರು ನಮ್ಮನ್ನು ಅಣ್ಣಾನಗರ ಬಳಿಯ ಮಾಲ್‌ಗೆ ಕರೆದೊಯ್ದರು.

ಇದನ್ನೂ ಓದಿ: Earn 5 Lakh: ಕಾರ್ಟೂನ್ ನೋಡ್ತಾ ಡೋನಟ್ಸ್ ತಿನ್ನೋ ಕೆಲಸಕ್ಕೆ 5 ಲಕ್ಷ ಸಂಬಳ! ನೀವೂ ಅಪ್ಲೈ ಮಾಡ್ತೀರಾ?

ರಾತ್ರಿ ಮತ್ತೊಂದು ವಿಮಾನದಲ್ಲಿ ನಗರಕ್ಕೆ ಹೋಗುತ್ತೇವೆ ಎಂದಿದ್ದಾರೆ. ಈ ಮಕ್ಕಳನ್ನು ಹಾರಿಸಿದ ಕೀರ್ತಿ ಕೊಯಮತ್ತೂರು ನಾರ್ತ್ ರೌಂಡ್ ಟೇಬಲ್ 20, ಕೊಯಮತ್ತೂರು ನಾರ್ತ್ ಲೇಡೀಸ್ ಸರ್ಕಲ್ 11 ಮತ್ತು ಮದ್ರಾಸ್ ಆಂಕಾರೇಜ್ ರೌಂಡ್ ಟೇಬಲ್ 100ಗೆ ಸಲ್ಲುತ್ತದೆ.

ಮಕ್ಕಳ ಕನಸನ್ನು ನನಸಾಗಿಸಿದ ಎನ್​​ಜಿಒ

ಕೊಯಮತ್ತೂರು ನಾರ್ತ್ ರೌಂಡ್ ಟೇಬಲ್ 20 ರ ಅಧ್ಯಕ್ಷರಾದ ದೀಪೇಂದರ್ ಸಿಂಗ್, ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಾರುವ ಬಯಕೆಯನ್ನು ಹೇಳಿದರು. ನಾವು ಅವರ ಕನಸುಗಳನ್ನು ನನಸಾಗಿಸಲು ಬಯಸಿದ್ದೇವೆ. ಮಕ್ಕಳನ್ನು ಕನಸುಗಳೊಂದಿಗೆ ಪ್ರೇರೇಪಿಸಲು ನಾವು ಬಯಸುತ್ತೇವೆ, ಏಕೆಂದರೆ ಅವರು ದೃಷ್ಟಿ ಹೊಂದಿರುವ ವಯಸ್ಕರಾಗುತ್ತಾರೆ.

ಮಕ್ಕಳ ಮುಖದಲ್ಲಿ ನಗು ತುಂಬುವ ಪ್ರಯತ್ನ

ಚೆನ್ನೈಗೆ ಬಂದ ನಂತರ, ಅವರು ಮಕ್ಕಳನ್ನು ಮಾಲ್‌ಗೆ ಕರೆದೊಯ್ದರು, ಅಲ್ಲಿ ಅವರು ಊಟ ಮಾಡಿದರು ಮತ್ತು ಗೇಮಿಂಗ್ ಅರೇನಾವನ್ನು ಆನಂದಿಸಿದರು. ಈ ಉಪಕ್ರಮವು ಅವರು ಅರ್ಹವಾದ ಸಂತೋಷದಿಂದ ವಂಚಿತರಾದ ಮಕ್ಕಳ ಮುಖದಲ್ಲಿ ನಗು ತರಲು ಯೋಜಿಸಲಾಗಿದೆ ಎಂದಿದ್ದಾರೆ.
Published by:Divya D
First published: