ಟ್ರಂಪ್​ ಜತೆಗೆ ವಾಗ್ವಾದದ ವೇಳೆ ಮಹಿಳಾ ಸಿಬ್ಬಂದಿ ಮೈ ಮುಟ್ಟಿದರು ಎಂದು ಸಿಎನ್​ಎನ್​ ಪತ್ರಕರ್ತನ ಪ್ರೆಸ್​ ಪಾಸ್​ ಮುಟ್ಟುಗೋಲು

ಅಮೆರಿಕ ಮಧ್ಯಂತರ ಚುನಾವಣೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಟ್ರಂಪ್​ ಅವರು ಪತ್ರಕರ್ತ ಜಿಮ್ ಅಕೋಸ್ಟಾ ಒಬ್ಬ ಭಯಾನಕ, ಕ್ರೂರ ವ್ಯಕ್ತಿ ಎಂದು ಜರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಎನ್​ಎನ್​ ವರದಿಗಾರರನ್ನು ಕುಳಿತುಕೊಳ್ಳುವಂತೆ ಹಾಗೂ ಮೈಕ್​ ಕಿತ್ತುಕೊಳ್ಳುವಂತೆ ಟ್ರಂಪ್ ಆದೇಶ ನೀಡಿದರು.

HR Ramesh | news18
Updated:November 8, 2018, 5:45 PM IST

Updated: November 8, 2018, 5:45 PM IST
ನ್ಯೂಸ್ 18 ಕನ್ನಡ

ವಾಷಿಂಗ್ಟನ್ (ನ.8): ಪತ್ರಕರ್ತರನ್ನು ಜನರ ವೈರಿಗಳು ಎಂದು ಬಿಂಬಿಸಲು ಮುಂದಾದ ಅಮೆರಿಕ ಅಧ್ಯಕ್ಷ  ಡೋನಾಲ್ಡ್​ ಟ್ರಂಪ್ ಅವರೊಂದಿಗೆ ಮಾತಿಗೆ ನಿಂತ ಸಿಎನ್​ಎನ್​ ವರದಿಗಾರರ ಪ್ರೆಸ್​ ಪಾಸ್​ಅನ್ನು ಶ್ವೇತಭವನ ಮುಟ್ಟುಗೋಲು ಹಾಕಿಕೊಂಡಿದೆ.

ಅಮೆರಿಕ ಮಧ್ಯಂತರ ಚುನಾವಣೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಟ್ರಂಪ್​ ಅವರು ಪತ್ರಕರ್ತ ಜಿಮ್ ಅಕೋಸ್ಟಾ ಒಬ್ಬ ಭಯಾನಕ, ಕ್ರೂರ ವ್ಯಕ್ತಿ ಎಂದು ಜರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಎನ್​ಎನ್​ ವರದಿಗಾರರನ್ನು ಕುಳಿತುಕೊಳ್ಳುವಂತೆ ಹಾಗೂ ಮೈಕ್​ ಕಿತ್ತುಕೊಳ್ಳುವಂತೆ ಟ್ರಂಪ್ ಆದೇಶ ನೀಡಿದರು.
ಮುಂದಿನ ನೋಟಿಸ್​ ನೀಡುವವರೆಗೂ ವರದಿಗಾರನ ಪ್ರೆಸ್​ ಪಾಸ್​ಅನ್ನು ಶ್ವೇತಭವನ ವಜಾಗೊಳಿಸಿದೆ ಎಂದು ಶ್ವೇತಭವನದ ವಕ್ತಾರರಾದ ಸಾರಾ ಸ್ಯಾಂಡರ್ಸ್ ಅವರು​ ಅಕೋಸ್ಟಾರ ಟ್ವೀಟ್​ಅನ್ನು ಉಲ್ಲೇಖಿಸಿ, ಶ್ವೇತಭವನಕ್ಕೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಟ್ರಂಪ್​ಗೆ ಪ್ರಶ್ನೆಗಳನ್ನು ಕೇಳುತ್ತಿದ್ದ ಪತ್ರಕರ್ತನಿಗೆ ಇಲ್ಲಿಗೆ ಸಾಕು ನಿಲ್ಲಿಸು ಎಂದು ಟ್ರಂಪ್​ ಹೇಳಿದ್ದಾರೆ. ಆಗ ವೈಟ್​ಹೌಸ್​ನ ಮಹಿಳಾ ಸಿಬ್ಬಂದಿ ಸಿಎನ್​ಎನ್​ ಪತ್ರಕರ್ತನ ಬಳಿ ಬಂದು ಅವರ ಬಳಿಯಿದ್ದ ಮೈಕ್​ ಕಿತ್ತುಕೊಳ್ಳಲು ಮುಂದಾದರು. ಈ ವೇಳೆ ಮೈಕ್ ಕೊಡದೆ ಪತ್ರಕರ್ತ, ಆ ಸಿಬ್ಬಂದಿಯನ್ನು ಕೈಯಿಂದ ಮುಟ್ಟಿ, ತನ್ನ ಪ್ರಶ್ನೆಯನ್ನು ಮುಂದುವರೆಸಿದ್ದಾರೆ.

ಅಧ್ಯಕ್ಷ ಟ್ರಂಪ್​ ಅವರು ಮಾಧ್ಯಮ ಸ್ವಾತಂತ್ರ್ಯವನ್ನು ನಂಬುತ್ತಾರೆ ಮತ್ತು ಅವರ ಆಡಳಿತದಲ್ಲಿ ಪ್ರಶ್ನೆಗಳನ್ನು ಮುಕ್ತವಾಗಿ ಸ್ವಾಗತಿಸಲಾಗಿದೆ ಎಂದು ಸ್ಯಾಂಡರ್ಸ್​ ಹೇಳಿದ್ದಾರೆ.
Loading...

ಶ್ವೇತಭವನದ ಮಹಿಳಾ ಸಿಬ್ಬಂದಿ ತನ್ನ ಕೆಲಸ ಮಾಡಲು ಮುಂದಾದಾಗ ಆಕೆಯನ್ನು ವರದಿಗಾರ ತನ್ನ ಕೈಗಳಿಂದ ಮುಟ್ಟಿದ್ದನ್ನು ನಾವು ಎಂದಿಗೂ ಸಹಿಸುವುದಿಲ್ಲ. ಈ ಘಟನೆ ಸ್ವೀಕಾರ್ಹವಲ್ಲ ಎಂದು ಅವರು ಹೇಳಿದ್ದಾರೆ.

ಶ್ವೇತಭವನದ ಆರೋಪವನ್ನು ತಳ್ಳಿ ಹಾಕಿರುವ ಅಕೋಸ್ಟಾ ಅವರು ಇದು ಶುದ್ಧ ಸುಳ್ಳು ಎಂದು ಹೇಳಿದ್ದಾರೆ. ಅಂದು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ವಾಷಿಂಗ್ಟನ್​ನ ಹಲವು ಪತ್ರಕರ್ತರು ಅಕೋಸ್ಟಾ ಅವರನ್ನು ಬೆಂಬಲಿಸಿ, ಟ್ವೀಟ್​ ಮಾಡಿದ್ದಾರೆ.

<iframe width="560" height="315" src="https://www.youtube.com/embed/UEojZQJ_KXM" frameborder="0" allow="accelerometer; autoplay; encrypted-media; gyroscope; picture-in-picture" allowfullscreen></iframe>ಇವರಿಬ್ಬರ ನಡುವಿನ ಜಗಳಕ್ಕೆ ಈಗ ದೊಡ್ಡ ಇತಿಹಾಸವಾಗಿದೆ.

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ಅಕೋಸ್ಟಾ, ಮಧ್ಯಂತರ ಚುನಾವಣೆಯ ಪ್ರಚಾರದ ವೇಳೆ ವಲಸಿಗರನ್ನು ಅಮಾನ್ಯ ಮಾಡುವುದಾಗಿ ಹೇಳಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಟ್ರಂಪ್, ಇಲ್ಲ, ಅವರು ನಮ್ಮ ದೇಶಕ್ಕೆ ಬರಲಿ. ಆದರೆ, ಕಾನೂನು ರೀತ್ಯಾ ಅವರು ಇಲ್ಲಿಗೆ ಬರಲಿ ಎಂದಿದ್ದಾರೆ. ಮುಂದುವರೆದು ಅಕೋಸ್ಟಾ ಅವರು, ಅವರು ನೂರಾರು ಮೈಲಿ ದೂರದಲ್ಲಿದ್ದಾರೆ. ಇದು ಅತಿಕ್ರಮಣವಲ್ಲವೇ ಎಂದು ಮರುಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಟ್ರಂಪ್​, ಪ್ರಾಮಾಣಿಕವಾಗಿ ಹೇಳುತ್ತೇನೆ. ಬಹುಶಃ ನಾನೇ ಈ ದೇಶ ಬಿಟ್ಟು ಹೋಗಬೇಕು ಎಂಬುದು ಉದ್ದೇಶ ಇರುವಿರುವಂತೆ ಕಾಣುತ್ತದೆ. ನಾನು ಹಾಗೆ ಓಡಿಹೋದರೆ, ನಿಮ್ಮ ಸಿಎನ್​ಎನ್​ ಚೆನ್ನಾಗಿ ಓಡುತ್ತದೆ. ಒಳ್ಳೆಯ ಟಿಆರ್​ಪಿ ಸಿಗುತ್ತದೆ ಎಂದಿದ್ದಾರೆ. ಆಗ ಪತ್ರಕರ್ತ ಮಾತನಾಡಲು ಮುಂದಾದಾಗ, ಟ್ರಂಪ್​, ಇಲ್ಲಿಗೆ ಸಾಕು. ಮೈಕ್​ ಕೆಳಗಿಡಿ ಎಂದು ಹೇಳಿ, ತನ್ನ ಪೋಡಿಯಂ ಬಿಟ್ಟು ಬಂದಂತೆ ಬಂದರು.

ಇದನ್ನು ಓದಿ: ಅಮೆರಿಕ ಸಂಸತ್​​ ಮಧ್ಯಂತರ ಚುನಾವಣೆ: ಮೇಲ್ಮನೆ ಟ್ರಂಪ್​ಗೆ & ಕೆಳಮನೆ ವಿರೋಧಿಗಳಿಗೆ

ಆಗ ಶ್ವೇತಭವನ ಮಹಿಳಾ ಸಿಬ್ಬಂದಿ ಪತ್ರಕರ್ತನ ಬಳಿ ಬಂದು ಮೈಕ್​ ಕಿತ್ತುಕೊಳ್ಳಲು ಮುಂದಾದರು. ಕೊನೆ ಪ್ರಶ್ನೆ ಕೇಳಲು ಯತ್ನಿಸಿದ ಪತ್ರಕರ್ತ,  ಮೈಕ್​ ಕಿತ್ತುಕೊಳ್ಳಲು ಮುಂದಾದ ಮಹಿಳಾ ಸಿಬ್ಬಂದಿಯನ್ನು ತನ್ನ ಕೈಯಿಂದ ತಡೆದರು.

ಆಗ ಟ್ರಂಪ್​, ನಿಮ್ಮ ಕೆಲಸಕ್ಕೆ ಸಿಎನ್​ಎನ್​ಗೆ ನಾಚಿಕೆಯಾಗಬೇಕು. ನೀವು ಕ್ರೂರ ವ್ಯಕ್ತಿ. ನೀವು ಸಿಎನ್​ಎನ್​ಗೋಸ್ಕರ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ನಂತರ ಎನ್​ಬಿಸಿ ಪತ್ರಕರ್ತ ತಮ್ಮ ಪ್ರಶ್ನೆ ಕೇಳಲು ಮೈಕ್​ ಎತ್ತಿಕೊಂಡು, ಅಕೋಸ್ಟಾ ಪರವಾಗಿ ಮಾತನಾಡಿದರು. ನಾನು ನಿಮ್ಮ ಅಭಿಮಾನಿಯಲ್ಲ. ತುಂಬಾ ಪ್ರಾಮಾಣಿಕವಾಗಿ ಹೇಳುತ್ತೇನೆ ನೀವು ಉತ್ತಮರಲ್ಲ ಎಂದಿದ್ದಾರೆ.

ಮತ್ತೆ ಅಕೋಸ್ಟಾ ವಿರುದ್ಧ ಮಾತನಾಡಿದ ಟ್ರಂಪ್​, ನೀವು ಯಾವಾಗ ಸುಳ್ಳು ಸುದ್ದಿ ಮಾಡುತ್ತೀರೋ ಅವಾಗ ಸಿಎನ್​ಎನ್​ ಹೆಚ್ಚಿನದನ್ನು ಪಡೆದುಕೊಳ್ಳುತ್ತದೆ. ನೀವು ಜನಗಳ ಶತ್ರು ಎಂದು ಜರಿದರು.

First published:November 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ