• Home
 • »
 • News
 • »
 • national-international
 • »
 • UP Polls: ಸಂವಿಧಾನದ ಆಧಾರದ ಮೇಲೆ ದೇಶ ನಡೆಯತ್ತೆ, ಷರಿಯತ್​ ಕಾನೂನಿನ ಮೇಲೆ ಅಲ್ಲ; Yogi Adityanath

UP Polls: ಸಂವಿಧಾನದ ಆಧಾರದ ಮೇಲೆ ದೇಶ ನಡೆಯತ್ತೆ, ಷರಿಯತ್​ ಕಾನೂನಿನ ಮೇಲೆ ಅಲ್ಲ; Yogi Adityanath

ಯೋಗಿ ಆದಿತ್ಯನಾಥ್

ಯೋಗಿ ಆದಿತ್ಯನಾಥ್

ಇದು ಹೊಸ ಭಾರತ, ಇದು ವಿಶ್ವದ ಅತ್ಯಂತ ಜನಪ್ರಿಯ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಭಾರತ. ಈ ಹೊಸ ಭಾರತದಲ್ಲಿ ಎಲ್ಲರಿಗಾಗಿ ಅಭಿವೃದ್ಧಿ ನಡೆಸಲಾಗುತ್ತಿದ್ದು, ಇಲ್ಲಿ ಯಾರನ್ನೂ ಸಮಾಧಾನಪಡಿಸುವುದಿಲ್ಲ

 • Share this:

  ನವ ಭಾರತವು ಸಂವಿಧಾನದ (Constituation) ಪ್ರಕಾರ ಕಾರ್ಯನಿರ್ವಹಿಸುತ್ತದೆಯೇ ಹೊರತು ಷರಿಯತ್ ಕಾನೂನಿನ ಆಧಾರದ ಮೇಲೆ ಅಲ್ಲ. ಅಂತಿಮವಾಗಿ ಘಜ್ವಾ-ಎ-ಹಿಂದ್ ಕನಸು ಎಂದಿಗೂ ನನಸಾಗುವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath) ಅವರು ಹೇಳಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ 80 ಮತ್ತು 20 ಹೇಳಿಕೆ ಕುರಿತು ವಿವರಣೆ ನೀಡಿದ ಅವರು, 80 ರಷ್ಟು ಮಂದಿ ನಮ್ಮನ್ನು ಬೆಂಬಲಿಸುವವರು 20 ರಷ್ಟು ಮಂದಿನ ನಮ್ಮನ್ನು ಬೆಂಬಲಿಸುವವರು ಎಂದರು


  ಘಜ್ವಾ-ಎ-ಹಿಂದ್‌ ಕನಸು ನನಸಾಗಲ್ಲ


  ಇದು ಹೊಸ ಭಾರತ, ಇದು ವಿಶ್ವದ ಅತ್ಯಂತ ಜನಪ್ರಿಯ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ಭಾರತ. ಈ ಹೊಸ ಭಾರತದಲ್ಲಿ ಎಲ್ಲರಿಗಾಗಿ ಅಭಿವೃದ್ಧಿ ನಡೆಸಲಾಗುತ್ತಿದ್ದು, ಇಲ್ಲಿ ಯಾರನ್ನೂ ಸಮಾಧಾನಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು


  ಹೊಸ ಭಾರತ ಸಂವಿಧಾನದ ಪ್ರಕಾರ ಕೆಲಸ ಮಾಡುತ್ತದೆಯೇ ಹೊರತು ಷರಿಯತ್ ಅಲ್ಲ. ಖಯಾಮತ್ (ಜಗತ್ತಿನ ಅಂತ್ಯ) ವರೆಗೂ ಘಜ್ವಾ-ಎ-ಹಿಂದ್‌ನ ಕನಸು ನನಸಾಗುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದರು


  ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್​​ ಮಾಡಿದ್ದು, ಗಜ್ವಾ-ಎ-ಹಿಂದ್ ಕನಸು ಕಾಣುವವರು, ತಾಲಿಬಾನಿ ಚಿಂತನೆಯ ಧಾರ್ಮಿಕ ಮತಾಂಧರೇ, ಇದನ್ನು ಅರ್ಥಮಾಡಿಕೊಳ್ಳಿ. ಭಾರತವು ಸಂವಿಧಾನದ ಪ್ರಕಾರ ನಡೆಯುತ್ತದೆ, ಶರಿಯತ್ ಪ್ರಕಾರ ಅಲ್ಲ ಎಂದು ಪುನರ್​​ ಉಚ್ಚರಿಸಿದ್ದಾರೆ.


  ಶಾಲೆ ಎಂಬುದು ಶಿಸ್ತಿನ ವಿಚಾರ


  ಕರ್ನಾಟಕದ ಹಿಜಾಬ್ ವಿವಾದ ಕುರಿತು ಮಾತನಾಡಿದ ಅವರು, ಭಾರತೀಯ ಸಂವಿಧಾನದ ಪ್ರಕಾರ ವ್ಯವಸ್ಥೆಯು ನಡೆಯಬೇಕು ಎಂದು ನಾನು ಬಲವಾಗಿ ನಂಬುತ್ತೇನೆ. ನಮ್ಮ ವೈಯಕ್ತಿಕ ನಂಬಿಕೆಗಳು, ನಮ್ಮ ಮೂಲಭೂತ ಹಕ್ಕುಗಳು, ನಮ್ಮ ವೈಯಕ್ತಿಕ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳನ್ನು ದೇಶ ಅಥವಾ ಸಂಸ್ಥೆಗಳ ಮೇಲೆ ಹೇರಲು ಸಾಧ್ಯವಿಲ್ಲ.
  ನಾನು ಉತ್ತರ ಪ್ರದೇಶದ ಜನರು ಮತ್ತು ಕಾರ್ಮಿಕರಿಗೆ ಕೇಸರಿ ಶಾಲು ಧರಿಸುವಂತೆ ಕೇಳುತ್ತಿದ್ದೇನೆಯೇ? ಅವರು ಏನು ಧರಿಸಬೇಕು ಎಂಬುದು ಅವರ ಆಯ್ಕೆಯಾಗಿದೆ. ಆದರೆ ಶಾಲೆಗಳಲ್ಲಿ ಡ್ರೆಸ್ ಕೋಡ್ ಇರಬೇಕು. ಶಾಲೆಗಳಲ್ಲಿನ ಶಿಸ್ತಿನ ವಿಷಯವಾಗಿದೆ.


  ಇದನ್ನು ಓದಿ: ಇಲ್ಲಿ Hijab ಗಲಾಟೆ, ಅಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಸಾಧನೆ! ಸಂಸ್ಕೃತದಲ್ಲಿ ಸಿಕ್ತು ಗೋಲ್ಡ್ ಮೆಡಲ್


  ವೈಯಕ್ತಿಕ ಅಭಿಪ್ರಾಯ ಬೇರೆ, ಕಾನೂನು ಬೇರೆ
  ಒಬ್ಬರ ವೈಯಕ್ತಿಕ ನಂಬಿಕೆಗಳು ವಿಭಿನ್ನವಾಗಿರುತ್ತದೆ. ಆದರೆ, ಸಂಸ್ಥೆಗಳ ವಿಷಯದಲ್ಲಿ ಪ್ರತಿಯೊಬ್ಬರು ಕೆಲವು ನಿಯಮಗಳನ್ನು ಒಪ್ಪಿಕೊಳ್ಳಬೇಕು. ರಾಷ್ಟ್ರೀಯ ಮಟ್ಟದ ಸಂದರ್ಭದಲ್ಲಿ ಸಂವಿಧಾನವನ್ನು ಅನುಸರಿಸಬೇಕು ಎಂದು ಅವರು ಹೇಳಿದರು
  ಮುಖ್ಯಮಂತ್ರಿಯವರು ತಮ್ಮ 80 ವರ್ಸಸ್ 20 ಕಾಮೆಂಟ್ ಅನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದರು. ಅದು ಹಿಂದೂ-ಮುಸ್ಲಿಂ ಮತಗಳ ವಿಭಜನೆಯನ್ನು ಉಲ್ಲೇಖಿಸುತ್ತದೆ.
  ಚುನಾವಣೆಗಳು 80 ಮತ್ತು 20 ನಡುವಿನ ಹೋರಾಟವಾಗಿದೆ. ಅಲ್ಲಿ 80 ಪ್ರತಿಶತದಷ್ಟು ಜನರು ಪ್ರಗತಿಯನ್ನು ಬೆಂಬಲಿಸುವವರು. ಆದರೆ 20 ಪ್ರತಿಶತ ಜನರು ಎಲ್ಲವನ್ನೂ ವಿರೋಧಿಸುತ್ತಾರೆ. ನಕಾರಾತ್ಮಕ ಮನೋಭಾವವನ್ನು ಹೊಂದಿದ್ದಾರೆ.


  ಇದನ್ನು ಓದಿ: ದೇಶಾದ್ಯಂತ ಒಂದೇ ರೀತಿಯ ಸಮವಸ್ತ್ರ ಜಾರಿಯಾಗುತ್ತಾ? ಸುಪ್ರೀಂನಲ್ಲಿ ಇಂದು ಅರ್ಜಿ ವಿಚಾರಣೆ


  80-20 ಕುರಿತು ವಿವರಣೆ


  ರಾಜ್ಯದ 80 ರಷ್ಟು ಜನರು ಸರ್ಕಾರದ ಭದ್ರತೆಯ ವಿಷಯದಲ್ಲಿ ಸಂತೋಷವಾಗಿರುವವರು, ರಾಜ್ಯ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಮೆಚ್ಚುವವರು. ಅಭಿವೃದ್ಧಿಯನ್ನು ಇಷ್ಟಪಡುವವರು. ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಮಾಡುವ ಅವಕಾಶವನ್ನು ಪಡೆದವರು. 20 ರಷ್ಟು ಜನರು ಯಾವಾಗಲೂ ಎಲ್ಲವನ್ನೂ ವಿರೋಧಿಸುತ್ತಾರೆ. ಅವರು ಮೊದಲು ಎಲ್ಲವನ್ನೂ ವಿರೋಧಿಸಿದರು. ಈಗ ಅದನ್ನು ಮುಂದುವರಿಸುತ್ತಾರೆ. ಅವರು ನಕಾರಾತ್ಮಕ ಚಿಂತನೆಯನ್ನು ಹೊಂದಿರುತ್ತಾರೆ. ಹಾಗೆಯೇ ಉಳಿಯುತ್ತಾರೆ ಎಂದರು


  ಹೆಣ್ಣಿನ ಸ್ವಾತಂತ್ರ್ಯಕ್ಕೆ ಕೆಲಸ


  ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಹಿಜಾಬ್ ಧರಿಸುವುದು ಮೂಲಭೂತ ಹಕ್ಕು ಮತ್ತು ಮುಂದೊಂದು ದಿನ ಹಿಜಾಬ್ ಧರಿಸಿದ ಹುಡುಗಿ ಪ್ರಧಾನಿಯಾಗುತ್ತಾರೆ ಎಂದು ಪ್ರತಿಕ್ರಿಯಿಸಿದ ಯೋಗಿ, ದೇಶದ ಪ್ರತಿಯೊಬ್ಬ ಹೆಣ್ಣಿನ ಸ್ವಾತಂತ್ರ್ಯ ಮತ್ತು ಹಕ್ಕುಗಳಿಗಾಗಿ ಪ್ರಧಾನಿ ಮೋದಿಯವರು ತ್ರಿವಳಿ ತಲಾಕ್‌ನ ನಿಲ್ಲಿಸಿದ್ದಾರೆ. ನ್ಯಾಯ ಮತ್ತು ಗೌರವ ಸಬಲೀಕರಣವನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.

  Published by:Seema R
  First published: