ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಯುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(CM Yogi Adityanath) ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಗೋರಖ್ಪುರ ಕ್ಷೇತ್ರದಿಂದ ಅವರು ಅದೃಷ್ಟ ಪರೀಕ್ಷೆ ಮುಂದಾಗಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಅವರು ಮೊದಲ ಬಾರಿಗೆ ನ್ಯೂಸ್ 18ಗೆ ಎಕ್ಸ್ಕ್ಲೂಸಿವ್ ಸಂದರ್ಶನ ನೀಡಿದರು. ನೆಟ್ವರ್ಕ್ 18 ಗ್ರೂಪ್ನ ಎಂಡಿ ಮತ್ತು ಗ್ರೂಪ್ ಎಡಿಟರ್ ಇನ್ ಚೀಫ್ ರಾಹುಲ್ ಜೋಶಿ (Network 18 group MD Rahul Joshi) ಜೊತೆ ಸಂದರ್ಶನದಲ್ಲಿ (Exclusive Interview) ಮಾತನಾಡಿದ ಅವರು ತಾವು ಯಾವ ಉದ್ದೇಶಕ್ಕಾಗಿ ಗೋರಖ್ಪುರ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಾಯಿತು ಎಂಬ ಬಗ್ಗೆ ತಿಳಿಸಿದರು
ಪಕ್ಷಕ್ಕೆ ಮೋದಿಗೆ ಧನ್ಯವಾದ ತಿಳಿಸಿದ ಯೋಗಿ
ಗೋರಖ್ಪುರಕ್ಕೆ ನಾನು ಹೊಸಬನಲ್ಲ. ಇಲ್ಲಿಯೇ ನಾನು ಸಂಸದನಾಗಿ ಆಯ್ಕೆಗೊಂಡಿದ್ದೆ. ಆದರೆ, ವಿಧಾನ ಸಭಾ ಕ್ಷೇತ್ರದ ಆಯ್ಕೆಯನ್ನು ಪಕ್ಷಕ್ಕೆ ಬಿಟ್ಟಿದೆ. ಅಭ್ಯರ್ಥಿಗಳ ಕ್ಷೇತ್ರ ಆಯ್ಕೆಮಾಡುವಾಗ ಪಕ್ಷದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಬಿಜೆಪಿ ಪ್ರಜಾಸತ್ತಾತ್ಮಕ ಪಕ್ಷವಾಗಿದೆ ನನ್ನ ಮೊದಲ ವಿಧಾನಸಭಾ ಚುನಾವಣೆಯನ್ನು ಗೋರಖ್ಪುರದಿಂದ ಪಕ್ಷ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಪಕ್ಷಕ್ಕೆ ಮತ್ತು ಪ್ರಧಾನಿ ನರೇಂದ್ರ ಅವರಿಗೆ ಕೃತಜ್ಞನಾಗಿದ್ದೇನೆ. ಉತ್ತರ ಪ್ರದೇಶ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದು, ರಾಜ್ಯದಲ್ಲಿ ಬಿಜೆಪಿ 300ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂಬ ಭರವಸೆ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಹೇಳಿಕೆಗೆ ಖಂಡನೆ
ಸಂಸತ್ತಿನಲ್ಲಿ ಕಾಶ್ಮೀರದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅವರ ಮಾತುಗಳನ್ನು ಖಂಡಿಸಬೇಕು. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಅವರು ರಾಷ್ಟ್ರದ ಭದ್ರತೆಯೊಂದಿಗೆ ಆಟವಾಡುತ್ತಿದ್ದಾರೆ, ಅವರಿಗೆ ಮತ ಬ್ಯಾಂಕ್ ಮಾತ್ರ ಮುಖ್ಯವಾಗಿದೆ ಎಂದು ಇದೇ ವೇಳೆ ಟೀಕಿಸಿದರು
ಇನ್ನು ಇದೇ ವೇಳೆ ನಿನ್ನೆ ಉತ್ತರ ಪ್ರದೇಶದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಬೆಂಗಾವಲು ಪಡೆ ಮೇಲಿನ ದಾಳಿ ಕುರಿತು ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ನಾವು ಬ್ಯಾಲೆಟ್ ಪೇಪರ್ ಅನ್ನು ಹೆಚ್ಚು ನಂಬುತ್ತೇವೆ, ಬುಲೆಟ್ ಅನ್ನು ಅಲ್ಲ. ಇಂತಹ ದಾಳಿಯ ಘಟನೆಗಳು ಒಪ್ಪುವುದಿಲ್ಲ. ನಮ್ಮನಡುವೆ ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಯಾರೂ ಕಾನೂನನ್ನು ಕೈಯಲ್ಲಿ ತೆಗೆದುಕೊಳ್ಳಲು ಅನುಮತಿಸುವುದಿಲ್ಲ
ಇದನ್ನು ಓದಿ: ನಾಮಪತ್ರ ಸಲ್ಲಿಸಿದ ಯೋಗಿ ಆದಿತ್ಯನಾಥ್ಗೆ ಅಮಿತ್ ಶಾ ಸಾಥ್
ಮುಸ್ಲಿಂ ವಿರೋಧಿಗಳಲ್ಲ
ಉತ್ತರ ಪ್ರದೇಶದಲ್ಲಿ ಯಾವುದೇ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರುವ ಕುರಿತು ಪ್ರತಿಕ್ರಿಯಿಸಿದ ಅವರು ನಾವು ಯಾವುದೇ ಮುಸ್ಲಿಂ ವಿರೋಧಿಗಳಲ್ಲ. ದೇಶ ವಿರೋಧಿಗಳ ವಿರುದ್ಧ ಇದ್ದೇವೆ. ಉತ್ತರ ಪ್ರದೇಶ ಸರ್ಕಾರದಲ್ಲಿ ಒಬ್ಬ ಮುಸ್ಲಿಂ ಮಂತ್ರಿ ಇದ್ದಾರೆ. ನಖ್ವಿ ಜಿ ಕೇಂದ್ರ ಸರ್ಕಾರದ ಮಂತ್ರಿ ಆಗಿದ್ದಾರೆ. ಆರಿಫ್ ಮೊಹಮ್ಮದ್ ಖಾನ್ ಕೇರಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾವು ಯಾವುದೇ ಧರ್ಮ ಅಥವಾ ಜಾತಿಯನ್ನು ವಿರೋಧಿಸುವುದಿಲ್ಲ. ಆದರೆ ಭಾರತ ಮತ್ತು ಭಾರತೀಯತೆಯನ್ನು ವಿರೋಧಿಸುವವರನ್ನು ನಾವು ವಿರೋಧಿಸುತ್ತೇವೆ ಎಂದು ಸ್ಪಷ್ಟಪಡಿಸಿದರು
ಇದನ್ನು ಓದಿ: ಯೋಗಿ ಆದಿತ್ಯನಾಥ್ ಆಸ್ತಿ ಘೋಷಣೆ; ಇಲ್ಲಿದೆ ವಿವರ
ಜಾಟ್ ಮತ್ತು ಮುಸ್ಲಿಂ ಸಮುದಾಯ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಯೋಗಿ ಆದಿತ್ಯನಾಥ್ ನಾಥ್ ಪಂಥದೊಂದಿಗೆ ಸಂಬಂಧ ಹೊಂದಿದ್ದು, ಈ ಪೀಠವು ಶೈವ ಸಂಪ್ರದಾಯವಾಗಿದೆ. ವಿಷ ಕುಡಿದು ಅಮೃತ ಹಂಚುವ ಕೆಲಸ ಮಾಡುತ್ತೇವೆ ಎಂದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ