Ayodhya Ram Mandir: ಅಯೋಧ್ಯೆ ರಾಮ ಮಂದಿರದ ಸುತ್ತಮುತ್ತ ಮದ್ಯ ಮಾಂಸ ಮಾರಾಟ ನಿಷೇಧ: ಯೋಗಿ ಸರ್ಕಾರದ ಖಡಕ್ ಆದೇಶ

ಕಳೆದ ವರ್ಷ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಥುರಾದ ಯಾತ್ರಾ ಸ್ಥಳಗಳ ಬಳಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದರು.

ಸಿಎಂ ಯೋಗಿ ಆದಿತ್ಯನಾಥ

ಸಿಎಂ ಯೋಗಿ ಆದಿತ್ಯನಾಥ

 • Share this:
  ಲಕ್ನೋ: ಅಯೋಧ್ಯೆಯ ರಾಮ ಜನ್ಮಭೂಮಿ (Ayodhya Ram Temple) ದೇಗುಲ ಸಂಕೀರ್ಣದ ಸುತ್ತಮುತ್ತ ಮದ್ಯ ಮಾರಾಟವನ್ನು ನಿಷೇಧಿಸಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. ರಾಮ ಮಂದಿರ (Ram Mandir Liquor Ban) ಪ್ರದೇಶದಲ್ಲಿನ ಎಲ್ಲಾ ಮದ್ಯದಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಅಬಕಾರಿ ಸಚಿವ ನಿತಿನ್ ಅಗರವಾಲ್ (Nitin Agrawal) ಬುಧವಾರ ತಿಳಿಸಿದ್ದಾರೆ. ಧಾರ್ಮಿಕ ಸ್ಥಳಗಳ ಸುತ್ತಲೂ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಬೇಕೆಂದು ಸಂತರು ಮತ್ತು ಧರ್ಮದರ್ಶಿಗಳು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿಷೇಧವನ್ನು ಜಾರಿಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ (Uttar Pradesh Government) ತಿಳಿಸಿದೆ.

  ಕಳೆದ ವರ್ಷ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಥುರಾದ ಯಾತ್ರಾ ಸ್ಥಳಗಳ ಬಳಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದ್ದರು. ಮದ್ಯ ಮಾರಾಟದ ಚಟುವಟಿಕೆಗಳ ಮೂಲಕ ಜೀವನ ಕಟ್ಟಿಕೊಂಡ ಜನರನ್ನು ಬೇರೆ ವ್ಯಾಪಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುವಂತೆ ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  ರಾಮಮಂದಿರದ ಗರ್ಭಗೃಹಕ್ಕೆ ಶಂಕುಸ್ಥಾಪನೆ
  ಈ ನಡುವೆಯೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಅಯೋಧ್ಯೆಯಲ್ಲಿ ರಾಮಮಂದಿರದ ಗರ್ಭಗೃಹಕ್ಕೆ ಶಂಕುಸ್ಥಾಪನೆ ಮಾಡಿದರು. ದೇಶಾದ್ಯಂತದ ಋಷಿಮುನಿಗಳು ಮತ್ತು ಸಂತರನ್ನು ಈ ಸಂದರ್ಭದಲ್ಲಿ ಆಹ್ವಾನಿಸಲಾಗಿದೆ.

  ಯಶಸ್ವಿಯಾಗಿ ನಡೆಯುತ್ತಿದೆ ಕಾಮಗಾರಿ
  ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ''ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿಗೆ ಪ್ರಧಾನಿ ಮೋದಿಯವರು ಸುಮಾರು ಎರಡು ವರ್ಷಗಳ ಹಿಂದೆ ಚಾಲನೆ ನೀಡಿದ್ದು, ಕಾಮಗಾರಿ ಯಶಸ್ವಿಯಾಗಿ ನಡೆಯುತ್ತಿದೆ. ಗರ್ಭಗೃಹದಲ್ಲಿ ಕಲ್ಲುಗಳನ್ನು ಇಡುವ ಆಚರಣೆಗೆ ಚಾಲನೆ ನೀಡಿರುವುದು ನಮ್ಮ ಸೌಭಾಗ್ಯ”ಎಂದ ತಿಳಿಸಿದರು.

  ರಾಮಮಂದಿರ ಭಾರತದ ರಾಷ್ಟ್ರೀಯ ಮಂದಿರವಾಗಲಿದೆ!
  ರಾಮಮಂದಿರ ಭಾರತದ ರಾಷ್ಟ್ರೀಯ ಮಂದಿರವಾಗಲಿದೆ ಎಂದು ಸಿಎಂ ಆದಿತ್ಯನಾಥ್ ಒತ್ತಿ ಹೇಳಿದರು. "ಜನರು ಈ ದಿನಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದ್ದಾರೆ. ರಾಮಮಂದಿರವು ಭಾರತದ ಏಕತೆಯ ಸಂಕೇತವಾಗಲಿದೆ" ಎಂದು ಅವರು ಹೇಳಿದರು.

  National Herald Case: ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಇಡಿ ಸಮನ್ಸ್ ಜಾರಿಗೊಳಿಸಿದ್ದೇಕೆ?

  ದೇವಾಲಯದ ನಿರ್ಮಾಣದ ಉಸ್ತುವಾರಿ ವಹಿಸಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮೂಲಕ, ಗರ್ಭಗುಡಿಯು ಡಿಸೆಂಬರ್ 2023 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. "ಮೇಲ್ವಿನ್ಯಾಸದ ಕೆಲಸ ಇಂದು ಪ್ರಾರಂಭವಾಗುತ್ತದೆ. ನಮಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲು)  3 ಹಂತದ ಕಾಲಮಿತಿ ಇದೆ. 2023 ರ ವೇಳೆಗೆ ಗರ್ಭಗೃಹ, 2024 ರ ಅಂತ್ಯದ ವೇಳೆಗೆ ದೇವಾಲಯ ನಿರ್ಮಾಣ ಮತ್ತು 2025 ರ ವೇಳೆಗೆ ದೇವಾಲಯದ ಸಂಕೀರ್ಣದಲ್ಲಿ ಮುಖ್ಯ ನಿರ್ಮಾಣಗಳ ಕಾಮಗಾರಿ ಪೂರ್ಣಗೊಳ್ಳಬೇಕಿದೆ ಎಂದು ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.

  ಇದನ್ನೂ ಓದಿ: Modi@8: ಬಗೆ ಬಗೆಯ ಉಡುಪಲ್ಲಿ ಪ್ರಧಾನಿ ನರೇಂದ್ರ ಮೋದಿ!

  ಧಾರ್ಮಿಕ ಕೇಂದ್ರಗಳ ವಿವಾದ ಬಗೆಹರಿಸಲಿದ್ದೇವೆ
  ಅಯೋಧ್ಯೆಯಲ್ಲಿ ರಾಮಮಂದಿರ ಮೊದಲು ನಿರ್ಮಾಣವಾಗಲಿ. ಆ ನಂತರ ಕಾಶಿ  ಹಾಗೂ ಮಥುರಾದಂತಹ ಧಾರ್ಮಿಕ ಕೇಂದ್ರಗಳ ವಿವಾದಗಳನ್ನು  ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಅಂತ ಉತ್ತರ ಪ್ರದೇಶ  ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ''ರಾಮ ಮಂದಿರ ನಿರ್ಮಾಣ ಮಾಡಿದ ಬಳಿಕ ಕಾಶಿ ವಿಶ್ವನಾಥ ದೇಗುಲ ನಮ್ಮೆದುರಿದೆ. ಇದೇ ರೀತಿ, ಮಥುರಾ, ವೃಂದಾವನ, ವಿಂಧ್ಯವಾಸಿನಿ ಧಾಮ, ನೈಮಿಶ್‌ ಧಾಮ ಸೇರಿ ಹಲವು ಧಾಮಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ” ಎಂದಿದ್ದಾರೆ.
  Published by:guruganesh bhat
  First published: