Danish Azad Ansari: ಯೋಗಿ ಆದಿತ್ಯನಾಥ್ ಸಂಪುಟದ ಏಕೈಕ ಮುಸ್ಲಿಂ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ!

32 ವರ್ಷದ ಅನ್ಸಾರಿ ಅವರು ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿಗೆ ಸೇರಿದರು, ಅಲ್ಲಿ ಅವರು ಪದವಿ ಪಡೆದರು. ಆದಿತ್ಯನಾಥ್ ಅವರ ಹೊಸ ಸರ್ಕಾರಕ್ಕೆ ಎಂಟ್ರಿ ನೀಡಿದ 31 ಹೊಸ ಮುಖಗಳಲ್ಲಿ ಇವರು ಒಬ್ಬರು.

ಡ್ಯಾನಿಶ್ ಆಜಾದ್ ಅನ್ಸಾರಿ

ಡ್ಯಾನಿಶ್ ಆಜಾದ್ ಅನ್ಸಾರಿ

  • Share this:
ಉತ್ತರ ಪ್ರದೇಶದಲ್ಲಿ 2022ರ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Election Results) ಬಿಜೆಪಿಯು ಪ್ರಚಂಡ ವಿಜಯ ಸಾಧಿಸಿದೆ. ದಾಖಲೆಯ ಎರಡನೇ ಅವಧಿಗೆ ಯೋಗಿ ಆದಿತ್ಯನಾಥ್ (Yogi Adityanath)  ಉತ್ತರ ಪ್ರದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಅವರ ಸಂಪುಟದ  (Yogi Adityanath Cabinet) ಸದಸ್ಯರಾಗಿ 52 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಈ 52 ಸಚಿವರಲ್ಲಿ ಈ ಬಾರಿ ಮುಸ್ಲಿಂ ಸಮುದಾಯದ ಓರ್ವ ವ್ಯಕ್ತಿಗೆ ಸ್ಥಾನ ಲಭಿಸಿದೆ. ಡ್ಯಾನಿಶ್ ಆಜಾದ್ ಅನ್ಸಾರಿ (Danish Azad Ansari) ಯೋಗಿ ಆದಿತ್ಯನಾಥ್ ಸರ್ಕಾರದ ಏಕೈಕ ಮುಸ್ಲಿಂ ಸಚಿವರಾಗಿದ್ದು, ರಾಜ್ಯ ಖಾತೆ ಸಚಿವರಾಗಿ ಅನ್ಸಾರಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬಲ್ಲಿಯಾ ಜಿಲ್ಲೆಯಿಂದ ಬಂದ ಅನ್ಸಾರಿ ಅವರು ಆದಿತ್ಯನಾಥ್ ಅವರ 1.0 ಸರ್ಕಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿದ ಮೊಹ್ಸಿನ್ ರಾಝಾ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. 32 ವರ್ಷದ ಅನ್ಸಾರಿ ಅವರು ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಎಬಿವಿಪಿಗೆ ಸೇರಿದರು, ಅಲ್ಲಿ ಅವರು ಪದವಿ ಪಡೆದರು. ಆದಿತ್ಯನಾಥ್ ಅವರ ಹೊಸ ಸರ್ಕಾರಕ್ಕೆ ಎಂಟ್ರಿ ನೀಡಿದ 31 ಹೊಸ ಮುಖಗಳಲ್ಲಿ ಇವರು ಒಬ್ಬರು.

“ಇದು ಅನಿರೀಕ್ಷಿತವಲ್ಲ"- ಅನ್ಸಾರಿ
ಹೊಸ ಸಚಿವ ಸಂಪುಟದಲ್ಲಿ ಆಯ್ಕೆಯಾದ ಬೆನ್ನಲ್ಲೇ ಅನ್ಸಾರಿ ಪ್ರತಿಕ್ರಿಯೇ ನೀಡಿದ್ದು, “ಇದು ಅನಿರೀಕ್ಷಿತವಲ್ಲ ಎಂದಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತರ ಶ್ರಮವನ್ನು ಬಿಜೆಪಿ ಗುರುತಿಸುತ್ತದೆ. ನನಗೆ, ಇದು ಪಕ್ಷವು ತನ್ನ ಸಮರ್ಪಿತ ಕಾರ್ಯಕರ್ತರಲ್ಲಿ ಇರಿಸಿರುವ ನಂಬಿಕೆಯ ಸಂಕೇತವಾಗಿದೆ” ಎಂದು ಅವರು ಹೇಳಿದ್ದಾರೆ.

“ತಮ್ಮಂತಹ ಸಾಮಾನ್ಯ ಪಕ್ಷದ ಕಾರ್ಯಕರ್ತನಿಗೆ ಇಂತಹ ದೊಡ್ಡ ಅವಕಾಶ ನೀಡಿದ ಕೇಸರಿ ಪಕ್ಷಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದರು ಮತ್ತು ಸಂಪೂರ್ಣ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯಗಳನ್ನು ನಿಭಾಯಿಸುವುದಾಗಿ ಭರವಸೆ ನೀಡಿದರು.

ಬಿಜೆಪಿ ಮೇಲೆ ನಂಬಿಕೆ ಹೆಚ್ಚಿದೆ
ಇದಲ್ಲದೆ, ಉತ್ತರ ರಾಜ್ಯದಲ್ಲಿ ಬಿಜೆಪಿಯಲ್ಲಿ ಮುಸ್ಲಿಂ ಸಮುದಾಯದ ನಂಬಿಕೆ ಹೆಚ್ಚಾಗಿದೆ ಎಂದು ಅನ್ಸಾರಿ ಹೇಳಿದ್ದಾರೆ. ಬಿಜೆಪಿ ಪರಿಚಯಿಸಿದ ಕಲ್ಯಾಣ ಯೋಜನೆಗಳು ತಮ್ಮ ಜನರಿಗೆ ಪ್ರಯೋಜನವನ್ನು ನೀಡಿವೆ ಮತ್ತು ಸೌಲಭ್ಯಗಳನ್ನು ನೀಡುವ ಮೊದಲು ಸರ್ಕಾರವು ಯಾರ ಜಾತಿ ಮತ್ತು ಧರ್ಮವನ್ನು ಕೇಳುವುದಿಲ್ಲ ಎಂದು ಅವರು ಹೇಳಿದರು.

ಅನ್ಸಾರಿ ಜೊತೆಗೆ ಸಿಖ್ ರಾಜ್ಯ ಸಚಿವ ಮತ್ತು ಬಿಸಲ್‌ಪುರ ಕ್ಷೇತ್ರದ ಎರಡನೇ ಬಾರಿಗೆ ಶಾಸಕರಾಗಿರುವ ಬಲದೇವ್ ಔಲಾಖ್ ಅವರು ಈಗ ಆದಿತ್ಯನಾಥ್ 2.0 ಸರ್ಕಾರದ ಅಲ್ಪಸಂಖ್ಯಾತ ಪ್ರತಿನಿಧಿಗಳಾಗಿದ್ದಾರೆ.

ಡ್ಯಾನಿಶ್ ಆಜಾದ್ ಅನ್ಸಾರಿ ಯಾರು?
ಅನ್ಸಾರಿ ಅವರು ಉತ್ತರ ಪ್ರದೇಶದ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2022ರ ವಿಧಾನಸಭಾ ಚುನಾವಣೆಗೂ ಮುನ್ನ ಅವರನ್ನು ಈ ಹುದ್ದೆಗೆ ನೇಮಿಸಲಾಗಿತ್ತು.

2018ರ ಅಕ್ಟೋಬರ್‌ನಲ್ಲಿ ಹಿಂದಿನ ಆದಿತ್ಯನಾಥ್ ಸರ್ಕಾರದಲ್ಲಿ ಅನ್ಸಾರಿ ಅವರನ್ನು ಉರ್ದು ಭಾಷಾ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು. ಅವರು ಆ ಸಮಿತಿಯಲ್ಲಿ ರಾಜ್ಯ ಸಚಿವ ಸ್ಥಾನಮಾನವನ್ನು ಹೊಂದಿದ್ದರು. ಅನ್ಸಾರಿ ಅವರು ಬಲ್ಲಿಯ ಹೋಲಿ ಕ್ರಾಸ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ:Yogi Govt 2.0: ಮತ್ತೆ ಅಧಿಕಾರಕ್ಕೆ ಬಂದೊಡನೆ ಉಚಿತ ಪಡಿತರ ಯೋಜನೆಯನ್ನು ಮುಂದುವರೆಸಿದ ‘ಯೋಗಿ ಸರ್ಕಾರ್’

ಲಕ್ನೋ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಬಿ.ಕಾಂ ಪದವಿ ಪಡೆದಿದ್ದಾರೆ. ನಂತರ ಮಾಸ್ಟರ್ ಆಫ್ ಕ್ವಾಲಿಟಿ ಮ್ಯಾನೇಜ್ಮೆಂಟ್ ಮತ್ತು ನಂತರ ಮಾಸ್ಟರ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಅನ್ನು ಅಧ್ಯಯನ ಮಾಡಿದರು.

ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: 'Modi Story' ವೆಬ್​ಸೈಟ್​​ ಉದ್ಘಾಟಿಸಿದ ಮಹಾತ್ಮ ಗಾಂಧಿಜೀ ಮೊಮ್ಮಗಳು; ಏನಿದರ ವಿಶೇಷತೆ?

ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್, ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ಮತ್ತು ಹರಿಯಾಣದ ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಹಲವು ಬಿಜೆಪಿ ಗಣ್ಯರು ಸೇರಿದ್ದರು.
Published by:guruganesh bhat
First published: