HOME » NEWS » National-international » CM UDDHAV THACKERAY LED GOVERNMENT WINTER SESSION TO BEGIN IN MAHARASHTRA GNR

ಇಂದಿನಿಂದ ಮಹಾರಾಷ್ಟ್ರ ಸರ್ಕಾರದ ವಿಧಾನಸಭಾ ಅಧಿವೇಶನ; ಸಿಎಂ ಉದ್ಧವ್​​ ಠಾಕ್ರೆಗೆ ಎದುರಾಯ್ತು ದೊಡ್ಡ ಸವಾಲು

ಸರ್ಕಾರದಲ್ಲಿ ಸಿಎಂ ನಂತರ ಅತ್ಯಂತ ಪ್ರಮುಖ ಸ್ಥಾನವಾಗಿರುವ ಗೃಹ ಖಾತೆಯನ್ನು ಶಿವಸೇನಾಗೇ ಬಿಟ್ಟುಕೊಡಲಾಗಿದೆ. ಎನ್​ಸಿಪಿ ಪಕ್ಷವು ಡಿಸಿಎಂ ಮತ್ತು ಗೃಹ ಖಾತೆ ಮೇಲೆ ಕಣ್ಣಿಟ್ಟಿತ್ತು. ಎರಡೂ ಕೂಡ ಆ ಪಕ್ಷಕ್ಕೆ ಸಿಕ್ಕಿಲ್ಲದಿರುವುದು ಹಲವರ ಹುಬ್ಬೇರಿಸಿದೆ.

news18-kannada
Updated:December 16, 2019, 7:23 AM IST
ಇಂದಿನಿಂದ ಮಹಾರಾಷ್ಟ್ರ ಸರ್ಕಾರದ ವಿಧಾನಸಭಾ ಅಧಿವೇಶನ; ಸಿಎಂ ಉದ್ಧವ್​​ ಠಾಕ್ರೆಗೆ ಎದುರಾಯ್ತು ದೊಡ್ಡ ಸವಾಲು
ಸಿಎಂ ಉದ್ಧವ್ ಠಾಕ್ರೆ
  • Share this:
ಮುಂಬೈ(ಡಿ.16): ಇಂದಿನಿಂದ ಸಿಎಂ ಉದ್ದವ್​ ಠಾಕ್ರೆ ನೇತೃತ್ವದ 'ಮಹಾ ವಿಕಾಸ ಅಘಾಡಿ' ಮೈತ್ರಿ ಸರ್ಕಾರದ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯಲಿದೆ. ಶಿವಸೇನೆ ಮತ್ತು ಎನ್‌ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಮೊದಲ ಅಧಿವೇಶನ ಇದಾಗಿದೆ. ಈ ಮೈತ್ರಿ ಸರ್ಕಾರದ ರೂವಾರಿ ಸಿಎಂ ಉದ್ಧವ್‌ ಠಾಕ್ರೆಗೆ ಸಂಪುಟ ರಚನೆಯಾದ ನಂತರ ಮೂರು ಪಕ್ಷಗಳ ಒಗ್ಗಟ್ಟು ಕಾಪಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ಹಿಂದೆ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗಿ ಎರಡು ವಾರಗಳ ಬಳಿಕ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಯ್ತು. ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಮೂರೂ ಪಕ್ಷಗಳ ಆರು ಸಚಿವರಿಗೂ ಖಾತೆ ಹಂಚಿಕೆಯಲ್ಲಿ ಹೆಚ್ಚೂಕಡಿಮೆ ಸಮ ಪ್ರಾಶಸ್ತ್ಯ ಸಿಕ್ಕಿದೆ. ಆದರೆ, ಅಚ್ಚರಿ ಎಂಬಂತೆ ಯಾವುದೇ ಉಪಮುಖ್ಯಮಂತ್ರಿ ಹುದ್ದೆ ರಚನೆಯಾಗಿಲ್ಲ.

ಸರ್ಕಾರದಲ್ಲಿ ಸಿಎಂ ನಂತರ ಅತ್ಯಂತ ಪ್ರಮುಖ ಸ್ಥಾನವಾಗಿರುವ ಗೃಹ ಖಾತೆಯನ್ನು ಶಿವಸೇನಾಗೇ ಬಿಟ್ಟುಕೊಡಲಾಗಿದೆ. ಎನ್​ಸಿಪಿ ಪಕ್ಷವು ಡಿಸಿಎಂ ಮತ್ತು ಗೃಹ ಖಾತೆ ಮೇಲೆ ಕಣ್ಣಿಟ್ಟಿತ್ತು. ಎರಡೂ ಕೂಡ ಆ ಪಕ್ಷಕ್ಕೆ ಸಿಕ್ಕಿಲ್ಲದಿರುವುದು ಹಲವರ ಹುಬ್ಬೇರಿಸಿದೆ.

ನವೆಂಬರ್ 28ರಂದು ಉದ್ಧವ್ ಠಾಕ್ರೆ ಸಿಎಂ ಆದ ದಿನದಂದೇ ಮೂರೂ ಪಕ್ಷಗಳಿಂದ ತಲಾ ಇಬ್ಬರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇವತ್ತು ಆರೂ ಸಚಿವರಿಗೂ ಖಾತೆ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: ಶಾಪಿಂಗ್​​ ಮಾಲ್​ಗಳಲ್ಲಿ ಮೊಬೈಲ್ ನಂಬರ್​​​​ ಶೇರ್​ ಮಾಡಬೇಡಿ; ನಗರ ಪೊಲೀಸ್​ ಆಯುಕ್ತ​​ ಭಾಸ್ಕರ್​​ ರಾವ್​​

ಇನ್ನುಳಿದ ಖಾತೆಗಳೆಲ್ಲವೂ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಳಿಯೇ ಇರಲಿವೆ. ಇಂದು ಡಿ. 16ರಂದು ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಈ ಖಾತೆ ಹಂಚಿಕೆ ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಡಿ. 21ರ ನಂತರ ಸಂಪುಟ ವಿಸ್ತರಣೆಯಾಗಲಿದ್ದು, ಮತ್ತೊಮ್ಮೆ ಖಾತೆ ಮರುಹಂಚಿಕೆಯಾಗುವ ನಿರೀಕ್ಷೆ ಇದೆ.

ಸಿಎಂ ಉದ್ದವ್​ ಠಾಕ್ರೆ ಅಧಿಕಾರಕ್ಕೆ ಬಂದ ತಕ್ಷಣ ಉದ್ದವ್​​ ನರೇಂದ್ರ ಮೋದಿ ಮೆಚ್ಚಿನ ಬುಲೆಟ್ ರೈಲು ಯೋಜನೆ ಹಾಗೂ ಇತರ ಯೋಜನೆಗಳ ಮರುಪರಿಶೀಲನೆಗೆ ಆದೇಶಿಸಿದ್ದಾರೆ. ಹಾಗಾಗಿ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೆಟ್ರೊ ಯೋಜನೆಗೂ ಉದ್ಧವ್ ತಡೆಯಾಜ್ಞೆ ನೀಡಿದ್ದಾರೆ. ಅಲ್ಲದೇ ಭೀಮಾ ಕೋರೆಗಾಂವ್ ಪ್ರಕರಣದ ಬಗ್ಗೆ ಉದ್ಧವ್ ತಳೆದ ನಿಲುವಿನ ಬಗ್ಗೆಯೂ ಬಿಜೆಪಿಗೆ ಅಸಮಾಧಾನವಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕೃಷಿ ಬಿಕ್ಕಟ್ಟನ್ನು ನಿರ್ವಹಿಸುವ ಮತ್ತು ರೈತರಿಗೆ ಸೂಕ್ತ ಪರಿಹಾರ ಘೋಷಿಸಬೇಕಾದ ಒತ್ತಡವನ್ನೂ ಉದ್ಧವ್ ಎದುರಿಸುತ್ತಿದ್ದಾರೆ. ಆದ್ದರಿಂದ ಇಂದಿನಿಂದ ಶುರುವಾಗುವ ಅಧಿವೇಶನ ಮಹತ್ವ ಹೊಂದಿದೆ.
Published by: Ganesh Nachikethu
First published: December 16, 2019, 7:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading