• Home
 • »
 • News
 • »
 • national-international
 • »
 • Shivraj Singh Chouhan| ಸುರಿಯುತ್ತಿರುವ ಮಳೆಗೆ ಛತ್ರಿಹಿಡಿದು ಗಿಡಕ್ಕೆ ನೀರುಣಿಸಿ ಟ್ರೋಲ್ ಆದ ಸಿಎಂ ಶಿವರಾಜ್ ಸಿಂಗ್ ಚೌಹಾಣ್

Shivraj Singh Chouhan| ಸುರಿಯುತ್ತಿರುವ ಮಳೆಗೆ ಛತ್ರಿಹಿಡಿದು ಗಿಡಕ್ಕೆ ನೀರುಣಿಸಿ ಟ್ರೋಲ್ ಆದ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಸುರಿವ ಮಳೆಯಲ್ಲೂ ಗಿಡಗಳಿಗೆ ನೀರುಣಿಸುತ್ತಿರುವ ಶಿವರಾಜ್ ಸಿಂಗ್ ಚೌಹಾಣ್.

ಸುರಿವ ಮಳೆಯಲ್ಲೂ ಗಿಡಗಳಿಗೆ ನೀರುಣಿಸುತ್ತಿರುವ ಶಿವರಾಜ್ ಸಿಂಗ್ ಚೌಹಾಣ್.

ಸಿಎಂ ಶಿವರಾಜ್ ಸಿಂಗ್‌ ಚೌಹಾಣ್ ಇತ್ತೀಚೆಗೆ ಸುರಿಯುವ ಮಳೆಯ ನಡುವೆಯೂ, ಸಹಾಯಕನೋರ್ವ ಹಿಡಿದ ಕೊಡೆಯ ಅಡಿಯಲ್ಲಿ ಟೈಲ್ಸ್‌ ಮೇಲೆ ನಿಂತು ಗಿಡಗಳಿಗೆ ನೀರುಣಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

 • Share this:

  ರಾಜಕಾರಣಿಗಳು ತಮ್ಮ ಪ್ರಚಾರಕ್ಕಾಗಿ ಅನೇಕ ಕಸರತ್ತುಗಳನ್ನು ನಡೆಸುತ್ತಲೇ ಇರುತ್ತಾರೆ. ಆದರೆ, ಈ ಪೈಕಿ ಕೆಲ ಕಸರತ್ತುಗಳು ಅವರಿಗೆ ಧನಾತ್ಮಕವಾಗಿದ್ದರೆ, ಇನ್ನೂ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗೆ ಗುರಿ ಮಾಡಿಬಿಡುತ್ತವೆ. ಇದು ಇಂಟರ್‌ನೆಟ್‌ ಯುಗವಾಗಿದ್ದರಿಂದ ಜನರು ರಾಜಕೀಯ ನಾಯಕರನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಸಣ್ಣದೊಂದು ತಪ್ಪೆಸಗಿದರೂ ಜನರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಾರೆ ಮತ್ತು ತಮ್ಮ ಆಕ್ಷೇಪವನ್ನು ದಾಖಲು ಮಾಡುತ್ತಾರೆ. ಇದೀಗ ಮಧ್ಯಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂತಹದ್ದೇ ಎಡವಟ್ಟೊಂದನ್ನು ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ ಆಗುತ್ತಿದ್ದಾರೆ.


  ಸಿಎಂ ಶಿವರಾಜ್ ಸಿಂಗ್‌ ಚೌಹಾಣ್ ಇತ್ತೀಚೆಗೆ ಸುರಿಯುವ ಮಳೆಯ ನಡುವೆಯೂ, ಸಹಾಯಕನೋರ್ವ ಹಿಡಿದ ಕೊಡೆಯ ಅಡಿಯಲ್ಲಿ ಟೈಲ್ಸ್‌ ಮೇಲೆ ನಿಂತು ಗಿಡಗಳಿಗೆ ನೀರುಣಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಚಿತ್ರವನ್ನು ಬಳಸಿಕೊಂಡು ನೆಟ್ಟಿಗರು ಮುಖ್ಯಮಂತ್ರಿಯನ್ನು ಟ್ರೋಲ್ ಮಾಡುತ್ತಿದ್ದಾರೆ.  ಆದರೆ ಮುಖ್ಯಮಂತ್ರಿಯ ಈ ಕಾರ್ಯವನ್ನು ಅವರ ಪ್ರಚಾರ ತಂಡದ ಅಧಿಕಾರಿಯೊಬ್ಬರು ಸಮರ್ಥನೆ ಮಾಡಿದ್ದಾಗಿ ವರದಿಯಾಗಿದೆ. “ಪ್ರತಿಕೂಲ ಹವಾಮಾನ ಇದ್ದರೂ ಕೂಡಾ ಮುಖ್ಯಮಂತ್ರಿ ಪ್ರತಿದಿನ ಗಿಡಗಳನ್ನು ನೆಡುತ್ತಾರೆ. ಎಲ್ಲವೂ ಅವರವರ ಭಾವಕ್ಕೆ ಬಿಟ್ಟದ್ದು” ಎಂದು ಅಧಿಕಾರಿ ಹೇಳಿದ್ದಾಗಿ ವರದಿಯಾಗಿದೆ.  ಟೈಲ್ಸ್‌ ಮೇಲೆ ನಿಂತು ಗಿಡಕ್ಕೆ ನೀರು ಹಾಕುತ್ತಿರುವ ಚೌಹಾಣ್‌ ಕುರಿತು ಪ್ರತಿಪಕ್ಷ ಕಾಂಗ್ರೆಸ್‌ ವ್ಯಂಗ್ಯವಾಡಿದೆ. “ಮಣ್ಣಿನ ಮಗ, ರೈತನ ಮಗ, ದುಬಾರಿ ಬೆಲೆಯ ಟೈಲ್ಸ್‌ ಮೇಲೆ ನಿಂತುಕೊಂಡು ಮಳೆಯ ನಡುವೆ ಕೊಡೆ ಹಿಡಿದುಕೊಂಡು ಗಿಡಗಳಿಗೆ ನೀರುಣಿಸುತ್ತಿರುವ ಅಪರೂಪದ ದೃಶ್ಯ” ಎಂದು ಹೇಳಿದೆ.  ಪತ್ರಕರ್ತ ಗುರುಪ್ರೀತ್ ಅವರು ಹಂಚಿವರು ಚಿತ್ರಕ್ಕೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು, ಬಿಜೆಪಿಯವರು ಎಲ್ಲರೂ ಹಾಗೆಯೆ ಎಂದು ಚಿತ್ರವವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹಲವಾರು ಬಿಜಿಪಿ ನಾಯಕರು ಮುಖ್ಯಮಂತ್ರಿ ಶಿವರಾಜ್ ಅವರ ರೀತಿಯಲ್ಲೇ ಗಿಡಗಳಿಗೆ ನೀರುಣಿಸುತ್ತಿರುವ ಚಿತ್ರವನ್ನು ಕೊಲಾಜ್ ಮಾಡಲಾಗಿದೆ. ಮತ್ತೊಬ್ಬ ಬಳಕೆದಾರರು, ಶಿವರಾಜ್ ಅವರನ್ನು ಅಧಿಕಾರಿಗಳು ಎತ್ತಿಕೊಂಡು ನದಿಯೊಂದನ್ನು ದಾಟಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

  Published by:MAshok Kumar
  First published: