Tamil Nadu ULB Election: ಡಿಎಂಕೆ ಮುನ್ನಡೆ; ಚೆನ್ನೈ ವಾರ್ಡ್​ನಲ್ಲಿ ಕಿರಿಯ ಅಭ್ಯರ್ಥಿಗೆ ಒಲಿದ ಜಯ

ಚೆನ್ನೈನ 136ನೇ ವಾರ್ಡ್​​​ನಲ್ಲಿ ಡಿಎಂಕೆ ಅಭ್ಯರ್ಥಿ ನಿಲವರಸಿ ಸೆಲ್ವರಾಜ್​ ಚುನಾವಣೆ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚುನಾವಣೆ ಗೆದ್ದ ಅತ್ಯಂತ ಕಿರಿಯ ಅಭ್ಯರ್ಥಿ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ

ಸಿಎಂ ಎಂಕೆ ಸ್ಟಾಲಿನ್​​

ಸಿಎಂ ಎಂಕೆ ಸ್ಟಾಲಿನ್​​

  • Share this:
    ಎಂಕೆ ಸ್ಟಾಲಿನ್​ ನೇತೃತ್ವದ ಆಡಳಿತಾ ರೂಢ ಡಿಎಂಕೆ (DMK) ಪಕ್ಷ ತಮಿಳುನಾಡಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ (Tamilnadu ULB Election) ಗೆಲುವು ಸಾಧಿಸುವಲ್ಲಿ ಮುನ್ನಡೆ ಸಾಧಿಸಿದೆ. ತೂತುಕುಡಿಯಲ್ಲಿ 60 ವಾರ್ಡ್‌ಗಳ ಪೈಕಿ 50 ವಾರ್ಡ್‌ಗಳಲ್ಲಿ ಡಿಎಂಕೆ ಗೆಲುವು ಸಾಧಿಸಿದೆ. ತೇಣಿ ಜಿಲ್ಲೆಯ ಆರು ಪುರಸಭೆಗಳನ್ನು ವಶಪಡಿಸಿಕೊಂಡಿದ್ದು,  ಎಐಎಡಿಎಂಕೆ ಭದ್ರಕೋಟೆ ಕೊಯಮತ್ತೂರಿನಲ್ಲಿಯೂ ಡಿಎಂಕೆ ಪಕ್ಷ ಮುನ್ನಡೆ ಸಾಧಿಸಿದೆ. ಏತನ್ಮಧ್ಯೆ, ಚೆನ್ನೈ ಕಾರ್ಪೊರೇಷನ್‌ನಲ್ಲಿ ಒಟ್ಟು 200 ವಾರ್ಡ್‌ಗಳಲ್ಲಿ 104 ಫಲಿತಾಂಶಗಳನ್ನು ಪ್ರಕಟಿಸಲಾಗಿದೆ. ಡಿಎಂಕೆ 81, ಎಐಎಡಿಎಂಕೆ 11, ಐಎನ್‌ಸಿ 5. ಮೂವರು ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಸಿಪಿಐ(ಎಂ) 2ರಲ್ಲಿ ಗೆಲುವು ಸಾಧಿಸಿದ್ದು, ಸಿಪಿಐ ಮತ್ತು ಎಂಡಿಎಂಕೆ ತಲಾ 1ರಲ್ಲಿ ಗೆಲುವು ಸಾಧಿಸಿವೆ.

    ಪಟ್ಟಣ ಪಂಚಾಯತ್​ ಫಲಿತಾಂಶ

    ಪಟ್ಟಣ ಪಂಚಾಯಿತಿಗಳಲ್ಲಿ ಎಐಎಡಿಎಂಕೆ 1,070 ಮತ್ತು ಡಿಎಂಕೆ 3,782 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 258, ಬಿಜೆಪಿ 132, ಸಿಪಿಎಂ 58 ಮತ್ತು ಸಿಪಿಐ 22 ಗೆದ್ದಿವೆ. ರಾಜಧಾನಿ ಚೆನ್ನೈ ಸೇರಿದಂತೆ 21 ನಗರಗಳು, 138 ಪುರಸಭೆಗಳು ಮತ್ತು 490 ಪಟ್ಟಣ ಪಂಚಾಯತ್‌ಗಳು 12,000 ಕ್ಕೂ ಹೆಚ್ಚು ಸದಸ್ಯರನ್ನು ಆಯ್ಕೆ ಮಾಡುತ್ತವೆ. ಕಳೆದ ಐದು ವರ್ಷಗಳಲ್ಲಿ, ಈ ಸಂಸ್ಥೆಗಳಿಗೆ ಚುನಾವಣೆ ನಡೆಯದ ಕಾರಣ ಚುನಾಯಿತ ಪ್ರತಿನಿಧಿಗಳು ಇರಲಿಲ್ಲ.

    ಸ್ಟಾಲಿನ್​ಗೆ ಪ್ರತಿಷ್ಠೆಯಾಗಿದ್ದ ಚುನಾವಣೆ

    ಎಂಕೆ ಸ್ಟಾಲಿನ್ ಮುಖ್ಯಮಂತ್ರಿಯಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಡಿಎಂಕೆ ಪಕ್ಷ ಸತತ ನಾಲ್ಕನೇ ಬಾರಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವಿನ ರುಚಿ ಕಾಣುತ್ತಿದೆ. ಸತತ ಮೂರು ಚುನಾವಣಾ ಸೋಲಿನ ನಂತರ ಎಐಎಡಿಎಂಕೆ ಹೋರಾಟ ನಡೆಸಿದೆ.

    ಎಐಎಡಿಎಂಕೆ ಎರಡನೇ ಸ್ಥಾನದಲ್ಲಿದ್ದು, ಪಾಲಿಕೆಗಳಲ್ಲಿ 9 ವಾರ್ಡ್‌ಗಳು, ಪುರಸಭೆಗಳಲ್ಲಿ 90 ವಾರ್ಡ್‌ಗಳು, ಪಟ್ಟಣ ಪಂಚಾಯಿತಿಗಳಲ್ಲಿ 385 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ. ಇದೇ ವೇಳೆ ನಗರಸಭೆಯಲ್ಲಿ 7, ಪುರಸಭೆಯಲ್ಲಿ 19, ಪಟ್ಟಣ ಪಂಚಾಯಿತಿಯಲ್ಲಿ 77, ನಗರಸಭೆಯಲ್ಲಿ 1, ಪುರಸಭೆಯಲ್ಲಿ 4, ಪಟ್ಟಣ ಪಂಚಾಯಿತಿಯಲ್ಲಿ 29ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

    ಇದನ್ನು ಓದಿ: Uttarakhandದಲ್ಲಿ ಕಮರಿಗೆ ಬಿದ್ಧ ಬಸ್; 14 ಮಂದಿ ಸಾವು: ಪ್ರಧಾನಿ ಸಂತಾಪ



    ಇನ್ನು ಈ ಚುನಾವಣೆಲ್ಲಿ ಮತದಾನದಲ್ಲಿ ಅಕ್ರಮ ನಡೆದಿದೆ ಎಂದು ಎಐಎಡಿಎಂಕೆ ಆರೋಪಿಸಿದೆ. ಡಿಎಂಕೆ ಮತದಾರರಿಗೆ 1000 ರೂ ನಗದು ಹಣದ ಆಮಿಷವೊಡ್ಡಿದೆ ಎಂದಿದೆ. ಕೊಯಮತ್ತೂರಿನ ಚುನಾವಣಾ ಫಲಿತಾಂಶಗಳು ಮತಕ್ಕಾಗಿ ನಗದು ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

    22 ವರ್ಷದ ಡಿಎಂಕೆ ಅಭ್ಯರ್ಥಿಗೆ ಒಲಿದ ಗೆಲುವು

    ಚೆನ್ನೈನ 136ನೇ ವಾರ್ಡ್​​​ನಲ್ಲಿ ಡಿಎಂಕೆ ಅಭ್ಯರ್ಥಿ ನಿಲವರಸಿ ಸೆಲ್ವರಾಜ್​ ಚುನಾವಣೆ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಚುನಾವಣೆ ಗೆದ್ದ ಅತ್ಯಂತ ಕಿರಿಯ ಅಭ್ಯರ್ಥಿ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. 22 ವರ್ಷದ ನಿಲವರಸಿ ಸ್ವತಂತ್ರ ಅಭ್ಯರ್ಥಿ ಗುಣಶೇಖರ್ ವಿರುದ್ಧ 500 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ

    ಇದನ್ನು ಓದಿ: ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

    ಚೆನ್ನೈ ಕಾರ್ಪೊರೇಷನ್‌ನ ವಾರ್ಡ್ 188 ರಲ್ಲಿ ಡಿಎಂಕೆ ಅಭ್ಯರ್ಥಿ  ಸಮೀನಾ ಸೆಲ್ವಂ ಅವರು  ಗೆಲುವು ಸಾಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಪತಿ ಸೆಲ್ವಂ ಬರ್ಬರವಾಗಿ ಹತ್ಯೆಗೀಡಾಗಿದ್ದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ಥಾನ ಪಡೆದ ನಂತರ ಅವರ ಪತಿ ಸೆಲ್ವಂ ಅವರನ್ನು ಹತ್ಯೆ ಮಾಡಲಾಗಿತು. ಬಳಿಕ ಪಕ್ಷ ಅವರ ಪತ್ನಿಯನ್ನು ಕಣಕ್ಕೆ ಇಳಿಸಿತ್ತು. ಈ ಹತ್ಯೆ ಪ್ರಕರಣ ಕುರಿತು ಪೊಲೀಸ್​ ಡಿಎಂಕೆ ದೂರು ಕೂಡ ದಾಖಲಿಸಿದೆ.

    ಫೆ. 19ರಂದು ನಡೆದ ಚುನಾವಣೆ

    ಫೆಬ್ರವರಿ 19 ರಂದು ತಮಿಳುನಾಡು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತದನಾನ ನಡೆದಿತು. ಈ ವೇಳೆ 21 ನಿಗಮಗಳು, 138 ಪುರಸಭೆಗಳು ಮತ್ತು 489 ಪಟ್ಟಣ ಪಂಚಾಯತ್‌ಗಳ 12,500 ಕ್ಕೂ ಹೆಚ್ಚು ವಾರ್ಡ್‌ಗಳಿಗೆ ಮತದಾರರು ಮತ ಚಲಾಯಿಸಿದ್ದರು.
    Published by:Seema R
    First published: