HOME » NEWS » National-international » CM MAMATHA BANERJEE WARNS BJP MEMBER WHO SHOUTED GOLIMAR SLOGAN IN WEST BENGAL GNR

ಗೋಲಿಮಾರ್​​ ಅಂದ್ರೆ ಸಹಿಸೋಕೆ ಇದು ದೆಹಲಿಯಲ್ಲ, ಪಶ್ಚಿಮ ಬಂಗಾಳ​: ಬಿಜೆಪಿಗರಿಗೆ ದೀದಿ ಎಚ್ಚರಿಕೆ

ಇತ್ತೀಚೆಗೆ ಭಾನುವಾರ ಕೇಂದ್ರ ಗೃಹ ಸಚಿವ ಒಂದು ದಿನದ ಪ್ರವಾಸಕ್ಕಾಗಿ ಕೋಲ್ಕತ್ತಾಗೆ ತೆರಳಿದ್ದರು. ಈ ವೇಳೆ ಮಧ್ಯಾದ್ನ 1.15 ಸುಮಾರಿಗೆ ನಡೆದ ಅಮಿತ್ ಶಾ ರ‍್ಯಾಲಿಯಲ್ಲಿ ಬಿಜೆಪಿ ಧ್ವಜ ಹಿಡಿದಿದ್ದ ಬಿಜೆಪಿ ಬೆಂಬಲಿಗರ ಗುಂಪೊಂದು “ದೇಶದ್ರೋಹಿಗಳಿಗೆ ಗುಂಡಿಕ್ಕಿ” ಎಂದು ಘೋಷಣೆ ಕೂಗಿದ್ದರು.


Updated:March 2, 2020, 3:45 PM IST
ಗೋಲಿಮಾರ್​​ ಅಂದ್ರೆ ಸಹಿಸೋಕೆ ಇದು ದೆಹಲಿಯಲ್ಲ, ಪಶ್ಚಿಮ ಬಂಗಾಳ​: ಬಿಜೆಪಿಗರಿಗೆ ದೀದಿ ಎಚ್ಚರಿಕೆ
ಮಮತಾ ಬ್ಯಾನರ್ಜಿ
  • Share this:
ಕೋಲ್ಕತ್ತಾ(ಮಾ.02): ಇಲ್ಲಿನ ಶಾಹೀದ್ ಮಿನಾರ್ ಮೈದಾನದಲ್ಲಿ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆಗೂ ಮುನ್ನ“ದೇಶ್ ಕೇ ಗಡ್ಡಾರನ್ ಕೋ, ಗೋಲಿ ಮಾರೋ" ಎಂಬ ಘೋಷಣೆಗಳು ಮೊಳಗಿದವು. ಹೀಗೆ ವಿವಾದಾತ್ಮಕ ಘೋಷಣೆಗಳನ್ನು ಕೂಗಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಕೋಲ್ಕತ್ತಾ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಬೆನ್ನಲ್ಲೇ ಅಮಿತ್​​ ಶಾ ಸಭೆಗೆ ಮುನ್ನ ದೇಶದ್ರೋಹಿಗಳಿಗೆ ಗುಂಡಿಕ್ಕಿ ಎಂದು ಮೊಳಗಿದ ಘೋಷಣೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ. ನೀವು ಗೋಲಿಮಾರ್​​ ಎಂದು ಘೋಷಣೆ ಕೂಗಿದರೆ ಸಹಿಸಲು ದೆಹಲಿಯಲ್ಲ, ಬದಲಿಗೆ ಇದು ಪಶ್ಚಿಮ ಬಂಗಾಳ ಎಂದು ಖಡಕ್​​​ ಸಂದೇಶ ರವಾನಿಸಿದ್ದಾರೆ.

ಇಂದು ನಗರದಲ್ಲಿ ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತಾಡಿದ ಸಿಎಂ ಮಮತಾ ಬ್ಯಾನರ್ಜಿ, 'ಕೋಲ್ಕತಾ ಬೀದಿಗಳಲ್ಲಿ ಗೋಲಿಮಾರೋ ಎಂದು ಘೋಷಣೆ ಕೂಗಿರುವುದು ಖಂಡನೀಯ. ಹೀಗೆ ದರ್ಪ ತೋರಿದರೆ ಸಹಿಸಲು ಇದು ದೆಹಲಿಯಲ್ಲ, ಬದಲಿಗೆ ಪಶ್ಚಿಮ ಬಂಗಾಳ. ಹಾಗಾಗಿ ಇಂತಹ ಘಟನೆಗಳನ್ನು ಸಹಿಸುವ ಮಾತೇ ಇಲ್ಲ. ಯಾರಾದರೂ ಗೋಲಿಮಾರ್​​ ಎಂದು ರಾಜ್ಯದ ಶಾಂತಿ ಕದಡುವ ಹೇಳಿಕೆ ನೀಡಿದರೆ, ರಾಜ್ಯದ ಕಾನೂನು ತನ್ನ ಕರ್ತವ್ಯ ನಿರ್ವಹಿಸಲಿದೆ' ಎಂದರು.

ಇತ್ತೀಚೆಗೆ ಭಾನುವಾರ ಕೇಂದ್ರ ಗೃಹ ಸಚಿವ ಒಂದು ದಿನದ ಪ್ರವಾಸಕ್ಕಾಗಿ ಕೋಲ್ಕತ್ತಾಗೆ ತೆರಳಿದ್ದರು. ಈ ವೇಳೆ ಮಧ್ಯಾದ್ನ 1.15 ಸುಮಾರಿಗೆ ನಡೆದ ಅಮಿತ್ ಶಾ ರ‍್ಯಾಲಿಯಲ್ಲಿ ಬಿಜೆಪಿ ಧ್ವಜ ಹಿಡಿದಿದ್ದ ಬಿಜೆಪಿ ಬೆಂಬಲಿಗರ ಗುಂಪೊಂದು “ದೇಶದ್ರೋಹಿಗಳಿಗೆ ಗುಂಡಿಕ್ಕಿ” ಎಂದು ಘೋಷಣೆ ಕೂಗಿದ್ದರು. ಹಾಗೆಯೇ "ಕಿಸ್ಕೊ ಚಾಹಿಯೆ ಆಜಾದಿ, ಹಮ್ ದೇಂಗೆ ಆಜಾದಿ (ಯಾರಿಗೆ ಸ್ವಾತಂತ್ರ್ಯ ಬೇಕು, ನಾವು ನೀಡುತ್ತೇವೆ ಸ್ವಾತಂತ್ರ್ಯ)" ಎಂದು ಘೋಷಣೆ ಕೂಗುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಇದನ್ನೂ ಓದಿ: ಅಮಿತ್ ಶಾ ಕೋಲ್ಕತ್ತಾ ರ‍್ಯಾಲಿಯಲ್ಲಿ ವಿವಾದಾತ್ಮಕ ‘ಗೋಲಿ ಮಾರೊ..’ ಘೋಷಣೆ; 3 ಜನ ಆರೋಪಿಗಳ ಬಂಧನ

ಇದಾದ ನಂತರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬೆನ್ನತ್ತಿದ ಪೊಲೀಸರು ಮೂವರಿಗೆ ಬಲೆ ಬೀಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 505, 506, 34 ಮತ್ತು 153-ಎ ಅಡಿಯಲ್ಲಿ ಆರೋಪಿಗಳ ವಿವಿಧ ಪ್ರಕರಣಗಳು ದಾಖಲಾಗಿವೆ.

ಈ ಹಿಂದೆ ಬಿಜೆಪಿ ನಾಯಕ ಅನುರಾಗ್ ಠಾಕೂರ್ ಸೇರಿದಂತೆ ಹಲವರು ಇಂತಹದ್ದೇ ಘೋಷಣೆ ಕೂಗಿದ್ದರು. ದೆಹಲಿ ಕೋಮುಗಲಭೆಗೆ ಬಿಜೆಪಿ ನಾಯಕರ ಈ ಪ್ರಚೋಧನಾಕಾರಿ ಘೋಷಣೆಗಳೇ ಕಾರಣ ಎಂಬ ಆರೋಪವೂ ಕೇಳಿ ಬಂದಿತ್ತು. ಇಂತವರ ವಿರುದ್ಧ ಕೂಡಲೇ ಎಫ್ಐಆರ್ ದಾಖಲು ಮಾಡುವಂತೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಮುರಳೀಧರ್ ದೆಹಲಿ ಪೊಲೀಸರಿಗೆ ತಾಕೀತು ಮಾಡಿದ್ದರು.
Youtube Video
First published: March 2, 2020, 3:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories