Modi-Banerjee: ಪ್ರಧಾನಿ ಮೋದಿಯೊಂದಿಗೆ ಯಾಸ್ ಚಂಡಮಾರುತ ಹಾನಿಯ ಬಗ್ಗೆ 15 ನಿಮಿಷ ಬ್ಯಾನರ್ಜಿ ಚರ್ಚೆ

ಮೋದಿ ಅವರು ಯಾಸ್ ಚಂಡಮಾರುತ ಕುರಿತ ಪರಿಶೀಲನಾ ಸಭೆ ನಡೆಸಿದ್ದರು. ಆದರೆ, ಈ ಸಭೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ಪಾಲ್ಗೊಂಡಿರಲಿಲ್ಲ. ಸಭೆಯಲ್ಲಿ ಬಂಗಾಳ ರಾಜ್ಯಪಾಲ ಜಗದೀಪ್ ದನ್ಖರ್​, ಬಿಜೆಪಿ ನಾಯಕ ಸುವೇಂದು ಅಧಿಕಾರಿ, ರಾಜ್ಯ ನೀರಾವರಿ ಸಚಿವ ಸೌಮೆನ್ ಮಹಾಪಾತ್ರ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ

ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ

  • Share this:
    ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಯಾಸ್​ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ಬಂಗಾಳ  ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಅವರು ವರದಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಯಾಸ್ ಚಂಡಮಾರುತ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ ಇಬ್ಬರು ನಾಯಕರು 15 ನಿಮಿಷಗಳ ಕಾಲ ಭೇಟಿಯಾಗಿ ಚರ್ಚೆ ನಡೆಸಿದರು. ಚಂಡಮಾರುತದಿಂದ ತೀರಾ ಹಾನಿಗೆ ಒಳಗಾದ ಪ್ರದೇಶಗಳ ಮರುಅಭಿವೃದ್ಧಿಗೆ 20 ಸಾವಿರ ಕೋಟಿ ಪರಿಹಾರ ನೀಡುವಂತೆ ಬ್ಯಾನರ್ಜಿ ಅವರು ಪ್ರಧಾನಿ ಬಳಿ ಕೋರಿದ್ದಾರೆ.

    ಇದಕ್ಕೂ ಹಿಂದಿನ ದಿನ ಪ್ರಧಾನಿ ಮೋದಿ ಅವರು ಚಂಡಮಾರುತದ ನಂತರದ ಪರಿಸ್ಥಿತಿಯನ್ನು ಪರಿಶೀಲಿಸಲು ಒಡಿಶಾಗೆ ತೆರಳಿ ಅಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ನಂತರ ಬಂಗಾಳಕ್ಕೆ ತೆರಳಿ, ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾದ ಕರಾವಳಿ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಆನಂತರ ಪಶ್ಚಿಮ ಮಿಡ್ನಾಪುರದ ಕಲೈಕುಂಡದಲ್ಲಿ ಯಾಸ್ ಚಂಡಮಾರುತದ ಪರಿಶೀಲನಾ ಸಭೆ ನಡೆಸಿದ್ದರು. ಆದರೆ, ಈ ಸಭೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು ಪಾಲ್ಗೊಂಡಿರಲಿಲ್ಲ. ಸಭೆಯಲ್ಲಿ ಬಂಗಾಳ ರಾಜ್ಯಪಾಲ ಜಗದೀಪ್ ದನ್ಖರ್​, ಬಿಜೆಪಿ ನಾಯಕ ಸುವೇಂದು ಅಧಿಕಾರಿ, ರಾಜ್ಯ ನೀರಾವರಿ ಸಚಿವ ಸೌಮೆನ್ ಮಹಾಪಾತ್ರ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

    ಪ್ರಧಾನಿಯವರು ಸೆಭೆ ಕರೆದಿದ್ದರು. ಆದರೆ, ದಿಘಾದಲ್ಲಿ ಸಭೆ ಇರುವುದು ನಮಗೆ ಗೊತ್ತಿರಲ್ಲ. ನಾನು ಕಲೈಕುಂಡಗೆ ತೆರಳಿ, ಪ್ರಧಾನಿ ಅವರಿಗೆ ವರದಿ ನೀಡಿದ್ದೇನೆ. 20,000 ಕೋಟಿ ರೂಪಾಯಿ ಮತ್ತು 10000 ಕೋಟಿ ರೂಪಾಯಿಯನ್ನು ದಿಘಾ ಅಭಿವೃದ್ಧಿ ಮತ್ತು ಸುಂದರಬನ್ ಅಭಿವೃದ್ಧಿಗಾಗಿ ಕೇಳಿದ್ದೇವೆ. ನಾನು ಅವರಿಗೆ ಹೇಳಿದ್ದೇನೆ ನೀವು (ರಾಜ್ಯದ ಅಧಿಕಾರಿಗಳು) ನನ್ನನ್ನು ಭೇಟಿಯಾಗಬೇಕಿದ್ದರೆ ನಾನು ಅವರಿಗೆ ಅನುಮತಿ ನೀಡಿದ್ದೇನೆ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು. ನಾಳೆ ನಾನು ಮತ್ತೆ ಚಂಡಮಾರುತದಿಂದ ಹಾನಿ ಉಂಟಾದ ಸ್ಥಳಗಳ ವೈಮಾನಿಕ ಸಮೀಕ್ಷೆ ನಡೆಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಅವರು ತಿಳಿಸಿದರು.

    ಇದನ್ನು ಓದಿ: ಜಾಮೀನು ನಿರಾಕರಣೆ ನಂತರ ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ನ್ಯಾಯಾಲಯ ಬಂಧನದಿಂದ ರಕ್ಷಣೆ ನೀಡಬೇಕು: ಸುಪ್ರೀಂಕೋರ್ಟ್ ಸೂಚನೆ

    ಇದಕ್ಕೂ ಮುನ್ನ ಸಿಎಂ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಉತ್ತರ 24 ಪರಗಣ ಜಿಲ್ಲೆಯ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರೊಂದಿಗೆ, ಬ್ಯಾನರ್ಜಿ ಅವರು ಹಿಂಗಲ್‌ಗಂಜ್, ಹಸ್ನಾಬಾದ್, ಸಂದೇಶ್ಖಾಲಿ, ಪಿನಾಖಾ ಮತ್ತು ಜಿಲ್ಲೆಯ ಇತರ ಪ್ರದೇಶಗಳಲ್ಲಿನ ಚಂಡಮಾರುತದ ನಂತರದ ಪರಿಸ್ಥಿತಿ ವೀಕ್ಷಿಸಿದರು. ಆನಂತರ ದಕ್ಷಿಣ 23 ಪಾರಾಗಣ ಜಿಲ್ಲೆಯ ಸಾಗರ್ ಐಸ್​ಲ್ಯಾಂಡ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ಮೋದಿ ಅವರು ಕರೆದಿರುವ ಯಾಸ್ ಚಂಡಮಾರುತದ ಪರಿಶೀಲನಾ ಸಭೆಗೆ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಾನು ಕಲೈಕುಂಡಗೆ ತಲುಪಲು 45 ನಿಮಿಷ ತಗುಲುತ್ತದೆ. ಅದಕ್ಕಾಗಿ ನಾನು ಬಂಗಾಳದಲ್ಲಿ ಯಾಸ್ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಸಿದ್ದಪಡಿಸಿದ್ದೇನೆ. ಇದನ್ನು ಪ್ರಧಾನಿ ಮೋದಿ ಅವರಿಗೆ ತಲುಪಿಸುತ್ತೇನೆ ಎಂದು ಹೇಳಿದ್ದರು.

    ಪ್ರಧಾನಿ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿ ವಾಯುಪಡೆಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಪಶ್ಚಿಮ ಬಂಗಾಳದ ಗವರ್ನರ್ ಜಗದೀಪ್ ಧನ್ಖರ್, ಕಲೈಕುಂಡದಲ್ಲಿ ವಾಯುಪಡೆಯ ನಿಲ್ದಾಣದ ಮುಖ್ಯಸ್ಥರು ಪ್ರಧಾನಿ ಅವರನ್ನು ಬರಮಾಡಿಕೊಂಡರು. ಬಳಿಕ ಯಾಸ್ ಚಂಡಮಾರುತ ಹಾನಿ ಉಂಟು ಮಾಡಿರುವ ಸ್ಥಳಗಳ ವೈಮಾನಿಕ ಸಮೀಕ್ಷೆಗೆ ತೆರಳಿದರು. ಇದಾದ ಬಳಿಕ ಸರ್ಕಾರದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಇದಕ್ಕೂ ಹಿಂದಿನ ದಿನ, ಪ್ರಧಾನಿ ಮೋದಿ ಅವರು ಭುವನೇಶ್ವರಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಒಡಿಶಾದ ಬಾಲಸೋರ್ ಮತ್ತು ಭದ್ರಾಕ್​ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು.
    Published by:HR Ramesh
    First published: