HOME » NEWS » National-international » CM MAMATA BANERJEE SAYS THESE PEOPLE WILL SPREAD COVID IN THE STATE AND THEN GO AWAY SESR

Mamata Banerjee: ರಾಜ್ಯದಲ್ಲಿ ಕೋವಿಡ್​ ಸೋಂಕು ಹಬ್ಬಿಸಿ ಹೋಗುತ್ತಾರೆ ಇವರು; ದೀದಿ ವಾಗ್ದಾಳಿ

ದೇಶದೆಲ್ಲೆಡೆ ಸೋಂಕು ಉಲ್ಬಣಗೊಂಡಿರುವಾಗ ಬೇರೆ ರಾಜ್ಯಗಳಿಂದ ಜನರನ್ನು ಕರೆತರುತ್ತಿದ್ದಾರೆ. ಇದು ಕೊರೋನಾ ಹರಡುವಿಕೆಗೆ ಕಾರಣವಾಗುತ್ತದೆ.

news18-kannada
Updated:April 14, 2021, 7:50 PM IST
Mamata Banerjee: ರಾಜ್ಯದಲ್ಲಿ ಕೋವಿಡ್​ ಸೋಂಕು ಹಬ್ಬಿಸಿ ಹೋಗುತ್ತಾರೆ ಇವರು; ದೀದಿ ವಾಗ್ದಾಳಿ
ಮಮತಾ ಬ್ಯಾನರ್ಜಿ
  • Share this:
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ 24 ಗಂಟೆಗಳ ಕಾಲ ಚುನಾವಣಾ ಪ್ರಚಾರದಿಂದ ನಿಷೇಧಕ್ಕೆ ಒಳಗಾಗಿದ್ದ ಸಿಎಂ ಮಮತಾ ಬ್ಯಾನರ್ಜಿ ಇಂದು ಮತ್ತೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಜಲ್ಫೈಗುರಿಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾದ ಅವರು, ರಾಜ್ಯದಲ್ಲಿ ಬಿಜೆಪಿ ಕೊರೋನಾ ಸೋಂಕು ಹಬ್ಬಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಬಿಜೆಪಿ ನಾಯಕರು ರಾಜ್ಯದಲ್ಲಿ ಕೊರೋನಾ ಸೋಂಕು ಹಬ್ಬಿಸಿ, ಹೋಗುತ್ತಾರೆ. ದೇಶದೆಲ್ಲೆಡೆ ಸೋಂಕು ಉಲ್ಬಣಗೊಂಡಿರುವಾಗ ಬೇರೆ ರಾಜ್ಯಗಳಿಂದ ಜನರನ್ನು ಕರೆತರುತ್ತಿದ್ದಾರೆ. ಇದು ಕೊರೋನಾ ಹರಡುವಿಕೆಗೆ ಕಾರಣವಾಗುತ್ತದೆ. ಕಳೆದ ವರ್ಷ ಕೋವಿಡ್​ ಹಬ್ಬಿದಾಗ ಯಾವ ಬಿಜೆಪಿ ನಾಯಕರನ್ನು ರಾಜ್ಯಕ್ಕೆ ಬರದಂತೆ ನೋಡಿಕೊಳ್ಳಲಾಗಿತ್ತು ಎಂದು ಕುಟುಕಿದರು. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಮತದಾನ ನಡೆದ 135 ಕ್ಷೇತ್ರಗಳಲ್ಲಿ ಬಿಜೆಪಿ 100 ಸ್ಥಾನಗಳನ್ನು ಗೆದ್ದಿದೆ ಎಂದು ಹೇಳುತ್ತಾರೆ. ಆದರೆ, ಚುನಾವಣೆ ಮುಗಿದ ನಂತರ ಬಿಜೆಪಿಗೆ 294 ಕ್ಷೇತ್ರಗಳಲ್ಲಿ 70 ಸ್ಥಾನ ಕೂಡ ಗೆಲ್ಲುವುದಿಲ್ಲ ಎಂದು ಲೇವಡಿ ಮಾಡಿದರು.

ಚುನಾವಣಾ ಸಮಾವೇಶದಲ್ಲಿ ದೀದಿ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರಧಾನಿ ಮೋದಿ, ನಂದಿಗ್ರಾಮದಲ್ಲಿ ದೀದಿ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ನಾವು ಈಗಾಗಲೇ ಸೆಂಚುರಿ ಭಾರಿಸಿದ್ದೇವೆ ಎನ್ನುವ ಮೂಲಕ ನೂರು ಕ್ಷೇತ್ರಗಳಲ್ಲಿ ತಮಗೆ ಗೆಲುವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ರಾಷ್ಟ್ರೀಯ ಪೌರತ್ವ ನೊಂದಾಣಿ ಅನುಷ್ಟಾನ ಕುರಿತು ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಎನ್​ಆರ್​ಸಿ ಅನುಷ್ಠಾನಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ: ಯೋಗದ 24 ಗಂಟೆಗಳ ನಿರ್ಬಂಧ ಅಂತ್ಯವಾಗುತ್ತಲೇ ಪುಟಿದೆದ್ದ ದೀದಿ; ಅಮಿತ್ ಶಾಗೆ ಪಂಥಾಹ್ವಾನ..!

ಪಶ್ಚಿಮ ಬಂಗಾಳದಲ್ಲಿ ಎನ್​ಆರ್​ಸಿ ಜಾರಿಗೆ ತರುವ ಕುರಿತು ಕೇಂದ್ರ ಸಚಿವ ಅಮಿತ್​ ಶಾ ಹೇಳಿಕೆಗೆ ತಿರುಗೇಟು ನೀಡಿದ ಅವರು, ನೀವೆಲ್ಲರೂ ನಾಗರಿಕರು. ನನ್ನ ಮನವಿ ಎಂದರೆ ನೀವು ಎಲ್ಲಾ ಮತ ಚಲಾಯಿಸಬೇಕು ಎಂದರು

ಜನ ವಿರೋಧಿ, ಬಡವರ ವಿರೋಧಿ ನಿಲುವಿನಿಂದಾಗಿ ಇಂಧನದ ಬೆಲೆ ಗಗನಕ್ಕೆ ಏರಿದೆ. ಬಿಜೆಪಿ ಸುಳ್ಳು ಹೇಳುತ್ತಾ ಜನರನ್ನು ವಂಚಿಸುತ್ತಿದೆ. ಒಂದೇ ವಿಷಯದ ಬಗ್ಗೆ ವಿಭಿನ್ನ ಹೇಳಿಕೆ ನೀಡುವ ಮೂಲಕ ಬಿಜೆಪಿ ಸುಳ್ಳು ಹರಡುತ್ತಿದೆ ಎಂದು ಇದೇ ವೇಳೆ ಆರೋಪಿಸಿದರು.
Published by: Seema R
First published: April 14, 2021, 7:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories