ಜನರ ಕಲ್ಯಾಣಕ್ಕಾಗಿ ಪ್ರಧಾನಿ ಕಾಲಿಗೆ ಬೀಳಲು ಸಿದ್ಧ. ಆದರೆ, ಅವಮಾನ ಸಹಿಸಲ್ಲ; ಮಮತಾ ಬ್ಯಾನರ್ಜಿ

ಪ್ರಧಾನಿ ಮತ್ತು ಮುಖ್ಯಮಂತ್ರಿ ನಡುವಿನ ಮಾತುಕತೆ ಸಭೆಗೆ ಎಲ್ಲರನ್ನು ಆಮಂತ್ರಿಸಿದ್ದು ಸರಿಯಲ್ಲ

ಮಮತಾ ಬ್ಯಾನರ್ಜಿ.

ಮಮತಾ ಬ್ಯಾನರ್ಜಿ.

 • Share this:
  ಕೊಲ್ಕತ್ತಾ (ಮೇ. 28): ಯಾಸ್​ ಚಂಡಮಾರುತದಿಂದ ಉಂಟಾಗಿರುವ ಹಾನಿ ಕುರಿತ ಪ್ರಧಾನಿ ನೇತೃತ್ವದ ಪರಾಮರ್ಶೆ ಸಭೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೈರಾಗಿದ್ದರು. ಪ್ರಧಾನಿ ಮೋದಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ನಡುವಿನ ಮತ್ತೊಂದು ಸಂಘರ್ಷಕ್ಕೆ ಕಾರಣವಾಗಿತ್ತು. ಈ ಕುರಿತು ಇಂದು ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಒಂದು ವೇಳೆ ಜನರ ಕಲ್ಯಾಣಕ್ಕಾಗಿ ಪ್ರಧಾನಿಗಳು ತಮ್ಮ ಕಾಲು ಮಟ್ಟುವಂತೆ ಹೇಳಿದರೆ ಅದಕ್ಕೆ ನಾನು ಸಿದ್ಧ. ಆದರೆ, ಅವರು ಅವಮಾನಿಸಿದರೆ ಸಹಿಸಲು ಅಸಾಧ್ಯ ಎಂದಿದ್ದಾರೆ. ಇದೇ ವೇಳೆ ಅವರು ಪರಮಾರ್ಶೆ ಸಭೆಗೆ ರಾಜ್ಯಪಾಲರು, ಬಿಕೆಪಿ ನಾಯಕರನ್ನು ಆಹ್ವಾನಿಸಿದರ ಬಗ್ಗೆ ಅಸಹನೆ ವ್ಯಕ್ತಪಡಿಸಿದರು. ಪ್ರಧಾನಿ ಮತ್ತು ಮುಖ್ಯಮಂತ್ರಿ ನಡುವಿನ ಮಾತುಕತೆ ಸಭೆಗೆ ಎಲ್ಲರನ್ನು ಆಮಂತ್ರಿಸಿದ್ದು ಸರಿಯಲ್ಲ. ಪ್ರಧಾನ ಮಂತ್ರಿ ಕಚೇರಿಯೂ ನನ್ನನ್ನು ಅಮಾನಿಸಿತು, ಅಲ್ಲದೇ ನನ್ನ ವರ್ಚಸ್ಸಿಗೆ ಧಕ್ಕೆ ತರುವ ಟ್ವೀಟ್​ ಮಾಡಿತು ಎಂದು ಇದೇ ವೇಳೆ ಅವರು ಗುಡುಗಿದ್ದಾರೆ.

  ಯಾಸ್​ ಚಂಡಮಾರುತ ಕುರಿತು ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ನಡುವೆ ಚರ್ಚೆ ನಡೆಯಬೇಕು. ಆದರೆ, ಈ ಸಭೆಗೆ ಬಿಜೆಪಿ ನಾಯಕರು, ರಾಜ್ಯ ಪಾಲರನ್ನು ಕರೆದಿದ್ದಾರೆ. ಇದು ಉದ್ದೇಶ ಪೂರ್ವಕವಾಗಿದ್ದು, ಈ ಘಟನೆಯಿಂದ ನಾನು ಅವಮಾನಕ್ಕೆ ಒಳಗಾಗದೆ ಎಂದು ಅವರು ತಿಳಿಸಿದ್ದಾರೆ

  ಮಮತಾ ಬ್ಯಾನರ್ಜಿ ಸಭೆಗೆ ಗೈರಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ ಅಲಾಪನ್​​ ಬಂಡೋಪಾಧ್ಯಾಯರನ್ನು ಹಿಂದಕ್ಕೆ ಕರೆಸಿಕೊಂಡಿದೆ. ಈ ಆದೇಶದ ಕುರಿತು ಮಾತನಾಡಿರುವ ದೀದಿ, ಕೇಂದ್ರ ಸರ್ಕಾರದ ಆದೇಸ ಹಿಂಪಡೆಯುವಂತೆ ಪ್ರಧಾನಿ ಮೋದಿ ಅವರಿಗೆ ಕೋರಿದ್ದಾರೆ. ಬಂಗಾಳದಲ್ಲಿ ಕೋವಿಡ್​ ಸೋಂಕು ನಿರ್ವಹಣೆಗೆ ಅಧಿಕಾರಿಗಳಿಗೆ ಅವಕಾಶ ನೀಡುವಂತೆ ಅವರು ಕೋರಿದ್ದಾರೆ.

  ಇದನ್ನು ಓದಿ: ಜನ ಸಹಕರಿಸಿದರೆ, ಲಾಕ್​ಡೌನ್​ ವಿಸ್ತರಣೆ ಪ್ರಶ್ನೆಯೇ ಇಲ್ಲ; ಸಿಎಂ ಬಿಎಸ್​ ಯಡಿಯೂರಪ್ಪ

  ಮಮತಾ ಈ ನಡೆ ಕುರಿತು ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಜನರ ಕಲ್ಯಾಣಕ್ಕಿಂತ ಅವರಿಗೆ ದುರಹಂಕಾರವೇ ಹೆಚ್ಚಾಯಿತು ಎಂದಿದ್ದರು. ಮತ್ತೊಬ್ಬ ಹಿರಿ ಸಿಚಿವರಾದ ರಾಜನಾಥ್​ ಸಿಂಗ್​, ಮಮತಾ ನಡುವಳಿಕೆ ಆಘಾತಕಾರಿ ಎಂದಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಇದು ಸಾಂವಿಧಾನಿಕ ನೀತಿಗಳ ಕೊಲೆ ಎಂದು ಟೀಕಿಸಿದ್ದರು

  ರಾಜ್ಯಪಾಲ ಜಗದೀಪ್​ ಧಂಕರ್​, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್​ ದೇಬಶ್ರೀ ಚೌಧರಿ ಸೇರಿದಂತೆ ಕೆಲ ನಾಯಕರೊಂದಿಗೆ ಪ್ರಧಾನಿಗಳು ಚಂಡ ಮಾರುತದ ಹಾನಿ ಸಭೆ ನಡೆಸಲು ನಿರ್ಧರಿಸಿದ್ದರು. ಈ ಸಭೆಗೆ 30 ನಿಮಿಷ ತಡವಾಗಿ ಬಂದ ಸಿಎಂ ಮಮತಾ ಬ್ಯಾನರ್ಜಿ ಹಲವು ನಿಮಿಷಗಳ ಕಾಲ ಇದ್ದು, ಕೆಲ ದಾಖಲೆಗಳನ್ನು ಪ್ರಧಾನಿಗೆ ನೀಡಿ ಹೋದರು. ಮಮತಾ ಬ್ಯಾನರ್ಜಿ ಅವರ ಈ ನಡೆ ಸಾಕಷ್ಟು ಟೀಕೆಗೆ ಕಾರಣವಾಗಿತ್ತು.
  ಮೂಲಗಳ ಪ್ರಕಾರ, ಹಾನಿ ಕುರಿತ ಚಿತ್ರಣಗಳೊಂದಿಗೆ ಪ್ರಧಾನಿ ಎದುರು ಮಮತಾ ಬ್ಯಾನರ್ಜಿ ಪ್ರೆಸೆಟೆಷನ್​ ಮಾಡಲು ಮುಂದಾಗಿದ್ದರು. ಆದರೆ, ಇದಕ್ಕೆ ಅವಕಾಶ ನೀಡಲಿಲ್ಲ ಎಂಬ ಆಘಾತಕಾರಿ ವಿಷಯ ಹೊರ ಬಂದಿದೆ.

  ಇದಕ್ಕೂ ಮುನ್ನ ಸಿಎಂ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಉತ್ತರ 24 ಪರಗಣ ಜಿಲ್ಲೆಯ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರೊಂದಿಗೆ, ಬ್ಯಾನರ್ಜಿ ಅವರು ಹಿಂಗಲ್‌ಗಂಜ್, ಹಸ್ನಾಬಾದ್, ಸಂದೇಶ್ಖಾಲಿ, ಪಿನಾಖಾ ಮತ್ತು ಜಿಲ್ಲೆಯ ಇತರ ಪ್ರದೇಶಗಳಲ್ಲಿನ ಚಂಡಮಾರುತದ ನಂತರದ ಪರಿಸ್ಥಿತಿ ವೀಕ್ಷಿಸಿದರು. ಆನಂತರ ದಕ್ಷಿಣ 23 ಪಾರಾಗಣ ಜಿಲ್ಲೆಯ ಸಾಗರ್ ಐಸ್​ಲ್ಯಾಂಡ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ಮೋದಿ ಅವರು ಕರೆದಿರುವ ಯಾಸ್ ಚಂಡಮಾರುತದ ಪರಿಶೀಲನಾ ಸಭೆಗೆ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಾನು ಕಲೈಕುಂಡಗೆ ತಲುಪಲು 45 ನಿಮಿಷ ತಗುಲುತ್ತದೆ. ಅದಕ್ಕಾಗಿ ನಾನು ಬಂಗಾಳದಲ್ಲಿ ಯಾಸ್ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಸಿದ್ದಪಡಿಸಿದ್ದೇನೆ. ಇದನ್ನು ಪ್ರಧಾನಿ ಮೋದಿ ಅವರಿಗೆ ತಲುಪಿಸುತ್ತೇನೆ ಎಂದು ಹೇಳಿದ್ದರು
  Published by:Seema R
  First published: