• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Mamata Banerjee: ಮಮತಾ ಬ್ಯಾನರ್ಜಿಯಿಂದ ಪ್ರಧಾನಿ ಮೋದಿ ಭೇಟಿ ಸಾಧ್ಯತೆ; ಪಾರ್ಥ ಚಟರ್ಜಿ ಬಂಧನದ ಎಫೆಕ್ಟ್​?

Mamata Banerjee: ಮಮತಾ ಬ್ಯಾನರ್ಜಿಯಿಂದ ಪ್ರಧಾನಿ ಮೋದಿ ಭೇಟಿ ಸಾಧ್ಯತೆ; ಪಾರ್ಥ ಚಟರ್ಜಿ ಬಂಧನದ ಎಫೆಕ್ಟ್​?

ಸಿಎಂ ಮಮತಾ ಬ್ಯಾನರ್ಜಿ

ಸಿಎಂ ಮಮತಾ ಬ್ಯಾನರ್ಜಿ

ಬಂಧಿತ ತೃಣಮೂಲ ನಾಯಕ ಪಾರ್ಥ ಚಟರ್ಜಿ ಮತ್ತು  ಅರ್ಪಿತಾ ಮುಖರ್ಜಿ ಅವರಿಗೆ 14 ದಿನಗಳ ಕಾಲ ಜೈಲುವಾಸ ಮುಂದುವರೆಸಲಾಗಿದೆ. ಮುಂದಿನ ವಿಚಾರಣೆ ಆಗಸ್ಟ್ 18 ರಂದು ನಡೆಯಲಿದೆ. 

 • Share this:

  ದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ಭೇಟಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬಹುಕಾಲದಿಂದ ಬೇಡಿಕೆಯಿಟ್ಟಿರುವ ಸರಕು ಮತ್ತು ಸೇವಾ ತೆರಿಗೆಯ ಬಾಕಿ ಸೇರಿದಂತೆ ಹಲವು ವಿಷಯಗಳ ಸುತ್ತ ಚರ್ಚೆ ನಡೆಸುವ ಸಾಧ್ಯತೆಯಿದೆ. ಆದರೂ ಜಾರಿ ನಿರ್ದೇಶನಾಲಯವು ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿಯನ್ನು ಬಂಧನದ ಕೆಲವು ದಿನಗಳ ನಂತರ ಈ ಸಭೆಯು ಹೆಚ್ಚಿನ ಊಹಾಪೋಹಗಳನ್ನು ಹುಟ್ಟುಹಾಕಿದೆ.


  ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ಸದ್ಯ ಪಶ್ಚಿಮ ಬಂಗಾಳ ಸಿಎಂ ಬ್ಯಾನರ್ಜಿ ನಾಲ್ಕು ದಿನಗಳ ಭೇಟಿಗಾಗಿ ದೆಹಲಿಯಲ್ಲಿದ್ದಾರೆ. ಜೊತೆಗೆ ಅವರು ಇಂದು ದೇಶದ ಹೊಸ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.


  ಪಾರ್ಥ ಚಟರ್ಜಿ ಮತ್ತು  ಅರ್ಪಿತಾ ಮುಖರ್ಜಿಗೆ ನ್ಯಾಯಾಂಗ ಬಂಧನ
  ಬಂಧಿತ ತೃಣಮೂಲ ನಾಯಕ ಪಾರ್ಥ ಚಟರ್ಜಿ ಮತ್ತು  ಅರ್ಪಿತಾ ಮುಖರ್ಜಿ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧ ಮುಂದುವರೆಸಲಾಗಿದೆ. ಮುಂದಿನ ವಿಚಾರಣೆ ಆಗಸ್ಟ್ 18 ರಂದು ನಡೆಯಲಿದೆ.


  ಪಶ್ಚಿಮ ಬಂಗಾಳ ಸಂಪುಟ ವಿಸ್ತರಣೆ
  2011 ರಲ್ಲಿ ಪಕ್ಷವು ಅಧಿಕಾರಕ್ಕೆ ಬಂದ ನಂತರದ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಈಗಿನ ಸಂಪುಟ ವಿಸ್ತರಣೆ ಅತಿದೊಡ್ಡ ಬೆಳವಣಿಗೆ ಎಂದು ಬಿಂಬಿಸಲಾಗಿದೆ. ಎಸ್​ಎಸ್​​ಸಿ ಹಗರಣದಿಂದ ಪಾರ್ಥ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ಬಳಿಕ ದೀದಿ ಸಂಪುಟದಲ್ಲಿ ಐವರು ಹೊಸ ಮುಖಗಳಿಗೆ ಅವಕಾಶ ನೀಡಿದ್ದಾರೆ.


  ದೊಡ್ಡ ಮಟ್ಟದಲ್ಲಿ ವಿಸ್ತರಣೆ ಮಾಡಿದ್ದ ದೀದಿ
  ಸಂಪುಟ ವಿಸ್ತರಣೆ ನಂತರ ಸಚಿವ ಸಂಪುಟ ಪುನಾರಚನೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಹೊಸಬರಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿರುವ ಹೆಸರು ಬಾಬುಲ್ ಸುಪ್ರಿಯೊ. ಬಿಜೆಪಿಯ ಮಾಜಿ ಕೇಂದ್ರ ಸಚಿವರಾದ ಸುಪ್ರಿಯೊ ಕಳೆದ ವರ್ಷ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.


  ಇದನ್ನೂ ಓದಿ: SSC Scam: ಡ್ಯಾಮೇಜ್ ಕಂಟ್ರೋಲ್​​ಗೆ ಇಳಿದ ದೀದಿ; ಸಂಪುಟಕ್ಕೆ ಸರ್ಜರಿ, ಹೊಸ ಮುಖಗಳಿಗೆ ಮಣೆ


  ಹೊಸದಾಗಿ ಯಾರು ಸಂಪುಟಕ್ಕೆ ಸೇರ್ಪಡೆ?
  ಬಾಬುಲ್ ಸುಪ್ರಿಯೊ ಅವರೊಂದಿಗೆ ಸ್ನೇಹಶಿಶ್ ಚಕ್ರವರ್ತಿ, ಪಾರ್ಥ ಭೌಮಿಕ್, ಉದಯನ್ ಗುಹಾ ಮತ್ತು ಪ್ರದೀಪ್ ಮಜುಂದಾರ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗುವುದು. ನಾಲ್ವರು ಕಿರಿಯ ಮಂತ್ರಿಗಳಾಗಿ ಬಿರ್ಬಹಾ ಹನ್ಸ್ದಾ, ಬಿಪ್ಲಬ್ ರಾಯ್ ಚೌಧರಿ, ತಜ್ಮುಲ್ ಹೊಸೈನ್ ಮತ್ತು ಸತ್ಯಜಿತ್ ಬರ್ಮನ್ ಸ್ಥಾನ ಪಡೆಯಲಿದ್ದಾರೆ.


  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಆಪ್ತ ಸಹಾಯಕ ಪಾರ್ಥ ಚಟರ್ಜಿ ಅವರನ್ನು ಬಂಧಿಸಿದ ದಿನಗಳ ನಂತರ ಐವರು ಹೊಸ ಸಚಿವರು ಇಂದು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಿದರು. ಅವರ ಸಹಾಯಕಿ ಅರ್ಪಿತಾ ಮುಖರ್ಜಿಗೆ ಸೇರಿದ ಎರಡು ಆಸ್ತಿಗಳಿಂದ ನಗದು ರಾಶಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಸರ್ಕಾರವು ಹೆಚ್ಚಿನ ಟೀಕೆಗೆ ಗುರಿಯಾಗಿದೆ.


  ಇದನ್ನೂ ಓದಿ: Mamata Banerjee: ಬೀದಿ ಬದಿ ಪಾನಿಪುರಿ ಹಂಚಿದ ಸಿಎಂ! ದೀದಿ ಸಿಂಪ್ಲಿಸಿಟಿಗೆ ಜನರು ಫಿದಾ


  ಪಾರ್ಥ ಚಟರ್ಜಿ ಬಂಧನದ ನಂತರ ಸಚಿವ ಸ್ಥಾನದಿಂದ ವಜಾಗೊಳಿಸಲಾಯಿತು. ಚಟರ್ಜಿ ಅವರು ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮಗಳು ಮತ್ತು ಸಂಸದೀಯ ವ್ಯವಹಾರಗಳು ಸೇರಿದಂತೆ ಐದು ಪ್ರಮುಖ ಇಲಾಖೆಗಳ ಉಸ್ತುವಾರಿ ವಹಿಸಿದ್ದರು.


  ಪಾರ್ಥ ಚಟರ್ಜಿಯಿಂದ ಅಂತರ ಕಾಯ್ದುಕೊಂಡಿದ್ದ ದೀದಿ
  ಟಿಎಂಸಿ ನಾಯಕತ್ವವು ಪಾರ್ಥ ಚಟರ್ಜಿಯವರ ಹೇಳಿಕೆಗಳಿಂದ ಅಂತರ ಕಾಯ್ದುಕೊಳ್ಳಲಿದೆ. ಅವರ ಭವಿಷ್ಯಕ್ಕೆ ಚಟರ್ಜಿ ಅವರೇ ಜವಾಬ್ದಾರರು ಎಂದು ದೀದಿ ಖಡಕ್​ ಹೇಳಿಕೆ ನೀಡಿದ್ದು.

  Published by:guruganesh bhat
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು