Yaas Cyclone: ಪರಿಶೀಲನಾ ಸಭೆಗೆ 30 ನಿಮಿಷ ತಡವಾಗಿ ಬಂದು ಪ್ರಧಾನಿಗೆ ವರದಿ ನೀಡಿ ಮತ್ತೆ ತೆರಳಿದ ಮಮತಾ ಬ್ಯಾನರ್ಜಿ!

ನಾನು ಕಲೈಕುಂಡಗೆ ತಲುಪಲು 45 ನಿಮಿಷ ತಗುಲುತ್ತದೆ. ಅದಕ್ಕಾಗಿ ನಾನು ಬಂಗಾಳದಲ್ಲಿ ಯಾಸ್ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಸಿದ್ದಪಡಿಸಿದ್ದೇನೆ. ಇದನ್ನು ಪ್ರಧಾನಿ ಮೋದಿ ಅವರಿಗೆ ತಲುಪಿಸುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.

ಬಂಗಾಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ.

ಬಂಗಾಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ಮೋದಿ.

 • Share this:
  ಶುಕ್ರವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿ  ಯಾಸ್ ಚಂಡಮಾರುತ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಖಾರ್, ಬಿಜೆಪಿ ಮುಖಂಡ ಸುವೇಂಧು ಅಧಿಕಾರಿ, ರಾಜ್ಯ ನೀರಾವರಿ ಸಚಿವ ಸೌಮೆನ್ ಮಹಾಪಾತ್ರ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದರು. ಆದರೆ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮಾತ್ರ ಸಭೆಯಲ್ಲಿ ಭಾಗವಹಿಸಲಿಲ್ಲ.

  ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು 30 ನಿಮಿಷಗಳ ಕಾಲ ತಡವಾಗಿ ಪರಿಶೀಲನಾ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಬಂದರು. ಮೂಲಗಳ ಪ್ರಕಾರ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಚಂಡಮಾರುತದ ಪರಿಣಾಮ ಮತ್ತು ಅದರಿಂದ ಉಂಟಾಗಿರುವ ಹಾನಿಯ ಬಗ್ಗೆ ಸಂಬಂಧಿಸಿದ ವರದಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡಿ, ನನಗೆ ಬೇರೆ ಸಭೆಗಳು ನಿಗದಿಯಾಗಿವೆ. ಹಾಗಾಗಿ ನಾನು ತೆರಳುತ್ತೇನೆ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು ಎಂದು ತಿಳಿದುಬಂದಿದೆ.

  ಪ್ರಧಾನಿಯವರು ಸೆಭೆ ಕರೆದಿದ್ದರು. ಆದರೆ, ದಿಘಾದಲ್ಲಿ ಸಭೆ ಇರುವುದು ನಮಗೆ ಗೊತ್ತಿರಲ್ಲ. ನಾನು ಕಲೈಕುಂಡಗೆ ತೆರಳಿ, ಪ್ರಧಾನಿ ಅವರಿಗೆ ವರದಿ ನೀಡಿದ್ದೇನೆ. 20,000 ಕೋಟಿ ರೂಪಾಯಿ ಮತ್ತು 10000 ಕೋಟಿ ರೂಪಾಯಿಯನ್ನು ದಿಘಾ ಅಭಿವೃದ್ಧಿ ಮತ್ತು ಸುಂದರಬನ್ ಅಭಿವೃದ್ಧಿಗಾಗಿ ಕೇಳಿದ್ದೇವೆ. ನಾನು ಅವರಿಗೆ ಹೇಳಿದ್ದೇನೆ ನೀವು (ರಾಜ್ಯದ ಅಧಿಕಾರಿಗಳು) ನನ್ನನ್ನು ಭೇಟಿಯಾಗಬೇಕಿದ್ದರೆ ನಾನು ಅವರಿಗೆ ಅನುಮತಿ ನೀಡಿದ್ದೇನೆ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು. ನಾಳೆ ನಾನು ಮತ್ತೆ ಚಂಡಮಾರುತದಿಂದ ಹಾನಿ ಉಂಟಾದ ಸ್ಥಳಗಳ ವೈಮಾನಿಕ ಸಮೀಕ್ಷೆ ನಡೆಸುವುದಾಗಿ ಸಿಎಂ ಮಮತಾ ಬ್ಯಾನರ್ಜಿ ಅವರು ತಿಳಿಸಿದರು.

  ಇದನ್ನು ಓದಿ: Yaas Cyclone: ಯಾಸ್ ಚಂಡಮಾರುತದ ಬಗ್ಗೆ ಪ್ರಧಾನಿ ಮೋದಿ ಜತೆಗೆ ಪರಿಶೀಲನಾ ಸಭೆ ಸಿಎಂ ಮಮತಾ ಬ್ಯಾನರ್ಜಿ ಗೈರು!

  ಇದಕ್ಕೂ ಮುನ್ನ ಸಿಎಂ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಉತ್ತರ 24 ಪರಗಣ ಜಿಲ್ಲೆಯ ಚಂಡಮಾರುತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರೊಂದಿಗೆ, ಬ್ಯಾನರ್ಜಿ ಅವರು ಹಿಂಗಲ್‌ಗಂಜ್, ಹಸ್ನಾಬಾದ್, ಸಂದೇಶ್ಖಾಲಿ, ಪಿನಾಖಾ ಮತ್ತು ಜಿಲ್ಲೆಯ ಇತರ ಪ್ರದೇಶಗಳಲ್ಲಿನ ಚಂಡಮಾರುತದ ನಂತರದ ಪರಿಸ್ಥಿತಿ ವೀಕ್ಷಿಸಿದರು. ಆನಂತರ ದಕ್ಷಿಣ 23 ಪಾರಾಗಣ ಜಿಲ್ಲೆಯ ಸಾಗರ್ ಐಸ್​ಲ್ಯಾಂಡ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ಮೋದಿ ಅವರು ಕರೆದಿರುವ ಯಾಸ್ ಚಂಡಮಾರುತದ ಪರಿಶೀಲನಾ ಸಭೆಗೆ ನಾನು ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ನಾನು ಕಲೈಕುಂಡಗೆ ತಲುಪಲು 45 ನಿಮಿಷ ತಗುಲುತ್ತದೆ. ಅದಕ್ಕಾಗಿ ನಾನು ಬಂಗಾಳದಲ್ಲಿ ಯಾಸ್ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ಪ್ರಾಥಮಿಕ ವರದಿಯಲ್ಲಿ ಸಿದ್ದಪಡಿಸಿದ್ದೇನೆ. ಇದನ್ನು ಪ್ರಧಾನಿ ಮೋದಿ ಅವರಿಗೆ ತಲುಪಿಸುತ್ತೇನೆ ಎಂದು ಹೇಳಿದ್ದರು.

  ಪ್ರಧಾನಿ ಮೋದಿ ಅವರು ಇಂದು ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿ ವಾಯುಪಡೆಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಪಶ್ಚಿಮ ಬಂಗಾಳದ ಗವರ್ನರ್ ಜಗದೀಪ್ ಧನ್ಖರ್, ಕಲೈಕುಂಡದಲ್ಲಿ ವಾಯುಪಡೆಯ ನಿಲ್ದಾಣದ ಮುಖ್ಯಸ್ಥರು ಪ್ರಧಾನಿ ಅವರನ್ನು ಬರಮಾಡಿಕೊಂಡರು. ಬಳಿಕ ಯಾಸ್ ಚಂಡಮಾರುತ ಹಾನಿ ಉಂಟು ಮಾಡಿರುವ ಸ್ಥಳಗಳ ವೈಮಾನಿಕ ಸಮೀಕ್ಷೆಗೆ ತೆರಳಿದರು. ಇದಾದ ಬಳಿಕ ಸರ್ಕಾರದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಇದಕ್ಕೂ ಹಿಂದಿನ ದಿನ, ಪ್ರಧಾನಿ ಮೋದಿ ಅವರು ಭುವನೇಶ್ವರಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಒಡಿಶಾದ ಬಾಲಸೋರ್ ಮತ್ತು ಭದ್ರಾಕ್​ನಲ್ಲಿ ವೈಮಾನಿಕ ಸಮೀಕ್ಷೆ ನಡೆಸುವ ಮುನ್ನ ಪರಿಹಾರ ಕಾರ್ಯಾಚರಣೆಗಳ ಬಗ್ಗೆ ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು.
  Published by:HR Ramesh
  First published: