HOME » NEWS » National-international » CM MAMATA BANERJEE ANNOUNCED MANY WELFARE SCHEMES IN BUDGET AHEAD OF 2021 WEST BENGAL ELECTIONS GNR

2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ; ಮತ್ತೊಮ್ಮೆ ಗದ್ದುಗೆ ಹಿಡಿಯಲು ದೀದಿ ಸರ್ಕಸ್​​; ಹಲವು ಯೋಜನೆಗಳು ಘೋಷಣೆ

ಇನ್ನು, ಮಮತಾ ಸೋದರ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ ಸಹ ಈ ಸಭೆಯಲ್ಲಿ ಭಾಗಿಯಾಗಿದ್ದರು. ಮೂವರ ನಡುವೆ ಬರೋಬ್ಬರಿ 1 ಗಂಟೆ 40 ನಿಮಿಷ ಸಮಾಲೋಚನೆ ನಡೆದಿತ್ತು. ಇಲ್ಲಿನ ಸಭೆಯಲ್ಲಿ 2021ರ ವಿಧಾನಸಭೆ ಚುನಾವಣೆಗೆ ತಂತ್ರ ರೂಪಿಸುವ ಕುರಿತು ಕೆಲಸ ಆರಂಭಿಸುವುದಾಗಿ ಕಿಶೋರ್‌ ಭರವಸೆ ನೀಡಿದ್ದರು.

news18-kannada
Updated:February 10, 2020, 7:39 PM IST
2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ; ಮತ್ತೊಮ್ಮೆ ಗದ್ದುಗೆ ಹಿಡಿಯಲು ದೀದಿ ಸರ್ಕಸ್​​; ಹಲವು ಯೋಜನೆಗಳು ಘೋಷಣೆ
ಮಮತಾ ಬ್ಯಾನರ್ಜಿ
  • Share this:
ನವದೆಹಲಿ(ಫೆ.10): 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿಯಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ಭಾರೀ ಹಿನ್ನಡೆ ಅನುಭವಿಸಿದ್ದ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​​ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಬಗ್ಗುಬಡಿಯಲು ಯೋಜನೆ ರೂಪಿಸಿದೆ. ಹಾಗಾಗಿಯೇ ಈಗಿನಿಂದಲೇ 2021ರ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿ ಇರಿಸಿಕೊಂಡು ದೀದಿ ರಾಜ್ಯದ ಜನತೆಗೆ ಷರತ್ತುಬದ್ಧ ಉಚಿತ ವಿದ್ಯುತ್ ಸೇರಿದಂತ ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದಾರೆ. ದೆಹಲಿ ಸರ್ಕಾರದ ಈ ಯೋಜನೆ ಘೋಷಿಸಿರುವ ಬಡವರಿಗೆ ಮೂರು ತಿಂಗಳಿಗೆ 75 ಯುನಿಟ್​​ನಷ್ಟು ಉಚಿತ ವಿದ್ಯುತ್ ನೀಡುವುದಾಗಿ ಹೇಳಿದ್ದಾರೆ.

ಇಂದು ರಾಜ್ಯ ವಿಧಾನಸಭೆಯಲ್ಲಿ 2020-21ನೇ ಸಾಲಿನ ಬಜೆಟ್​​ ಮಂಡಿಸಲಾಯ್ತು. ಈ ವರ್ಷದ ಬಂಜೆಟ್​​ ಮಂಡಿಸಿದ ಪಶ್ಚಿಮ ಬಂಗಾಳ ಹಣಕಾಸು ಸಚಿವ ಅಮಿತ್ ಮಿತ್ರಾ, ಹಲವು ಜನಪ್ರಿಯ ಯೋಜನೆಗಳನ್ನು ಘೋಷಿಸಿದರು.

ಬಜೆಟ್​​ ವೇಳೆ ಘೋಷಿಸಿದ ಯೋಜನೆಗಳು 

  • ಎಸ್​​ಸಿ ಮತ್ತು ಎಸ್​​​ಟಿ ವರ್ಗದ 60 ವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ ತಲಾ 1 ಸಾವಿರ ರೂ ಪಿಂಚಣಿ

  • ಚಹಾ ತೋಟದ ಖಾಯಂ ಕೆಲಸಗಾರರಿಗೆ ಗೃಹ ನಿರ್ಮಾಣ ಯೋಜನೆ

  • ಮೂರು ವರ್ಷಗಳಲ್ಲಿ 100 ಹೊಸ ಎಂಎಸ್ ಎಂಇ ಪಾರ್ಕ್ಸ್​​ಗಳ ನಿರ್ಮಾಣ
  • ಎಂಎಸ್​​​ಎಂಇ ಪಾರ್ಕ್ಸ್ ನಿರ್ಮಾಣಕ್ಕೆ 200 ಕೋಟಿ ರೂ. ಮೀಸಲು

  • ಚಹಾ ತೋಟದ ಕಾರ್ಮಿಕರ ಗೃಹ ನಿರ್ಮಾಣ(ಚಾಯ್ ಸುಂದರಿ) ಯೋಜನೆಗೆ 500

  • ಕೋಟಿ ರೂ. ಅನುದಾನ

  • ಪರಿಶಿಷ್ಟ ಜಾತಿ ಪ್ರಾಬಲ್ಯ ಪ್ರದೇಶದಲ್ಲಿ ನೂತನ ವಿವಿ

  • ಹಿಂದುಳಿದ ವರ್ಗಕ್ಕೂ ವಿವಿ ಸ್ಥಾಪಿಸುವುದಾಗಿ ಭರವಸೆ


ಈ ಹಿಂದೆಯೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪ್ರಾಬಲ್ಯ ಕುಗ್ಗಿಸಲು ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ನೆರವು ಕೋರಿದ್ದರು. ಈ ಸಂಬಂಧ ಹೌರಾದ ಪಶ್ಚಿಮ ಬಂಗಾಳ ಸಚಿವಾಲಯ ಕಟ್ಟಡದಲ್ಲಿ ದೀದಿ ಮತ್ತು ಪ್ರಶಾಂತ್‌ ಕಿಶೋರ್‌ ಗಂಭೀರ ಮಾತುಕತೆ ನಡೆಸಿದ್ದರು.

ಇನ್ನು, ಮಮತಾ ಸೋದರ ಸಂಬಂಧಿ ಅಭಿಷೇಕ್‌ ಬ್ಯಾನರ್ಜಿ ಸಹ ಈ ಸಭೆಯಲ್ಲಿ ಭಾಗಿಯಾಗಿದ್ದರು. ಮೂವರ ನಡುವೆ ಬರೋಬ್ಬರಿ 1 ಗಂಟೆ 40 ನಿಮಿಷ ಸಮಾಲೋಚನೆ ನಡೆದಿತ್ತು. ಇಲ್ಲಿನ ಸಭೆಯಲ್ಲಿ 2021ರ ವಿಧಾನಸಭೆ ಚುನಾವಣೆಗೆ ತಂತ್ರ ರೂಪಿಸುವ ಕುರಿತು ಕೆಲಸ ಆರಂಭಿಸುವುದಾಗಿ ಕಿಶೋರ್‌ ಭರವಸೆ ನೀಡಿದ್ದರು.

ಇದನ್ನೂ ಓದಿ: ಬಿಜೆಪಿ ಪಾಲಾಗುತ್ತಿದ್ದ ಪಶ್ಚಿಮ ಬಂಗಾಳವನ್ನು ಮತ್ತೆ ಮಮತಾ ಕೈಗೆ ನೀಡಿದ್ದು ಯಾರು ಗೊತ್ತಾ?; ಇಲ್ಲಿದೆ ಇಂಟರೆಸ್ಟಿಂಗ್​ ಸ್ಟೋರಿ

ನಂತರ ಪ್ರಶಾಂತ್​ ಕಿಶೋರ್ ಟಿಎಂಸಿ ಪ್ರಚಾರದ ನೇತೃತ್ವವಹಸಿದರು. ಈಗಾಗಲೇ ಪ್ರಶಾಂತ್​ ಕಿಶೋರ್​ ‘ದೀದಿಗೆ ಹೇಳಿ’ (ದೀದಿ ಕೆ ಬೋಲ್​) ಭಿನ್ನ ಹೆಸರಿನ ಆಂದೋಲನವನ್ನು ಜಾರಿಗೆ ತಂದರು. ಅಚ್ಚರಿ ಎಂದರೆ ಕೇವಲ 180 ದಿನಗಳಲ್ಲಿ ಬಿಜೆಪಿ ವಶವಾಗಿದ್ದ ಎಲ್ಲ ಮುನ್ಸಿಪಾಲ್ಟಿಗಳನ್ನು ಟಿಎಂಸಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇದಾದ ನಂತರ ಟಿಎಂಸಿ ಮತ್ತೆ ಶೈನ್​ ಆಗಲು ಆರಂಭಿಸಿತ್ತು.

ಆದರೀಗ ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಪ್ರಶಾಂತ್​ ಕಿಶೋರ್​ ಶ್ರಮವನ್ನು ತೋರಿಸಲಿದೆ ಎನ್ನುವುದು ಟಿಎಂಸಿ ನಾಯಕರ ಅಭಿಪ್ರಾಯ.
Youtube Video
First published: February 10, 2020, 7:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories