HOME » NEWS » National-international » CM KEJRIWAL ANNOUNCES HONORARIUM OF RS 1 CRORE FOR FAMILY OF IB STAFFER WHO WAS KILLED IN DELHI VIOLENCE LG

ದೆಹಲಿ ಹಿಂಸಾಚಾರ: ಅಂಕಿತ್​ ಶರ್ಮಾ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ ಸಿಎಂ ಕೇಜ್ರಿವಾಲ್​

ಇತ್ತೀಚೆಗೆ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಸಾವಿಗೀಡಾಗಿದ್ದ ದೆಹಲಿ ಮುಖ್ಯ ಪೊಲೀಸ್​ ಕಾನ್ಸ್​ಟೇಬಲ್​​ ರತನ್ ಲಾಲ್​ ಕುಟುಂಬಕ್ಕೂ ದೆಹಲಿ ಸರ್ಕಾರವು 1 ಕೋಟಿ ಪರಿಹಾರ ಧನ ನೀಡುವುದಾಗಿ ಘೋಷಿಸಿತ್ತು.

news18-kannada
Updated:March 2, 2020, 4:43 PM IST
ದೆಹಲಿ ಹಿಂಸಾಚಾರ: ಅಂಕಿತ್​ ಶರ್ಮಾ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಘೋಷಿಸಿದ ಸಿಎಂ ಕೇಜ್ರಿವಾಲ್​
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
  • Share this:
ನವದೆಹಲಿ(ಮಾ.02): ದೆಹಲಿಯಲ್ಲಿ ಸಿಎಎ ವಿರೋಧಿ ಹಿಂಸಾಚಾರದ ವೇಳೆ ಹತ್ಯೆಗೀಡಾದ ಗುಪ್ತಚರ ಇಲಾಖೆ ಅಧಿಕಾರಿ ಅಂಕಿತ್​ ಶರ್ಮಾ ಕುಟುಂಬಕ್ಕೆ ಸಿಎಂ ಅರವಿಂದ್​ ಕೇಜ್ರಿವಾಲ್ ​1 ಕೋಟಿ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಐಬಿ ಅಧಿಕಾರಿಯ ಮೃತದೇಹ ದೆಹಲಿಯ ಚಾಂದಬಾಗ್​ನ ಮೋರಿಯಲ್ಲಿ ಪತ್ತೆಯಾಗಿತ್ತು. ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ್​ ಶರ್ಮಾ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುತ್ತೇವೆ. ಜೊತೆಗೆ ದೆಹಲಿ ಸರ್ಕಾರವು ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿಯನ್ನು ನೀಡಲಿದೆ," ಎಂದು ಹೇಳಿದ್ದಾರೆ.

ಗೋಲಿಮಾರ್​​ ಅಂದ್ರೆ ಸಹಿಸೋಕೆ ಇದು ದೆಹಲಿಯಲ್ಲ, ಪಶ್ಚಿಮ ಬಂಗಾಳ​: ಬಿಜೆಪಿಗರಿಗೆ ದೀದಿ ಎಚ್ಚರಿಕೆ

ಇತ್ತೀಚೆಗೆ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ವೇಳೆ ಸಾವಿಗೀಡಾಗಿದ್ದ ದೆಹಲಿ ಮುಖ್ಯ ಪೊಲೀಸ್​ ಕಾನ್ಸ್​ಟೇಬಲ್​​ ರತನ್ ಲಾಲ್​ ಕುಟುಂಬಕ್ಕೂ ದೆಹಲಿ ಸರ್ಕಾರವು 1 ಕೋಟಿ ಪರಿಹಾರ ಧನ ನೀಡುವುದಾಗಿ ಘೋಷಿಸಿತ್ತು.

ದೆಹಲಿ ಹಿಂಸಾಚಾರದಲ್ಲಿ ಮೃತಪಟ್ಟ ಇತರೆ ಸಂತ್ರಸ್ತರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ. ಸಿಎಎ ವಿರೋಧಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಈವರೆಗೆ ದೆಹಲಿಯಲ್ಲಿ 46 ಮಂದಿ ಮೃತಪಟ್ಟಿದ್ದಾರೆ.

ದೆಹಲಿ ಗಲಭೆ ವೇಳೆ ಸಾವನ್ನಪ್ಪಿದ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರ ನೀಡುತ್ತೇವೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವವರಿಗೆ ಪರಿಹಾರವಾಗಿ 50 ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿ, ತೆಲಂಗಾಣ ಮೂಲದ ಇಬ್ಬರಲ್ಲಿ ಮಾರಕ ಕೊರೊನಾ ವೈರಸ್ ಪತ್ತೆ 

 
First published: March 2, 2020, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories