ಪೋಲವರಂ ಕಾಂಟ್ರಾಕ್ಟ್​ ಕೈಬಿಡುವಂತೆ ಗುತ್ತಿಗೆದಾರನಿಗೆ ನೋಟಿಸ್​​; ಸಿಎಂ ಜಗನ್​​​ ಮಹತ್ವದ ಆದೇಶ

ಈ ಹಿಂದೆಯೇ ಆಂಧ್ರಪ್ರದೇಶಕ್ಕೆ 1 ಸಾವಿರ ಕೋಟಿ ರೂಪಾಯಿ ವಿಶೇಷ ನೆರವು ನೀಡುವುದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಈ ಪೈಕಿ 300 ಕೋಟಿಯಷ್ಟು ಹಣ ಪೊಲವರಂ ನೀರಾವರಿ ಯೋಜನೆಗೆ ನೀಡಲಾಗಿತ್ತು.

Ganesh Nachikethu | news18
Updated:August 1, 2019, 3:35 PM IST
ಪೋಲವರಂ ಕಾಂಟ್ರಾಕ್ಟ್​ ಕೈಬಿಡುವಂತೆ ಗುತ್ತಿಗೆದಾರನಿಗೆ ನೋಟಿಸ್​​; ಸಿಎಂ ಜಗನ್​​​ ಮಹತ್ವದ ಆದೇಶ
ಸಿಎಂ ಚಂದ್ರಬಾಬು ನಾಯ್ಡು, ವೈಎಸ್​​​ ಜಗನ್​​ ಮೋಹನ್​ ರೆಡ್ಡಿ
Ganesh Nachikethu | news18
Updated: August 1, 2019, 3:35 PM IST
ನವದೆಹಲಿ(ಆಗಸ್ಟ್​​​.01): ಆಂಧ್ರಪ್ರದೇಶದ ಮಹತ್ವಾಕಾಂಕ್ಷಿ ಪೊಲವರಂ ನೀರಾವರಿ ಯೋಜನೆಯ ಗುತ್ತಿಗೆ ಕೈಬಿಡುವಂತೆ ನವಯುಗ ಸಂಸ್ಥೆಗೆ ಸಿಎಂ ಜಗನ್​​ ಮೋಹನ್​​ ರೆಡ್ಡಿ ಸರ್ಕಾರ ನೋಟಿಸ್​ ನೀಡಿದೆ. ಈ ಯೋಜನೆ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಲು ಸರ್ಕಾರದಿಂದ ತಜ್ಞರ ಸಮಿತಿ ರಚಿಸಲಾಗಿದೆ. ಮುಂದಿನ ತಿಂಗಳ ಮೊದಲ ವಾರದಿಂದ ಸರ್ಕಾರವೇ ಪೋಲವರಂ ಯೋಜನೆ ಕಾಮಗಾರಿ ಶುರು ಮಾಡಲಿದೆ ಎಂದಿದ್ದಾರೆ ಸಿಎಂ ಜಗನ್​​ ಮೋಹನ್​​ ರೆಡ್ಡಿಯವರು.

ಪೊಲವರಂ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ವಿಧಾನಸಭೆ ಕಲಾಪದಲ್ಲಿ ಪ್ರತಿದಿನ ಚರ್ಚೆ ಮಾಡುತ್ತಿದ್ದೇವೆ. ಕಲಾಪದಲ್ಲಿ ಯೋಜನೆ ಕುರಿತಂತೆ ಏನೇ ಪ್ರಶ್ನೆ ಕೇಳಿದರೂ, ಹಿಂದಿನ ಸಿಎಂ ಚಂದ್ರಬಾಬು ನಾಯ್ಡು ಅವರು ಸಮರ್ಪಕ ಉತ್ತರ ನೀಡುತ್ತಿಲ್ಲ. ಟಿಡಿಪಿ ಸರ್ಕಾರ ಈ ಯೋಜನೆ ಹೆಸರಿನಲ್ಲಿ ಕೇವಲ ಭ್ರಷ್ಟಚಾರ ಮಾಡಿದೆ. ಅನುದಾನ ಬಿಡುಗಡೆ ಮಾಡಿ ಪರ್ಸೆಂಟೇಜ್​​ ಲೆಕ್ಕದಲ್ಲಿ ಕಮೀಷನ್ ತೆಗೆದುಕೊಳ್ಳಲಾಗಿದೆ ಎಂದು ಚಂದ್ರಬಾಬು ನಾಯ್ಡು ನೇತೃತ್ವದ ಹಿಂದಿನ ಸರ್ಕಾರದ ಮೇಲೆ ಜಗನ್​​ ಮೋಹನ್​​ ರೆಡ್ಡಿಯವರು ಗಂಭೀರ ಆರೋಪ ಎಸಗಿದರು.

ಇನ್ನು​​ ನವೆಂಬರ್​​ ಒಂದನೇ ತಾರೀಕಿನಿಂದಲೇ ಯೋಜನೆ ಕಾಮಗಾರಿ ಶುರುವಾಗಲಿದೆ. ಆಗಸ್ಟ್​ ತಿಂಗಳಿಗೆ ಮುನ್ನವೇ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಆಗ ಜೂನ್​​ ಮತ್ತು ಜುಲೈನಲ್ಲಿ ಮಳೆಯಾಗುವ ಕಾರಣ ಅಣೆಕಟ್ಟು ತುಂಬುತ್ತಿತ್ತು. ಸದ್ಯವೀಗ ಯೋಜನೆ ಕಾಮಗಾರಿ ವಿಳಂಬಕ್ಕೆ ಚಂದ್ರಬಾಬು ನಾಯ್ಡು ಅವರೇ ಕಾರಣ. ತನ್ನ ಸರ್ಕಾರದ ಅವಧಿಯಲ್ಲೇ ಕಾಮಗಾರಿ ಶುರು ಮಾಡಿದ ಇವರು, ಅವೈಜ್ಞಾನಿಕವಾಗಿ ಜಲಾಶಯd ಅಣೆಕಟ್ಟನ್ನು ಕಟ್ಟಲಾಗುತ್ತಿದೆ. ಹೀಗಾಗಿ ನಾವು ಮತ್ತೇ ಯೋಜನೆ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ, ಕೇವಲ ಮೂರು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿಗಳು ಆಶ್ವಾಸನೆ ವ್ಯಕ್ತಪಡಿಸಿದ್ಧಾರೆ.

ಇದನ್ನೂ ಓದಿ: ರೆಡ್ಡಿಯ ಪ್ರತೀಕಾರ, ಆಂಧ್ರದ ಶಾಪ, ಸೋನಿಯಾರ ನಿಂದನೆ: ಜಗನ್​​ ಮೋಹನ್​​​ ಬೆಳೆದ ಕಥೆ ರೋಚಕ

ಈ ಹಿಂದೆಯೇ ಆಂಧ್ರಪ್ರದೇಶಕ್ಕೆ 1 ಸಾವಿರ ಕೋಟಿ ರೂಪಾಯಿ ವಿಶೇಷ ನೆರವು ನೀಡುವುದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಈ ಪೈಕಿ 300 ಕೋಟಿಯಷ್ಟು ಹಣ ಪೊಲವರಂ ನೀರಾವರಿ ಯೋಜನೆಗೆ ನೀಡಲಾಗಿತ್ತು.

ಇನ್ನು ಸೀಮಾಂಧ್ರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ, ಜಲಸಂಪನ್ಮೂಲಗಳ ಅಭಿವೃದ್ಧಿ, ಪೊಲವರಂ ಯೋಜನೆಗೆ ಅಗತ್ಯ ಅನುಕೂಲಗಳನ್ನು ಒದಗಿಸಿಕೊಡುವುದು ಸೇರಿದಂತೆ ಹಲವು ಸೌಲಭ್ಯಗಳ ಪ್ರಕ್ರಿಯೆಗೆ ಹಿಂದಿನ ಟಿಡಿಪಿ ಸರಕಾರ ಚಾಲನೆ ನೀಡಿತ್ತು. ಈಗ ಅದೇ ಯೋಜನೆಯನ್ನು ವೈಎಸ್​ಆರ್​​ ಕಾಂಗ್ರೆಸ್​ ಸರ್ಕಾರ ಮುಂದುವರೆಸುತ್ತಿದೆ.
---------------
Loading...

First published:August 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...