ಹೈದ್ರಾಬಾದ್ (ಆ. 26): ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (Andhra CM Jagan mohan reddy )ತಮ್ಮ ಬಿಡುವಿಲ್ಲದ ಕೆಲಸದ ನಡುವೆ ರಜೆ ಮೊರೆ ಹೋಗಿದ್ದಾರೆ. ರಾಜ್ಯದ ಆಡಳಿತ ನಿರಂತರ ಕೆಲಸ ಗಳ ನಡುವೆ ಈ ಅವರ ಪ್ರವಾಸ ವಿಶೇಷವಾಗಿದೆ. ಕಾರಣ ಅವರು ಪ್ರವಾಸ ನಡೆಸುತ್ತಿರುವುದು ಒಂದು ವಿಶೇಷ ಸಂದರ್ಭಕ್ಕಾಗಿ. ತಮ್ಮ ಮದುವೆ ವಾರ್ಷಿಕೋತ್ಸವ ಆಚರಣೆಗಾಗಿ ಅವರು ಐದು ದಿನಗಳ ರಜೆ ಮೊರೆ ಹೋಗುತ್ತಿದ್ದಾರೆ. ಸಿಎಂ ಜಗನ್ ಮೋಹನ್ ರೆಡ್ಡಿ ಅವರು 25ನೇ ವಿವಾಹ ವಾರ್ಷಿಕೋತ್ಸವವನ್ನು (wedding Anniversary) ಆಚರಿಸಿಕೊಳ್ಳುವ ಉದ್ದೇಶದಿಂದ ಈ ಪ್ರವಾಸ ನಡೆಸಿದ್ದಾರೆ ಎನ್ನಲಾಗಿದೆ.
ಜಗನ್ ಮೋಹನ್ ರೆಡ್ಡಿ ಅವರ ಕುಟುಂಬ (jagan mohan reddy Family) ಇಂದು ವಿಶೇಷ ವಿಮಾನದ ಮೂಲಕ ವಿಜಯವಾಡದಿಂದ ತೆರಳಿದ್ದಾರೆ. ಈ ಪ್ರವಾಸ ಸಂಪೂರ್ಣವಾಗಿ ಖಾಸಗಿ ಪ್ರವಾಸ ಎಂದು ತಿಳಿಸಲಾಗಿದೆ.
ವಿಜಯವಾಡ (vijayawada) ದಿಂದ ಚಂಡಿಗಢಗೆ (chandigarh) ತೆರಳಿರುವ ಅವರು ಅಲ್ಲಿಂದ ಹಿಮಾಚಲ ಪ್ರದೇಶದ ಶಿಮ್ಲಾಗೆ (Shimla) ತೆರಳಲಿದ್ದಾರೆ. ಈ ಪ್ರವಾಸ ಸಂಪೂರ್ಣವಾಗಿ ಖಾಸಗಿ ಕಾರ್ಯಕ್ರಮವಾಗಿರುವ ಹಿನ್ನಲೆ ಭದ್ರತಾ ಪಡೆ ಹೊರತು ಪಡಿಸಿ ಯಾವುದೇ ಅಧಿಕಾರಿಗಳು ಜೊತೆಗೆ ಇಲ್ಲ.
ಐದು ದಿನಗಳ ಈ ಪ್ರವಾಸದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ಕುಟುಂಬ ಡಾರ್ಜೆಲಿಂಗ್ (darjeeling )ಬಳಿಕ ಶಿಮ್ಲಾ ತೆರಳಲಿದ್ದಾರೆ. ಆಗಸ್ಟ್ 31ರಂದು ಅವರು ಪ್ರವಾಸದಿಂದ ರಾಜ್ಯಕ್ಕೆ ಮರಳಲಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ನವರು ರೇಪ್ ಮಾಡಿದ್ರೆ ಬಂಧಿಸಿ; ಗೃಹ ಸಚಿವರ ಮಾತಿಗೆ ಕಿಡಿಕಾರಿದ ಡಿಕೆ ಶಿವಕುಮಾರ್
ತಮ್ಮ 25 ವಿವಾಹ ವಾರ್ಷಿಕೋತ್ಸವವನ್ನು ಅವರು ವಿದೇಶದಲ್ಲಿ ಆಚರಿಸುವ ಉದ್ದೇಶ ಹೊಂದಿದ್ದರು. ಆದರೆ, ಕೋವಿಡ್ ಸೋಂಕಿನ ಹಿನ್ನಲೆ ವಿದೇಶ ಪ್ರವಾಸ ರದ್ದು ಮಾಡಿ ದೇಶದಲ್ಲಿಯೇ ಆಚರಿಸಲು ಮುಂದಾಗಿದ್ದಾರೆ.
ಜಗನ್ ಮೋಹನ್ ರೆಡ್ಡಿ ಅವರು ವೈ ಎಸ್ ಭಾರತಿ ಇದೇ ಆಗಸ್ಟ್ 28ರಂದು 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಲಿದ್ದಾರೆ. ಇವರಿಗೆ ಹರ್ಷ ರೆಡ್ಡಿ ಮತ್ತು ವರ್ಷ ರೆಡ್ಡಿ ಎಂಬ ಇಬ್ಬರು ಮಕ್ಕಳಿದ್ದಾರೆ
ಜಗನ್ ಮೋಹನ್ ರೆಡ್ಡಿ ಅವರ ಮೊದಲ ಮಗಳು ಹರ್ಷ ರೆಡ್ಡಿ ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ನಲ್ಲಿ ಪದವಿ ಮಾಡಿದ್ದು, ಪ್ಯಾರಿಸ್ನಲ್ಲಿ ಬ್ಯುಸಿನೆಸ್ ಸ್ಟಡೀಸ್ನಲ್ಲಿ ಸ್ನಾತಲೋತ್ತರ ಪದವಿ ಮಾಡುತ್ತಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ