ತೀವ್ರ ವಿರೋಧದ ನಡುವೆಯೂ 'ಆಂಧ್ರಕ್ಕೆ ಮೂರು ರಾಜಧಾನಿ': ಮಸೂದೆಗೆ ಸಚಿವ ಸಂಪುಟ ಅಸ್ತು; ವಿಧಾನಸಭೆಯಲ್ಲಿ ಮಂಡನೆ

ವಿಧಾನಸಭಾ ಅಧಿವೇಶನಕ್ಕೂ ಮುನ್ನವೇ ಜಗನ್ ನೇತೃತ್ವದ ಸಚಿವ ಸಂಪುಟ ಈ ಮಸೂದೆಗೆ ಅಸ್ತು ಎಂದಿದೆ. ಹಾಗೆಯೇ ರಾಜಧಾನಿಗೆ ಸಂಬಂಧಿಸಿದ ಸಚಿವರು ಮತ್ತು ತಜ್ಞರ ಸಮಿತಿಗಳ ಶಿಫಾರಸುಗಳಿಗೂ ಸಂಪುಟ ಸಮ್ಮತಿ ನೀಡಿದೆ.

ಜಗನ್​ಮೋಹನ್​ ರೆಡ್ಡಿ

ಜಗನ್​ಮೋಹನ್​ ರೆಡ್ಡಿ

 • Share this:
  ನವದೆಹಲಿ(ಜ.20): ತೀವ್ರ ವಿರೋಧದ ನಡುವೆಯೂ ಮುಖ್ಯಮಂತ್ರಿ ವೈ.ಎಸ್​​ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ವೈಎಸ್​ಆರ್​​ ಕಾಂಗ್ರೆಸ್​ ಸರ್ಕಾರ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ "ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ" ಕುರಿತಾದ ಮಸೂದೆ ಮಂಡಿಸಿದೆ. ಇಂದು ವಿಧಾನಸಭೆಯಲ್ಲಿ ಆಂಧ್ರಪ್ರದೇಶ ಹಣಕಾಸು ಸಚಿವ ಬುಗ್ಗನ್​​ ರಾಜೇಂದ್ರನಾಥ್​​ ರೆಡ್ಡಿ, ರಾಜ್ಯಾಡಳಿತ ವಿಕೇಂದ್ರಿಕರಣ ಮಸೂದೆ ಮಂಡಿಸಿದ್ದಾರೆ. ಜತೆಗೆ ಆಂಧ್ರದ ಎಲ್ಲಾ ಪ್ರದೇಶಗಳ ಸಮಗ್ರ ಅಭಿವೃದ್ಧಿ ಮಸೂದೆಯನ್ನು ಮಂಡನೆ ಮಾಡಿದ್ದಾರೆನ್ನಲಾಗಿದೆ.

  ಆಂಧ್ರಪ್ರದೇಶ ವಿಭಜನೆಯಾದಾಗ ಎಪಿ ಪುನರಚನೆ ಕಾಯ್ದೆ ಸಮಿತಿ ಅಧ್ಯಕ್ಷರಾಗಿ ಕೆ.ಎಸ್​​​​​ ಶಿವರಾಮಕೃಷ್ಣನ್​​​​​​​ ಅವರನ್ನು ನೇಮಿಸಲಾಗಿತ್ತು. ಹಲವು ದಿನಗಳ ಅಧ್ಯಯನದ ನಂತರ ಕೆ.ಎಸ್​​ ಶಿವರಾಮಕೃಷ್ಣನ್ ಸಮಿತಿ ಶಿಫಾರಸುಗಳನ್ನು ಪರಿಗಣಿಸದೆ ಅಂದು ಆಂಧ್ರಪ್ರದೇಶದ ರಾಜಧಾನಿ ನಿರ್ಧರಿಸಲಾಗಿತ್ತು. ಆದರೀಗ ಇತರೆ ಪ್ರದೇಶಗಳ ಆರ್ಥಿಕ ಅಭಿವೃದ್ಧಿ ಬಗ್ಗೆ ಒತ್ತು ನೀಡಿ ಆಡಳಿತ ವಿಕೇಂದ್ರಿಕರಣ ಮಾಡಲಾಗುತ್ತಿದೆ ಎಂದು ರಾಜೇಂದ್ರನಾಥ್ ರೆಡ್ಡಿ ತಿಳಿಸಿದರು.

  ರಾಜ್ಯಾಡಳಿತ ವಿಕೇಂದ್ರಿಕರಣ ಬಗ್ಗೆ ವಿವಿಧ ಸಮಿತಿಗಳು ನೀಡಿದ ವರದಿಗಳನ್ನು ಪರಿಶೀಲಿಸಿದ್ದೇವೆ. ಸಮಾನ ಮತ್ತು ವಿಕೇಂದ್ರೀಕೃತ ಅಭಿವೃದ್ಧಿಯನ್ನು ಖಚಿತಪಡಿಸಿಕೊಂಡ ನಂತರವೇ ಈ ಮಸೂದೆ ಮಂಡಿಸಲಾಗಿದೆ ಎಂದರು ರಾಜೇಂದ್ರನಾಥ್ ರೆಡ್ಡಿ.

  ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್; ನಿಷ್ಕ್ರಿಯಕ್ಕೆ ಬದಲು ಸ್ಫೋಟಿಸಲು ಸಿದ್ಧತೆ

  ಈ ಹಿಂದೆಯೇ ಸಿಎಂ ಜಗನ್​​ ಮೋಹನ್​​ ರೆಡ್ಡಿ ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿ ಮಾಡುವುದಾಗಿ ಘೋಷಿಸಿದ್ದರು. ಅದಾದ ಬಳಿಕ ರಾಜ್ಯದಲ್ಲಿ ಪರಿಸ್ಥಿತಿ ಭಾರೀ ಗಂಭೀರವಾಗಿತ್ತು. ಮಸೂದೆ ಪ್ರಕಾರ ಅಮರಾವತಿಯನ್ನು ಶಾಸಕಾಂಗ ರಾಜಧಾನಿಯನ್ನಾಗಿ; ವಿಶಾಖಪಟ್ಟಣವನ್ನು ಕಾರ್ಯಾಂಗ ರಾಜಧಾನಿಯನ್ನಾಗಿ ಮತ್ತು ಕರ್ನೂಲ್‌ ನ್ಯಾಯಾಂಗ ರಾಜಧಾನಿಯನ್ನಾಗಿ ಮಾಡಲು ಉದ್ದೇಶಿಸಲಾಗಿತ್ತು.

  ವಿಧಾನಸಭಾ ಅಧಿವೇಶನಕ್ಕೂ ಮುನ್ನವೇ ಜಗನ್ ನೇತೃತ್ವದ ಸಚಿವ ಸಂಪುಟ ಈ ಮಸೂದೆಗೆ ಅಸ್ತು ಎಂದಿದೆ. ಹಾಗೆಯೇ ರಾಜಧಾನಿಗೆ ಸಂಬಂಧಿಸಿದ ಸಚಿವರು ಮತ್ತು ತಜ್ಞರ ಸಮಿತಿಗಳ ಶಿಫಾರಸುಗಳಿಗೂ ಸಂಪುಟ ಸಮ್ಮತಿ ನೀಡಿದೆ.
  First published: