Punjab Elections: ಅರವಿಂದ್​​​ ಕೇಜ್ರಿವಾಲ್ ವಿರುದ್ಧ ತನಿಖೆಗೆ ಚರಣಜಿತ್ ಸಿಂಗ್ ಚನ್ನಿ ಆಗ್ರಹ

ಅರವಿಂದ್ ಕೇಜ್ರಿವಾಲ್ ಪಂಜಾಬ್ ವಿಭಜನೆಯ ಕನಸನ್ನು ಹೊತ್ತಿದ್ದಾರೆ. ಅವರು ಅಧಿಕಾರದಲ್ಲಿ ಉಳಿಯಲು ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಲು ಸಿದ್ಧರಾಗಿದ್ದಾರೆ. ಅವರ ಅಜೆಂಡಾ ಪಾಕಿಸ್ತಾನದ ಅಜೆಂಡಾಕ್ಕಿಂತ ಭಿನ್ನವಾಗಿಲ್ಲ ಎಂದು ಮೋದಿ ಹೇಳಿದ್ದಾರೆ.

ಚರಣಜಿತ್ ಸಿಂಗ್ ಚನ್ನಿ - ಅರವಿಂದ್​​​ ಕೇಜ್ರಿವಾಲ್

ಚರಣಜಿತ್ ಸಿಂಗ್ ಚನ್ನಿ - ಅರವಿಂದ್​​​ ಕೇಜ್ರಿವಾಲ್

  • Share this:
ನವದೆಹಲಿ, (ಫೆ. 18): ಪಂಜಾಬ್ ವಿಧಾನಸಭಾ ಚುನಾವಣೆಯನ್ನು (Punjab Assembly Elections) ಗೆದ್ದೇ ಗೆಲ್ಲುವುದಾಗಿ ಕಾಂಗ್ರೆಸ್ (Congress) ವಿಶ್ವಾಸ ಇಟ್ಟುಕೊಂಡಿದೆ. ಇನ್ನೊಂದೆಡೆ ಆಮ್ ಅದ್ಮಿ ಪಕ್ಷ ತೀವ್ರ ಸ್ಪರ್ಧೆ ನೀಡುತ್ತಿದೆ.‌ ಈ ಹಿನ್ನೆಲೆಯಲ್ಲಿ ಈಗ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ (Punjab CM Charanjith Sing Channi) ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ (Delhi CM Arvinda Kejriwal) ನಡುವೆ ಘರ್ಷಣೆ ಶುರುವಾಗಿದೆ. ಅರವಿಂದ ಕೇಜ್ರಿವಾಲ್ ಅವರ ಬಗ್ಗೆ ಕುಮಾರ್ ವಿಶ್ವಾಸ್ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಚರಣಜಿತ್ ಸಿಂಗ್ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಖಲಿಸ್ತಾನಿ ಸಿಎಂ ಆಗಲು ಕೇಜ್ರಿವಾಲ್ ಕಸರತ್ತು ಎಂಬ ಆರೋಪ
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಆಪ್ ಮಾಜಿ ನಾಯಕ ಕುಮಾರ್ ವಿಶ್ವಾಸ್ ಮಾಡಿರುವ ಪ್ರತ್ಯೇಕತಾವಾದದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.‌‌ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಕುಮಾರ್ ವಿಶ್ವಾಸ್ ಅವರ ವೀಡಿಯೊವನ್ನು ಭಾರತೀಯ ಜನತಾ ಪಕ್ಷ ಬುಧವಾರ ಹಂಚಿಕೊಂಡಿದೆ. ಆ ವಿಡಿಯೋದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಸಿಎಂ ಅಥವಾ ಖಲಿಸ್ತಾನ್ ಪ್ರಧಾನಿಯಾಗಲು ಬಯಸಿದ್ದಾರೆ ಎಂದು ಆರೋಪಿಸಲಾಗಿದೆ. ವಿಡಿಯೋದಲ್ಲಿ ಕುಮಾರ್ ವಿಶ್ವಾಸ್ ಅರವಿಂದ್ ಕೇಜ್ರಿವಾಲ್ ಜೊತೆಗಿನ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ ಎಂದು ಕೂಡ ಬಿಜೆಪಿ ಹೇಳಿದೆ. ಆದರೆ, ವಿಶ್ವಾಸ್ ಅವರು ಕೇಜ್ರಿವಾಲ್ ಹೆಸರನ್ನು ಉಲ್ಲೇಖಿಸಿಲ್ಲ.

ಪ್ರಧಾನಿಗೆ ಸಿಎಂ ಚನ್ನಿ ಮೊರೆ
ಈ ಆರೋಪದ ಕುರಿತು ಟ್ವೀಟ್ ಮಾಡಿರುವ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು, 'ಪಂಜಾಬ್ ಸಿಎಂ ಆಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಡಾ. ಕುಮಾರ್ ವಿಶ್ವಾಸ್ ಅವರ ವೀಡಿಯೋ ವಿಷಯದಲ್ಲಿ ನಿಷ್ಪಕ್ಷಪಾತ ತನಿಖೆಗೆ ಆದೇಶಿಸುವಂತೆ ವಿನಂತಿಸುತ್ತೇನೆ. ಪ್ರತ್ಯೇಕವಾದದ ಬಗ್ಗೆ ನಡೆದ ಹೋರಾಟದಲ್ಲಿ ಪಂಜಾಬ್ ಜನ ರಾಜಕೀಯವನ್ನು ಬದಿಗಿಟ್ಟು ಪಾಲ್ಗೊಂಡಿದ್ದಾರೆ ಮತ್ತು ಅದಕ್ಕಾಗಿ ಭಾರಿ ಬೆಲೆ ತೆರಿದ್ದಾರೆ. ಅದುದರಿಂದ ಪ್ರಧಾನಿಯವರು ಪ್ರತಿಯೊಬ್ಬ ಪಂಜಾಬಿಯ ಚಿಂತೆಯನ್ನು ಪರಿಹರಿಸಬೇಕಾಗಿದೆ' ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನು ಓದಿ: Vote ಕೊಡಿ" ಅಂತ ಕೇಳುವಾಗಲೇ ಕೈಕೊಟ್ಟ Heart! ಹೃದಯಾಘಾತಕ್ಕೆ ಚುನಾವಣೆ ಅಭ್ಯರ್ಥಿ ಸಾವು

ಕುಮಾರ್ ವಿಶ್ವಾಸ್ ಎಎಪಿಯಲ್ಲಿ ಇದ್ದರೇಕೆ?
ಕುಮಾರ್ ವಿಶ್ವಾಸ್ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಗುರುವಾರ ಆರೋಪಿಸಿದೆ. ಅರವಿಂದ ಕೇಜ್ರಿವಾಲ್ ಅವರ ಕೆಟ್ಟ ಉದ್ದೇಶಗಳನ್ನು ಬಹಿರಂಗಪಡಿಸಿದ ಸಮಯವನ್ನು ಕೂಡ ಪ್ರಶ್ನಿಸಿದೆ. ಅರವಿಂದ್ ಕೇಜ್ರಿವಾಲ್ ಅವರು ಸ್ವತಂತ್ರ ರಾಷ್ಟ್ರದ ಮೊದಲ ಪ್ರಧಾನಿಯಾಗಲು ಬಯಸುತ್ತಾರೆ ಎಂದು ಆರೋಪಿಸಿರುವ ಕುಮಾರ್ ವಿಶ್ವಾಸ್ ಇಷ್ಟು ವರ್ಷ ಆಮ್ ಆದ್ಮಿ ಪಕ್ಷದೊಂದಿಗೆ ಏಕೆ ಸಂಬಂಧ ಹೊಂದಿದ್ದರು? ಎಂದು ಎಎಪಿ ನಾಯಕ ರಾಘವ್ ಚಡ್ಡಾ ಕೇಳಿದ್ದಾರೆ.

ಇದನ್ನು ಓದಿ: ಅಂತರ್ಜಾತಿ ಮದುವೆಯಾದ ಮಗಳು; ಹೆಂಡತಿ- ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ

ಕುಮಾರ್ ವಿಶ್ವಾಸ್ ಗೆ ತರಾಟೆ
ಇಷ್ಟು ವರ್ಷಗಳಲ್ಲಿ ಅರವಿಂದ ಕೇಜ್ರಿವಾಲ್ ಅವರ ದುರುದ್ದೇಶವನ್ನು ಕುಮಾರ್ ವಿಶ್ವಾಸ್ ಭದ್ರತಾ ಏಜೆನ್ಸಿಗಳಿಗೆ ಏಕೆ ತಿಳಿಸಲಿಲ್ಲ? ಪಂಜಾಬ್ ಚುನಾವಣೆಗೆ 1-2 ದಿನಗಳ ಮೊದಲು ಏಕೆ ಹೇಳಿದ್ದಾರೆ? ನೀವು 2018ರವರೆಗೆ ಆಮ್ ಆದ್ಮಿ ಪಕ್ಷದಲ್ಲಿದ್ದೀರಿ. ರಾಜ್ಯಸಭೆಯಲ್ಲಿ ನೀವು ಬಯಸಿದ ಸ್ಥಾನ ಸಿಗದಿದ್ದಾಗ ಈ ರೀತಿಯ ಪ್ರಚಾರವನ್ನು ಮಾಡುತ್ತಿದ್ದೀರಿ ಎಂದು ರಾಘವ್ ಚಡ್ಡಾ ಅವರು ಕುಮಾರ್ ವಿಶ್ವಾಸ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನದ ಅಜೆಂಡಾಕ್ಕಿಂತ ಭಿನ್ನವಾಗಿಲ್ಲ
ಇದಕ್ಕೂ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, "ಇವರು ಪಂಜಾಬ್ ವಿಭಜನೆಯ ಕನಸನ್ನು ಹೊತ್ತಿದ್ದಾರೆ. ಅವರು ಅಧಿಕಾರದಲ್ಲಿ ಉಳಿಯಲು ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಲು ಸಿದ್ಧರಾಗಿದ್ದಾರೆ. ಅವರ ಅಜೆಂಡಾ ಪಾಕಿಸ್ತಾನದ ಅಜೆಂಡಾಕ್ಕಿಂತ ಭಿನ್ನವಾಗಿಲ್ಲ" ಎಂದು ಹೇಳಿದ್ದಾರೆ.
Published by:Seema R
First published: