HOME » NEWS » National-international » CM ASHOK GEHLOT TO ADDRESS MEDIA TODAY AS SACHIN PILOT DRAGS CONGRESS TO COURT RMD

Rajasthan Political Crisis: ಶಾಸಕ ಸ್ಥಾನದಿಂದಲೇ ಪೈಲಟ್ ವಜಾ?; ಹೈಕೋರ್ಟ್‌ ತೀರ್ಪಿಗಾಗಿ ಕಾಯುತ್ತಿದೆ ರಾಜಸ್ಥಾನ ರಾಜಕಾರಣ

ನಿನ್ನೆಯೇ ಈ ಅರ್ಜಿಯ ವಿಚಾರಣೆಯನ್ನು ರಾಜಸ್ಥಾನದ ಹೈಕೋರ್ಟ್ ಕೈಗೆತ್ತಿಕೊಂಡಿತ್ತಾದರೂ ಪ್ರತಿವಾದಿ ಇರಲಿಲ್ಲವಾದ ಕಾರಣ ಇಂದಿಗೆ ವಿಚಾರಣೆಯನ್ನು ಮುಂದೂಡಿತ್ತು. ಇಂದಿನ ವಿಚಾರಣೆ ವೇಳೆ ಸ್ಪೀಕರ್ ಮತ್ತು ಸರ್ಕಾರದ ಪರ ವಕೀಲರು ಕೂಡ ಹಾಜರಿರಲಿದ್ದು ಮಧ್ಯಾಹ್ನ 1ಗಂಟೆಗೆ ನಡೆಯುವ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ.

news18-kannada
Updated:July 17, 2020, 12:38 PM IST
Rajasthan Political Crisis: ಶಾಸಕ ಸ್ಥಾನದಿಂದಲೇ ಪೈಲಟ್ ವಜಾ?; ಹೈಕೋರ್ಟ್‌ ತೀರ್ಪಿಗಾಗಿ ಕಾಯುತ್ತಿದೆ ರಾಜಸ್ಥಾನ ರಾಜಕಾರಣ
ಅಶೋಕ್ ಗೆಹ್ಲೋಟ್​- ಸಚಿನ್​ ಪೈಲಟ್​
  • Share this:
ನವದೆಹಲಿ (ಜು.17): ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರಿಗೆ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡೆದ್ದಿರುವ ಸಚಿನ್ ಪೈಲೆಟ್ ಮತ್ತು ಅವರ 18 ಮಂದಿ‌ ಬೆಂಬಲಿಗ ಶಾಸಕರು ಸಲ್ಲಿಸಿರುವ ಮಹತ್ವದ ಅರ್ಜಿ ವಿಚಾರಣೆ ‌ಇಂದು ರಾಜಸ್ಥಾನ ಹೈಕೋರ್ಟಿನಲ್ಲಿ ನಡೆಯಲಿದೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಕರೆದಿದ್ದ ಎರಡು ಶಾಸಕಾಂಗ ಪಕ್ಷದ ಸಭೆಗೆ ಬಂಡೆದ್ದಿರುವ ಸಚಿನ್ ಪೈಲೆಟ್ ಮತ್ತು ಅವರ 18 ಮಂದಿ‌ ಬೆಂಬಲಿಗ ಶಾಸಕರು ಭಾಗವಹಿಸಿಲ್ಲ. ಇದೇ ಆಧಾರದ ಮೇಲೆ ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕಾಂಗ್ರೆಸ್ ಪಕ್ಷ ರಾಜಸ್ಥಾನದ ಸ್ಪೀಕರ್ ಸಿ.ಪಿ. ಜೋಷಿ ಅವರಿಗೆ ದೂರು‌ ನೀಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ನೀಡಿರುವ ದೂರಿನ ಆಧಾರದ ಮೇಲೆ ತಮ್ಮನ್ನು ಅನರ್ಹಗೊಳಿಸಬಾರದೇಕೆ ಎಂದು ಸ್ಪೀಕರ್ ಸಿ.ಪಿ. ಜೋಷಿ, ಸಚಿನ್ ಪೈಲೆಟ್ ಮತ್ತು ಅವರ 18 ಮಂದಿ‌ ಬೆಂಬಲಿಗ ಶಾಸಕರಿಗೆ ನೊಟೀಸ್ ನೀಡಿದ್ದಾರೆ.

ಸ್ಪೀಕರ್ ಸಿ.ಪಿ. ಜೋಷಿ ನೀಡಿರುವ ನೊಟೀಸ್ ವಿರುದ್ಧ ಸಚಿನ್ ಪೈಲೆಟ್ ಮತ್ತು ಅವರ 18 ಮಂದಿ‌ ಬೆಂಬಲಿಗ ಶಾಸಕರು ರಾಜಸ್ಥಾನದ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಿನ್ನೆಯೇ ಈ ಅರ್ಜಿಯ ವಿಚಾರಣೆಯನ್ನು ರಾಜಸ್ಥಾನದ ಹೈಕೋರ್ಟ್ ಕೈಗೆತ್ತಿಕೊಂಡಿತ್ತಾದರೂ ಪ್ರತಿವಾದಿ ಇರಲಿಲ್ಲವಾದ ಕಾರಣ ಇಂದಿಗೆ ವಿಚಾರಣೆಯನ್ನು ಮುಂದೂಡಿತ್ತು. ಇಂದಿನ ವಿಚಾರಣೆ ವೇಳೆ ಸ್ಪೀಕರ್ ಮತ್ತು ಸರ್ಕಾರದ ಪರ ವಕೀಲರು ಕೂಡ ಹಾಜರಿರಲಿದ್ದು ಮಧ್ಯಾಹ್ನ 1ಗಂಟೆಗೆ ನಡೆಯುವ ವಿಚಾರಣೆ ತೀವ್ರ ಕುತೂಹಲ ಮೂಡಿಸಿದೆ.

ಈ ನಡುವೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು ಸುದ್ದಿಗೋಷ್ಟಿ ಕರೆದಿದ್ದು ಅದು ಮತ್ತೊಂದು ರೀತಿಯ ಕುತೂಹಲವನ್ನು ಹುಟ್ಟುಹಾಕಿದೆ. ಸಚಿನ್ ಪೈಲೆಟ್ ಮತ್ತು ಅವರ 18 ಮಂದಿ‌ ಬೆಂಬಲಿಗ ಶಾಸಕರು ಬಿಟ್ಟು ಹೋದದ್ದರಿಂದ ಅಶೋಕ್ ಗೆಹ್ಲೋಟ್ ಸಂಪುಟ ಪುನರ್ ರಚನೆ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು.‌ ಆ ಬಗ್ಗೆ‌ ಇಂದಿನ‌ ಸುದ್ದಿಗೋಷ್ಟಿಯಲ್ಲಿ ಸುಳಿವು ನೀಡಬಹುದು.
Youtube Video

ಸಚಿನ್ ಪೈಲೆಟ್ ಮತ್ತು ಅವರ 18 ಮಂದಿ‌ ಬೆಂಬಲಿಗ ಶಾಸಕರು ಬಂಡೇಳಲು ಬಿಜೆಪಿ ನಾಯಕರ ಕುಮ್ಮಕ್ಕೇ ಕಾರಣ ಎಂದು‌ ಗೆಹ್ಲೋಟ್​ ಮೊದಲಿಂದಲೂ ಹೇಳುತ್ತಿದ್ದರು. ಜೊತೆಗೆ ಬಿಜೆಪಿ ನಾಯಕರು ಕೋಟ್ಯಂತರ ರೂಪಾಯಿ ನೀಡಿ ಶಾಸಕರನ್ನು ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ತನಿಖೆಗೂ ಆದೇಶ ನೀಡಿದ್ದರು. ಈ ವಿಷಯಗಳಿಗೆ ಸಂಬಂಧಿಸಿದಂತೆ ಅಶೋಕ್ ಗೆಹ್ಲೋಟ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಸಾಧ್ಯತೆಗಳು ಕೂಡ ಇವೆ.
Published by: Rajesh Duggumane
First published: July 17, 2020, 8:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories