HOME » NEWS » National-international » CM ARVIND KEJRIWAL ON CORONA POSITIVE CASES IN DELHI GNR

‘ಕೊರೋನಾಗೆ ತುತ್ತಾದ ಹಲವಾರು ಜನ ಗುಣಮುಖರಾಗುತ್ತಿದ್ದಾರೆ, ಯಾವುದೇ ಆತಂಕ ಬೇಡ‘ - ಸಿಎಂ ಕೇಜ್ರಿವಾಲ್​​

ಒಂದೆಡೆ ಈಶಾನ್ಯ ದೆಹಲಿಯ ಬಾಬರ್‌ಪುರದಲ್ಲಿರುವ ಮೊಹಲ್ಲಾ ಕ್ಲಿನಿಕ್‌ನ ವೈದ್ಯರಿಗೆ ಸೋಂಕು ಇರುವುದು ಧೃಡಪಟ್ಟಿದರೇ, ಇನ್ನೊಂದೆಡೆ 15 ದಿನಗಳ ಹಿಂದೆ ಇಲ್ಲಿನ ನಿಜಾಮುದ್ದೀನ್​ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ತೆಲಂಗಾಣದ 6 ಮಂದಿ ಸೇರಿದಂತೆ ಒಟ್ಟು 10 ಜನ ಸಾವನ್ನಪ್ಪಿದ್ದಾರೆ.


Updated:March 31, 2020, 7:25 PM IST
‘ಕೊರೋನಾಗೆ ತುತ್ತಾದ ಹಲವಾರು ಜನ ಗುಣಮುಖರಾಗುತ್ತಿದ್ದಾರೆ, ಯಾವುದೇ ಆತಂಕ ಬೇಡ‘ - ಸಿಎಂ ಕೇಜ್ರಿವಾಲ್​​
ಅರವಿಂದ ಕೇಜ್ರಿವಾಲ್.
  • Share this:
ನವದೆಹಲಿ(ಮಾ.31): ಅತ್ತ ಈಶಾನ್ಯ ದೆಹಲಿಯ ಬಾಬರ್‌ಪುರದಲ್ಲಿರುವ ಮೊಹಲ್ಲಾ ಕ್ಲಿನಿಕ್‌ನ ವೈದ್ಯರಿಗೆ ಸೋಂಕು ಇರುವುದು ಧೃಡಪಟ್ಟಿದೆ. ಇತ್ತ 15 ದಿನಗಳ ಹಿಂದೆ ಇಲ್ಲಿನ ನಿಜಾಮುದ್ದೀನ್​ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ತೆಲಂಗಾಣದ 6 ಮಂದಿ ಸೇರಿದಂತೆ ಒಟ್ಟು 10 ಜನ ಕೊರೋನಾದಿಂದಲೇ ಸಾವನ್ನಪ್ಪಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದ್ದ 850ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಈ ಪೈಕಿ 24 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.  ಇದರಿಂದ ದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುವ ಆತಂಕ ಎದುರಾಗಿದೆ. ಈ ಮಧ್ಯೆ ಎಚ್ಚೆತ್ತ ಸಿಎಂ ಅರವಿಂದ್​ ಕೇಜ್ರಿವಾಲ್​​ ಈ ಆತಂಕ ದೂರ ಮಾಡುವ ಮಾತುಗಳನ್ನಾಡಿದ್ದಾರೆ.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಮುಖ್ಯಮಂತ್ರಿ ಅರವಿಂದ್​​ ಕೇಜ್ರಿವಾಲ್​​ ಅವರು, ದೆಹಲಿಯ ಕೊರೋನಾ ಪೀಡಿತರು ಗುಣಮುಖರಾಗಲಿದ್ದಾರೆ. 89 ಜನರ ಪೈಕಿ‌ ಓರ್ವನಿಗೆ ಮಾತ್ರ ವೆಂಟಿಲೇಟರ್ ನೀಡಲಾಗಿದೆ. ಇಬ್ಬರಿಗೆ ಆಕ್ಸಿಜನ್ ನೀಡಲಾಗುತ್ತಿದೆ. ಉಳಿದವರು ಚೇತರಿಸಿಕೊಳ್ಳುತ್ತಿದ್ದಾರೆ. ಎಲ್ಲರೂ ಬೇಗ ಗುಣಮುಖರಾಗಲಿದ್ದಾರೆ. ಹಾಗಾಗಿ ಯಾವುದೇ ಆತಂಕ ಬೇಡ ಎಂದು ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ.

ಮಾ. 13ರಿಂದ 15ರವರೆಗೆ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದವರಲ್ಲಿ 10 ಜನ ಈಗಾಗಲೇ ಸಾವನ್ನಪ್ಪಿದ್ದಾರೆ.ಈ ಹಿನ್ನೆಲೆಯಲ್ಲಿ ಈ ಧಾರ್ಮಿಕ ಸಭೆಯನ್ನು ಆಯೋಜಿಸಿದ್ದ ಮೌಲಾನಾ ವಿರುದ್ಧ ದೆಹಲಿ ಸರ್ಕಾರ ಎಫ್​ಐಆರ್​ ದಾಖಲಿಸಿದೆ. ಮೂರ್ನಾಲ್ಕು ಆಸ್ಪತ್ರೆಗಳಲ್ಲಿ ನಿಜಾಮುದ್ದೀನ್​ ಸಭೆಗೆ ಆಗಮಿಸಿದ್ದವರನ್ನು ಸೇರಿಸಿ, ನಿಗಾದಲ್ಲಿ ಇರಿಸಲಾಗಿದೆ. ಅವರಲ್ಲಿ 1 ಆಸ್ಪತ್ರೆಯ 24 ಜನರಿಗೆ ಸೋಂಕು ಹರಡಿರುವುದು ಖಚಿತವಾಗಿದೆ. ಇನ್ನೂ ಎರಡು ಆಸ್ಪತ್ರೆಗಳ ಇಂದಿನ ವರದಿ ಹೊರಬೀಳಬೇಕಾಗಿದೆ.

ಇದನ್ನೂ ಓದಿ: ಕೊರೋನಾಗೆ ಇಂದು ಮೂವರು ಬಲಿ; ಸೋಂಕಿತರಲ್ಲಿ 101 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್

ದೇಶಾದ್ಯಂತ ಇದುವರೆಗೆ ಒಟ್ಟು 1,251 ಪ್ರಕರಣಗಳು ದಾಖಲಾಗಿವೆ. ಕಳೆದ‌ 24 ಗಂಟೆಯಲ್ಲಿ 227 ಪ್ರಕರಣಗಳು ಬೆಳಕಿಗೆ ಬಂದಿವೆ. ಇದುವರೆಗೂ ಕೊರೋನಾ ಸೋಂಕಿತರಲ್ಲಿ 101 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಧಿಕ ಸಂಖ್ಯೆಯಲ್ಲಿ ಮಾಸ್ಕ್ ಸಿದ್ದಪಡಿಸಲಾಗುತ್ತಿದೆ. ಲಾಕ್ಡೌನ್ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ವಲಸಿಗರಿಗೆ ಊಟ,‌ ವಸತಿ ಸೌಲಭ್ಯ ‌ಕಲ್ಪಿಸಲಾಗಿದೆ. ಅಗತ್ಯ ವಸ್ತುಗಳ ‌ಸಾಗಾಣಿಕೆಗೆ ಅವಕಾಶ ನೀಡಲಾಗಿದೆ. ಹಲವು ರಾಜ್ಯಗಳಲ್ಲಿರುವ 23 ಲಕ್ಷ ವಲಸಿಗರಿಗೆ ಊಟ ಕಲ್ಪಿಸಲಾಗಿದೆ. 21 ಸಾವಿರ ಪುನರ್ವಸತಿ ‌ಕೇಂದ್ರ ಆರಂಭಿಸಲಾಗಿದೆ. ಇದುವರೆಗೆ 42,788 ಲ್ಯಾಬ್ ಪರೀಕ್ಷೆ ನಡೆಸಲಾಗಿದೆ. ದೇಶಾದ್ಯಂತ 123 ಲ್ಯಾಬ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ಹಂಚಿಕೊಂಡಿದೆ.
Youtube Video
First published: March 31, 2020, 7:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories