Onam : ಓಣಂ ಸದ್ಯದ ಜಾಹೀರಾತಿನಲ್ಲಿ ಇಡ್ಲಿ ದೋಸೆ ಬಳಸಿ ಪೇಚಿಗೆ ಸಿಲುಕಿದ ಬಟ್ಟೆ ಬ್ರ್ಯಾಂಡ್

Festival: ಎಲ್ಲಾ ಕೇರಳದ ಜನರು ಒಂದೇ. ದಕ್ಷಿಣ ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಈ ರೀತಿಯ ಜಾಹೀರಾತುಗಳನ್ನು ಮಾಡುವುದನ್ನು ನಿಲ್ಲಿಸಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ದೇವರ ನಾಡು ಎಂದು ಕರೆಯುವ ರಾಜ್ಯವೆಂದರೆ ಕೇರಳ.ಕೇರಳದ ಜನರನ್ನು ಸಾಮ್ಯಾವಾಗಿ ಮಲಯಾಳಿ ಎಂದು ಕರೆಯಲಾಗುತ್ತದೆ. ಮಲಯಾಳಿ ಸಮುದಾಯದವರು ಸಂಭ್ರಮದಿಂದ ಆಚರಿಸುವ ಅತಿದೊಡ್ಡ ಹಬ್ಬ ಓಣಂ. ಈ ಹಬ್ಬದ ಸಮಯದಲ್ಲಿ ನಿರ್ದಿಷ್ಟ ಖಾದ್ಯಗಳನ್ನು ತಯಾರು ಮಾಡಲಾಗುತ್ತದೆ ಇದನ್ನು "ಸಧ್ಯ" ಎಂದು ಕರೆಯಲಾಗುತ್ತದೆ. "ಕಾಟನ್ಸ್ ಜೈಪುರ" ಎಂಬ ಬಟ್ಟೆ ಬ್ರ್ಯಾಂಡ್ ತನ್ನ ಓಣಂ ಸಂಗ್ರಹದ ಜಾಹೀರಾತುಗಾಗಿ ಓಣಂ ಸಂಸ್ಕೃತಿಯನ್ನು ಪ್ರತಿನಿಧಿಸಲು ಪ್ರಯತ್ನಿಸಿದೆ. ಆದರೆ ಅವರ ಯೋಜನೆಯು ಸಾಮಾಜಿಕ ತಾಣದ ಕೋಪಕ್ಕೆ ಗುರಿಯಾಗಿದೆ.


ಈ ಬಟ್ಟೆ ಬ್ರ್ಯಾಂಡ್, ತನ್ನ ಪ್ರಚಾರದ ಚಿತ್ರಗಳಲ್ಲಿ, ಬಿಳಿ ಮತ್ತು ಚಿನ್ನದ ಸಲ್ವಾರ್ ಸೂಟ್ ಧರಿಸಿದ ಇಬ್ಬರು ಮಾಡಲ್‌ಗಳು ದಕ್ಷಿಣ ಭಾರತದ ತಿನಿಸುಗಳಾದ ದೋಸೆ ಮತ್ತು ಇಡ್ಲಿಯನ್ನು ಒಳಗೊಂಡ ಸಧ್ಯ ಊಟವನ್ನು ತಿನ್ನುತ್ತಿರುವ ಚಿತ್ರಗಳನ್ನು ಸಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಇದನ್ನು ಗಮನಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಈ ತಿನಿಸುಗಳಾದ ದೋಸೆ ಮತ್ತು ಇಡ್ಲಿ ಓಣಂ ಸಧ್ಯಕ್ಕೆ ಸೇರುವುದಿಲ್ಲ. ಓಣಂ ಸಧ್ಯವು ಬಹು-ತರಹದ ಸಸ್ಯಾಹಾರಿ ಊಟವಾಗಿದ್ದು, ಸಾಮಾನ್ಯವಾಗಿ ಜನರು ನೆಲದ ಮೇಲೆ ಕುಳಿತುಕೊಂಡು ಅಡ್ಡಗಾಲು ಹಾಕಿಕೊಂಡು ಬಾಳೆ ಎಲೆಗಳಲ್ಲಿ ಸೇವಿಸುವ ಊಟ ಎಂದು ಕಾಮೆಂಟ್‌ ಮಾಡಿದ್ದಾರೆ. ಕೆಲವು ಟ್ವಿಟರ್ ಬಳಕೆದಾರರು ಬ್ರ್ಯಾಂಡ್‌ಗಳು ತಮಗೆ ಏನೂ ಗೊತ್ತಿಲ್ಲದ ಸಂಸ್ಕೃತಿಗಳನ್ನು "ಬಳಸಬಾರದು" ಎಂದು ಟೀಕಿಸಿದ್ದಾರೆ.


ಇದನ್ನೂ ಓದಿ: ಜೈ ಶ್ರೀರಾಮ್ ಮಂತ್ರ ಜಪಿಸುವಂತೆ ಅನ್ಯ ಕೋಮಿನ ವ್ಯಕ್ತಿಯ ಮೇಲೆ ಹಲ್ಲೆ! ವಿಡಿಯೋ ವೈರಲ್

"ನಿಮಗೆ ಮೂಲಭೂತ ಅಂಶಗಳು ಗೊತ್ತಿಲ್ಲದ ಸಂಸ್ಕೃತಿಗಳನ್ನು ಬಳಸಬೇಡಿ" ಎಂದು ಬ್ರ್ಯಾಂಡ್‌ನ ಪೋಸ್ಟ್‌ಗೆ ನೇಹ ಕಪೂರ್‌ ಕಾಮೆಂಟ್‌ ಮಾಡಿದ್ದಾರೆ. ಬ್ರ್ಯಾಂಡ್‌ನವರು ಯಾದೃಚ್ಛಿಕ ಸಾಧಾರಣ ಸೃಜನಶೀಲ ಏಜೆನ್ಸಿ ಬಳಸಿಕೊಂಡು ಈ ಜಾಹೀರಾತನ್ನು ಮಾಡಿದ್ದಾರೆ. ಆದರೆ ಓಣಂ ದಕ್ಷಿಣ ಭಾರತದ ಹಬ್ಬವಾಗಿದೆ. ದಕ್ಷಿಣ ಭಾರತದ ರೆಸ್ಟೋರೆಂಟ್‌ಗೆ ಹೋಗಿ ಮೆನುವಿನಲ್ಲಿ ಮೊದಲ ಮೂರು ಆಹಾರಗಳನ್ನು ಆರ್ಡರ್‌ ಮಾಡಿ ಯಾರೋ ಫೋಟೋಗ್ರಾಫರ್ ಗೂಗಲ್‌ನಲ್ಲಿ ಓಣಂ ಸಧ್ಯ ಎಂದು ಹುಡುಕಾಡಿದ್ದಾರೆ ಹಾಗಾಗಿ ಸರ್ಚ್ ಮಾಡಿದಾಗ ದೊರಕಿದ್ದನ್ನೇ ಸಧ್ಯ ಎಂದು ನಮೂದಿಸಿದ್ದಾರೆ ಎಂಬುದಾಗಿ ಇನ್ನೊಬ್ಬ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ. ಅವರು ದೋಸೆ ಮತ್ತು ಇಡ್ಲಿಯನ್ನು ಒಳಗೊಂಡು ಜಾಹೀರಾತು ಮಾಡಿದ್ದಾರೆ. ಕಾಳನ್, ಓಲನ್, ಅವಿಯಲ್, ಪಚಡಿ ಮತ್ತು ಎರಿಶ್ಸೇರಿ ಎಲ್ಲಿದೆ? ಎಂದು ಅರ್ಜುನ್‌ ಕಾಮೆಂಟ್‌ ಮಾಡಿದ್ದಾರೆ.


ಓಣಂ ಹಬ್ಬ ಮತ್ತು ಸಾಂಸ್ಕೃತಿಕ ಮಹತ್ವದ ಕುರಿತು ಮಾತನಾಡಿದ ಬಳಕೆದಾರರು "ಓಣಂ ಹಬ್ಬವನ್ನು ಕೇರಳದಲ್ಲಿರುವ ಎಲ್ಲಾ ಜನರು ಆಚರಿಸುತ್ತಾರೆ." ಅಸುರನಾದ ರಾಜ ಮಹಾಬಲಿಯ ದೃಷ್ಟಿಯಲ್ಲಿ, ಎಲ್ಲಾ ಕೇರಳದ ಜನರು ಒಂದೇ. ದಕ್ಷಿಣ ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಈ ರೀತಿಯ ಜಾಹೀರಾತುಗಳನ್ನು ಮಾಡುವುದನ್ನು ನಿಲ್ಲಿಸಿ " ಎಂದು ಇನ್ನೂಬ್ಬ ಬಳಕೆದಾರರು ಕಾಮೆಂಟ್‌ ಮಾಡಿದ್ದಾರೆ. ಈ ರೀತಿಯ ಹಲವಾರು ಕಾಮೆಂಟ್‌ಗಳನ್ನು ಪೋಸ್ಟ್‌ನಲ್ಲಿ ಕಾಣಬಹುದಾಗಿದೆ.


ಇನ್ನು ಹೆಚ್ಚಿನವರು ಕಾಮೆಂಟ್ ಮಾಡಿದ್ದು ಓಣಂ ಹಬ್ಬ ಹಾಗೂ ದಕ್ಷಿಣ ಭಾರತದ ತಿಂಡಿಗಳನ್ನು ಸಮಾನ ದೃಷ್ಟಿಯಿಂದ ನೋಡಬೇಡಿ ಎಂದು ತಿಳಿಸಿದ್ದಾರೆ. ಓಣಂ ಹಬ್ಬದ ಸಧ್ಯವು ಬೇರೆ ತರಕಾರಿ ಸಸ್ಯಾಹಾರಿ ಆಹಾರಗಳನ್ನು ಒಳಗೊಂಡಿದ್ದು ಅದರ ಪ್ರಸ್ತುತಿಯನ್ನು ಜಾಹೀರಾತು ಒಳಗೊಂಡಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್‌ಸ್ಟಾಗ್ರಾಮ್‌ ಮೂಲಕ ಬಟ್ಟೆ ಬ್ರ್ಯಾಂಡ್‌ಗೆ, ಬಳಕೆದಾರರು ಖಾಸಗಿಯಾಗಿ ಕಳುಹಿಸಿದ ಓಣಂ ಸಧ್ಯದ ಚಿತ್ರವನ್ನು ಬಳಸಿಕೊಂಡಿದ್ದು ಆದರೆ ಫೇಸ್‌ಬುಕ್‌ನಲ್ಲಿ ಬಳಸಿದ ಚಿತ್ರವನ್ನು ಬ್ರ್ಯಾಂಡ್ ಬದಲಾವಣೆ ಮಾಡಿಕೊಂಡಿಲ್ಲ. ಓಣಂ ಹಬ್ಬದ ವಿಶೇಷ ಆಕರ್ಷಣೆಗಳು ಎಂದರೆದೊಡ್ಡ ಬಾಳೆ ಎಲೆಗಳು, ತಾಜಾ ಹೂವಿನ ಅಲಂಕಾರಗಳು, ದೋಣಿ ಸ್ಪರ್ಧೆಯಾಗಿದೆ. ಎರಿಶ್ಸೇರಿ, ರೈಸ್‌ ಪುಟ್ಟು, ಕಡಲ ಕರಿ, ರಸಂ, ತೆಂಗಿನ ಚೋರು, ಪಾಲ್ ಪಾಯಾಸಂ ಓಣಂ ಸದ್ಯದ ಜನಪ್ರಿಯ ಖಾದ್ಯಗಳು.


Published by:Sandhya M
First published: