ಕೋವಿಡ್ ಬಳಿಕ ಮಾಸ್ಕ್ (Mask) ಪ್ರತಿಯೊಬ್ಬರ ಜೀವನದಲ್ಲೂ ಕಡ್ಡಾಯ ಬಳಕೆಯ ವಸ್ತುವಾಗಿ ಮಾರ್ಪಟ್ಟಿದೆ. ಮಾಸ್ಕ್ ಇಲ್ಲದೇ ಹೊರಗೆ ಕಾಲು ಇಕ್ಕುವಂತಿಲ್ಲ ಎಂಬ ವಾತವಾರಣ ಸೃಷ್ಟಿಯಾಗಿದೆ. ಸೋಂಕು ನಿಯಂತ್ರಿಸುವಲ್ಲಿ ಸುರಕ್ಷೆಯ ಭಾಗವಾಗಿರುವ ಮಾಸ್ಕ್ಗಳನ್ನು ಡ್ರೆಸ್ಗೆ ತಕ್ಕಂತೆ ಮ್ಯಾಚ್ ಮಾಡಿ ಫ್ಯಾಷನ್ಬಲ್, ಟ್ರೆಂಡಿಯಾಗಿ ಬಳಕೆ ಮಾಡಲಾಗುತ್ತಿದೆ. ಆದರೆ, ಈ ರೀತಿಯ ಮಾಸ್ಕ್ ಬಳಕೆ ಮಾಡುವ ಮುನ್ನ ಎಚ್ಚರ ಎನ್ನುತ್ತಿದ್ದಾರೆ ತಜ್ಞರು. ಕಾರಣ ಇಂತಹ ಫ್ಯಾಷನ್, ಮರುಬಳಕೆಯ ಬಟ್ಟೆ ಮಾಸ್ಕ್ಗಳಿಗೆ ಒಮೈಕ್ರಾನ್ ಬಗ್ಗುವುದಿಲ್ಲ. ಈ ಹಿನ್ನಲೆ ಮಾಸ್ಕ್ ಆಯ್ಕೆಯಲ್ಲಿ ಎಚ್ಚರಿಕೆ ಇರಲಿ ಎಂದು ಸಲಹೆ ನೀಡಿದ್ದಾರೆ
ಮಾಸ್ಕ್ ಬಳಕೆಯಲ್ಲಿ ಇರಲಿ ಎಚ್ಚರ
ಈ ಸಂಬಂಧ ಮಾಹಿತಿ ನೀಡಿರುವ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಪ್ರಾಥಮಿಕ ಆರೋಗ್ಯ ಸೇವೆಗಳ ಪ್ರಾಧ್ಯಾಪಕ ಟ್ರಿಶ್ ಗ್ರೀನ್ಹಾಲ್ಗ್ , ಬಟ್ಟೆ ಮಾಸ್ಕ್ ಬಳಕೆ ಮಾಡಿದರೂ ಆ ಬಟ್ಟೆಯ ಗುಣಮಟ್ಟದ ಮೇಲೆ ಸೋಂಕು ನಿಯಂತ್ರಣ ಕುರಿತು ನಿರ್ಧಾರವಾಗಲಿದೆ ಎಂದಿದ್ದಾರೆ. ಇಲ್ಲದೇ ಹೋದಲ್ಲಿ ದುಬಾರಿ ಬೆಲೆಯೇ ತೆರಬೇಕಾಗುತ್ತದೆ.
ಡಬಲ್ ಅಥವಾ ಟ್ರಿಪಲ್-ಲೇಯರ್ ಮಾಸ್ಕ್ಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಫ್ಯಾಷನ್ ಮಾದರಿ ಮಾಸ್ಕ್ ಕೇವಲ ಬಟ್ಟೆಗಳಿಂದ ನಿರ್ಮಿತವಾಗಿದ್ದು, ಇದು ಸುರಕ್ಷೆ ನೀಡುವುದಿಲ್ಲ ಎಂದಿದ್ದಾರೆ.
ಇದನ್ನು ಓದಿ: ಪಂಜಾಬ್ನ ಲುಧಿಯಾನಾ ನ್ಯಾಯಾಲಯ ಸಂಕೀರ್ಣದಲ್ಲಿ ಬಾಂಬ್ ಸ್ಪೋಟ; ಇಬ್ಬರು ಸಾವು
ಹೆಚ್ಚುತ್ತಿದೆ ಸೋಂಕು
ವಿಶ್ವಾದ್ಯಂತ ಕೋವಿಡ್ ಹಾಗೂ ರೂಪಾಂತರಿ ಓಮೈಕ್ರಾನ್ ಸೋಂಕುಗಳು ಉಲ್ಬಣಗೊಳ್ಳುತ್ತಿದೆ. ಇದರ ನಿಯಂತರಕ್ಕೆ ಪ್ರಪಂಚದಾದ್ಯಂತದ ಸರ್ಕಾರಗಳು ಬಿಗಿ ಕ್ರಮ ಕೈಗೊಳ್ಳುತ್ತಿವೆ. ಈ ತಿಂಗಳ ಆರಂಭದಲ್ಲಿ ಬ್ರಿಟನ್ ಸಾರ್ವಜನಿಕ ಸಾರಿಗೆ, ಅಂಗಡಿಗಳು ಮತ್ತು ಕೆಲವು ಒಳಾಂಗಣ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಪುನಃ ಜಾರಿಗೆ ತಂದಿದೆ. ಈ ಹಿಂದೆ ಬೇಸಿಗೆಯಲ್ಲಿ ಈ ನಿಯಮವನ್ನು ಸಡಿಲಗೊಳಿಸಲಾಗಿತತು. ಈ ಮತ್ತೆ ಸೋಂಕು ಉಲ್ಬಣಗೊಳ್ಳುತ್ತಿದ್ದು, ಜನರು ಉತ್ತಮ ಸುರಕ್ಷಿತ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಇದನ್ನು ಓದಿ: ಇಂದು ಆರೋಗ್ಯ ಕ್ಷೇತ್ರದ ತಜ್ಞರು ಮತ್ತು ಅಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಭೆ
ಮರು ಬಳಕೆ ಮಾಸ್ಕ್ ಆದರೂ ಇರಬೇಕು ಸುರಕ್ಷತೆ
ಏಕ ಪದರದ ಬಟ್ಟೆ ಮಾಸ್ಕ್ಗಳು ಆರೋಗ್ಯ ಗುಣಮಟ್ಟವನ್ನು ಪೂರೈಸುವುದಿಲ್ಲ, ಇನ್ನು N95 ಮಾಸ್ಕ್ಗಳು ಸುರಕ್ಷೆ ಹೊಂದಿವೆ ಎಂದು ಖಚಿತಪಡಿಸಿದ್ದಾರೆ. ಮಾಸ್ಕ್ಗಳು ಉತ್ತಮ ಗುಣಮಟ್ಟದ್ದಾಗಿದ್ದು, ಅವು ಮೂಗು ಮತ್ತು ಬಾಯಿಯನ್ನು ಸರಿಯಾಗಿ ಮುಚ್ಚದಿದ್ದರೆ ಅವು ನಿಷ್ಪ್ರಯೋಜಕವಾಗಿದೆ. ಜನರು ಈಗ ಮರಬಳಕೆ ಮಾಸ್ಕ್ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಅವುಗಳನ್ನು ಮತ್ತೆ ತೊಳೆದು ಉಪಯೋಗಿಸಬಹುದು ಎಂದು. ಆದರೆ ಈ ಮಾಸ್ಕ್ಗಳು ಎರಡು ಮೂರು ಲೇಯರ್ ಇದ್ದು, ಸುರಕ್ಷೆತೆ ಹೊಂದಿರುವುದು ಅವಶ್ಯ.
ಧರಿಸುವ ಮಾಸ್ಕ್ ಹೇಗಿರಬೇಕು:
ಅಧ್ಯಯನಗಳು ತಿಳಿಸುವಂತೆ ಬಿಗಿಯಾಗಿರುವ ಡಬಲ್ ಮಾಸ್ಕ್ ವೈರಸ್ನಿಂದ ಪರಿಣಾಮಕಾರಿ ಸಂರಕ್ಷಣೆ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ ಡಬಲ್ ಮಾಸ್ಕ್ ವೈರಸ್ನ ಪ್ರವೇಶವನ್ನು 90% ದಷ್ಟು ಕಡಿಮೆ ಮಾಡುತ್ತದೆ. ಸೀನಿನಿಂದ ದೇಹವನ್ನು ಪ್ರವೇಶಿಸುವ ವೈರಸ್ಗೆ ಡಬಲ್ ಮಾಸ್ಕ್ ಉತ್ತಮ ಸಂರಕ್ಷಕವಾಗಿದೆ. ಈಗತಾನೇ ದೇಶವು ಲಾಕ್ಡೌನ್ನಿಂದ ನಿಧಾನವಾಗಿ ಅನ್ಲಾಕ್ನತ್ತ ಮುಖ ಮಾಡುತ್ತಿದ್ದು, ನೀವು ಹೊರಹೋಗುವ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ವೈರಸ್ ಅನ್ನು ಲಾಕ್ ಮಾಡಬೇಕು ಎಂದಾದಲ್ಲಿ ಡಬಲ್ ಮಾಸ್ಕಿಂಗ್ ಕಡ್ಡಾಯವಾಗಿ ಧರಿಸಲೇಬೇಕು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ