8 ಪೊಲೀಸರ ಹತ್ಯೆ ಪ್ರಕರಣ: ಎನ್​ಕೌಂಟರ್​ನಲ್ಲಿ ಗ್ಯಾಂಗ್​ಸ್ಟರ್ ವಿಕಾಸ್ ದುಬೆ ಬಲಗೈ ಬಂಟನ ಹತ್ಯೆ

ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ವಿಕಾಸ್ ದುಬೆಯನ್ನು ಬಂಧಿಸಲು ಪ್ರಯತ್ನಿಸುತ್ತಿದೆ. ಮಂಗಳವಾರ ಕಾರ್ಯಾಚರಣೆ ನಡೆಸಿ ವಿಕಾಸ್​ ಆಪ್ತನನ್ನು ಹೊಡೆದುರುಳಿಸುವ ಮೂಲಕ ಒಂದು ಹಂತದ ಯಶಸ್ಸು ಕಂಡಿದೆ.

news18-kannada
Updated:July 9, 2020, 8:41 AM IST
8 ಪೊಲೀಸರ ಹತ್ಯೆ ಪ್ರಕರಣ: ಎನ್​ಕೌಂಟರ್​ನಲ್ಲಿ ಗ್ಯಾಂಗ್​ಸ್ಟರ್ ವಿಕಾಸ್ ದುಬೆ ಬಲಗೈ ಬಂಟನ ಹತ್ಯೆ
ಅಮರ್​ ಡೂಬೆ ಹಾಗೂ ವಿಕಾಸ್​ ಡೂಬೆ
  • Share this:
ಲಖನೌ (ಜು.8): ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ 8 ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ, ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ವಿಕಾಸ್​ ಡೂಬೆ ಬಲಗೈ ಬಂಟ ಅಮರ್ ​ದುಬೆಯನ್ನು ಹತ್ಯೆ ಮಾಡಿದ್ದಾರೆ.

ಕಾನ್ಪುರದ ಬಿಕ್ರಿ ಗ್ರಾಮದಲ್ಲಿ ಗುರುವಾರ ತಡರಾತ್ರಿ ಗ್ಯಾಂಗ್​ಸ್ಟರ್ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಪೊಲೀಸರು ವಿಕಾಸ್ ಅಡಗಿ ಕೂತಿದ್ದ ಮನೆ ತಲುಪುತ್ತಿದ್ದಂತೆ ಟೆರೇಸ್ ಮೇಲಿನಿಂದ 8-10 ಜನರು ಗುಂಡಿನ ದಾಳಿ ನಡೆಸಿದ್ದರು. ಶಿವರಾಜ್ಪುರ ಪೊಲೀಸ್ ಠಾಣಾಧಿಕಾರಿ ಮಹೇಶ್ ಯಾದವ್, ಸಬ್ ಇನ್ಸ್ಪೆಕ್ಟರ್, ಐದು ಕಾನ್ಸ್ಟೇಬಲ್ ಹಾಗೂ ಮತ್ತೋರ್ವ ಸ್ಥಳದಲ್ಲೇ ಮೃತಪಟ್ಟಿದ್ದರು.

ಇದಾದ ನಂತರ ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದ್ದು, ವಿಕಾಸ್ ದುಬೆಯನ್ನು ಬಂಧಿಸಲು ಪ್ರಯತ್ನಿಸುತ್ತಿದೆ. ಮಂಗಳವಾರ ಕಾರ್ಯಾಚರಣೆ ನಡೆಸಿ ವಿಕಾಸ್​ ಆಪ್ತ ಅಮರ್ನನ್ನು ಹೊಡೆದುರುಳಿಸುವ ಮೂಲಕ ಒಂದು ಹಂತದ ಯಶಸ್ಸು ಕಂಡಿದೆ.

ಹೋಟೆಲ್​ನಲ್ಲಿ ವಿಕಾಸ್ ದುಬೆ  ಪತ್ತೆ:

ವಿಕಾಸ್​ ದುಬೆಗಾಗಿ ಉತ್ತರ ಪ್ರದೇಶ ಹುಡುಕಾಟ ನಡೆಯುತ್ತಿದೆ. ಈ ಮಧ್ಯೆ ವಿಕಾಸ್​ ದುಬೆ ಹರಿಯಾಣದ ಫರಿದಾಬಾದ್​ ಹೋಟೆಲ್​ ಒಂದರಲ್ಲಿ ಕಾಣಿಸಿಕೊಂಡಿದ್ದಾನೆ. ಪೊಲೀಸರು ರೇಡ್​ ಮಾಡುವ ಮೊದಲೇ ಆತ ತಪ್ಪಿಸಿಕೊಂಡಿದ್ದ.

ಎನ್​ಕೌಂಟರ್​ ಮಾಡಿ ಎಂದಿದ್ದ ತಾಯಿ:ಪೊಲೀಸರ ಹತ್ಯೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದ ವಿಕಾಸ್ ತಾಯಿ, ನನ್ನ ಮಗನನ್ನು ಗುಂಡಿಕ್ಕಿ ಕೊಂದು ಬಿಡಿ ಎಂದಿದ್ದರು. “ನನ್ನ ಮಗ ಪೊಲೀಸರಿಗೆ ಶರಣಾಗಬೇಕು. ಇಲ್ಲದಿದ್ದರೆ ಆತನನ್ನು ಗುಂಡಿಕ್ಕಿ ಕೊಂದು ಬಿಡಲಿ. ಆತ ಮಾಡಿದ್ದು ತುಂಬಾನೇ ದೊಡ್ಡ ತಪ್ಪು. ಒಂದೊಮ್ಮೆ ಆತ ಶರಣಾದರೂ ಆತನಿಗೆ ಕೋರ್ಟ್ ಮೆಟ್ಟಿಲು ಹತ್ತಲು ಅವಕಾಶವನ್ನೇ ನೀಡಬಾರದು. ಅದಕ್ಕೂ ಮೊದಲೇ ಕೊಲ್ಲಬೇಕು,” ಎಂದು ಹೇಳಿದ್ದರು.
Published by: Rajesh Duggumane
First published: July 8, 2020, 9:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading