Climate Summit 2021- RILನಿಂದ 100GB ಗ್ರೀನ್ ಎನರ್ಜಿ ಗುರಿ: ಮುಕೇಶ್ ಅಂಬಾನಿ
2030ರೊಳಗೆ ಭಾರತದಲ್ಲಿ 450 ಗಿಗಾ ವ್ಯಾಟ್ನಷ್ಟು ಹಸಿರು ಇಂಧನ ಉತ್ಪಾದನೆಯ ಗುರಿ ಇದೆ. ರಿಲಾಯನ್ಸ್ ಸಂಸ್ಥೆಯೊಂದೇ 100ಕ್ಕೂ ಹೆಚ್ಚು ಗಿಗಾ ವ್ಯಾಟ್ ಇಂಧನ ಉತ್ಪಾದಿಸಲಿದೆ ಎಂದು International Climate Summit 2021 ಶೃಂಗದಲ್ಲಿ ಮುಕೇಶ್ ಅಂಬಾನಿ ಹೇಳಿದ್ದಾರೆ.
ನವದೆಹಲಿ, ಸೆ. 03: ಹವಾಮಾನ ಬದಲಾವಣೆ ಸಮಸ್ಯೆಯು (Climate Change Problem) ಭವಿಷ್ಯದಲ್ಲಿ ಸಮರ್ಪಕ ವ್ಯವಸ್ಥೆ ನಿರ್ಮಿಸಲು ಉತ್ತಮ ಅವಕಾಶ ಮಾಡಿಕೊಡುತ್ತದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ (RIL) ಸಂಸ್ಥೆಯ ಛೇರ್ಮನ್ ಮುಕೇಶ್ ಅಂಬಾನಿ (Mukesh Ambani) ಅಭಿಪ್ರಾಯಪಟ್ಟರು. ಅಂತರಾಷ್ಟ್ರೀಯ ಹವಾಮಾನ ಶೃಂಗ ಸಭೆ (International Climate Summit 2021) ಯಲ್ಲಿ ಮಾತನಾಡುತ್ತಿದ್ದ ಅವರು, ಹವಾಮಾನ ಬದಲಾವಣೆಯು ಮಾನವಕುಲ ಎದುರಿಸುತ್ತಿರುವ ಅತ್ಯಂತ ಕಠಿಣ ಸವಾಲಾಗಿದೆ ಎಂದು ಹೇಳಿದರು. “ಅನಿಯಂತ್ರಿತವಾಗಿ ಹವಾಮಾನ ಬದಲಾವಣೆ ಅನಿಯಂತ್ರಿತವಾಗಿದ್ದರೆ ಅದು ನಮ್ಮ ಈ ಭೂಮಿಯ ಜೀವಕುಲಕ್ಕೆ ಅಪಾಯಕರವಾಗುತ್ತದೆ. ಆದಷ್ಟೂ ಹಸಿರು ಯುಗಕ್ಕೆ ಬದಲಾಗುವುದು ಈಗ ನಮಗಿರುವ ಒಂದೇ ಆಯ್ಕೆ” ಎಂದು ಅಂಬಾನಿ ಅಭಿಪ್ರಾಯಪಟ್ಟರು.
ಭಾರತದಲ್ಲಿ ಈಗಾಗಲೇ ಹೊಸ ಹಸಿರು ಕ್ರಾಂತಿ (New Green Revolution) ಪ್ರಾರಂಭವಾಗಿದ್ದು, ಇಂಧನ ವಿಚಾರದಲ್ಲಿ ದೇಶ ಶೇ. 100ರಷ್ಟು ಸ್ವಾವಂಬಲನೆ ಆಗಲಿದೆ. 2030ರಷ್ಟರಲ್ಲಿ 450 ಗಿಗಾ ವ್ಯಾಟ್ನಷ್ಟು ಮರುಬಳಕೆ ವಿದ್ಯುತ್ ಉತ್ಪಾದನೆಯ ಗುರಿಯನ್ನ ಭಾರತ ಸರ್ಕಾರ ಇಟ್ಟುಕೊಂಡಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ 100 ಗಿಗಾ ವ್ಯಾಟ್ಗೂ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದರು. ಗುಜರಾತ್ನ ಜಾಮ್ನಗರ್ನಲ್ಲಿ ಆರ್ಐಎಲ್ ಸಂಸ್ಥೆ 75 ಸಾವಿರ ಕೋಟಿ ರೂ ಬಂಡವಾಳ ಹಾಕಿ ಗ್ರೀನ್ ಎನರ್ಜಿ ಕಾಂಪ್ಲೆಕ್ಸ್ ನಿರ್ಮಾಣ ಕಾರ್ಯವನ್ನು ಶುರು ಮಾಡಿದೆ. ಈ ಸಂಕೀರ್ಣದಲ್ಲಿ 4 ಗೀಗಾ ಫ್ಯಾಕ್ಟರಿಗಳು ಇರಲಿವೆ ಎಂದು ಅವರು ಮಾಹಿತಿ ನೀಡಿದರು.
ಹೈಡ್ರೋಜನ್ ಆಧಾರಿತ ಇಂಧನವು ಪರಿಸರಕ್ಕೆ ಮಾರಕವಾಗಿಲ್ಲ. ಈ ಹಸಿರು ಇಂಧನದತ್ತ ವಿಶ್ವದ ಗಮನ ನೆಟ್ಟಿದೆ. ಭಾರತದಲ್ಲಿ ಹೈಡ್ರೋಜನ್ ಆಧಾರಿತ ಇಂಧನದ ವ್ಯವಸ್ಥೆ ನಿರ್ಮಿಸಲು ಸಿದ್ಧತೆ ನಡೆದಿದೆ. ಅಂತರರಾಷ್ಟ್ರೀಯ ಹವಾಮಾನ ಶೃಂಗ 2021 ಕಾರ್ಯಕ್ರಮದಲ್ಲಿ ಈ ಮರುಬಳಕೆಯ ಹಸಿರು ಶಕ್ತಿಯ ಉತ್ಪಾದನೆ ಬೇಕಾದ ವಿವಿಧ ತಂತ್ರಜ್ಞಾನಗಳನ್ನ ಅವಲೋಕಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ಭೂಪೇಂದರ್ ಯಾದವ್, ವಿದ್ಯುತ್ ಸಚಿವ ರಾಜ್ ಕುಮಾರ್ ಸಿಂಗ್ ಮೊದಲಾದವರು ಮಾತನಾಡಲಿದ್ದಾರೆ. ಹಾಗೆಯೇ, ಭಾರತ ಹಾಗೂ ಐರೋಪ್ಯ ರಾಷ್ಟ್ರಗಳ ತಜ್ಞರೂ ಕೂಡ ಈ ಮಹಾ ಶೃಂಗದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನ ಹಂಚಿಕೊಳ್ಳಲಿದ್ದಾರೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ