Report: ಕರ್ನಾಟಕ ಸೇರಿ ದೇಶದ ಈ 5 ರಾಜ್ಯಗಳು ವ್ಯತಿರಿಕ್ತ ಹವಾಮಾನ ಪರಿಸ್ಥಿತಿಗಳಿಗೆ ಹೆಚ್ಚು ಗುರಿಯಾಗುತ್ತಿವೆ

Karnataka climate change: ಅಕ್ಟೋಬರ್ 31ರಿಂದ ನವೆಂಬರ್ 12ರವರೆಗೆ ಗ್ಲಾಸ್ಗೋದಲ್ಲಿ ನಡೆಯಲಿರುವ ಮುಂಬರುವ ಹವಾಮಾನ ಸಮ್ಮೇಳನ COP-26ನಲ್ಲಿ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಸಕಾಲಿಕವಾಗಿ ಹವಾಮಾನ ಪ್ರತಿಕೂಲ ಸಮಸ್ಯೆಗಳಿಗೆ ಹಣ ಸಹಾಯ ಒದಗಿಸುವಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಬೇಡಿಕೆ ಇಡುವ ನಿರೀಕ್ಷೆ ಇದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭಾರತದಲ್ಲಿ ಪ್ರವಾಹ (Flood), ಬರಗಾಲ (Drought) ಹಾಗೂ ಚಂಡಮಾರುತಗಳಂತಹ (Cyclone) ವ್ಯತಿರಿಕ್ತ ಹವಾಮಾನ ಸಂಭವಗಳಿಗೆ ಅಸ್ಸಾಂ (Assam), ಆಂಧ್ರಪ್ರದೇಶ (Andhra Pradesh), ಬಿಹಾರ (Bihar), ಕರ್ನಾಟಕ (Karnataka) ಮತ್ತು ಮಹಾರಾಷ್ಟ್ರ (Maharashtra) ರಾಜ್ಯಗಳು ಹೆಚ್ಚು ಗುರಿಯಾಗುತ್ತಿವೆ ಎಂದು ದೆಹಲಿ (New Delhi) ಮೂಲದ ಥಿಂಕ್ ಟ್ಯಾಂಕ್ ವರದಿ ಮಾಡಿದೆ. CEEW ಶಕ್ತಿ, ಪರಿಸರ ಹಾಗೂ ನೀರು ಸಮಿತಿಯು ಹವಾಮಾನ ದುರ್ಬಲತೆ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು ಹವಾಮಾನ ಅಪಾಯಗಳಿಗೆ ಹೆಚ್ಚು ಗುರಿಯಾಗುವ ಜಿಲ್ಲೆಗಳಲ್ಲಿ 80%ನಷ್ಟು ಭಾರತೀಯರು ವಾಸಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಅಕ್ಟೋಬರ್ 31ರಿಂದ ನವೆಂಬರ್ 12ರವರೆಗೆ ಗ್ಲಾಸ್ಗೋದಲ್ಲಿ ನಡೆಯಲಿರುವ ಮುಂಬರುವ ಹವಾಮಾನ ಸಮ್ಮೇಳನ COP-26ನಲ್ಲಿ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಸಕಾಲಿಕವಾಗಿ ಹವಾಮಾನ ಪ್ರತಿಕೂಲ ಸಮಸ್ಯೆಗಳಿಗೆ ಹಣ ಸಹಾಯ ಒದಗಿಸುವಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಬೇಡಿಕೆ ಇಡುವ ನಿರೀಕ್ಷೆ ಇದೆ.

  ಅಧ್ಯಯನ ಬಹಿರಂಗಪಡಿಸಿರುವ ಅಂಶಗಳೇನು?:

  ಇಂತಹ ಆರ್ಥಿಕ ನೆರವಿನಿಂದಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ವಿಪರೀತ ಹವಾಮಾನ (Bad weather) ಪರಿಸ್ಥಿತಿಗಳಲ್ಲಿ ಹೊಂದಾಣಿಕೆಯ ಕಾರ್ಯವಿಧಾನಗಳನ್ನು ಬಲಪಡಿಸಿಕೊಳ್ಳಬಹುದಾಗಿದ್ದು ಇಂಗಾಲದ ಕಡಿಮೆ ಪರಿವರ್ತನೆಯನ್ನು ವೇಗಗೊಳಿಸುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳು ಪ್ರಸ್ತುತ ಸಹಕಾರಗಳು ಸಾಕಷ್ಟು ಪ್ರಮಾಣದಲ್ಲಿಲ್ಲ ಮತ್ತು ಅವುಗಳ ನೆರವು ಇನ್ನೂ ಬೇಕಾಗಿದೆ ಎಂದು CEEW ಹೇಳಿಕೆಯಲ್ಲಿ ತಿಳಿಸಿದೆ.

  ಭಾರತದಲ್ಲಿನ 463 ಜಿಲ್ಲೆಗಳು ಅತಿವೃಷ್ಟಿ, ಅನಾವೃಷ್ಟಿ ಮತ್ತು ಚಂಡಮಾರುತಗಳಿಗೆ ಗುರಿಯಾಗುತ್ತವೆ ಎಂದು ಅಧ್ಯಯನವು ಬಹಿರಂಗಪಡಿಸಿದೆ. ಈ ಜಿಲ್ಲೆಗಳಲ್ಲಿ ಸರಿಸುಮಾರು 45% ಹೆಚ್ಚು ಸಮರ್ಥನೀಯಲ್ಲದ ಭೂದೃಶ್ಯ ಹಾಗೂ ಮೂಲಸೌಕರ್ಯ ಬದಲಾವಣೆಗಳಿಗೆ ಗುರಿಯಾಗಿವೆ. ಅಲ್ಲದೆ 183 ಹಾಟ್‌ಸ್ಪಾಟ್ ಜಿಲ್ಲೆಗಳು ಅತ್ಯಂತ ತೀಕ್ಷ್ಣವಾದ ಹವಾಮಾನ ಪರಿಸ್ಥಿತಿಗಳಿಗೆ ಹೆಚ್ಚು ದುರ್ಬಲವಾಗಿವೆ ಎಂದು ವರದಿ ತಿಳಿಸಿದೆ. ಭಾರತದಲ್ಲಿರುವ 60%ಕ್ಕಿಂತ ಹೆಚ್ಚಿನ ಜಿಲ್ಲೆಗಳು ಮಧ್ಯಮದಿಂದ ಕಡಿಮೆ ಹೊಂದಾಣಿಕೆಯ ಸಾಮರ್ಥ್ಯ ಹೊಂದಿವೆ ಎಂದು ವರದಿ ತಿಳಿಸಿದೆ.

  ಅಸ್ಸಾಂನ ಧೇಮಾಜಿ ಮತ್ತು ನಾಗಾನ್, ತೆಲಂಗಾಣದ ಖಮ್ಮಂ, ಒಡಿಶಾದ ಗಜಪತಿ, ಆಂಧ್ರಪ್ರದೇಶದ ವಿಜಿಯನಗರಂ, ಮಹಾರಾಷ್ಟ್ರದ ಸಾಂಗ್ಲಿ ಮತ್ತು ತಮಿಳುನಾಡಿನ ಚೆನ್ನೈ ಅತ್ಯಂತ ಹವಾಮಾನ-ದುರ್ಬಲ ಜಿಲ್ಲೆಗಳಾಗಿವೆ ಎಂದು ಅದು ಹೇಳಿದೆ. ಹೆಚ್ಚುತ್ತಿರುವ ಆವರ್ತನೆ ಹಾಗೂ ತೀವ್ರ ಹವಾಮಾನ ಘಟನೆಗಳು ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆರ್ಥಿಕ ಸವಾಲಾಗಿ ಪರಿಣಮಿಸಿದೆ ಎಂದು CEEWನ ಸಿಇಒ ಅರುಣಾಭಾ ಘೋಷ್ ತಿಳಿಸಿದ್ದಾರೆ.

  COP-26ನಲ್ಲಿ, ಅಭಿವೃದ್ಧಿ ಹೊಂದಿದ ದೇಶಗಳು 2009ರಲ್ಲಿ ಭರವಸೆ ನೀಡಿದ 100 ಬಿಲಿಯನ್‌ ಅಮೆರಿಕ ಡಾಲರ್ (American Dollar) ಒದಗಿಸುವ ಮೂಲಕ ವಿಶ್ವಾಸ ಮರಳಿ ಪಡೆದುಕೊಳ್ಳಬೇಕು ಮತ್ತು ಮುಂಬರುವ ದಶಕಗಳಲ್ಲಿ ಹವಾಮಾನ ಪ್ರತಿಕೂಲದ ಕುರಿತಾಗಿ ಹಣಕಾಸು ನೆರವು ಹೆಚ್ಚಿಸಲು ಬದ್ಧರಾಗಬೇಕು ಎಂದು ಅರುಣಾಭಾ ಅಭಿಪ್ರಾಯಿಸಿದ್ದಾರೆ.

  ಹವಾಮಾನ ಆಘಾತ ವಿಮೆ (Environmental Calamity Insurance):

  ಹವಾಮಾನ ಆಘಾತಗಳ ವಿರುದ್ಧ ವಿಮೆಯಾಗಿ ಕಾರ್ಯನಿರ್ವಹಿಸಬಹುದಾದ ಜಾಗತಿಕ ಸ್ಥಿತಿಸ್ಥಾಪಕ ಮೀಸಲು ನಿಧಿಯನ್ನು (Global Resilience Reserve Fund) ರಚಿಸಲು ಭಾರತವು ಇತರ ದೇಶಗಳೊಂದಿಗೆ ಸಹಕರಿಸಬೇಕು. ಇದು ಹವಾಮಾನ-ದುರ್ಬಲ ರಾಷ್ಟ್ರಗಳ ಮೇಲೆ ವಿಶೇಷವಾಗಿ ಜಾಗತಿಕ ದಕ್ಷಿಣ ಭಾಗದಿಂದ ಆರ್ಥಿಕ ಒತ್ತಡ ಕಡಿಮೆ ಮಾಡುತ್ತದೆ ಎಂದು ಘೋಷ್ ಹೇಳಿದರು.

  ಭಾರತ ಆರ್ಥಿಕ ನೆರವಿಗೆ ಏಕೆ ಒತ್ತಡ ಹೇರಬೇಕು:

  CEEWನಲ್ಲಿ ಕಾರ್ಯಕ್ರಮದ ಪ್ರಮುಖ ಮತ್ತು ಅಧ್ಯಯನದ ಪ್ರಮುಖ ಲೇಖಕರಾದ ಅವಿನಾಶ್ ಮೊಹಂತಿ ಹೇಳಿರುವಂತೆ, ಭಾರತದಲ್ಲಿ ತೀವ್ರ ಹವಾಮಾನ ಘಟನೆಗಳ ಆವರ್ತನ ಮತ್ತು ತೀವ್ರತೆಯು 2005ರಿಂದ ಸುಮಾರು 200% ಹೆಚ್ಚಾಗಿದೆ ಎಂದು ಹೇಳಿದ್ದಾರೆ. ದೇಶದ ನೀತಿ ನಿರೂಪಕರು, ಉದ್ಯಮ ಮುಖಂಡರು ಮತ್ತು ನಾಗರಿಕರು ಪರಿಣಾಮಕಾರಿ ಅಪಾಯ-ತಿಳಿವಳಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಜಿಲ್ಲಾ ಮಟ್ಟದ ವಿಶ್ಲೇಷಣೆ ಬಳಸಬೇಕು. ಭೌತಿಕ ಮತ್ತು ಪರಿಸರ ವ್ಯವಸ್ಥೆಯ ಮೂಲಸೌಕರ್ಯಗಳ ಹವಾಮಾನ-ಋಜುವಾತು ಕೂಡ ಈಗ ರಾಷ್ಟ್ರೀಯ ಕಡ್ಡಾಯವಾಗಿದೆ.

  ಹವಾಮಾನ ಬಿಕ್ಕಟ್ಟಿನಿಂದಾಗಿ ನಷ್ಟ ಮತ್ತು ಹಾನಿಯು ಅಧಿಕ ಪ್ರಮಾಣದಲ್ಲಿ ಹೆಚ್ಚುತ್ತಿದೆ, ಭಾರತವು COP-26ನಲ್ಲಿ ಹೊಂದಾಣಿಕೆ-ಆಧಾರಿತ ಹವಾಮಾನ ಕ್ರಿಯೆಗಳಿಗೆ ಹವಾಮಾನ ಆರ್ಥಿಕ ನೆರವನ್ನು ಒತ್ತಾಯಿಸಬೇಕು. ಹೆಚ್ಚಿನ ಹವಾಮಾನ ಹಣಕಾಸು ನೆರವು ಮುಂದಿನ ಮುಖ್ಯವಾಹಿನಿಯ ಹವಾಮಾನ ಕ್ರಮಗಳಿಗೆ ಅಂತೆಯೇ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಭಾರತ-ನೇತೃತ್ವದ ಜಾಗತಿಕ ಏಜೆನ್ಸಿಗಳನ್ನು ಬೆಂಬಲಿಸುತ್ತದೆ ಎಂದು ಮೊಹಾಂತಿ ತಿಳಿಸಿದ್ದಾರೆ.

  ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ 11 ಹುಲಿಗಳ ಮುಂದೆ ಹೋಗಿ ನಿಂತ ವ್ಯಕ್ತಿ : ವೈರಲ್ ಆಗ್ತಿದೆ ಎದೆ ಝಲ್ ಅನ್ನೋ ವಿಡಿಯೋ

  CEEW ಅಧ್ಯಯನವು ಭಾರತದ ಈಶಾನ್ಯ ರಾಜ್ಯಗಳು ಪ್ರವಾಹಕ್ಕೆ ಹೆಚ್ಚು ಗುರಿಯಾಗುತ್ತವೆ ಎಂಬ ಅಂಶ ಬಹಿರಂಗಪಡಿಸಿದ್ದು ಜೊತೆಗೆ ದಕ್ಷಿಣ ಮತ್ತು ಮಧ್ಯದಲ್ಲಿರುವ ರಾಜ್ಯಗಳು ಹೆಚ್ಚು ದುರ್ಬಲವಾಗಿವೆ. ಇದೇ ರೀತಿ ಪೂರ್ವ ಹಾಗೂ ಪಶ್ಚಿಮ ರಾಜ್ಯಗಳ ಒಟ್ಟು 59 ಹಾಗೂ 41% ಭಾಗಗಳು ಚಂಡಮಾರುತಗಳ ಹಾನಿಗೆ ಒಳಗಾಗುತ್ತಿವೆ ಎಂದು ವರದಿ ತಿಳಿಸಿದೆ.

  ಇದನ್ನೂ ಓದಿ: ತಿಂಗಳಿಗೆ ₹81,100 ಸಂಬಳ, 10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ

  ಭಾರತೀಯ ಜಿಲ್ಲೆಗಳಲ್ಲಿ ಕೇವಲ 63% ಜಿಲ್ಲೆಗಳು ಮಾತ್ರ ಜಿಲ್ಲಾ ವಿಪತ್ತು ನಿರ್ವಹಣಾ ಯೋಜನೆಯನ್ನು ಹೊಂದಿದೆ ಎಂದು CEEW ಅಧ್ಯಯನವು ಸೂಚಿಸಿದೆ. 2019ರವರೆಗೆ ಕೇವಲ 32% ದಷ್ಟು ಮಾತ್ರ ಯೋಜನೆಗಳನ್ನು ನವೀಕರಿಸಲಾಗಿದೆ ಎಂದು ವರದಿ ತಿಳಿಸಿದ್ದು ಈ ಯೋಜನೆಗಳನ್ನು ಪ್ರತಿ ವರ್ಷ ನವೀಕರಿಸಬೇಕಾಗಿದೆ ಎಂಬ ಅಂಶವನ್ನು ಉಲ್ಲೇಖಿಸಿದೆ. ನಿರ್ವಹಣಾ ಯೋಜನೆಯಿಂದಾಗಿ ಮಹಾರಾಷ್ಟ್ರ, ತಮಿಳುನಾಡು, ಒಡಿಸ್ಸಾ, ಕರ್ನಾಟಕ ಮತ್ತು ಗುಜರಾತ್‌ನಂತಹ ಹೆಚ್ಚು ದುರ್ಬಲ ರಾಜ್ಯಗಳು ಸುಧಾರಣೆ ಕಂಡುಕೊಂಡಿವೆ ಎಂದು ವರದಿ ತಿಳಿಸಿದೆ.
  Published by:Sharath Sharma Kalagaru
  First published: