ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಪ್ರಾಂಶುಪಾಲೆಗೆ ಗುಂಡಿಕ್ಕಿದ ವಿದ್ಯಾರ್ಥಿ


Updated:January 20, 2018, 7:33 PM IST
ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಪ್ರಾಂಶುಪಾಲೆಗೆ ಗುಂಡಿಕ್ಕಿದ ವಿದ್ಯಾರ್ಥಿ
ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಪ್ರಾಂಶುಪಾಲೆಗೆ ಗುಂಡಿಕ್ಕಿದ ವಿದ್ಯಾರ್ಥಿ
  • Share this:
ಹರ್ಯಾಣ(ಜ.20): ಮೊಬೈಲ್ ಫೋನ್ ಬಳಸಬೇಡ ಎಂದು ಬೈದಿದ್ದಕ್ಕೆ ವಿದ್ಯಾರ್ಥಿ ಮಹಿಳಾ ಪ್ರಾಂಶುಪಾಲರಿಗೆ ಗುಂಡಿಕ್ಕಿರುವ ಘಟನೆ ಹರ್ಯಾಣದ ಯುಮುನಾನಗರದಿಂದ ವರದಿಯಾಗಿದೆ.

ಪ್ರಾಂಶುಪಾಲರು ಬೈದ 3 ದಿನಗಳ ಬಳಿಕ ಪಿಸ್ತೂಲನ್ನ ತೆಗೆದುಕೊಂಡು ಬಂದಿದ್ದ ವಿದ್ಯಾರ್ಥಿ ಪ್ರಾಂಶುಪಾಲರ ಮೇಲೆ 4 ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದಾಗಿ ಪ್ರಾಂಶುಪಾಲೆ ಛಾಬ್ರಾ ಅವರ ಎದೆ, ಹೊಟ್ಟೆ, ಭುಜಕ್ಕೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗ್ಗೆ 11:30ರಿಂದ 12 ಗಂಟೆ ಮಧ್ಯದಲ್ಲಿ ಈ ಘಟನೆ ನಡೆದಿದೆ.

ಪ್ರಾಂಶುಪಾಲರಿಗೆ ಗುಂಡಿಕ್ಕಿ ಪರಾರಿಯಾಗಲು ಯತ್ನಿಸಿದ ಕಾಮರ್ಸ್ ವಿದ್ಯಾರ್ಥಿಯನ್ನ ಶಾಲೆಗೆ ಮೀಟಿಂಗಿಗೆ ಬಂದಿದ್ದ ಪೋಷಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲವು ಬಾರಿ ಪ್ರಾಂಶುಪಾಲರು ಬಹಿರಂಗವಾಗಿ ಸಹಪಾಠಿಗಳ ಮುಂದೆ ನಿಂದಿಸಿದ್ದಾರೆ. ಇದರಿಂದ ತೀವ್ರ ಮನನೊಂದು ಈ ಕೃತ್ಯ ಎಸಗಿದ್ದಾಗಿ ಪ್ರಾಥಮಿಕ ತನಿಖೆ ವೇಳೆ ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ.

.ಗುಂಡಿನ ದಾಳಿ ನಡೆಸುವ ವೇಲೆ ವಿದ್ಯಾರ್ಥಿ ಡ್ರಗ್ಸ್ ತೆಗೆದುಕೊಮಡಿದ್ದನೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇವತ್ತು ಟ್ಯೂಶನ್​ಗೆ ತೆರಳಬೇಕಿದ್ದ ವಿದ್ಯಾರ್ಥಿ ಅದನ್ನ ಬಿಟ್ಟು ದಿಢೀರ್ ಶಾಲೆಗೆ ಬಂದಿದ್ದ. ಪ್ರಾಂಶುಪಾಲರನ್ನ ಭೇಟಿ ಮಾಡುವ ನೆಪದಲ್ಲಿ ತೆರಳಿ ಗುಂಡು ಹಾರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
First published:January 20, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ