ಮಹಾರಾಷ್ಟ್ರದ ಭಾಯಂದರ್‌ನಲ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತ ಬಾಲಕನಿಗೆ 13 ವರ್ಷ ವಯಸ್ಸಾಗಿದ್ದು ಎಂಟನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದು ಬಂದಿದೆ.
ಈತ ಮಂಗಳವಾರ ತನ್ನ ಸೋದರ ಸಂಬಂಧಿಯ ಹುಡುಗನ ಜೊತೆಗೆ ಮನೆಯ ಸಮೀಪ ಇರುವ ಮೆನ್ಸ್ ಸೆಲೂನ್‌ಗೆ ಹೇರ್ ಕಟ್ ಮಾಡಲು ಹೋಗಿದ್ದ. ಅಲ್ಲದೇ ತನಗೆ ಬೇಕಾದಂತೆ ಹೇರ್‌ಕಟ್ ಮಾಡಲು ಸೂಚಿಸಿದ್ದ.
ಆದರೆ ಸೆಲೂನ್‌ನಲ್ಲಿದ್ದ ಕ್ಷೌರಿಕ ಮಾಡಿದ ಹೇರ್‌ಕಟ್‌ನಿಂದ ಅಸಮಾಧಾನಗೊಂಡ ಬಾಲಕ ಮನೆಗೆ ಬಂದು ನೋಡಿದಾಗ ಚಿಕ್ಕ ಕೂದಲನ್ನು ನೋಡಿ ತೀವ್ರ ಬೇಸರವಾಗಿದೆ.
ಈ ವೇಳೆ ಮನೆಯವರ ಬಳಿ ಹೇಳಿ ಆತ ಅತ್ತಿದ್ದು, ಕ್ಷೌರಿಕ ನಾ ಹೇಳಿದಂತೆ ಹೇರ್‌ಕಟ್ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಆಗ ಅವನ ಇಬ್ಬರು ಅಕ್ಕಂದಿರು ಮತ್ತು ಅಮ್ಮ ಅವನನ್ನು ಸಂತೈಸಿ ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾರೆ.
ಇದರಿಂದಲೂ ಸಮಾಧಾನವಾಗದ ಬಾಲಕ ರಾತ್ರಿ ಊಟ ಮಾಡದೆಯೂ ಮಲಗಿದ್ದು, ಬಳಿಕ ರಾತ್ರಿ 11.30ರ ಸುಮಾರಿಗೆ 16ನೇ ಮಹಡಿಯಲ್ಲಿ ತನ್ನ ಮನೆಯ ಸ್ನಾನದ ಕೊಠಡಿಯ ಕಿಟಕಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂಬೈನ ಭಾಯಂದರ್‌ನ ನ್ಯೂ ಗೋಲ್ಡನ್ ನೆಸ್ಟ್‌ನಲ್ಲಿರುವ ಸೋನಮ್ ಇಂದ್ರಪ್ರಸ್ಥ ಕಟ್ಟಡದ ಕಾಂಪೌಂಡ್‌ನಲ್ಲಿ ಬಾಲಕನ ಮೃತದೇಹವು ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ