ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಂದಲೇ ಗ್ಯಾಂಗ್​ ರೇಪ್​; ವಿಡಿಯೋ ಚಿತ್ರೀಕರಿಸಿದ ಮಹಿಳಾ ಟೀಚರ್​

10 ನೇ ತರಗತಿ ವಿದ್ಯಾರ್ಥಿನಿ ಹೊರತಾಗಿ 6, 4 ಮತ್ತು 3ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಪ್ರಿನ್ಸಿಪಾಲ್​ ಮತ್ತು ಇತರೆ ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಿದ್ಯೆ ಕಲಿಸುವ ಗುರು (Teacher) ದೇವರಂತೆ ಎಂಬ ಮಾತಿದೆ. ಆದರೆ, ಅಂತಹ ಶಿಕ್ಷಕರೇ ಮಕ್ಕಳ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಉತ್ತಮ ಸಮಾಜ ರೂಪಿಸುವ ಶಿಕ್ಷಕರೇ ಮಕ್ಕಳ ಮೇಲೆ ಮೃಗೀಯ ವರ್ತನೆ ತೋರಿರುವ ಅಮಾನವೀಯ ಘಟನೆ ರಾಜಸ್ಥಾನದ ಆಳ್ವಾರ್ (Rajasthan Alwar) ​ನಲ್ಲಿ ನಡೆದಿದ್ದು, ಅವರ ಕೃತ್ಯ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಶಾಲೆಗೆ ಖುಷಿ ಖಷಿಯಿಂದ ಹೋಗುತ್ತಿದ್ದ ಮಗಳು ಶಾಲೆಗೆ ಹೋಗಲು ಹಿಂದೇಟು ಹಾಕಿದಾಗ ವಿಚಾರಿಸಿದಾಗ ಈ ಭಯಾನಯ ಕೃತ್ಯ ಹೊರ ಬಂದಿದೆ. ಕಳೆದ ಒಂದು ವರ್ಷದಿಂದ ಶಾಲೆಯ ಪ್ರಿನ್ಸಿಪಾಲ್​​  (Principal) ಸೇರಿದಂತೆ 9 ಶಿಕ್ಷಕರು ವಿದ್ಯಾರ್ಥಿನಿ ಮೇಲೆ ಸಾಮಾಹಿಕ ಅತ್ಯಾಚಾರ (Gang Rape) ನಡೆಸಿದ್ದಾರೆ.

  ಏನಿದು ಪ್ರಕರಣ
  ರಾಜಸ್ಥಾನದ ಆಳ್ವಾರನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಾಲೆ ಪ್ರಿನ್ಸಿಪಾಲ್​ ಸೇರಿದಂತೆ ಮೂವರು ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಕಳೆದೊಂದು ವರ್ಷದಿಂದ ಈ ರೀತಿ ದೌರ್ಜನ್ಯವನ್ನು ಎಸಗಿದ್ದಾರೆ. ಇನ್ನು ಈ ಘಟನೆಯನ್ನು ಖಂಡಿಸಿ ವಿದ್ಯಾರ್ಥಿನಿಗೆ ನೆರವಾಗ ಬೇಕಾಗಿದ್ದ ಇಬ್ಬರು ಮಹಿಳಾ ಶಿಕ್ಷಕರು ಈ ಸಾಮೂಹಿಕ ಅತ್ಯಾಚಾರ ಘಟನೆಯನ್ನು ವಿಡಿಯೋ ಮಾಡಿದ್ದಾರೆ.

  ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ದೂರು ದಾಖಲಿಸಲಾಗಿದೆ. ಈ ಪ್ರಕರಣ ವಿಚಾರಣೆ ನಡೆಸುವ ವೇಳೆ ಇದಕ್ಕೆ ಸಂಬಂಧಿಸಿದಂತೆ ಮತ್ತೆ ಮೂರು ಅತ್ಯಾಚಾರದ ಘಟನೆಗಳು ಬೆಳಕಿಗೆ ಬಂದಿದ್ದು, ಈ ಕುರಿತು ಕೂಡ ತನಿಖೆಗೆ ಮುಂದಾಗಿರುವುದಾಗಿ ಮಂಧಾನ ಪೊಲೀಸ್​ ಠಾಣೆ ಅಧಿಕಾರಿ ಮುಖೇಶ್ ಯಾದವ್​ ತಿಳಿಸಿದ್ದಾರೆ.

  ಬೆಳಕಿಗೆ ಬಂದ ಮತ್ತಷ್ಟು ಪ್ರಕರಣ

  10 ನೇ ತರಗತಿ ವಿದ್ಯಾರ್ಥಿನಿ ಹೊರತಾಗಿ 6, 4 ಮತ್ತು 3ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಪ್ರಿನ್ಸಿಪಾಲ್​ ಮತ್ತು ಇತರೆ ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇನ್ನು ದೌರ್ಜನ್ಯ ಎಸಗಿದ ಬಳಿಕ ಕೊಲೆ ಬೆದರಿಕೆ ಹಾಕಲಾಗಿರುವ ಹಿನ್ನಲೆ ಸಂತ್ರಸ್ತ ಮಕ್ಕಳು ಈ ಕುರಿತು ಎಲ್ಲಿಯೂ ಬಾಯಿ ಬಿಟ್ಟಿಲ್ಲ

  ಇದನ್ನು ಓದಿ: ಪ್ರಾಯೋಗಿಕ ಪರೀಕ್ಷೆ ನೆಪದಲ್ಲಿ 17 ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿ ದೌರ್ಜನ್ಯ ನಡೆಸಿದ ಶಾಲಾ ಸಿಬ್ಬಂದಿ

  ಘಟನೆ ತನಿಖೆ ನಡೆಸಿದಾಗ ಒಟ್ಟು ನಾಲ್ವರು ಮಕ್ಕಳು ಶಾಲೆಯ ಪ್ರಿನ್ಸಿಪಾಲ್​ ಮತ್ತು ಶಿಕ್ಷಕರು ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿರುವ ಕುರಿತು ದೂರು ಸಲ್ಲಿಸಿದ್ದಾರೆ.

  ಆಮಿಷವೊಡ್ಡಿದ್ದ ಶಿಕ್ಷಕರು
  ಇನ್ನು ಘಟನೆ ತನಿಖೆ ನಡೆಸುವ ವೇಳೆ ಈ ಪ್ರಕರಣವನ್ನು ಎಲ್ಲಿಯೂ ತಿಳಿಸದಂತೆ ವಿದ್ಯಾರ್ಥಿನಿಗೆ ಆಮಿಷವೊಡ್ಡಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ವಿದ್ಯಾರ್ಥಿನಿ ಈ ಸಂಬಂಧ ಪೊಲೀಸರಿಗೆ ದೂರು ನೀಡಲು ಮುಂದಾದಾಗ ಆಕೆಯಗೆ ಹಣ ಮತ್ತು ಪುಸ್ತಕ ನೀಡುವ ಆಮಿಷ ತೋರಿಸಿ ಪತ್ರ ಬರೆದುಕೊಟ್ಟಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
  ಇದಾದ ಬಳಿಕ ಮಹಿಳಾ ಶಿಕ್ಷಕಿ, ಪ್ರಿನ್ಸಿಪಾಲ್​ ಸೇರಿದಂತೆ ಮೂವರ ಶಿಕ್ಷಕರ ಮನೆಗೆ ಕರೆದುಕೊಂಡು ಹೋದರು. ಈ ವೇಳೆ ಅವರೆಲ್ಲ ಮದ್ಯ ಸೇವಿಸಿದ್ದರು. ಅವರು ನನ್ನ ಬಟ್ಟೆ ಕಳಚಿ, ಅಸಭ್ಯವಾಗಿ ವರ್ತಿಸಿದರು ಎಂದು ಸಂತ್ರಸ್ತ ಬಾಲಕಿ ತಿಳಿಸಿದ್ದಾಳೆ.

  ಇದನ್ನು ಓದಿ: ಬೇರೆಯವನನ್ನು ಮದುವೆಯಾಗುತ್ತಿದ್ದ ಪ್ರೇಯಸಿ ಹಣೆಗೆ ಮದ್ವೆ ಮನೆಯಲ್ಲೇ ಸಿಂಧೂರ ಇಟ್ಟುಬಿಟ್ಟ ಪ್ರೇಮಿ, ಮುಂದೆ?

  ಪೋಷಕರಿಗೆ ಬೆದರಿಸಿದ್ದ ಪ್ರಾಂಶುಪಾಲರು
  ಇನ್ನು ಈ ಘಟನೆ ತಿಳಿದಾಕ್ಷಣ ಸಂತ್ರಸ್ತೆ ತಂದೆಯೊಬ್ಬರು ಈ ಘಟನೆಯ ದೂರು ನೀಡಲು ಶಾಲಾ ಪ್ರಿನ್ಸಿಪಾಲ್​ ಬಳಿ ಹೋದರು. ಈ ವೇಳೆ ನನ್ನ ಸಹೋದರ ಮಂತ್ರಿ ಎಂದು ಪ್ರಾಂಶುಪಾಲರು ಅವರಿಗೆ ಹೆದರಿಸಿದರು. ಒಂದು ವೇಳೆ ಇದನ್ನು ಮೀರಿ ದೂರು ನೀಡಲು ಮುಂದಾದರೆ ಕೊಲೆ ಮಾಡುವುದಾಗಿ ಎಚ್ಚರಿಸಿದರು.
  ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಂಶುಪಾಲರು ಆ ರೀತಿಯಾದ ಯಾವುದೇ ದೂರನ್ನು ನಾವು ಪಡೆದಿಲ್ಲ ಎಂದಿದ್ದಾರೆ. ​
  Published by:Seema R
  First published: