Pratapgarh Clash: ಬಿಜೆಪಿ ಸಂಸದನ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ; ಪ್ರತಾಪಗಢದಲ್ಲಿ ಹೈಡ್ರಾಮಾ!

BJP MP Sangam Lal Gupta : ಸಂಸದರು ಪ್ರಾಣ ಉಳಿಸಿಕೊಳ್ಳಲು ಸ್ಥಳದಿಂದ ಓಡಲು ಆರಂಭಿಸಿದರು. ಕೊನೆಗೆ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಸಂಸದರನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಸದರು ತೆರಳಿದ್ರೂ ಸುಮ್ಮನಾಗದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಗರನ್ನು ರಸ್ತೆಗೆ ಎಳೆದುತಂದು ಹಲ್ಲೆ ನಡೆಸಿದ್ದಾರೆ.

ಕಾರ್ಯಕ್ರಮದಲ್ಲಿ ಭುಗಿಲೆದ್ದ ಗಲಾಟೆ

ಕಾರ್ಯಕ್ರಮದಲ್ಲಿ ಭುಗಿಲೆದ್ದ ಗಲಾಟೆ

  • Share this:
ಲಕ್ನೋ: ಪ್ರತಾಪಗಢದ ಬಿಜೆಪಿ ಸಂಸದರನ್ನ (Pratapgarh BJP MP ) ಕೆಳಗೆ ಬೀಳಿಸಿ ಹಲ್ಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂಸದ ಸಂಗಮ್ ಲಾಲ್ ಗುಪ್ತಾ,(BJP MP Sangam Lal Gupta) ಮಧ್ಯಾಹ್ನ ರಾಂಪುರ ವಿಧಾನಸಭಾ ಕ್ಷೇತ್ರದ ಸಂಗೀಪುರ ಬ್ಲಾಕ್ ನಲ್ಲಿ ಆಯೋಜಿಸಿದ್ದ 'ಜನ್ ಆರೋಗ್ಯ' ಮೇಳಕ್ಕೆ ಆಗಮಿಸಿದ್ದರು. ಇದೇ ಮೇಳಕ್ಕೆ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ (Congress leader Pramod Tiwari) ತಮ್ಮ ಪುತ್ರಿ, ಶಾಸಕಿ ಆರಾಧಾನಾ ಮಿಶ್ರಾ ಜೊತೆ ತಲುಪಿದ್ದರು. ಮೇಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮುಖಾಮುಖಿಯಾದಾಗ ಸಣ್ಣ ವಿಷಯಕ್ಕೆ ಗಲಾಟೆ ನಡೆದಿದೆ. ಕ್ಷಣಾರ್ಧದಲ್ಲಿ ಗಲಾಟೆ ವಿಕೋಪಕ್ಕೆ ತಿರುಗಿದ್ದರಿಂದ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಇತ್ತ ನೋಡ ನೋಡುತ್ತಿದ್ದಂತೆ ಪ್ರಮೋದ್ ತಿವಾರಿ ಮುಂದೆಯೇ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಸಂಗಮ್ ಲಾಲ್ ಗುಪ್ತಾ ಅವರನ್ನ ನೆಲಕ್ಕೆ ಬೀಳಿಸಿ ಹಲ್ಲೆ ಮಾಡಲು ಆರಂಭಿಸಿದರು.

ಜನ್ ಆರೋಗ್ಯ ಮೇಳದಲ್ಲಿ ನಡೆದಿದ್ದೇನು?

ಸಂಸದರು ಪ್ರಾಣ ಉಳಿಸಿಕೊಳ್ಳಲು ಸ್ಥಳದಿಂದ ಓಡಲು ಆರಂಭಿಸಿದರು. ಕೊನೆಗೆ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಸಂಸದರನ್ನ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಂಸದರು ತೆರಳಿದ್ರೂ ಸುಮ್ಮನಾಗದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಗರನ್ನು ರಸ್ತೆಗೆ ಎಳೆದುತಂದು ಹಲ್ಲೆ ನಡೆಸಿದ್ದಾರೆ. ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೌಡಾಯಿಸಿದ ಪೊಲೀಸರು ಎರಡೂ ಗುಂಪುಗಳನ್ನು ಚದುರಿಸಿ, ಕೆಲವರನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಪೂರ್ವಯೋಜಿತ ಪ್ಲಾನ್ ಅಂದ್ರು ಬಿಜೆಪಿ ಸಂಸದ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಂಸದರು, ಸಂಗೀಪುರದಲ್ಲಿ ಬ್ಲಾಕ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಾನು ವೇದಿಕೆಯತ್ತ ಹೋಗುತ್ತಿದ್ದೆ. ಮೊದಲೇ ಪ್ಲಾನ್ ಮಾಡಿಕೊಂಡಂತೆ ಸುಮಾರು 50 ರಿಂದ 60 ಜನರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಲ್ಲಿ ನಿಯೋಜನೆಗೊಂಡಿದ್ದ ಇನ್‍ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರಿಂದ ತಡೆಯಲು ಹೋದೆ. ಕ್ಷಣಾರ್ಧದಲ್ಲಿ ಆ ಗುಂಪು ನನ್ನ ವಿರುದ್ಧ ತಿರುಗಿ ಬಿದ್ದು ಹಲ್ಲೆ ಮಾಡಲು ಆರಂಭಿಸಿದರು. ಭದ್ರತಾ ಸಿಬ್ಬಂದಿಗಳೇ ನನ್ನನ್ನು ಕರೆದುಕೊಂಡು ಬಂದು ರಕ್ಷಿಸಿದರು. ಈ ಘಟನೆಯಲ್ಲಿ ನನ್ನ ವಾಹನಕ್ಕೂ ಹಾನಿಯುಂಟು ಮಾಡಲಾಗಿದ್ದು, ಪೊಲೀಸರನ್ನ ಸಹ ಓಡಿಸಿಕೊಂಡು ಹಲ್ಲೆ ಮಾಡಲಾಯ್ತು. ಈ ಗಲಾಟೆಯಲ್ಲಿ ನನಗೂ ಗಾಯಗಳಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Taliban Hang Dead Body: ಕ್ರೂರ ಶಿಕ್ಷೆ ಶುರು; ಗುಂಡಿಕ್ಕಿ ನಗರದ ಮಧ್ಯೆ ಹೆಣ ನೇತಾಕಿದ ತಾಲಿಬಾನಿಗಳು!

ಕೊಲೆ ಬೆದರಿಕೆ ಹಾಕಲಾಗಿತ್ತು

ಆಗಸ್ಟ್ 2021ರಲ್ಲಿ ಬಿಜೆಪಿ ಸಂಸದ ಸಂಗಮ್ ಲಾಲ್ ಗುಪ್ತಾ ಅವರಿಗೆ ಅಪರಿಚಿತರು 5 ಕೋಟಿ ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದರು. ಒಂದು ವೇಳೆ ಹಣ ನೀಡದಿದ್ರೆ ಕೊಲೆ ಮಾಡಲಾಗುವುದು ಎಂದು ಜೀವ ಬೆದರಿಕೆ ಸಹ ಹಾಕಿದ್ದರು. ಈ ಸಂಬಂಧ ಸಂಸದರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

ಯಾರು ಈ ಸಂಗಮ್ ಲಾಲ್ ಗುಪ್ತಾ?

ಸಂಗಮ್ ಲಾಲ್ ಗುಪ್ತಾ ಪ್ರತಾಪಗಢದ ನಿವಾಸಿಯಾಗಿದ್ದು, ಎಂಟನೇ ತರಗತಿವರೆಗೆ ಓದಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿ ಹೊತ್ತ ಸಂಗಮ್ ಲಾಲ್ ಗುಪ್ತಾ ನಂತರ ಮುಂಬೈಗೆ ತೆರಳಿದ್ದರು. ಇಲ್ಲಿ ಹಲವು ಕಡೆ ಗುಪ್ತಾ ಕೆಲಸ ಮಾಡಿದ್ದಾರೆ. 2017ರಲ್ಲಿ ಮೊದಲ ಬಾರಿಗೆ ಬಿಜೆಪಿ ಟಿಕೆಟ್ ಪಡೆದು ವಿಧಾನಸಭಾ ಚುನಾವಣೆ ಕಣಕ್ಕಿಳಿದಿದ್ದ ಸಂಗಮ್ ಲಾಲ್ ಗುಪ್ತಾ ಶಾಸಕರಾಗಿ ಆಯ್ಕೆಯಾಗಿದ್ದರು. 2019ರಲ್ಲಿ ಪಕ್ಷ ಲೋಕಸಭೆ ಚುನಾವಣೆಯ ಟಿಕೆಟ್ ನೀಡಿದ್ದರಿಂದ ಎಲೆಕ್ಷನ್ ಗೆದ್ದು ಸಂಸದರಾಗಿದ್ದಾರೆ.

ವರದಿ: ಮಹ್ಮದ್​ ರಫೀಕ್​ ಕೆ 
Published by:Kavya V
First published: