ನವದೆಹಲಿ: ಭಾರತದ ವಿದೇಶಾಂಗ ಸಚಿವ ಸುಬ್ರಮಣಿಯನ್ ಜೈಶಂಕರ್ ಇತ್ತೀಚೆಗೆ ಮಾಜಿ ಸಚಿವ ವಿ.ಪಿ. ಮೆನನ್ ಅವರ ಪುಸ್ತಕವೊಂದನ್ನು ಉಲ್ಲೇಖಿಸಿ ಭಾರತದ ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು 1947ರಲ್ಲಿ ತನ್ನ ಮೊದಲ ಸಂಪುಟದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರನ್ನು ತನ್ನ ಸಂಪುಟದಲ್ಲಿ ಸಚಿವರನ್ನಾಗಿ ಮಾಡಲು ಬಯಸಿರಲಿಲ್ಲ ಎಂದು ಆರೋಪಿಸಿದ್ದರು.
ಸಚಿವ ಜೈಶಂಕರ್ ಅವರ ಈ ಆರೋಪ ಇದೀಗ ಅವರು ಮತ್ತು ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರ ನಡುವಿನ ಟ್ವಿಟರ್ ಯುದ್ಧಕ್ಕೆ ಕಾರಣವಾಗಿದೆ.
ಬುಧವಾರ ಮೊದಲ ಟ್ವಿಟ್ ಮಾಡಿದ್ದ ಸಚಿವ ಜೈಶಂಕರ್, “ದೇಶದ ಪ್ರಖ್ಯಾತ ನಾಗರೀಕ ಸೇವಕ ವಿ.ಪಿ. ಮೆನನ್ ಅವರ ಜೀವನ ಚರಿತ್ರೆಯಲ್ಲಿ ನಾನು ಕಲಿತದ್ದು. ಇದರ ಪ್ರಕಾರ ಜವಹರಲಾಲ್ ನೆಹರೂ 1947ರಲ್ಲಿ ತಮ್ಮ ಆರಂಭಿಕ ಮಂತ್ರಿಗಳ ಪಟ್ಟಿಯಿಂದ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹೆಸರನ್ನು ಕೈಬಿಟ್ಟಿದ್ದಾರೆ. ಪಟೇಲರು ತಮ್ಮ ಕ್ಯಾಬಿನೆಟ್ ಭಾಗವಾಗುವುದನ್ನು ನೆಹರೂ ಎಂದಿಗೂ ಬಯಸಿರಲಿಲ್ಲ. ಹೀಗಾಗಿ ಉದ್ದೇಶಪೂರ್ವಕವಾಗಿಯೇ ಅವರನ್ನು ಸಚಿವರ ಪಟ್ಟಿಯಿಂದ ಕೈ ಬಿಡಲಾಗಿತ್ತು. ಹೀಗಾಗಿ ನಿಜವಾದ ಐತಿಹಾಸಿಕ ವ್ಯಕ್ತಿಗೆ ನ್ಯಾಯ ದೊರಕಲಿ” ಎಂದು ಬರೆದುಕೊಂಡಿದ್ದರು.
This is a myth, that has been comprehensively demolished by Professor Srinath Raghavan in The Print.
Besides, promoting fake news about, and false rivalries between, the builders of modern India is not the job of the Foreign Minister. He should leave this to the BJP’s IT Cell. https://t.co/krAVzmaFkL
— Ramachandra Guha (@Ram_Guha) February 13, 2020
ಕೂಡಲೇ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಚಿವ ಜೈಶಂಕರ್, “ಕೆಲವು ವಿದೇಶಾಂಗ ಸಚಿವರು ಪುಸ್ತಕಗಳನ್ನೂ ಓದುತ್ತಾರೆ. ಕೆಲವು ಪ್ರಾಧ್ಯಾಪಕರಿಗೂ ಇದು ಒಳ್ಳೆಯ ಅಭ್ಯಾಸವಾಗಬಹುದು. ಅಂತಹ ಸಂದರ್ಭದಲ್ಲಿ ನಾನು ನಿನ್ನೆ ಬಿಡುಗಡೆ ಮಾಡಿದ ಪುಸ್ತಕವನ್ನು ನಿಮಗೆ ಶಿಫಾರಸ್ಸು ಮಾಡುತ್ತೇನೆ” ಎಂದು ವಿ.ಪಿ. ಮೆನನ್ ಅವರ ಜೀವನ ಚರಿತ್ರೆ ಓದುವಂತೆ ಸೂಚಿಸಿದ್ದರು.
The letter of 1 August where Nehru invites Patel to join the first Cabinet of free India, calling him the “strongest pillar” of that Cabinet. Can someone show this to @DrSJaishankar please? pic.twitter.com/N6m1mOr7SF
— Ramachandra Guha (@Ram_Guha) February 13, 2020
Sir, since you have a Ph D from JNU you must surely have read more books than me. Among them must have been the published correspondence of Nehru and Patel which documents how Nehru wanted Patel as the “strongest pillar” of his first Cabinet. Do consult those books again. https://t.co/butT0uqA3c
— Ramachandra Guha (@Ram_Guha) February 13, 2020
ಅಲ್ಲದೆ, ಮತ್ತೊಂದು ಟ್ವಿಟ್ನಲ್ಲಿ “1947 ಆಗಸ್ಟ್ 1 ರಂದು ಜವಹರ್ ಲಾಲ್ ನೆಹರು ಸರ್ದಾರ್ ವಲ್ಲಭಾಯಿ ಪಟೇಲ್ ಅವರಿಗೆ ಬರೆದಿರುವ ಪತ್ರದಲ್ಲಿ ಮುಕ್ತ ಭಾರತದ ಮೊದಲ ಕ್ಯಾಬಿನೆಟ್ಗೆ “ಪ್ರಬಲ ಸ್ತಂಭ” ಎಂದು ಕರೆದಿದ್ದಾರೆ. ಈ ಪತ್ರವನ್ನು ಯಾರಾದರೂ ಸಚಿವ ಜೈಶಂಕರ್ಗೆ ತೋರಿಸಬಹುದೇ?" ಎಂದು ಕಾಲೆಳೆದಿದ್ದಾರೆ.
ಇದನ್ನೂ ಓದಿ : ಸರೋಜಿನಿ ಮಹಿಷಿ ವರದಿ ಜಾರಿಗೆ ವಿಪಕ್ಷಗಳ ಜೊತೆ ಚರ್ಚಿಸಿ ಕ್ರಮ; ಸಿಎಂ ಬಿ.ಎಸ್. ಯಡಿಯೂರಪ್ಪ ಭರವಸೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ