HOME » NEWS » National-international » CJI OFFICE TO COME UNDER RTI ACT SAYS SUPREME COURT RH

ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಕಚೇರಿ ಆರ್​ಟಿಐ ಕಾಯ್ದೆಯಡಿ ಬರುತ್ತದೆ ಎಂದ ಅಪೆಕ್ಸ್ ಕೋರ್ಟ್

ಬಹುಮತದ ತೀರ್ಪು ಓದಿದ ನ್ಯಾ.ಸಂಜೀವ್ ಖನ್ನಾ, ಪಾರದರ್ಶಕತೆ ನಿರ್ವಹಣೆಯನ್ನು ಸಾರ್ವಜನಿಕ ಹಿತಾಸಕ್ತಿ ಬೇಡುತ್ತದೆ. ಪಾರದರ್ಶಕತೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಿಲ್ಲ ಎಂದು ಹೇಳಿದರು.

HR Ramesh | news18-kannada
Updated:November 13, 2019, 3:10 PM IST
ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಕಚೇರಿ ಆರ್​ಟಿಐ ಕಾಯ್ದೆಯಡಿ ಬರುತ್ತದೆ ಎಂದ ಅಪೆಕ್ಸ್ ಕೋರ್ಟ್
ಸುಪ್ರೀಂಕೋರ್ಟ್
  • Share this:
ನವದೆಹಲಿ: ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಕಚೇರಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​ಟಿಐ) ಬರುತ್ತದೆ ಎಂದು ಬುಧವಾರ ಅಪೆಕ್ಸ್ ಕೋರ್ಟ್ ಹೇಳಿದೆ.

ಹೈಕೋರ್ಟ್ ಮತ್ತು ಕೇಂದ್ರ ಮಾಹಿತಿ ಆಯೋಗದ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಪ್ರಧಾನ ಕಾರ್ಯದರ್ಶಿ ಮತ್ತು ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಗಳು 2010ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಪಂಚಸದಸ್ಯ ಪೀಠ ವಿಚಾರಣೆ ನಡೆಸಿ, ಏಪ್ರಿಲ್ 4ರಂದು ತೀರ್ಪು ಕಾಯ್ದಿರಿಸಿತ್ತು.

ಬಹುಮತದ ತೀರ್ಪು ಓದಿದ ನ್ಯಾ.ಸಂಜೀವ್ ಖನ್ನಾ, ಪಾರದರ್ಶಕತೆ ನಿರ್ವಹಣೆಯನ್ನು ಸಾರ್ವಜನಿಕ ಹಿತಾಸಕ್ತಿ ಬೇಡುತ್ತದೆ. ಪಾರದರ್ಶಕತೆ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಿಲ್ಲ ಎಂದು ಹೇಳಿದರು.

ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ಈ ಆದೇಶ ನೀಡಿದೆ. ನ್ಯಾ.ಎನ್​.ವಿ.ರಮಣ, ನ್ಯಾ.ಡಿ.ವೈ. ಚಂದ್ರಚೂಡ, ನ್ಯಾ.ದೀಪಕ್ ಗುಪ್ತಾ ಮತ್ತು ನ್ಯಾ.ಸಂಜೀವ್ ಖನ್ನಾ ಪೀಠದಲ್ಲಿದ್ದರು.

ಇದನ್ನು ಓದಿ: ಪಾಕಿಸ್ತಾನದ ಸೇನಾ ಕಾಯ್ದೆಗೆ ತಿದ್ದುಪಡಿ; ನಾಗರಿಕ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಅರ್ಜಿ ಸಲ್ಲಿಸಲು ಅವಕಾಶ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಾರ್ವಜನಿಕ ಪ್ರಾಧಿಕಾರ ವ್ಯಾಪ್ತಿಯೊಳಗೆ ಬರಲಿದ್ದಾರೆ. ಮಾಹಿತಿ ಹಕ್ಕು ಮತ್ತು ಖಾಸಗಿ ಹಕ್ಕು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಪಂಚಸದಸ್ಯ ಪೀಠ ಬಹುಮತದ ತೀರ್ಪು ನೀಡುವ ಮೂಲಕ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಿತು.

First published: November 13, 2019, 3:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading