CJI N.V. Ramana: ಹುಟ್ಟೂರಿಗೆ ಆಗಮಿಸಿದ ಸಿಜೆಐಗೆ ಅದ್ಧೂರಿ ಸ್ವಾಗತ; ಎತ್ತಿನಗಾಡಿಯಲ್ಲಿ ಮೆರವಣಿಗೆ

ಸುಪ್ರೀಂ ಕೋರ್ಟ್​ ನ್ಯಾಯಾಮೂರ್ತಿ ಆದ ಬಳಿಕ ಮೊದಲ ಬಾರಿ ಅವರು ಹುಟ್ಟೂರಿಗೆ ಆಗಮಿಸಿದ ಹಿನ್ನಲೆ ಗ್ರಾಮದಲ್ಲಿ ಸಂಭ್ರಮ ಜೋರಾಗಿತ್ತು

ನ್ಯಾಯಾಮೂರ್ತಿ ಎನ್ ವಿ ರಮಣ

ನ್ಯಾಯಾಮೂರ್ತಿ ಎನ್ ವಿ ರಮಣ

  • Share this:
    ಹೈದ್ರಾಬಾದ್​ (ಡಿ. 24):  ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ (CJI N.V. Ramana) ಅವರು ಇಂದು ತಮ್ಮ ಹುಟ್ಟೂರಿಗೆ ಆಗಮಿಸಿದರು. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ವೀರುಲಪಾಡು ಮಂಡಲದ ಪೊನ್ನಾವರಂ (Ponnavaram) ಗ್ರಾಮಕ್ಕೆ ಆಗಮಿಸಿದ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ ಆದ ಬಳಿಕ ಮೊದಲ ಬಾರಿ ಅವರು ಹುಟ್ಟೂರಿಗೆ ಆಗಮಿಸಿದ ಹಿನ್ನಲೆ ಗ್ರಾಮದಲ್ಲಿ ಸಂಭ್ರಮ ಜೋರಾಗಿತ್ತು. ಇಂದು ಬೆಳಗ್ಗೆ 11 ಗಂಟೆಗೆ ಗ್ರಾಮಕ್ಕೆ ಆಗಮಿಸಿದ ಅವರಿಗೆ ಭರ್ಜರಿ ಸ್ವಾಗತ ಕೋರಿದ ಗ್ರಾಮಸ್ಥರು ಬಳಿಕ ಎತ್ತಿನಬಂಡಿಯನ್ನು ಅವರನ್ನು ಗ್ರಾಮದಲ್ಲಿ ಮೆರವಣಿಗೆ ಮೂಲಕ ಕರೆದೊಯ್ದರು. ಇಂದು ಗ್ರಾಮದಲ್ಲಿ ಕೆಲ ಗಂಟೆ ಕಳೆಯಲಿರುವ ಅವರು ಬಳಿಕ ವಿಜಯವಾಡಕ್ಕೆ ತೆರಳಲಿದ್ದು, ಅಲ್ಲಿ ತಂಗಲಿದ್ದಾರೆ.

    ಮಾತೃಭೂಮಿ, ಭಾಷೆ ಬಗ್ಗೆ ಅಭಿಮಾನವಿರಲಿ

    ಹೈದ್ರಾಬಾದ್​ಗೆ ನಿನ್ನೆ ಭೇಟಿ ನೀಡಿದ ಸಂದರ್ಭದಲ್ಲಿ 2020 ಮತ್ತು 2021 ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ತೆಲುಗು ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಅಗತ್ಯವಿದ್ದು, ಭಾಷೆಯನ್ನು ಬಳಸುವ ಬಗ್ಗೆ ಹೆಮ್ಮೆ ಇರಬೇಕು. ತೆಲುಗರ ಸಾಧನೆಯನ್ನು ಕೊಂಡಾಡಬೇಕು. ಒಬ್ಬ ವ್ಯಕ್ತಿ ತನ್ನ ಮಾತೃಭಾಷೆ ಮತ್ತು ತಾನು ಬೆಳೆದ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡಬೇಕು. ನಾವು ನಮ್ಮ ಮಾತೃಭೂಮಿ, ಮಾತೃಭಾಷೆ ಮತ್ತು ಮಾತೃದೇಶವನ್ನು ಗೌರವಿಸಬೇಕು ಮತ್ತು ಪ್ರೀತಿಸಬೇಕು ಎಂದು ಇದೇ ವೇಳೆ ತಿಳಿಸಿದರು.



    ಆಂಧ್ರಗೆ ಸಣ್ಣ ಪ್ರವಾಸ ನಡೆಸಿರುವ ಸಿಜೆಐ
    ಆಂಧ್ರಕ್ಕೆ ಸಣ್ಣ ಪ್ರವಾಸ ನಡೆಸಿರುವ ಅವರು ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಅವರು ಕನಕ ದುರ್ಗಾ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಅವರು ಶನಿವಾರ ಸಂಜೆ 5ಕ್ಕೆ ಸರ್ಕಾರದಿಂದ ಆಯೋಜಿಸಲಾಗಿರುವ ಹೈ ಟಿ ಪಾರ್ಟಿಯಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ಅವರಿಗೆ ಸಿದ್ಧಾರ್ಥ ಅಕಾಡೆಮಿ ಸಭಾಂಗಣದಲ್ಲಿ ಅವರಿಗೆ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಲ್ಲಿ ಅವರ ಜೀವಮಾನ ಸಾಧನೆಗೆ ಅಭಿನಂದಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

    ಭಾನುವಾರದವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
    ಭಾನುವಾರ ಕಾನೂರಿನ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಲವು ವೆಂಕಟೇಶ್ವರಲು ಸ್ಮಾರಕ ಉಪನ್ಯಾಸ ನೀಡಲಿದ್ದಾರೆ. ಗುಂಟೂರು ಜಿಲ್ಲೆಯ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ಮಧ್ಯಾಹ್ನ 12.30ಕ್ಕೆ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.

    ಹೈಕೋರ್ಟ್ ಆವರಣದಲ್ಲಿ ಹೈಕೋರ್ಟ್ ಬಾರ್ ಅಸೋಸಿಯೇಷನ್ ​​ಮತ್ತು ರಾಜ್ಯ ವಕೀಲರ ಪರಿಷತ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಪಾಲ ಬಿಸ್ವ ಭೂಷಣ್ ಹರಿಚಂದನ್ ಅವರು ಸಂಜೆ 5 ಗಂಟೆಗೆ ರಾಜಭವನದಲ್ಲಿ ಮುಖ್ಯ ನ್ಯಾಯಾಮೂರ್ತಿಗಳಿಗೆ ಚಹಾ ಕೂಟವನ್ನು ಆಯೋಜಿಸಿದ್ದಾರೆ.

    ಇದನ್ನು ಓದಿ: Omicron ಆತಂಕ; ಸೋಂಕು ಪರೀಕ್ಷೆ- ಪತ್ತೆಗೆ ಒತ್ತು, ಲಸಿಕೆಗೆ ವೇಗ ನೀಡುವಂತೆ ಪ್ರಧಾನಿ ಸೂಚನೆ

    ಭಾರತದ 48ನೇ ನ್ಯಾಯಾಮೂರ್ತಿಯಾಗಿರುವ ಎನ್​ವಿ ರಮಣ

    ನ್ಯಾಯಮೂರ್ತಿ ಎನ್.ವಿ.ರಮಣ ಅವರು ಭಾರತದ 48ನೇ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನ್ಯಾಯಮೂರ್ತಿ ರಮಣ ಅವರು ಭಾರತದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಒಂದು ವರ್ಷ ಮತ್ತು ನಾಲ್ಕು ತಿಂಗಳ ಅಧಿಕಾರಾವಧಿಯನ್ನು ಹೊಂದಿದ್ದು, ಆಗಸ್ಟ್ 26, 2022 ರಂದು ಅಧಿಕಾರದಿಂದ ನಿವೃತ್ತಿಯಾಗಲಿದ್ದಾರೆ.

    ಇದನ್ನು ಓದಿ: ಪ್ರಧಾನಿಗೆ ಪತ್ರ ಬರೆದ ಮದುಮಗಳು! ನನ್ನ ಮದುವೆ 3 ಬಾರಿಗೆ ಮುಂದೂಡಬೇಕಾಗಿದೆ. ಏನ್ ಮಾಡ್ಬೇಕು ನೀವೇ ಹೇಳಿ!

    ಕೃಷಿ ಕುಟುಂಬದ ಮೂಲದವರು 

    ಜೂನ್ 27, 2000 ರಂದು ಆಂಧ್ರಪ್ರದೇಶ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು ಅವರು ಆಂಧ್ರಪ್ರದೇಶ ಹೈಕೋರ್ಟ್​ನಲ್ಲಿ ಕೇಂದ್ರ ಮತ್ತು ಎಪಿ ಆಡಳಿತಾತ್ಮಕ ನ್ಯಾಯಮಂಡಳಿಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅಭ್ಯಾಸ ಮಾಡಿದರು.

    1957 ರಲ್ಲಿ ಕೃಷಿಕ ಕುಟುಂಬದಲಿ ಜನಿಸಿದ ನ್ಯಾಯಮೂರ್ತಿ ರಮಣ ಅವರು ರೈತರು ಮತ್ತು ಕೈಗಾರಿಕಾ ಕಾರ್ಮಿಕರನ್ನು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹೋರಾಡಿ ಹೆಸರು ಪಡೆದಿದ್ದರು. ಕಾನೂನು ಅಭ್ಯಾಸಕ್ಕೆ ಮಾಡುವ ಮೊದಲು ಅವರು ತೆಲುಗು ಪತ್ರಿಕೆಯೊಂದಿಗೆ ಪತ್ರಕರ್ತರಾಗಿ ಕೂಡ ಸೇವೆ ಸಲ್ಲಿಸಿದ್ದರು.
    Published by:Seema R
    First published: