ಅನಿವಾಸಿ ಭಾರತೀಯರ ಆತುರದಿಂದ ವಿಮಾನಯಾನ ಸಚಿವಾಲಯದ ವೆಬ್​ಸೈಟ್​ ಕ್ರ್ಯಾಶ್​!

Civil Aviation Ministry Website Crash: ಈ ಮೊದಲು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ವಿಮಾನಯಾನ ಸಚಿವ ಹರ್ದೀಪ್​ ಸಿಂಗ್​ ಮೇ 7ರಿಂದ ಮೇ 13ವರೆಗೆ ಏರ್​ ಇಂಡಿಯಾದ 64 ವಿಮಾನಗಳು ಕಾರ್ಯಾಚರಣೆ ಆರಂಭಸಲಿವೆ ಎಂದು ಹೇಳಿದ್ದರು. ಇದಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರನ್ನು ಕರೆತರಲು 64 ವಿಮಾನಗಳು ಹಾರಾಟ ನಡೆಸಲಿವೆ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಇದಾದ ಕೆಲವೇ ಹೊತ್ತಿಲ್ಲ ನಾಗರಿಕ ವಿಮಾನಯಾನ ಸಚಿವಾಲಯದ (ಎಂಒಸಿಎ) ವೆಬ್​ಸೈಟ್​ ಕ್ರ್ಯಾಶ್​ ಆಗಿದೆ. ಮೇ 7ರಿಂದ ಅನಿವಾಸಿ ಭಾರತೀಯರನ್ನು ವಾಪಾಸ್ ಕರೆತರುವ ಕಾರ್ಯಾಚರಣೆ ಶುರುವಾಗಲಿದೆ. ಮೇ 7ರಿಂದ 14ರವರೆಗೆ 64 ವಿಮಾನಗಳ ಮೂಲಕ 14,800 ಜನರನ್ನು ಕರೆತರಲು ನಿರ್ಧರಿಸಲಾಗಿದೆ.

  ಮೊದಲ ವಿಮಾನ ಮೇ 7ರಂದು ಅಭುದಾಬಿಯಿಂದ ಕೇರಳದ ಕೊಚ್ಚಿಗೆ ಹೊರಡಲಿದ್ದು, 209 ಪ್ರಯಾಣಿಕರನ್ನು ಕರೆತರಲಾಗುವುದು. ಯುಎಇ, ಅಮೆರಿಕ, ಇಂಗ್ಲೆಂಡ್, ಮಲೇಷ್ಯಾ, ಸಿಂಗಾಪುರ್, ಫಿಲಿಪ್ಪೀನ್ಸ್​, ಸೌದಿ ಅರೇಬಿಯ, ಕತಾರ್, ಬಾಂಗ್ಲಾದೇಶ, ಬಹ್ರೇನ್, ಕುವೈತ್ ಮತ್ತಿತರ ದೇಶಗಳಿಂದ ಭಾರತದ ನಾನಾ ರಾಜ್ಯಗಳಿಗೆ ವಿಮಾನದಲ್ಲಿ ಅನಿವಾಸಿ ಭಾರತೀಯರನ್ನು ಕರೆತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.

  ಸರ್ಕಾರ ಈ ಘೋಷಣೆ ಮಾಡಿದ ಬೆನ್ನಲ್ಲೇ ಈ ಬಗ್ಗೆ ಮಾಹಿತಿ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಎಂಒಸಿಎ ಸೈಟ್​ಗೆ ಭೇಟಿ ನೀಡಿದ್ದರು. ಹೀಗಾಗಿ ಈ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಎಂಒಸಿಎ ಟ್ವೀಟ್​ ಮಾಡಿದೆ. “ಭಾರೀ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದರಿಂದ ಎಂಒಸಿಎ ಸೈಟ್​ ಡೌನ್​ ಆಗಿದೆ. ಈ ಸಮಸ್ಯೆಯನ್ನು ಪರಿಹಾರ ಮಾಡಲು ನಾವು ಪ್ರಯತ್ನ ನಡೆಸುತ್ತಿದ್ದೇವೆ. ವಿಮಾನಗಳ ಕುರಿತ ಮಾಹಿತಿ ಏರ್​ ಇಂಡಿಯಾ ಸೈಟ್​ನಲ್ಲೇ ಸಿಗಲಿದೆ. ಈಗ ಉಂಟಾದ ಅಡಚಣೆಗೆ ನಾವು ವಿಷಾದಿಸುತ್ತೇವೆ,” ಎಂದು ಟ್ವೀಟ್​ನಲ್ಲಿ ಹೇಳಲಾಗಿದೆ.

  ಇದನ್ನೂ ಒದಿ: 12 ದೇಶ, 64 ವಿಮಾನ, 14,800 ಭಾರತೀಯರು; ಮೇ 7ರಿಂದ ಸರ್ಕಾರದಿಂದ ಅನಿವಾಸಿಗಳ ರಕ್ಷಣಾ ಕಾರ್ಯಾಚರಣೆ

  ಈ ಮೊದಲು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ವಿಮಾನಯಾನ ಸಚಿವ ಹರ್ದೀಪ್​ ಸಿಂಗ್​ ಮೇ 7ರಿಂದ ಮೇ 13ವರೆಗೆ ಏರ್​ ಇಂಡಿಯಾದ 64 ವಿಮಾನಗಳು ಕಾರ್ಯಾಚರಣೆ ಆರಂಭಸಲಿವೆ ಎಂದು ಹೇಳಿದ್ದರು. ಇದಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.   
  First published: